’ಪಾಕಿಸ್ತಾನ್‌ ಜಿಂದಾಬಾದ್’ ಎಂದು ತಿರುಚಿದ ಮಾಧ್ಯಮಗಳ ವಿರುದ್ಧ ಜನಾಕ್ರೋಶ

Date:

Advertisements

“ನಾಸಿರ್ ಸಾಬ್ ಜಿಂದಾಬಾದ್‌” ಎಂದು ಕೂಗಿರುವುದನ್ನು ತಿರುಚಿ “ಪಾಕಿಸ್ತಾನ್ ಜಿಂದಾಬಾದ್” ಎಂದು ಕೂಗಿರುವುದಾಗಿ ಕನ್ನಡದ ಮುಖ್ಯವಾಹಿನಿ ಮಾಧ್ಯಮಗಳು ಹಬ್ಬಿಸಿರುವ ಸುಳ್ಳಿನ ವಿರುದ್ಧ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಕನ್ನಡದ ಮಾಧ್ಯಮಗಳು ದಿನೇ ದಿನೇ ತಮ್ಮ ಘನತೆಯನ್ನು ಕಳೆದುಕೊಂಡು ಬಿಜೆಪಿಯ ಪ್ರೊಪಾಗಾಂಡಕ್ಕೆ ಒತ್ತು ನೀಡುತ್ತಿರುವುದು ಸ್ಪಷ್ಟವಾಗುತ್ತಿರುವುದನ್ನು ಗಮನಿಸುತ್ತಿರುವ ನಾಡಿನ ಜನತೆ ಮತ್ತೆ ಮುಖ್ಯವಾಹಿನಿ ಮಾಧ್ಯಮಗಳ ವಿರುದ್ಧ ದನಿ ಎತ್ತಿದ್ದಾರೆ.

ಸುಳ್ಳನ್ನೇ ಸಾವಿರ ಸಲ ಹೇಳಿ ಸತ್ಯ ಮಾಡಲು ಹೊರಟಿರುವುದನ್ನು ಗುರುತಿಸಿರುವ ಜನರು, ಸಾಮಾಜಿಕ ಮಾಧ್ಯಮಗಳ ಮೂಲಕ ಆಕ್ರೋಶ ಹೊರಹಾಕಿದ್ದಾರೆ. ಸಾಮಾಜಿಕ ಕಾರ್ಯಕರ್ತರು, ಬರಹಗಾರರು, ಸಾಮಾನ್ಯ ಜನರು, ಚಿಂತಕರು, ಮಾಧ್ಯಮಗಳ ವರ್ತನೆಗಳನ್ನು ಗಂಭೀರವಾಗಿ ಗಮನಿಸುತ್ತಿರುವವರೆಲ್ಲ ಈ ಕುರಿತು ಪೋಸ್ಟ್ ಹಾಕುತ್ತಿದ್ದಾರೆ.

Advertisements

“ಆತ ನಾಸಿರ್ ಸಾssssssssರ್ ಜಿಂದಾಬಾದ್ ಅನ್ನೋದು ಸ್ಪಷ್ಟವಾಗಿ ಕೇಳಿಸುತ್ತಿದ್ದರೂ ಮೀಡಿಯಾಗಳು ತಿರುಚಿದ್ದು ನಿಜಕ್ಕೂ ಕೆಟ್ಟ ಸಂಪ್ರದಾಯ. ಬಿಜೆಪಿ ಐಟಿ ಸೆಲ್‌ನ ಕೆಲಸವನ್ನು ಕನ್ನಡದ ಮಾಧ್ಯಮಗಳು ವಹಿಸಿಕೊಂಡಿದ್ದು ಅಸಹ್ಯ ಹುಟ್ಟಿಸುತ್ತಿದೆ. ಇಂತಹ ಸುಳ್ಳು ಸುದ್ದಿಗಳನ್ನು ಬಿತ್ತರಿಸುವತ್ತಿರುವ ಮಾಧ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳುವ ಅಧಿಕಾರ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಮತ್ತು ಪರಮೇಶ್ವರ್‌ ಸರ್ಕಾರಕ್ಕೆ ಇಲ್ಲವೇ?” ಎಂದು ರವಿನಂದನ ಜಮಖಂಡಿ ಪ್ರಶ್ನಿಸಿದ್ದಾರೆ.

“ನಾಸಿರ್ ಸಾಬ್ ಜಿಂದಾಬಾದ್ ಎಂಬುದು ಕನ್ನಡ ಸುದ್ದಿ ವಾಹಿನಿಗಳಿಗೆ ಪಾಕಿಸ್ತಾನ್ ಜಿಂದಾಬಾದ್ ಎಂದು ಕೇಳಿಸುವಲ್ಲಿ ಮತೀಯ ಪೂರ್ವಗ್ರಹದ ಕಿವಿಯ ಸಮಸ್ಯೆ ಇರುತ್ತದೆ” ಎಂದು ಶ್ರೀನಿವಾಸ ಕಾರ್ಕಳ ಅವರು ಅಭಿಪ್ರಾಯಪಟ್ಟಿದ್ದಾರೆ.

“ಈ ವಿಡಿಯೋದಲ್ಲಿ ನಿಮಗ್ಯಾರಿಗಾದರೂ ಪಾಕಿಸ್ತಾನ್ ಜಿಂದಾಬಾದ್ ಅನ್ನುವ ಘೋಷಣೆ ಕೇಳಿಸಿತೇ? ಇಲ್ಲ ಅಲ್ಲವೇ? ಯಾಕೆ ಕೇಳಿಸಿಲ್ಲ ಅಂದರೆ ಇದು ಎಡಿಟ್ ಮಾಡದ ನಿಜವಾದ ವಿಡಿಯೋ. ಗೋಧಿಯ ಮಲವನ್ನೇ ಪ್ರಸಾದವೆಂದು ಸ್ವೀಕರಿಸುವ ಕೆಲವು ಮಾಧ್ಯಮಗಳು ತಮ್ಮ ಯಜಮಾನನ್ನು ಖುಷಿ ಪಡಿಸಲು ನಾಸಿರ್ ಸಾಬ್ ಜಿಂದಾಬಾದ್ ಅನ್ನುವ ಘೋಷಣೆಯನ್ನು ಬಿಜೆಪಿಯವರು ಎಡಿಟ್ ಮಾಡಿಕೊಟ್ಟ ಹಾಗೆ ಟಿವಿಯಲ್ಲಿ ತೋರಿಸಿವೆ. ಇದೇ ಮೊದಲೇನಲ್ಲ. ಇವರ ಅದೆಷ್ಟೋ ಸುಳ್ಳುಗಳು ಜಗಜ್ಜಾಹೀರಾಗಿವೆ. ಆದರೇನು ಮಾಡೋಣ, ಅವರಿಗೆ ಇಂತಹ ಹಡಬೆ ಕೆಲಸ ಮಾಡದೇ ವಿಧಿಯಿಲ್ಲ. ಆದರೆ ಈಗ ಸಮಾಜ ಮೊದಲಿನಂತಿಲ್ಲ, ಎಲ್ಲಾ ಜನರು ವಿಮರ್ಶೆ ಮಾಡದೇ ಇವರ ಸುಳ್ಳುಗಳನ್ನು ಏಕಾಏಕೀ ನಂಬುವುದಿಲ್ಲ. ಹಾಗಾಗಿಯೇ ಇತ್ತೀಚಿನ ದಿನಗಳಲ್ಲಿ ಅವರದೇ ಸುಳ್ಳುಗಳಿಂದ ಅವರೇ ಬೆತ್ತಲಾಗುತ್ತಿದ್ದಾರೆ. ಸರ್ಕಾರ ಈ ಪ್ರಕರಣದ ತನಿಖೆ ನಡೆಸಿ ತಪ್ಪಿತಸ್ತರಿಗೆ ಕಠಿಣ ಶಿಕ್ಷೆ ವಿಧಿಸಬೇಕು” ಎಂದು  ಶೀನಪ್ಪ ಶೆಟ್ಟಿ ಎಂಬ ಖಾತೆಯಲ್ಲಿ ಆಗ್ರಹಿಸಲಾಗಿದೆ.

“ಮಾನಗೆಟ್ಟ ಮಾಧ್ಯಮಗಳಿಗೆ ನಾಸಿರ್ ಸಾಬ್ ಜಿಂದಾಬಾದ್ ಎನ್ನುವುದು ಪಾಕಿಸ್ತಾನ್ ಜಿಂದಾಬಾದ್ ಆಗಿ ಕೇಳಿಸುತ್ತದೆ. ಏಕೆಂದರೆ ಅವರ ಮನಸ್ಸು ಕೊಳೆತು ಗಬ್ಬು ನಾರುತ್ತಿದೆ. ಕಾಂಗ್ರೆಸ್ ಸಂಸದರು, ಕಾರ್ಯಕರ್ತರ ಸಂಭ್ರಮ ಸಹಿಸಿಕೊಳ್ಳಲಾಗದೇ ಈ ಸುಳ್ಳನ್ನು ಪ್ರಸಾರ ಮಾಡುತ್ತಿರುವ ಈ ದುಷ್ಟ, ನೀಚ ಮಾಧ್ಯಮಗಳಿಗೆ ಪಾಠ ಕಲಿಸುವ ಸಮಯವಿದು” ಎಂದು ಮುತ್ತುರಾಜು ಎಚ್ಚರಿಸಿದ್ದಾರೆ.

“ಮಾಧ್ಯಮದವರು ಈ ಲೆವೆಲ್‌ಗೆ ತಮ್ಮನ್ನು ತಾವು ಮಾರಿಕೊಳ್ಳಬಾರದು” ಎಂದು ಶೈಲಜಾ ಎಚ್.ಎಂ.  ಅಭಿಪ್ರಾಯಟ್ಟಿದ್ದಾರೆ.

“ನಾಸಿರ್ ಸಾರ್ ಜಿಂದಾಬಾದ್ ಅನ್ನೋದನ್ನು ಪಾಕಿಸ್ತಾನ್ ಜಿಂದಾಬಾದ್ ಎಂದು ತಿರುಚಿ – ಸರಕಾರದ ವಿರುದ್ಧ ಕತ್ತಿ ಮಸೆದ ಮಾಧ್ಯಮಗಳ ಮೇಲೆ ಕಾಂಗ್ರೆಸ್ ಸರ್ಕಾರ ಈಗಲಾದರೂ ಕೇಸ್ ದಾಖಾಲಿಸುತ್ತಾ? ತಾಕತ್ತಿದೆಯಾ?” ಎಂದು ರಾ.ಚಿಂತನ್ ಪ್ರಶ್ನಿಸಿದ್ದಾರೆ.

“ರಾಜ್ಯ ಸರ್ಕಾರ ಬದುಕಿದ್ರೆ ಸುಳ್ಳು ಸುದ್ದಿ ಹರಡಿದ ಮೀಡಿಯಾಗಳ ವಿರುದ್ಧ ಕ್ರಮ ಕೈಗೊಳ್ಳಲಿ” ಎಂದು ಲಿಂಗರಾಜು ಮಳವಳ್ಳಿ ಒತ್ತಾಯಿಸಿದ್ದಾರೆ.

“ಹೇತ್ಲಾಂಡಿ ಮಾಧ್ಯಮಗಳು ಚುನಾವಣಾ ಪ್ರಚಾರ ಆರಂಭಿಸಿವೆ” ಎಂದು ದಿನೇಶ್‌ಕುಮಾರ್‌ ಟೀಕಿಸಿದ್ದಾರೆ.

“ಗೆಲುವನ್ನು ಸಂಭ್ರಮಿಸುವ ವೇಳೆ ನಾಸಿರ್ ಸಾಬ್ ಜಿಂದಾಬಾದ್ ಅಂತ ಜೋರಾಗಿ ಸದ್ದು ಮಾಡುತ್ತಿದ್ದರು. ಅದೇ ವೇಳೆ ಮಾಧ್ಯಮದವರು ಮೈಕ್ ಹಿಡಿದುಕೊಂಡು ಸಂದರ್ಶನಕ್ಕಿಳಿದರು. ನಾಸಿರ್ ಅವರ ಹಿಂದೆಯೆ ಒಬ್ಬ ಜೋರಾಗಿ ಕೂಗುತ್ತಿದ್ದವನನ್ನು ಅವರ ಪಕ್ಕದಲ್ಲಿದ್ದವರು ಮಾಧ್ಯಮದವರ ಮಾತು ಕೇಳಿಸಿಕೊಳ್ಳಲು ಹಿಂದಿನವನ ಬಾಯಿ ಮುಚ್ಚಿದ್ದು ಸ್ಪಷ್ಟವಾಗಿ ಕಾಣುತ್ತದೆ. ಆದರೆ ಈ ವರ್ಷದ ಇನ್ಕ್ರಿಮೆಂಟು, ಪ್ರಮೋಶನ್ ಆಸೆಯಲ್ಲಿದ್ದ ಮಾಧ್ಯಮದ ಕೆಲಸದವನಿಗೆ ನಾಸಿರ್ ಸಾಬ್ ಜಿಂದಾಬಾದ್ ಅನ್ನೊದನ್ನು ಪಾಕಿಸ್ತಾನ್ ಜಿಂದಾಬಾದ್ ಅಂತ ಬ್ರೇಕಿಂಗ್ ನ್ಯೂಸ್ ಕೊಟ್ಟುಬಿಟ್ಟ. ಅವನಿಗೆ ಪಕ್ಕ ಈ ಸಲ ಪಾಕಿಸ್ತಾನ ರತ್ನ ಅವಾರ್ಡ್ ಸಿಗೋದು ಗ್ಯಾರಂಟಿ” ಎಂದು ನವೀನ್‌ ಗೌಡ ವ್ಯಂಗ್ಯವಾಡಿದ್ದಾರೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

1 COMMENT

  1. ಸುಳ್ಳು ಸುದ್ದಿ ಹರಡಿದ ಕಾಮಲೆ ಕಣ್ಣು ಮಾಧ್ಯಮಗಳ ಮೇಲೆ ಕ್ರಮ ತೆಗೆದುಕೊಳ್ಳಲು ಇದು ಸೂಕ್ತ ಸಮಯ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ದಾವಣಗೆರೆ | ಜಗಳೂರಿನಲ್ಲಿ ಶುಕ್ರದೆಸೆ ಮೀಡಿಯಾ ಸಂಸ್ಥೆಯಿಂದ ಕರೋಕೆ ಸಂಗೀತ ಸ್ಪರ್ಧೆ ಸಂಭ್ರಮ

ಶುಕ್ರದೆಸೆ ಮೀಡಿಯಾ ಸಂಸ್ಥೆ ವತಿಯಿಂದ ದಾವಣಗೆರೆ ಜಿಲ್ಲೆ ಜಗಳೂರು ನಗರದಲ್ಲಿ ರಾಜ್ಯಮಟ್ಟದ...

ಹೈದರಾಬಾದ್‌ | ಕಲಬುರಗಿ ಮೂಲದ ಒಂದೇ ಕುಟುಂಬದ ಐವರು ಅನುಮಾನಾಸ್ಪದ ಸಾವು

ಒಂದೇ ಕುಟುಂಬಕ್ಕೆ ಸೇರಿದ ಕಲಬುರಗಿ ಮೂಲದ ಐವರು ತೆಲಂಗಾಣದ ಹೈದರಾಬಾದ್‌ ನಗರದ...

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025ಕ್ಕೆ ವಿಧಾನ ಪರಿಷತ್ತಿನಲ್ಲೂ ಅಂಗೀಕಾರ

ಗ್ರೇಟರ್ ಬೆಂಗಳೂರು ಆಡಳಿತ ತಿದ್ದುಪಡಿ ವಿಧೇಯಕ 2025 ಕ್ಕೆ ವಿಧಾನ ಪರಿಷತ್ತಿನಲ್ಲಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X