ವಿಜಯನಗರ : ಕನ್ನಡ ವಿವಿ ವತಿಯಿಂದ ‘ಕರ್ನಾಟಕ ಸೌಹಾರ್ದತಾ ಮಾನವ ಸರಪಳಿ’ ಕಾರ್ಯಕ್ರಮ

Date:

Advertisements

ಇಂದು ಕನ್ನಡ ವಿಶ್ವವಿದ್ಯಾಲಯದ ‘ಬಿ’ಗೇಟ್‌ಬಳಿ ‘ಕರ್ನಾಟಕ ಸೌಹಾರ್ದತಾ ಮಾನವ ಸರಪಳಿ’ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ಮಾತನಾಡಿದ ಹಂಪಿ ಕನ್ನಡ ವಿವಿಯ ಪ್ರಾಧ್ಯಾಪಕರಾದ ಡಾ. ಚಲುವರಾಜು, ಈ ದೇಶ ಮತ್ತು ರಾಜ್ಯದಲ್ಲಿ ಸೌಹಾರ್ದತೆಯ ಸಂಕೇತವೇ ಮಹಾತ್ಮ ಗಾಂಧಿ. ಅವರು ದೇಶವನ್ನು ಉದ್ದೇಶಿಸಿ ಗ್ರಾಮ ಸ್ವರಾಜ್ ಉಳಿಯಬೇಕು ಎಂದು ಹೇಳಿದ್ದರು. ಗ್ರಾಮ ಸ್ವರಾಜ್ ಉಳಿದರೆ ಮಾತ್ರ ಈ ದೇಶ ಉಳಿಯುತ್ತದೆ. ಇಲ್ಲದಿದ್ದರೆ ಈ ದೇಶದ ಮೂಲ ಸ್ವರೂಪವೇ ಬದಲಾಗುತ್ತದೆ. ಆದ್ದರಿಂದ ಯುವಕರು ಗಾಂಧಿ ಅವರನ್ನು ಓದಬೇಕು ಎಂದರು.

“ಈ ದೇಶದ ಧರ್ಮಗಳು ಐಕ್ಯತೆ, ಸೌಹಾರ್ದತೆ ಸಾರಬೇಕಿದೆ‌. ನಮ್ಮ ದೇಶದ ಸಂವಿಧಾನದ ಪೀಠಿಕೆಯಲ್ಲಿ ಭ್ರಾತೃತ್ವ, ಸಮಾನತೆ ಸಹೋದರತೆ ಬೆಳೆಸಲು ಯುವಕರು ಸಿದ್ದರಾಗಬೇಕು. ಅಲ್ಲದೆ ಸಂಶೋಧಕರು ಗಾಂಧಿ ಸ್ವರಾಜ್‌ದ ಮೂಲ ಆಶಯದ ಬಗ್ಗೆ ಹೆಚ್ಚು ಅಧ್ಯಯನ ಶೀಲಮರಾಗಬೇಕು. ಎಳೆ ಎಳೆಯಾಗಿ ಸಮಾಜಕ್ಕೆ ಬಿತ್ತಬೇಕು. ಸಮಾಜವನ್ನು ಕಾಲ ಕಾಲಕ್ಕೆ ಜೀವಂತವಾಗಿ ಇಡುವ ಮತ್ತು ತಪ್ಪುಗಳನ್ನು ತಿದ್ದಿ ಎಚ್ಚರಿಸುವವರು ನೀವಾಗಬೇಕು ಎಂದು ಚಲುವರಾಜು ಹೇಳಿದರು.

Advertisements

ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ರಾಮ ನೆಲೆ ನಿಂತರೂ ನಿಲ್ಲದ ನಾಟಕ

ಸಂಶೋಧನಾರ್ಥಿ ಮಂಜುನಾಥ ಮಾತನಾಡಿ, ಮಹಾತ್ಮ ಗಾಂಧಿ ನಮ್ಮಲ್ಲಿ ಎಂದಿಗೂ ಜೀವಂತ ಅವರು ಕಟ್ಟಿಕೊಟ್ಟ ಎಲ್ಲ ಧರ್ಮಗಳ ಸೌಹಾರ್ದ ಸಮಾಜವನ್ನು ನಾವು ಮುನ್ನಡೆಸಬೇಕು. ಸ್ವಾತಂತ್ರ್ಯ ನಂತರದಲ್ಲಿ ದೇಶದಲ್ಲಿ ಮೊದಲು ಹತ್ಯೆಯಾದವರು ಮಹಾತ್ಮ ಗಾಂಧಿ. ಆದರೆ ಅದರ ಹಿಂದಿನ ಉನ್ನಾರವನ್ನು ಮುಚ್ಚಿಹಾಕಲು ದೇಶದಲ್ಲಿ ಇಂದಿಗೂ ಪ್ರಯತ್ನಗಳು ನಡೆಯುತ್ತಿವೆ. ಚರಿತ್ರೆಕಾರರು ಎಲ್ಲವನ್ನೂ ಸತ್ಯದಿಂದ ಬರೆದಿಲ್ಲ. ಆದರೆ ಗಾಂಧಿಯನ್ನು ಕೊಂದುದ್ದು ಸತ್ಯ ಅದು ಎಂದೂ ಮಿತ್ಯವಾಗಲು ಸಾಧ್ಯವಿಲ್ಲ ಎಂದರು.

ಈ ಸಂದರ್ಭದಲ್ಲಿ ಪ್ರದೀಪ ಡಿ.ಡಿ, ದಾದುಹಾಯತ್, ಯರಿಸ್ವಾಮಿ, ಮಹೇಶ್, ಮಣಿಕಂಠ, ಸಂಶೋಧನಾ ವಿದ್ಯಾರ್ಥಿಗಳಾದ ಸೋಮಪ್ಪ.ಸಿ, ಲಕ್ಷ್ಮಣ್, ನಾಗರಾಜ, ರಾಜು, ಹನುಮಂತ, ಸಂತೋಷ, ಬಸವರಾಜ, ಅಶೋಕ, ದಿನೇಶ್ ಪಾವಗಡ, ಇನ್ನೂ ಅನೇಕರು ಭಾಗಿಯಾಗಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X