ಜಲ ಜೀವನ್ ಮಿಷನ್ | ಕರ್ನಾಟಕದ 34% ಮನೆಗಳಿಗೆ ನಲ್ಲಿ ನೀರಿನ ಸಂಪರ್ಕವಿಲ್ಲ: ಸಿಎಜಿ ವರದಿ

Date:

ಮಂಗಳವಾರ, ಭಾರತದ ಲೆಕ್ಕ ನಿಯಂತ್ರಕರು ಮತ್ತು ಮಹಾಲೇಖಪಾಲರ (CAG) ವರದಿಯನ್ನು ವಿಧಾನಸಭೆಯಲ್ಲಿ ಮಂಡಿಸಲಾಗಿದೆ. ವರದಿ ಪ್ರಕಾರ, ಜಲ ಜೀವನ್ ಮಿಷನ್ ಅಡಿಯಲ್ಲಿ ಎಲ್ಲ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸಲು 2024ರ ಮಾರ್ಚ್‌ ಅಂತ್ಯಗೆ ಗಡುವು ನಿಗದಿ ಮಾಡಲಾಗಿತ್ತು. ಆದಾಗ್ಯೂ, ಕರ್ನಾಟಕವು 24.5 ಲಕ್ಷ ಗ್ರಾಮೀಣ ಕುಟುಂಬಗಳಿಗೆ ನಲ್ಲಿ ನೀರಿನ ಸಂಪರ್ಕ ಒದಗಿಸುವಲ್ಲಿ ವಿಫಲವಾಗಿದೆ. ಅಂದರೆ, ಗುರಿ ಹೊಂದಿದ್ದ ಒಟ್ಟು 72.1 ಲಕ್ಷ ಮನೆಗಳ ಪೈಕಿ 34%ರಷ್ಟು ಮನೆಗಳಿಗೆ ಇನ್ನೂ ನಲ್ಲಿ ನೀರಿನ ಸೌಲಭ್ಯ ದೊರೆತಿಲ್ಲ.

- Advertisement -

2019ರಿಂದ 2024 ರವರೆಗೆ ಏಳು ಜಿಲ್ಲೆಗಳಲ್ಲಿ ನಡೆಸಲಾದ ಈ ಆಡಿಟ್, ಯೋಜನೆ ರೂಪಿಸುವುದು, ಅನುಷ್ಠಾನ, ಹಣಕಾಸು ನಿರ್ವಹಣೆ ಹಾಗೂ ನೀರಿನ ಗುಣಮಟ್ಟದ ಮೇಲ್ವಿಚಾರಣೆಯಲ್ಲಿನ ಲೋಪದೋಷಗಳನ್ನು ಎತ್ತಿ ತೋರಿಸಿದೆ. ಇದು ಯೋಜನೆಯ ಮೂಲ ಉದ್ದೇಶವಾದ ‘ಹರ್ ಘರ್ ಜಲ್’ (ಪ್ರತಿ ಮನೆಗೂ ನೀರು) ಗುರಿಯನ್ನು ಸಾಕಾರಗೊಳಿಸುವಲ್ಲಿ ಹಿನ್ನಡೆಯನ್ನುಂಟು ಮಾಡಿದೆ. ರಾಜ್ಯ ಮಟ್ಟದಲ್ಲಿ ವಿವಿಧ ಇಲಾಖೆಗಳ ನಡುವೆ ಸಮನ್ವಯದ ಕೊರತೆಯಿದ್ದು, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ) ಮತ್ತು ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಂತಹ ಯೋಜನೆಗಳೊಂದಿಗೆ ಜಲ ಜೀವನ್ ಮಿಷನ್ ಅನ್ನು ಸಂಯೋಜಿಸುವಲ್ಲಿ ವೈಫಲ್ಯ ಕಂಡುಬಂದಿದೆ. ಕೆಲವು ಗ್ರಾಮಗಳು ಈ ಯೋಜನೆಗಳ ಸಮನ್ವಯಕ್ಕಾಗಿ ತಂತ್ರಗಳನ್ನು ರೂಪಿಸಿದ್ದರೂ, ಅವುಗಳಲ್ಲಿ ಒಂದೂ ಜಾರಿಗೆ ಬಂದಿಲ್ಲ ಎಂಬುದನ್ನು ವರದಿ ವಿವರಿಸಿದೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಕತೆ | ಪೌರಶ್ರೀ – ಐಸಾಕ್‌ ಅಸಿಮೋವ್

ಪೌರಶ್ರೀ ಓದುವುದಕ್ಕೂ ಮುನ್ನ- ಒಂದು ಪುಟ್ಟ ಟಿಪ್ಪಣಿ ಈ ಸಹಸ್ರಮಾನದ ಅತ್ಯದ್ಭುತ ವೈಜ್ಞಾನಿಕ ಲೇಖಕ ರಲ್ಲಿ ಒಬ್ಬರು ಅಮೆರಿಕ ಬೋಸ್ಟನ್ ವಿಶ್ವ ವಿದ್ಯಾಲಯ ದಲ್ಲಿ ರಸಾಯನ ಶಾಸ್ತ್ರದ ಪ್ರಾಧ್ಯಾಪಕರಾಗಿದ್ದ ಐಸಾಕ್ ಅಸಿಮೋವ್. ವಿಶ್ವ...

ಶಿವಮೊಗ್ಗ | ದಾಖಲೆಗಳಲ್ಲಿ ಪೂರ್ಣ, ವಾಸ್ತವದಲ್ಲಿ ನೆನೆಗುದಿಗೆ...

ಶಿವಮೊಗ್ಗ ತಾಲೂಕಿನ ಕಾಚಿನಕಟ್ಟೆ ಗ್ರಾಮದಲ್ಲಿ ಸಮುದಾಯ ಭವನದ ಅಪೂರ್ಣ ಕಾಮಗಾರಿ ಆದರೆ ಶಿವಮೊಗ್ಗ ನಿರ್ಮಿತಿ ಕೇಂದ್ರ ದಾಖಲೆ ಪ್ರಕಾರ ಕಾಮಗಾರಿ ಸಂಪೂರ್ಣವಾಗಿದೆ ಎಂದು ದಾಖಲೆಗಳಲ್ಲಿ. ಈ ಸಂಬಂಧ ಲಂಚಮುಕ್ತ ಕರ್ನಾಟಕ ಮತ್ತು KRS ಪಕ್ಷದ...

ವಿಜಯಪುರ | ಹೆಚ್ಚುತ್ತಿರುವ ಬೀದಿ ನಾಯಿಗಳ ಹಾವಳಿ: 9...

ಬೀದಿ ನಾಯಿ ನಿಯಂತ್ರಣಕ್ಕೆ ನಗರಸಭೆ, ಪುರಸಭೆ, ಪಟ್ಟಣ ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿಗಳು ಪರಸ್ಪರ ಸಮನ್ವಯದಿಂದ ಕಾರ್ಯನಿರ್ವಹಿಸಿ, ಬೀದಿ ನಾಯಿಗಳ ಹಾವಳಿ ಹೆಚ್ಚಿರುವ ಪ್ರದೇಶಗಳನ್ನು ಗುರುತಿಸಿ ನಿಯಂತ್ರಣ ಕ್ರಮ ಕೈಗೊಳ್ಳಬೇಕು. ಶಾಲೆ, ಆಸ್ಪತ್ರೆ,...

ಯೋಜನೆಗಳ ಅನುಷ್ಠಾನದಲ್ಲಿನ ವಿಳಂಬವು ಫಲಿತಾಂಶದ ಮೇಲೆ ಪರಿಣಾಮ ಬೀರಿದೆ. ಭೂಮಿಯ ಲಭ್ಯತೆಯನ್ನು ಖಚಿತಪಡಿಸಿಕೊಳ್ಳದೆ ಗುತ್ತಿಗೆ ನೀಡುವುದು, ದೋಷಪೂರಿತ ಯೋಜನಾ ವರದಿಗಳು (DPR) ಹಾಗೂ ಗುತ್ತಿಗೆದಾರರ ಮೇಲೆ ಅತಿಯಾದ ಕೆಲಸದ ಒತ್ತಡದಂತಹ ಅಂಶಗಳನ್ನು ವರದಿ ಉಲ್ಲೇಖಿಸಿದೆ.

ಗಣನೀಯ ಪ್ರಮಾಣದ ಹಣ ಖರ್ಚು ಮಾಡಿದ ನಂತರವೂ ಕೆಲವು ಯೋಜನೆಗಳು ಅರ್ಧದಲ್ಲೇ ಸ್ಥಗಿತಗೊಂಡಿದ್ದರೆ, ಇನ್ನು ಕೆಲವು ವರ್ಷಗಳಿಂದ ಆರಂಭವೇ ಆಗಿಲ್ಲ. ಯೋಜನೆಯ ನಂತರದ ನಿರ್ವಹಣೆಯ ಕೊರತೆ ಮತ್ತು ಅಂತರ್ಜಲದ ಮೇಲೆ ಅತಿಯಾದ ಅವಲಂಬನೆಯು ಈ ಯೋಜನೆಯ ಸ್ಥಿರತೆ ಮತ್ತು ಪ್ರಗತಿ ಕುರಿತು ಆತಂಕ ಮೂಡಿಸಿದೆ ಎಂದು ವರದಿ ಹೇಳಿದೆ.

ನೀರು ಸರಬರಾಜಿಗಾಗಿ ರಾಜ್ಯವು ಅಂತರ್ಜಲವನ್ನೇ ಹೆಚ್ಚಾಗಿ ಅವಲಂಬಿಸಿರುವುದು ದೀರ್ಘಾವಧಿಯಲ್ಲಿ ಅಪಾಯಕಾರಿಯಾಗಬಹುದು. ಅಂತರ್ಜಲ ಮರುಪೂರಣ, ನೀರು ಸಂರಕ್ಷಣೆ ಹಾಗೂ ಮರುಬಳಕೆಯಂತಹ ಸುಸ್ಥಿರ ಕ್ರಮಗಳನ್ನು ಕೈಗೊಳ್ಳುವಲ್ಲಿ ಇಲಾಖೆಯ ಪ್ರಯತ್ನಗಳು ಸಾಲದು ಎಂದು ವರದಿ ತಿಳಿಸಿದೆ.

ಆದಾಗ್ಯೂ, ಸಾರ್ವಜನಿಕ ಆರೋಗ್ಯ ಮತ್ತು ಉದ್ಯೋಗದ ಮೇಲೆ ಈ ಯೋಜನೆಯ ಒಟ್ಟಾರೆ ಪ್ರಭಾವ ಸೀಮಿತವಾಗಿದ್ದರೂ, ಕೆಲವು ಸಾಮಾಜಿಕ ಸೂಚಕಗಳಲ್ಲಿ ಲಾಭ ಕಂಡುಬಂದಿದೆ. ವಿಶೇಷವಾಗಿ ಮಹಿಳೆಯರ ಮೇಲಿನ ಹೊರೆ ಕಡಿಮೆಯಾಗಿದೆ. ಹೆಣ್ಣುಮಕ್ಕಳು ಹಿರಿಯ ಪ್ರಾಥಮಿಕ ಶಿಕ್ಷಣ ಪಡೆಯುವ ಹಂತದಲ್ಲಿ ಶಾಲೆ ತೊರೆಯುವ ಪ್ರಮಾಣವು (ದರ) 2.3 ರಿಂದ 1.5ಕ್ಕೆ ಇಳಿಯಲು ಯೋಜನೆ ಸಹಕಾರಿಯಾಗಿದೆ. ನೀರು ತರುವ ಜವಾಬ್ದಾರಿ ಕಡಿಮೆಯಾದ ಕಾರಣ ಹೆಣ್ಣುಮಕ್ಕಳಿಗೆ ಓದಿನತ್ತ ಗಮನಹರಿಸಲು ಸಮಯ ಸಿಕ್ಕಿದೆ. ಅಲ್ಲದೆ, ನೀರು ತರಲು ದೂರದ ಸ್ಥಳಗಳಿಗೆ ತೆರಳುವುದು ತಪ್ಪಿರುವುದರಿಂದ ಮಹಿಳೆಯರ ಸುರಕ್ಷತೆ ಹೆಚ್ಚಿದೆ. ಕಾಡು ಪ್ರಾಣಿಗಳ ದಾಳಿಯ ಭಯವೂ ಕಡಿಮೆಯಾಗಿದೆ ಎಂದು ವರದಿ ಹೇಳಿದೆ.

ಈ ಲೇಖನ ಓದಿದ್ದೀರಾ?: ಕೇಂದ್ರವನ್ನು ಟೀಕಿಸಿದ ಸಾಮಾಜಿಕ ಮಾಧ್ಯಮ ಖಾತೆಗಳು ಮಂಗಮಾಯ: ಉಳಿಯುವುದು ಬರೀ ಮೋದಿಮಯ!

ಗಮನಾರ್ಹವಾಗಿ, ಯೋಜನೆ ಅನುಷ್ಟಾನ ಮತ್ತು ಕಲುಷಿತ ನೀರು ಪರೀಕ್ಷಿಸಲು ಪ್ರಯೋಗಾಲಯಗಳು ಇನ್ನೂ ಸಜ್ಜಾಗಿಲ್ಲದೇ ಇರುವುದಕ್ಕೆ ವರದಿಯು ಪ್ರಮುಖ ಕಾರಣಗಳನ್ನು ಗುರುತಿಸಿದೆ;

  • ಗ್ರಾಮ, ಜಿಲ್ಲೆ ಹಾಗೂ ರಾಜ್ಯ ಮಟ್ಟದ ಪ್ರಮುಖ ಸಮಿತಿಗಳು ನಿಯಮಿತವಾಗಿ ಸಭೆ ನಡೆಸುತ್ತಿಲ್ಲ.
  • ಗ್ರಾಮ ಕ್ರಿಯಾ ಯೋಜನೆಗಳು ಅಪೂರ್ಣವಾಗಿವೆ. ಅಂತರ್ಜಲದ ದತ್ತಾಂಶ ಮತ್ತು ಹಣಕಾಸು ಯೋಜನೆಯ ಕೊರತೆಯಿದೆ.
  • 2023-24ರಲ್ಲಿ 13 ಜಿಲ್ಲೆಗಳಲ್ಲಿ ಯಾವುದೇ ಸಭೆ ನಡೆದಿಲ್ಲ. 5 ಗ್ರಾಮಗಳು ‘ಹರ್ ಘರ್ ಜಲ್’ ನಿಯಮ ಪಾಲಿಸುತ್ತಿವೆ ಎಂದು ತಪ್ಪಾಗಿ ಘೋಷಿಸಲಾಗಿದೆ. 21 ಗ್ರಾಮಗಳ ಕೆಲಸ ಅಪೂರ್ಣವಾಗಿದ್ದರೂ ಪೂರ್ಣಗೊಂಡಿದೆ ಎಂದು ತೋರಿಸಲಾಗಿದೆ.
  • ಅನುದಾನದ ಬಳಕೆಯ ಕೊರತೆಯಿಂದಾಗಿ ಕರ್ನಾಟಕವು ಕೇಂದ್ರದ ಒಟ್ಟು ಹಂಚಿಕೆಯಲ್ಲಿ ಕೇವಲ 45% ರಷ್ಟು ಮಾತ್ರ ಹಣ ಪಡೆದಿದೆ. ನೀರಿನ ಗುಣಮಟ್ಟದ ಮೇಲ್ವಿಚಾರಣೆಗಾಗಿ ಮಾಡುವ ವೆಚ್ಚವು 50%ನಿಂದ 2%ಗೆ ಇಳಿದಿದೆ.
  • ಪ್ರಯೋಗಾಲಯಗಳಲ್ಲಿ ಆರ್ಸೆನಿಕ್‌ನಂತಹ ಕಲುಷಿತ ಅಂಶಗಳನ್ನು ಪರೀಕ್ಷಿಸುವ ಸಾಮರ್ಥ್ಯವಿಲ್ಲ. ಅಲ್ಲದೆ, ಪರೀಕ್ಷಾ ಫಲಿತಾಂಶ ನೀಡಲು 24-48 ಗಂಟೆಗಳ ಬದಲಿಗೆ 106 ದಿನಗಳವರೆಗೆ ವಿಳಂಬವಾಗುತ್ತಿದೆ.
  • ಸ್ವತಂತ್ರ ಅಧ್ಯಯನದ ಪ್ರಕಾರ, ಮಾದರಿಯಾಗಿ ಆಯ್ಕೆ ಮಾಡಲಾದ 28 ಗ್ರಾಮಗಳ ಪೈಕಿ ಕೇವಲ ಎರಡು ಗ್ರಾಮಗಳು ಮಾತ್ರ ನೀರಿನ ಗುಣಮಟ್ಟದ ಮಾನದಂಡಗಳನ್ನು ಪೂರೈಸಿವೆ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

‌ಬೀದರ್‌ | ಮತದಾನ ಹಕ್ಕು ಕಸಿಯುವ ʼಎಸ್‌ಐಆರ್ʼ ಪ್ರಕ್ರಿಯೆ ವಿರೋಧಿಸಿ ಅ.12ರಂದು ಪ್ರತಿಭಟನೆ

ದೇಶಾದ್ಯಂತ ಎಸ್‌ಐಆರ್ ಹೆಸರಿನಲ್ಲಿ ಮತದಾರರ ಪಟ್ಟಿಯಿಂದ ಕೋಟ್ಯಂತರ ಮತದಾರರನ್ನು ಕೈಬಿಡಲಾಗಿರುವುದನ್ನು ಆರೋಪಿಸಿ,...

ವಿಜಯಪುರ | ದಸಂಸ ರಾಜ್ಯ ಸಂಘಟನಾ ಸಂಚಾಲಕಿಯಾಗಿ ಪ್ರತಿಭಾ ಹೊಸಮನಿ ಆಯ್ಕೆ

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್‌ವಾದ) ಚಿಕ್ಕಮಗಳೂರಿನಲ್ಲಿ ಆಯೋಜಿಸಲಾಗಿದ್ದ ರಾಜ್ಯ...

ʼವೋಟ್‌ ಚೋರಿʼ ಆರೋಪಕ್ಕೆ ಪುರಾವೆ ಅಗತ್ಯʼ: ಚುನಾವಣಾ ಆಯೋಗದ ಪರ 124 ನಿವೃತ್ತ ಅಧಿಕಾರಿಗಳ ಪತ್ರ

ಚುನಾವಣಾ ಅಕ್ರಮಗಳ ಆರೋಪಗಳಿಗೆ ವಿಶ್ವಾಸಾರ್ಹ ಪುರಾವೆಗಳು ಅಗತ್ಯ ಎಂದು ಪ್ರತಿಪಾದಿಸಿರುವ 124...

ಮುದ್ದೇಬಿಹಾಳ | ದೆಹಲಿ ಸಭೆಗೂ ಮುನ್ನ ಕಬ್ಬು ಬೆಳೆಗಾರರ ಬೇಡಿಕೆ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆಗಾರರಿಗೆ ಪ್ರತಿ ಟನ್‌ಗೆ ₹8,500 ಕನಿಷ್ಠ ಬೆಲೆ ಹಾಗೂ ಹೆಚ್ಚುವರಿಯಾಗಿ...