ಇತ್ತೀಚೆಗೆ ಬೆಲೆ ಏರಿಕೆ ವಿಚಾರ ಭಾಗಿ ಚರ್ಚೆ ಆಕ್ರೋಶಕ್ಕೆ ಕಾರಣವಾಗಿದೆ. ಮೆಟ್ರೋ, ಹಾಲು, ಪೆಟ್ರೋಲ್, ಅಡುಗೆ ಅನಿಲ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಲಾಗಿದೆ. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತಿದೆ. ಈ ನಡುವೆ, ಈಗ ಖಾಸಗಿ ಬಸ್‌ಗಳ ಟಿಕೆಟ್ ದರವನ್ನೂ ಏರಿಕೆ ಮಾಡಲು ಖಾಸಗಿ ಬಸ್ ಮಾಲೀಕರ ಒಕ್ಕೂಟ ನಿರ್ಧರಿಸಿದೆ.
ಪೆಟ್ರೋಲ್, ಡೀಸೆಲ್ ದರ ಏರಿಕೆ ಹಾಗೂ ಟೋಲ್ ದರ ಹೆಚ್ಚಳವಾಗಿರುವ ಹಿನ್ನೆಲೆಯಲ್ಲಿ ಟಿಕೆಟ್ ದರ ಹೆಚ್ಚಸಲು ಖಾಸಗಿ ಬಸ್‌ಗಳ ಮಾಲೀಕರು ಮುಂದಾಗಿದ್ದಾರೆ.
“ಡೀಸೆಲ್ ದರ ಸುಮಾರು ಐದು ರೂಪಾಯಿ ಏರಿಕೆಯಾಗಿದೆ. ಟೋಲ್ ದರವೂ ಹೆಚ್ಚಾಗಿದೆ. ಬಸ್‌ಗಳನ್ನು ಓಡಿಸುವುದು ಹೊರೆಯಾಗುತ್ತಿದೆ. ಹೀಗಾಗಿ, ದರ ಏರಿಸದಿದ್ದರೆ ಖಾಸಗಿ ಬಸ್ ಉದ್ಯಮವೇ ಸ್ಥಗಿತಗೊಳ್ಳುತ್ತದೆ” ಎಂದು ಖಾಸಗಿ ಬಸ್ ಮಾಲೀಕರ ಸಂಘ ಹೇಳಿದೆ.
“ಟೋಲ್, ಡೀಸೆಲ್, ಸಿಬ್ಬಂದಿವೇತನ ಸೇರಿದಂತೆ ಪ್ರತಿ ಬಸ್ ನಿರ್ವಹಣೆಗೆ ದಿನಕ್ಕೆ 18 ರಿಂದ 20 ಸಾವಿರ ರೂಪಾಯಿ ಹೆಚ್ಚುವರಿ ಖರ್ಚಾಗುತ್ತದೆ. ಬೆಲೆ ಏರಿಕೆಯು ಈ ಹೊರೆಯನ್ನು ಮತ್ತಷ್ಟು ಹೆಚ್ಚಿಸಿದೆ. ಹಾಗಾಗಿ, ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಪ್ರತಿ ಟಿಕೆಟ್ ಗರಿಷ್ಠ 3 ರೂ. ಏರಿಕೆ ಮಾಡಲು ಚಿಂತನೆ ನಡೆದಿದೆ. ಮುಂದಿನ ವಾರ ನಿರ್ಧರಿಸಿ, ನಿಗದಿ ಮಾಡಲಾಗುತ್ತದೆ” ಎಂದು ಸಂಘದ ಕಾರ್ಯದರ್ಶಿ ಕುಯಿಲಾಡಿ ಸುರೇಶ್ ನಾಯ್ಕ್ ಹೇಳಿದ್ದಾರೆ.
ಸದ್ಯ ರಾಜ್ಯದಲ್ಲಿ ಒಟ್ಟು 8,000 ಖಾಸಗಿ ಬಸ್‌ಗಳು ಪ್ರಯಾಣ ಸೇವೆ ಒದಗಿಸುತ್ತಿವೆ.