ಕಾಲ್ತುಳಿತ ಪ್ರಕರಣ ಹಿನ್ನೆಲೆಯಲ್ಲಿ ಇಷ್ಟು ಅಸಹಾಯಕರಾಗಿ, ಹೇಡಿಯಂತೆ ಹಾಗೂ ಆತಂಕದಿಂದ ಈವರೆಗೂ ಯಾವ ಮುಖ್ಯಮಂತ್ರಿಯೂ ವರ್ತಿಸಿಲ್ಲ ಎಂದು ಮಾಜಿ ಐಪಿಎಸ್ ಅಧಿಕಾರಿ, ಬಿಜೆಪಿ ನಾಯಕ ಭಾಸ್ಕರ್ ರಾವ್ ಟೀಕಿಸಿದ್ದಾರೆ.
ಆರ್ಸಿಬಿ ಐಪಿಎಲ್ ವಿಜಯದ ಸಂಭ್ರಮಾಚರಣೆ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಸಂಭವಿಸಿ 11 ಮಂದಿ ಮೃತಪಟ್ಟ ಪ್ರಕರಣ ಸಂಬಂಧ ರಾಜ್ಯ ಸರ್ಕಾರ ಬೆಂಗಳೂರು ಪೊಲೀಸ್ ಆಯುಕ್ತ ಬಿ ದಯಾನಂದ್ ಅವರ ಅಮಾನತು ನಿರ್ಧಾರ ಕರ್ನಾಟಕದ ಪೊಲೀಸ್ ಇತಿಹಾಸದಲ್ಲಿ ಕರಾಳ ದಿನ ಎಂದು ಭಾಸ್ಕರ್ ರಾವ್ ಬಣ್ಣಿಸಿದ್ದಾರೆ.
“ಅನಿಯಂತ್ರಿತ ಉಪಮುಖ್ಯಮಂತ್ರಿಗಳೇ ಸಾವಿನ ವಿಜಯೋತ್ಸವ ಆಯೋಜಿಸಿದ್ದಾರೆ. ಅವರೇ ಪ್ರಮುಖ ತಪ್ಪಿತಸ್ಥ ಎಂಬುದು ಕರ್ನಾಟಕದ ಪ್ರತಿಯೊಬ್ಬರಿಗೂ ತಿಳಿದಿದೆ. ಈವರೆಗೂ ಯಾವೊಬ್ಬ ಮುಖ್ಯಮಂತ್ರಿ ಕೂಡ ಈ ಮಟ್ಟಕ್ಕೆ ಅಸಹಾಯಕರಾಗಿ, ಹೇಡಿಯಂತೆ ಮತ್ತು ಆತಂಕದಿಂದ ವರ್ತಿಸಿದ್ದು ನಾನು ನೋಡಿಲ್ಲ” ಎಂದು ಕಿಡಿಕಾರಿದ್ದಾರೆ.
“ಬೆಂಗಳೂರನ್ನು ಸುರಕ್ಷಿತವಾಗಿ ಇಡುವುದಕ್ಕೆ ಪೊಲೀಸ್ ಆಯುಕ್ತರು ಮತ್ತು ಅವರ ತಂಡ ರಾತ್ರಿ ಇಡೀ ಶ್ರಮಿಸಿದೆ. ಇದಕ್ಕೆ ಮತ್ತು ಸತ್ಯ ಹೇಳಿದ್ದಕ್ಕೆ ಪೊಲೀಸ್ ಆಯುಕ್ತರಿಗೆ ದೊರೆತ ಬಹುಮಾನ ‘ಅಮಾನತು’ ಆಗಿದೆ” ಎಂದು ಭಾಸ್ಕರ್ ರಾವ್ ವಾಗ್ದಾಳಿ ನಡೆಸಿದ್ದಾರೆ.
Mr Siddaramiah has gone into Panic mode. The suspension of Bengaluru City Police Commissioner is the darkest day in the History of Karnataka Police.
— Bhaskar Rao (@Nimmabhaskar22) June 5, 2025
The prize for telling the Truth and he and his Team slogged the whole night to keep Bengaluru Safe.
Everyone in Karnataka knows… pic.twitter.com/iYFsMEihGg
ಪೋಲೀಸ್ ಅಧಿಕಾರಿ ಪಕ್ಷ ಸೇರಿ ಆ ಹುದ್ದೆಯ ಘನತೆ ಗೌರವಗಳನ್ನು ಜುಮ್ಲಾ ವ್ಯಾಪಾರಿಗಳ ಪಾದಕ್ಕೆ ಸಮರ್ಪಿಸಿದರು,,ಇವರದೇ ಪಕ್ಷದವರು ಪೋಲೀಸ್ ಇಲಾಖೆ ತನ್ನ ಕೆಲಸ ಮಾಡಲಿಲ್ಲ ಅಂತಾ ಬೊಬ್ಬೆ ಹೊಡೆದರು,, ಉತ್ತರ ಪ್ರದೇಶದಲ್ಲಿ ಕುಂಭಮೇಳ ಮತ್ತು ಬಾಬಾನ ಹುಚ್ಚಾಟಕ್ಕೆ ನೂರಾರು ಮಂದಿ ಅಮಾಯಕ ಹಿಂದೂಗಳ ಪ್ರಾಣ ಹೋಯಿತು ಆವಾಗ ಯಾವಾಗ ಮೋಡ್ ನಲ್ಲಿ ಇದ್ದರು ಮಾಜಿ ಐಪಿಎಸ್ ಹಾಲಿ ಬಿಜೆಪಿ ನಾಯಕರು