ರಾಜ್ಯದಲ್ಲಿ ಮತ್ತೆ ಮಳೆ ಚುರುಕುಗೊಂಡಿದೆ. ಕರಾವಳಿ ಮತ್ತು ಮಲೆನಾಡು ಭಾಗಗಳೂ ಸೇರಿದಂತೆ ಹಲವು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
19 ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ. ಕಳೆದ ಮೂರು ದಿನಗಳಿಂದ ಕೇವಲ ಕರಾವಳಿ ಹಾಗೂ ಮಲೆನಾಡಿನ ಜಿಲ್ಲೆಗಳಷ್ಟೇ ಅಲ್ಲ ಬೆಂಗಳೂರು ಮತ್ತಿತರೆ ಕಡೆಗಳಲ್ಲೂ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಮುಂದಿನ ನಾಲ್ಕು ದಿನಗಳ ಕಾಲ ಮಳೆಯಾಗುವ ನಿರೀಕ್ಷೆ ಇದೆ.
ದಕ್ಷಿಣ ಕನ್ನಡ, ಉಡುಪಿ, ಬಾಗಲಕೋಟೆ, ಕೊಪ್ಪಳ, ಹಾಸನ, ಕೊಡಗಿಗೆ ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ವಿಜಯನಗರ, ರಾಮನಗರ, ಮೈಸೂರು, ದಾವಣಗೆರೆ, ಚಿಕ್ಕಮಗಳೂರು, ಶಿವಮೊಗ್ಗ, ದಾವಣಗೆರೆ, ಚಿಕ್ಕಮಗಳೂರು, ಚಾಮರಾಜನಗರ, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ,ಬೆಳಗಾವಿ, ಉತ್ತರ ಕನ್ನಡ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಕಳೆದ ಎರಡು ದಿನಗಳಲ್ಲಿ ಧರ್ಮಸ್ಥಳ, ಹೆಸರಘಟ್ಟ, ಬೆಳ್ತಂಗಡಿ, ಉಡುಪಿ, ಸುಳ್ಯ, ಪುತ್ತೂರು, ಮೂಡುಬಿದಿರೆ, ಕೋಟಾ, ಕಾರ್ಕಳ, ಬೀದರ್, ಭಾಗಮಂಡಲ, ಆಗುಂಬೆ, ನಾಪೋಕ್ಲು, ಮಾಣಿ, ಮಾಗಡಿ, ಕುಂದಾಪುರ, ಕಿಬ್ಬನಹಳ್ಳಿ, ಕಳಸ, ಗೋಪಾಲ್ನಗರ, ಚನ್ನರಾಯಪಟ್ಟಣ, ಭದ್ರಾವತಿ, ಬೆಂಗಳೂರು ಎಚ್ಎಎಲ್, ಉಪ್ಪಿನಂಗಡಿ, ತಿಪಟೂರು, ಸಿದ್ದಾಪುರ, ಮಂಕಿ, ಪೊನ್ನಂಪೇಟೆ, ಕುಣಿಗಲ್, ಕೊಟ್ಟಿಗೆಹಾರ, ಕ್ಯಾಸಲ್ರಾಕ್ ರಾಯಲ್ಪಾಡು, ಗೌರಿಬಿದನೂರು, ಹೊಸಕೋಟೆ, ಗೇರುಸೊಪ್ಪ, ಶಿರಾಲಿ, ಶೃಂಗೇರಿ, ಕುಮಟಾ, ಕೃಷ್ಣರಾಜಪೇಟೆ, ಕಮ್ಮರಡಿ, ಹಾವೇರಿ, ಬೇಳೂರು, ಬನವಾಸಿ, ಹೊನ್ನಾವರ, ಗೋಕರ್ಣ, ಹಾಗೂ ಭಾಗಮಂಡಲದಲ್ಲಿ ಮಳೆಯಾಗಿದೆ. ಈ ವಾರದ ವೀಕೆಂಡ್ ಬಳಿಕ ಮಳೆ ಪ್ರಮಾಣ ಕುಸಿಯಲಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮಂಗಳವಾರ ಮಳೆ ಮತ್ತೆ ಮರುಪ್ರವೇಶಿಸಿದೆ. ಮುಂದಿನ ನಾಲ್ಕೈದು ದಿನಗಳ ಕಾಲ ಉತ್ತಮ ಮಳೆ ದಾಖಲಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಸೋಮವಾರದ ಬಳಿಕ ಸಾಧಾರಣ ಮಳೆ ಕಾಣಿಸಿಕೊಂಡರೆ ಮಂಗಳವಾರವಂತೂ ಜಿಲ್ಲೆಯ ನಾನಾ ಭಾಗದಲ್ಲಿಉತ್ತಮ ಮಳೆ ದಾಖಲಾಗಿದೆ. ವಿಶೇಷವಾಗಿ ಮಂಗಳೂರು ನಗರ ಭಾಗದಲ್ಲಿಸಂಜೆ ಹೊತ್ತು ಮಳೆ ಕಾಣಿಸಿಕೊಂಡರೆ ಉಳಿದಂತೆ ಗ್ರಾಮಾಂತರ ಭಾಗವಾದ ಕಡಬ, ಬಂಟ್ವಾಳ, ಸುಳ್ಯ, ಪುತ್ತೂರು, ಬೆಳ್ತಂಗಡಿ ಭಾಗದಲ್ಲಿ ಉತ್ತಮ ಮಳೆ ದಾಖಲಾಗಿದೆ
ಬೆಂಗಳೂರಿನಲ್ಲಿ ಮಂಗಳವಾರ ಸಾಧಾರಣ ಮಳೆಯಾಗಿದೆ. ಎಚ್ಎಎಲ್ನಲ್ಲಿ 29.6 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ನಗರದಲ್ಲಿ 29.2 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.4 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಕೆಐಎಎಲ್ನಲ್ಲಿ 30.7 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 20.6 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ, ಜಿಕೆವಿಕೆಯಲ್ಲಿ 29.0 ಡಿಗ್ರಿ ಸೆಲ್ಸಿಯಸ್ ಗರಿಷ್ಠ ಉಷ್ಣಾಂಶ, 19.8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ಉಷ್ಣಾಂಶ ದಾಖಲಾಗಿದೆ.