ಮಾಧ್ಯಮ ಅಕಾಡೆಮಿಯ 2023, 2024 ನೇ ಸಾಲಿನ ವಾರ್ಷಿಕ ಪ್ರಶಸ್ತಿ ಘೋಷಣೆಯಾಗಿದೆ. 2023ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ಹಿರಿಯ ಪತ್ರಕರ್ತ ಅ.ಚ.ಶಿವಣ್ಣ ಹಾಗೂ 2024ನೇ ಸಾಲಿನ ಜೀವಮಾನದ ಸಾಧನೆಯ ವಿಶೇಷ ಪ್ರಶಸ್ತಿಗೆ ವಾರ್ತಾಭಾರತಿ ಪತ್ರಿಕೆಯ ಪ್ರಧಾನ ಸಂಪಾದಕ ಅಬ್ದುಸ್ಸಲಾಮ್ ಪುತ್ತಿಗೆಯವರನ್ನು ಆಯ್ಕೆ ಮಾಡಲಾಗಿದೆ.
2023ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಗಂಗಾಧರ ಮೊದಲಿಯಾರ್, ಪ್ರೊ.ಉಷಾರಾಣಿ ಎನ್., ಸುಶೀಲೇಂದ್ರ ನಾಯಕ್, ವಾಸುದೇವ ಹೊಳ್ಳ, ಆಡ್ ಟೆನ್ನಿಸನ್, ಮಾಲತಿ ಭಟ್, ಮನು ಅಯ್ಯಪ್ಪ ಹರಿಯಬ್ಬೆ ಹೆಂಜಾರಪ್ಪ ವಿಲಾಸ್ ನಾಂದೋಡ್ಕರ್, ಶಿವಕುಮಾರ್ ಬೆಳ್ಳಿತಟ್ಟೆ, ಸಿದ್ದಯ್ಯ ಹಿರೇಮಠ, ಶಶಿಕಾಂತ್ ಶೆಂಬಳ್ಳಿ ಮನೋಜ್‌ಗೌಡ ಪಾಟೀಲ್, ಆನಂದ ಬೈದನಮನೆ, ಮಧು ಜವಳಿ. ಎಂ.ಆರ್.ದಿನೇಶ್, ತಾರಾನಾಥ್, ಕೆ.ಮಲ್ಲಿಕಾರ್ಜುನ ಸಾಣಾಪೂರ, ಜಯಪ್ರಕಾಶ್, ಪುಂಡಲೀಕ ಭೀ.ಬಾಳೋಜಿ, ಇಬ್ರಾಹಿಂ ಅಡ್ಕಸ್ಥಳ, ಅನ್ನು ಮಂಗಳೂರು(ಪುಂಡಲೀಕ ಪೈ), ನಿಹಾಲ್ ಕಿದ್ವಾಯಿ, ರೋಹಿಣಿ ಸ್ವಾಮಿ, ಭಾವನಾ ನಾಗಯ್ಯ ಮುನೀರ್ ಅಹ್ಮದ್ ಆಝಾದ್, ಹನುಮಾನ್ ಸಿಂಗ್ ಜಮಾದಾರ್, ಜೈಮುನಿ, ಶಿವಮೂರ್ತಿ ಗುರುಮಠ ಹಾಗೂ ಸಿರಾಜ್ ಬಿಸ್ರಳ್ಳಿ.
2024ನೇ ಸಾಲಿನ ವಾರ್ಷಿಕ ಪ್ರಶಸ್ತಿ ಪುರಸ್ಕೃತರು
ಪ್ರೊ.ಎ.ಎಸ್.ಬಾಲಸುಬ್ರಹ್ಮಣ್ಯ ರಿಷಿಕೇಷ್ ಬಹದ್ದೂರ್ ದೇಸಾಯಿ, ಸುಭಾಷ್ ಹೂಗಾರ, ಟಿ.ಗುರುರಾಜ್, ಕುಮಾರನಾಥ್ ಯು.ಕೆ., ಸಿದ್ದು ಕಾಳೋಜಿ, ಆರ್.ಕೆ.ಜೋಶಿ, ಪ್ರಕಾಶ್ ಶೇರ್, ಆರುಂಡಿ ಶ್ರೀನಿವಾಸಮೂರ್ತಿ, ರವೀಶ್ ಎಚ್.ಎಸ್., ಭಾನುಪ್ರಕಾಶ್, ಮಹೇಶ ಶೆಟಗಾರ, ರಮೇಶ್ ಜಹಗೀರದಾರ, ನಿರುಪಮಾ, ದಿನೇಶ್ ಗೌಡಗೆರೆ, ಡಿ.ಸಿ.ಮಹೇಶ್, ಎಚ್.ಎಸ್.ಹರೀಶ್. ಶರಣಯ್ಯ ಒಡೆಯರ್, ಅಶ್ವಿನಿ ಎಂ.ಶ್ರೀಪಾದ, ರಿಝಾನ್ ಅಸದ್, ಬನ್ನಿಕಾಳಪ್ಪ, ಮನುಜಾ ವೀರಪ್ಪ ಜಯಂತ್ ಜೆ., ವಿಖಾರ್ ಅಹ್ಮದ್ ಸಯೀದ್, ಡಿ.ಎನ್.ಶಾಂಭವಿ ನಾಗರಾಜ್, ರಮೇಶ್(ಹಾಬಿ ರಮೇಶ್), ಸೋಮಶೇಖರ ಕಿಲಾರಿ, ನಾರಾಯಣಸ್ವಾಮಿ, ಅನೀಸ್ ನಿಸಾರ್ ಹಮೀದ್ ಹಾಗೂ ಸಂದೀಪ್ ಸಾಗರ್ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ: 2023ರ ವಿವಿಧ ದತ್ತಿ ಪ್ರಶಸ್ತಿಗಳು
ಅಭಿಮಾನಿ ದತ್ತಿ ಪ್ರಶಸ್ತಿ: ಕನ್ನಡಮ್ಮ ಪತ್ರಿಕೆಯಲ್ಲಿ ಪ್ರಕಟವಾದ ‘ಕೆವೈಸಿ ಅಪ್‌ಡೇಟ್ ಮಾಡಲು ಮುಗಿಬಿದ್ದ ಜನ, ಬೆಳ್ಳಂಬೆಳಿಗ್ಗೆ ಕ್ಯೂ’ ವರದಿಗಾಗಿ ಧಾರವಾಡದ ರವಿಕುಮಾರ ಚನ್ನಬಸಪ್ಪ ಕಗ್ಗಣ್ಣವರ ಹಾಗೂ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಪ್ರಕಟವಾದ ‘ಬಲೆಯೊಳಗೆ ಬುದ್ದಿವಂತರು’ ವರದಿಗಾಗಿ ವಿಜಯ್ ಕೋಟ್ಯಾನ್ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ದಿಗಂತ ದತ್ತಿ ಪ್ರಶಸ್ತಿ: ಕನ್ನಡಪ್ರಭ ಪತ್ರಿಕೆಯಲ್ಲಿ ಪ್ರಕಟವಾದ ‘ಕೆರೆ ನೀರು ಹೊರಕ್ಕೆ ಹಾಕುತ್ತಿರುವ ಗ್ರಾಮಸ್ಥರು’ ವರದಿಗೆ ಹುಬ್ಬಳ್ಳಿಯ ಶಿವಾನಂದ ಗೊಂಬಿಯವರನ್ನು ಆಯ್ಕೆ ಮಾಡಲಾಗಿದೆ.
ಅಭಿಮನ್ಯು ಪ್ರಶಸ್ತಿ: ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಬೀಡಿಯಿಂದ ಕಮರಿದ ಕನಸು’ ವರದಿಗೆ ಮಂಗಳೂರಿನ ಸಂಧ್ಯಾ ಹೆಗಡೆ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ಶಿಲ್ಪ. ಪಿ, ಡೆಕ್ಕನ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾದ ‘ಮ್ಯಾನ್ಯುವೆಲ್ ಸ್ಕ್ಯಾವೆಂಜರಿಂಗ್ ವರದಿಗೆ ಆಯ್ಕೆ ಮಾಡಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ: ಕೆ.ನೀಲಾ(ಕಲಬುರಗಿ) ಅವರನ್ನು ಮಾಡಲಾಗಿದೆ.
ಮಾಧ್ಯಮ ಮಹಾಸಾಧಕ ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ: ಕ.ಮ.ರವಿಶಂಕರ್(ಕನ್ನಡಪ್ರಭ-ಚಿತ್ರದುರ್ಗ)
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ: ವಿ.ವೆಂಕಟೇಶ್
ಆಂದೋಲನ ಪ್ರಶಸ್ತಿ: ಸಂಜೆ ದರ್ಶನ
ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಎಚ್.ಪಿ.ಪುಣ್ಯವತಿ
ಅರಗಿಣಿ ಪ್ರಶಸ್ತಿ: ತುಂಗರೇಣುಕಾ ಅವರನ್ನು ಆಯ್ಕೆ ಮಾಡಲಾಗಿದೆ.
ಕರ್ನಾಟಕ ಮಾಧ್ಯಮ ಅಕಾಡೆಮಿ: 2024ರ ವಿವಿಧ ದತ್ತಿ ಪ್ರಶಸ್ತಿಗಳು
ಅಭಿಮಾನಿ ದತ್ತಿ ಪ್ರಶಸ್ತಿ: ಪ್ರಜಾವಾಣಿ ಪತ್ರಿಕೆಯಲ್ಲಿ ಪ್ರಕಟವಾದ ‘ಕೆರೆ ಒಡಲಿಗೆ ಬೆಂಗಳೂರಿನ ಚರಂಡಿ ನೀರು- ತರಕಾರಿ ಗುಣಮಟ್ಟ ಕುಸಿತ, ಅವಳಿ ವ್ಯಾಲಿಯಲ್ಲಿ ಅಪಾಯ’ ವರದಿಗೆ ಕೋಲಾರ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಯ ಕೆ.ಓಂಕಾರಮೂರ್ತಿ ಹಾಗೂ ಡಿ.ಎಂ.ಕುರ್ಕೆ ಪ್ರಶಾಂತ್ ಅವರನ್ನು ಆಯ್ಕೆ ಮಾಡಲಾಗಿದೆ.
ಮೈಸೂರು ದಿಗಂತ ದತ್ತಿ ಪ್ರಶಸ್ತಿ: ರಿಪಬ್ಲಿಕ್ ಕನ್ನಡ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ‘ಆರು ವರ್ಷಗಳಿಂದ ಪಿಂಚಣಿ ಬರದೆ ಪರದಾಟ, 50 ವರ್ಷದ ವಿಶೇಷ ಚೇತನ ನರಿಯಂಬಾಡಿ ಕಂಗಾಲು’ ವರದಿಗಾಗಿ ಬಿ.ಕೆ.ದೇವಯ್ಯ(ಅನು ಕಾರ್ಯಪ್ಪ ಹಾಗೂ ಸುವರ್ಣ ನ್ಯೂಸ್ ಸುದ್ದಿವಾಹಿನಿಯಲ್ಲಿ ಪ್ರಸಾರವಾದ ‘ವಿಶೇಷ ಚೇತನ ವ್ಯಕ್ತಿಗಳಿಗೆ ನಿವೇಶನ ಹಂಚಿಕೆ’ ಬಗ್ಗೆ ಸರಣಿ ಸುದ್ದಿಗಾಗಿ ನಂದೀಶ್ ಮಲ್ಲೇನಹಳ್ಳಿಯವರನ್ನು ಆಯ್ಕೆ ಮಾಡಲಾಗಿದೆ.
ಅಭಿಮನ್ಯು ಪ್ರಶಸ್ತಿ: ‘ಕುಲುಮೆ ಕಳಚಿದ ಕಮ್ಮಾರರು’ ವರದಿಗಾಗಿ ಕಲಬುರಗಿಯ ಪ್ರಜಾವಾಣಿ ವರದಿಗಾರ ಪ್ರಭು ಬ.ಅಡವಿಹಾಳ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಜಾ ಸಂದೇಶ ದತ್ತಿ ಪ್ರಶಸ್ತಿ: ‘ಕೊಪ್ಪಳ ಜಿಲ್ಲೆಯಲ್ಲಿ ಬೇರೂರಿರುವ ಅಸ್ಪೃಶ್ಯತೆ’ ವರದಿಗಾಗಿ ಕೊಪ್ಪಳದ ವಾರ್ತಾಭಾರತಿ ವರದಿಗಾರ ಮುಹಮ್ಮದ್ ಅಖೀಲ್ ಉಡೇವು ಅವರನ್ನು ಆಯ್ಕೆ ಮಾಡಲಾಗಿದೆ.
ಡಾ.ಬಿ.ಆರ್.ಅಂಬೇಡ್ಕರ್ ಮೂಕನಾಯಕ ಪ್ರಶಸ್ತಿ: ಹಿರಿಯ ಸಾಹಿತಿ ರಹಮತ್ ತರೀಕೆರೆ,
ಮಾಧ್ಯಮ ಮಹಾಸಾಧಕ ಸಿ.ವಿ.ರಾಜಗೋಪಾಲ್ ದತ್ತಿ ಪ್ರಶಸ್ತಿ: ಮಂಗಳೂರಿನ ಮ್ಯುರಿಯಲ್ ನಿರ್ಮಲಾ ಡಿ’ಸಿಲ್ವ,
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ದತ್ತಿ ಪ್ರಶಸ್ತಿ: ಎಚ್.ಎಸ್.ಸುಧೀಂದ್ರ ಕುಮಾರ್
ಆಂದೋಲನ ಪ್ರಶಸ್ತಿ: ಹೊಸಪೇಟೆ ಟೈಮ್ಸ್
ಬಸವರಾಜ ದೊಡ್ಡಮನಿ ಸ್ಥಾಪಿಸಿರುವ ಕೃಷಿಯಲ್ಲಿ ಅತ್ಯುತ್ತಮ ವರದಿ, ಲೇಖನ, ಅಂಕಣ ಬರಹಗಾರರಿಗೆ ಪ್ರಶಸ್ತಿ: ಕೀರ್ತನಾ ಕುಮಾರಿ ಕೆ.(ಕೀರ್ತಿ ಶೇಖರ ಕಾಸರಗೋಡು) ಹಾಗೂ ಹಾಸನ ಜಿಲ್ಲೆಯ ವೆಂಕಟೇಶ್
ಅರಗಿಣಿ ಪ್ರಶಸ್ತಿ: ಶ್ಯಾಮ್ ಪ್ರಸಾದ್ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಶಸ್ತಿ ಪ್ರದಾನ ಸಮಾರಂಭದ ದಿನಾಂಕವನ್ನು ಸದ್ಯದಲ್ಲೇ ತಿಳಿಸಲಾಗುವುದು ಎಂದು ಮಾಧ್ಯಮ ಅಕಾಡೆಮಿ ಅಧ್ಯಕ್ಷೆ ಆಯೆಷಾ ಖಾನುಂ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.