ಈ ಕುರುಬರಿಗೆ ದಲಿತರು ನಮ್ಮ ಅಣ್ಣಂದಿರು ಅನ್ನುವುದು ತಿಳಿಯುವುದು ಯಾವಾಗ ? ಮುಸ್ಲಿಮರು ನಮ್ಮ ಸಹೋದರರು ಅನ್ನುವ ನಡೆನುಡಿ ರೂಢಿಸಿಕೊಳ್ಳುವುದು ಯಾವಾಗ ? ಕುರುಬರು ಮಾಡುವ ದಲಿತರ ಮೇಲಿನ ಹಲ್ಲೆಯನ್ನು, ಅಸ್ಪೃಶ್ಯತೆಯನ್ನು ಇನ್ನೂ ಸಹಿಸುತ್ತಾ ಕೂರಬೇಕೆ ?
ಕುರುಬ ಸಮುದಾಯ ಸೆಕ್ಯೂಲರ್ ಆಗಿ, ಜಾತ್ಯತೀತವಾಗಿ ನಡೆದುಕೊಂಡರೆ ಇಡೀ ನಾಡನ್ನೇ ಜಾತೀಯತೆ ಮತ್ತು ಅಸ್ಪೃಶ್ಯತೆಯಿಂದ ಹೊರತರಬಹುದಲ್ಲವೇ ?
ಯಾಕೆಂದರೆ, ಕುರುಬ ಸಮುದಾಯ ಭೌಗೋಳಿಕವಾಗಿ ಇಡೀ ರಾಜ್ಯಾದ್ಯಂತ ಸಮವಾಗಿ ಹರಡಿಕೊಂಡಿದೆ.
ಇನ್ನು ಸಾಮಾಜಿಕವಾಗಿ ನಡು ಮಧ್ಯದಲ್ಲಿ ಕೂತಿದೆ. ಇವರು ಹೇಳಿಕೊಳ್ಳುವುದಕ್ಕೆ ತಿನ್ನುಣುವ ಜಾತಿಗಳ ಮುಂದಾಳುಗಳು. ಇವರಿಗಿರುವ ಈ ಅನುಕೂಲಗಳು ಕರ್ನಾಟಕದ ಯಾವುದೇ ಜಾತಿಗೆ ಇಲ್ಲ!
ತನ್ನ ಕೈಗಳನ್ನು ಸುತ್ತಲೂ ಚಾಚಿ ಬುದ್ಧನ ಕರುಣೆ, ಮೈತ್ರಿಗಳನ್ನು
ತನ್ನ ಒಡಲಲ್ಲಿ ಇಟ್ಟುಕೊಂಡು ಸಕಲೆಂಟು ಸಮುದಾಯಗಳತ್ತ ಪ್ರೇಮಪೂರಿತ
ನಡೆ-ನುಡಿಗಳ ಮೂಲಕ ಒಳಗೊಳ್ಳಬೇಕಲ್ಲವೇ ?
ಸಮಾನತೆಯ ಮೌಲ್ಯ ಕನಕನಿಂದ ಕಲಿಯಬೇಕಿತ್ತಲ್ಲವೇ ?
ಬರೀ ಕನಕದಾಸ ಜಯಂತಿ ಮಾಡಿದರೆ ಸಾಕೆ ?
ಮುಖ್ಯಮಂತ್ರಿಯನ್ನ ಪಡೆದ ಜಾತಿಗಳು ಬಿವೇಹ್ ಮಾಡಿದಂತೆ ಮಾಡಿದರೆ ಇವರನ್ನ ತಬ್ಬಲಿ ಜಾತಿಗಳು ಇವರನ್ನು ನಂಬುವುದು ಹೇಗೆ ?
ಶೋಷಿತ ಸಮುದಾಯಗಳ ಬಿಡುಗಡೆಗೆ ಇವರೇಕೆ ನಾಯಕರಾಗಬೇಕು ? ಆತ್ಮಾವಲೋಕನ ಕಾಲ ಕುರುಬರಿಗೆ ಇನ್ನೂ ಬಂದಿಲ್ಲವೇ ?
(ಲೇಖಕರು ಕುರುಬ ಸಮುದಾಯದ ವೈದ್ಯರು)
‘ನೀನ್ ಮಾದಿಗ ಅಲ್ವಾ? ನಾವ್ ಕುರುಬ್ರು’: ಜಾತಿ ದೌರ್ಜನ್ಯ ಎಸಗಿದವರ ವಿರುದ್ಧ ಕೇಸ್ ದಾಖಲು