ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವು ಸಂಬಂಧ ನಿವೃತ್ತ ನ್ಯಾಯಮೂರ್ತಿ ಜಾನ್ ಮೈಕಲ್ ಕುನ್ಹಾ ನೇತೃತ್ವದ ಏಕಸದಸ್ಯ ಆಯೋಗವು ವಿಚಾರಣೆ ಚುರುಕುಗೊಳಿಸಿದೆ. ದುರ್ಘಟನೆ ಬಗ್ಗೆ ಮಾಹಿತಿ ನೀಡಲು ಸಾರ್ವಜನಿಕರಿಗೆ ಅವಕಾಶ ಕಲ್ಪಿಸಲಾಗಿದೆ.
ತನಿಖಾ ಆಯೋಗಕ್ಕೆ ಹೇಳಿಕೆ ನೀಡಲು ಹಾಗೂ ಸಾಕ್ಷ್ಯ ದಾಖಲೆಗಳನ್ನು ಒದಗಿಸಲು ಇಚ್ಛಿಸುವವರು ಎರಡು ಪ್ರತಿಗಳಲ್ಲಿ ದೃಢೀಕೃತ ಪ್ರಮಾಣ ಪತ್ರದೊಂದಿಗೆ ಸಲ್ಲಿಸಬಹುದಾಗಿದೆ. ಜೂನ್ 24ರ ಒಳಗೆ ಸಹಿ ಮಾಡಿದ ಹಾಗೂ ಸ್ಕ್ಯಾನ್ ಮಾಡಿದ ಪ್ರಮಾಣಪತ್ರ ಹಾಗೂ ದಾಖಲೆಗಳೊಂದಿಗೆ cdinqcom@gmail.com ಕಳುಹಿಸಬೇಕು.
ಜೂನ್ 4ರಂದು ನಡೆದ ಕಾಲ್ತುಳಿತದಲ್ಲಿ 11 ಮಂದಿ ಸಾವನ್ನಪ್ಪಿದರೆ ಹಾಗೂ 50ಕ್ಕಿಂತ ಹೆಚ್ಚು ಮಂದಿ ಗಾಯಗೊಂಡಿದ್ದರು. ರಾಜ್ಯ ಸರ್ಕಾರವು ಮ್ಯಾಜಿಸ್ಟ್ರೇಟ್, ಸಿಐಡಿ ಹಾಗೂ ನಿವೃತ್ತ ನ್ಯಾಯಾಧೀಶರಾದ ಕುನ್ನಾ ಅವರ ನೇತೃತ್ವದ ಆಯೋಗ ರಚಿಸಿದೆ. ಈ ಸಂಬಂಧ ಪ್ರತ್ಯೇಕ ತನಿಖೆ ನಡೆಸುತ್ತಿದೆ.
ದುರ್ಘಟನೆ ವೇಳೆ ಘಟನೆಯ ವಾಸ್ತವಾಂಶದ ವಿವರಗಳು, ಮಾಹಿತಿ ಹಾಗೂ ಸತ್ಯ ಸಂಗತಿಗಳ ತಿಳಿದಿರುವ ಸಾರ್ವಜನಿಕರು ಆಯೋಗಕ್ಕೆ ತಿಳಿಸಬಹುದಾಗಿದೆ. ಸಾರ್ವಜನಿಕರು ಕೊಠಡಿ ಸಂಖ್ಯೆ 12, ಒಂದನೇ ಮಹಡಿ, ಹಳೆಕಟ್ಟಡ, ಕುಮಾರಕೃಪಾ ಅತಿಥಿ ಗೃಹ, ಬೆಂಗಳೂರು-560001. ಈ ಕಚೇರಿ ವಿಳಾಸಕ್ಕೆ ಕೊರಿಯರ್ ಮಾಡಬಹುದಾಗಿದೆ ಎಂದು ದಿನಪತ್ರಿಕೆಗಳಲ್ಲಿ ಒಳಾಡಳಿತ ಇಲಾಖೆಯು ಜಾಹೀರಾತು ನೀಡಿದೆ.