ಮಹಾಧರಣಿ | ಜಲಮಂಡಳಿ ಗುತ್ತಿಗೆ ಕಾರ್ಮಿಕರ ಬದುಕಿಗೆ ಕುತ್ತು

Date:

Advertisements

ಬೆಂಗಳೂರು ನಿವಾಸಿಗಳ ಮಲಮೂತ್ರದ ಕೊಳಚೆ ನೀರನ್ನು ಶುದ್ಧೀಕರಿಸಿ ಬದುಕುವ ಜನರ ಹೊಟ್ಟೆ ಮೇಲೆ ಹೊಡೆಯಲು ಹೊರಟಿದೆ ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ (ಬಿಡಬ್ಲ್ಯುಎಸ್‌ಎಸ್‌ಬಿ).

ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳದೆ ಇರುವ ಶುದ್ಧೀಕರಣ ಘಟಕಗಳನ್ನು ಕೆಡವಿ ಹೊಸದಾಗಿ ನಿರ್ಮಿಸಬೇಕೆಂದು ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ಸೂಚಿಸಿರುವ ಹಿನ್ನೆಲೆಯಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಮುಂದಾಗಿರುವುದು ಹೊಸ ಸಮಸ್ಯೆಗಳನ್ನು ಹುಟ್ಟುಹಾಕಿದೆ. ಹೊಸದಾಗಿ ಘಟಕ ನಿರ್ಮಿಸುವ ನೆಪದಲ್ಲಿ ಗುತ್ತಿಗೆ ಕಾರ್ಮಿಕರ ಬದುಕನ್ನು ಬೀದಿಪಾಲು ಮಾಡುತ್ತಿರುವುದು ಆತಂಕಕಾರಿ ಬೆಳವಣಿಗೆ.

ನಾಯಂಡಹಳ್ಳಿ ಕೊಳಚೆ ಸಂಸ್ಕರಣಾ ಘಟಕ (ಎಸ್‌ಟಿಪಿ) ಹಲವು ಗುತ್ತಿಗೆ ಕಾರ್ಮಿಕರ ಬದುಕಿಗೆ ಆಸರೆಯಾಗಿತ್ತು. ಈ ಘಟಕವನ್ನು ನ್ಯಾಯಮಂಡಳಿಯ ನಿಯಮಾನುಸಾರ ಪುನರ್‌ ನಿರ್ಮಿಸಬೇಕೆಂಬುದೇನೋ ಸರಿ. ಆದರೆ ಬಡಪಾಯಿಗಳನ್ನು ಕೆಲಸದಿಂದ ತೆಗೆದು ಹಾಕಿರುವುದು ಅಮಾನವೀಯ ನಡೆ.

Advertisements

ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ), ಕೇಂದ್ರ ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ಕರೆಯಂತೆ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ದುಡಿಯುವ ಜನರ 72 ಗಂಟೆಗಳ ಮಹಾ ಧರಣಿಯಲ್ಲಿ ಬಿಡಬ್ಲ್ಯುಎಸ್‌ಎಸ್‌ಬಿ ಗುತ್ತಿಗೆ ಕಾರ್ಮಿಕರೂ ಭಾಗಿಯಾಗಿ ತಮ್ಮ ನೋವುಗಳನ್ನು ಹಂಚಿಕೊಳ್ಳುತ್ತಿದ್ದಾರೆ.

ಇಂದು ನಾಯಂಡಹಳ್ಳಿ ಘಟಕವನ್ನು ಕೆಡವಲು ಹೊರಟಿದ್ದಾರೆ. ಅಲ್ಲಿ ನಲವತ್ತೆರಡಕ್ಕೂ ಹೆಚ್ಚು ಕಾರ್ಮಿಕರು ಗುತ್ತಿಗೆ ಆಧಾರದಲ್ಲಿ ಹಲವು ವರ್ಷಗಳಿಂದ ಕೆಲಸ ಮಾಡುತ್ತಿದ್ದರು. ಆದರೆ ಕೆಲವು ದಿನಗಳ ಹಿಂದೆ ಇವರೆಲ್ಲರಿಗೂ ಲೆಟರ್‌ ಕೊಟ್ಟು ನಾಳೆಯಿಂದ ಕೆಲಸಕ್ಕೆ ಬರಬೇಡಿ ಎಂದು ನಿರ್ದಯವಾಗಿ ಅಧಿಕಾರಿಗಳು ನುಡಿದರು. ಈಗಾಗಲೇ ಹತ್ತಾರು ವರ್ಷ ಇದೇ ಕೆಲಸ ಮಾಡಿ ಹೊಟ್ಟೆಪಾಡು ನಡೆಸುತ್ತಿದ್ದ ಈ ಕಾರ್ಮಿಕರು ಮುಂದೇನು ಮಾಡಬೇಕು? ನಲವತ್ತೈದು ವರ್ಷ ದಾಟಿದ ಅನೇಕರು ದಿಕ್ಕು ತೋಚದೆ ಕಂಗಾಲಾಗಿದ್ದಾರೆ.

ಇಷ್ಟು ವರ್ಷಗಳಲ್ಲಿ ಸಾಕಷ್ಟು ಗುತ್ತಿಗೆ ಏಜೆನ್ಸಿಗಳು ಬಂದು ಹೋಗಿವೆ. ಆದರೆ ಎಲ್ಲರೂ ಇದೇ ಕಾರ್ಮಿಕರಿಂದ ಕೆಲಸ ಮಾಡಿಸಿವೆ. ಜಲಮಂಡಳಿ ಇವರ ಬದುಕಿಗೆ ಆಧಾರವಾಗಿತ್ತು. ಈಗ ಏಕಾಏಕಿ ತೆಗೆದುಬಿಟ್ಟರೆ ಏನು ಮಾಡುವುದು?

ಬೆಂಗಳೂರಿನಲ್ಲಿ ಸುಮಾರು 25 ಜಲ ಶುದ್ಧೀಕರಣ ಘಟಕಗಳಿವೆ. ಅಲ್ಲಿ ಕೆಲಸ ಮಾಡುವ ಗುತ್ತಿಗೆ ಕಾರ್ಮಿಕರಿಗೆ ಇದೇ ಸ್ಥಿತಿ ನಾಳೆ ಬರಬಹುದು ಎಂಬ ಆತಂಕವನ್ನು ತೋಡಿಕೊಳ್ಳುತ್ತಿರುವ ಕಾರ್ಮಿಕರು, “ನಮ್ಮನ್ನು ಅಕ್ಕಪಕ್ಕದ ಘಟಕಗಳಿಗೆ ಸ್ಥಳಾಂತರ ಮಾಡಿ ಕೆಲಸ ಉಳಿಸಿ” ಎಂದು ಆಗ್ರಹಿಸುತ್ತಿದ್ದಾರೆ.

ಉತ್ತರ ಭಾರತದ ಕಾರ್ಮಿಕರನ್ನು ಕರೆಸಿಕೊಂಡು ಸೇರಿಸಿಕೊಳ್ಳಲಾಗುತ್ತಿದೆ. ಸ್ಥಳೀಯ ಕಾರ್ಮಿಕರಿಗಿಂತ ಕಡಿಮೆ ವೇತನಕ್ಕೆ ದುಡಿಯುವ, ಯಾವುದೇ ಜೀವನ ಭದ್ರತೆಗೆ ಆಗ್ರಹಿಸದೆ ಇರುವ ಉತ್ತರದವರಿಗೆ ಮೊದಲ ಆದ್ಯತೆ ನೀಡಲಾಗುತ್ತಿದೆ. ಬೇರೆ ಘಟಕಗಳಲ್ಲಿ ಸಿಬ್ಬಂದಿಯ ಕೊರತೆ ಇದ್ದರೂ ನಮ್ಮನ್ನು ಪರಿಗಣಿಸುತ್ತಿಲ್ಲ ಎಂಬುದು ಕೆಲಸ ಕಳೆದುಕೊಂಡ ಕಾರ್ಮಿಕರ ಅಳಲು.

’ಈದಿನ’ದೊಂದಿಗೆ ಮಾತನಾಡಿದ ಗುತ್ತಿಗೆ ಕಾರ್ಮಿಕ ನಾಗೇಂದ್ರ ಅವರು, “ನಾಯಂಡಹಳ್ಳಿ ಎಸ್‌ಟಿಪಿ ಘಟಕದಲ್ಲಿ ಹದಿನೈದರಿಂದ ಇಪ್ಪತ್ತು ವರ್ಷಗಳಿಂದ ಕೆಲಸ ಮಾಡುತ್ತಿದ್ದೇವೆ. ಈಗ ಎಲ್ಲಿಯೂ ಇಲ್ಲದೆ ಇರುವ ರೂಲ್ಸ್‌ ತಂದು, ಡೆಮಾಲಿಶ್ ನೆಪ ತೆಗೆದು ನಮ್ಮನ್ನು ಕೆಲಸದಿಂದ ತೆಗೆದಿದ್ದಾರೆ. ಇದರಲ್ಲಿ ಗುತ್ತಿಗೆದಾರರು ಮತ್ತು ಅಧಿಕಾರಿಗಳು ಶಾಮೀಲಾಗಿದ್ದಾರೆ. ನಾವು ಅಧಿಕಾರಿಗಳಿಗೆ ಯಾವ ಮೋಸ ಮಾಡಿದ್ದೇವೆ? ಅವರ ಮನೆಯ ಶೌಚಾಲಯಗಳನ್ನು ತೊಳೆಯುತ್ತಿದ್ದೆವು” ಎಂದರು.

bwssb worker
ಗುತ್ತಿಗೆ ಕಾರ್ಮಿಕ ನಾಗೇಂದ್ರ

“ಕಳೆದ ಹತ್ತು ದಿನಗಳಿಂದ ಘಟಕದ ಎದುರು ಪ್ರತಿಭಟನೆ ಮಾಡುತ್ತಿದ್ದೆವು. ಈಗ ಮಹಾಧರಣಿಯೊಂದಿಗೆ ಸೇರಿಕೊಂಡಿದ್ದೇವೆ. ನಮ್ಮನ್ನು ಗುತ್ತಿಗೆಗೆ ತೆಗೆದುಕೊಂಡಿದ್ದ ಸೂಯೇಜ್ ಕಂಪನಿಯವರೂ ನಮ್ಮ ಅಳಲು ಕೇಳುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸಿದರು.

ಹೋರಾಟಗಾರ ರವಿ ಮಾತನಾಡಿ, “ಡಿಸೆಂಬರ್‌ 4ನೇ ತಾರೀಖು ಮಕ್ಕಳುಮರಿಯೊಂದಿಗೆ ಕಾವೇರಿ ಭವನಕ್ಕೆ ಹೋಗುತ್ತೇವೆ. ತೀರ್ಮಾನ ಅಧಿಕಾರಿಗಳು ಮಾಡಲಿ. ನಮ್ಮ ಮೇಲೆ ಕೇಸ್ ಹಾಕಿ ಜೈಲಿಗೆ ಕಳುಹಿಸಲಿ. ನಾವು ಜಲಮಂಡಳಿಯ ಮುಂದೆ ಕೂರುವುದು ನಿಶ್ಚಿತ” ಎಂದು ಎಚ್ಚರಿಸಿದರು.

ravi 1
ಹೋರಾಟಗಾರ ರವಿ

“ಕಡಿಮೆ ಸಂಖ್ಯೆಯ ಕಾರ್ಮಿಕರನ್ನು ನಿಯಮಬಾಹಿರವಾಗಿ ನೇಮಿಸಿಕೊಂಡು ಅಧಿಕಾರಿಗಳು, ಗುತ್ತಿಗೆದಾರರು ದುಡ್ಡು ತಿನ್ನುತ್ತಾರೆ. ಸುರಕ್ಷತಾ ಸಲಕರಣೆಗಳನ್ನು ನೀಡದೆಯೇ ಕಾರ್ಮಿಕರಿಂದ ಕೆಲಸ ತೆಗೆಸುವ ಅಮಾನವೀಯತೆಯೂ ನಡೆಯುತ್ತದೆ” ಎಂದು ತಿಳಿಸಿದರು.

ಇದನ್ನೂ ಓದಿರಿ: ಮಹಾಧರಣಿ: ’ಭೂಮಿಯ ಹಕ್ಕು’ ಪಡೆಯಲು ಕಾದು ಕುಳಿತವರು

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

Download Eedina App Android / iOS

X