ಕೇವಲ ನಾಲ್ಕು ದಿನಗಳಲ್ಲಿ 716.58 ಕೋಟಿ ರೂ. ಮೌಲ್ಯದ ಮದ್ಯ ಮಾರಾಟ

Date:

Advertisements

2024ರ ಏಪ್ರಿಲ್-ಡಿಸೆಂಬರ್ ಅವಧಿಯಲ್ಲಿ ರಾಜ್ಯದಲ್ಲಿ ಮದ್ಯ ಮಾರಾಟದ ಆದಾಯವು ವರ್ಷದಿಂದ ವರ್ಷಕ್ಕೆ ಶೇಕಡ 4.63ರಷ್ಟು ಹೆಚ್ಚಾಗಿದೆ ಎಂದು ರಾಜ್ಯ ಅಬಕಾರಿ ಇಲಾಖೆಯ ಅಂಕಿಅಂಶಗಳು ಹೇಳುತ್ತವೆ. ಅದರಲ್ಲೂ ಕೇವಲ ನಾಲ್ಕು ದಿನಗಳಲ್ಲಿ 716.58 ಕೋಟಿ ರೂ. ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ವರದಿಯಾಗಿದೆ.

ಜುಲೈ ಮತ್ತು ಡಿಸೆಂಬರ್‌ನಲ್ಲಿ ಮದ್ಯ ಮಾರಾಟದ ಆದಾಯವು ಕ್ರಮವಾಗಿ ಶೇಕಡ 9.86 ಮತ್ತು ಶೇಕಡ 11.78ರಷ್ಟು ಕಡಿಮೆಯಾಗಿದೆ. ಆದರೆ ಮೇ ಮತ್ತು ಸೆಪ್ಟೆಂಬರ್‌ನಲ್ಲಿ ತಲಾ ಶೇಕಡ 27ರಷ್ಟು ಮದ್ಯ ಮಾರಾಟ ಪ್ರಮಾಣ ಏರಿಕೆಯಾಗಿದೆ. 2024ರಲ್ಲಿ ಹೊಸ ವರ್ಷದ ಮುನ್ನಾದಿನವು ವಾರದ ಮಧ್ಯದ ದಿನವಾದ ಕಾರಣದಿಂದಾಗಿ 2023ರಷ್ಟು ಮದ್ಯ ಮಾರಾಟವಾಗಿಲ್ಲ ಎಂದು ವರದಿಯಾಗಿದೆ. 2023ರಲ್ಲಿ ಹೊಸ ವರ್ಷದ ಮುನ್ನ ದಿನ ಭಾನುವಾರವಾಗಿತ್ತು.

ಇದನ್ನು ಓದಿದ್ದೀರಾ? ಹಾಸನ l ಅಕ್ರಮ ಮದ್ಯ ಮಾರಾಟ ನಿಲ್ಲಿಸುವಂತೆ ಮಹಿಳಾ ಸಂಘದಿಂದ ಮನವಿ 

Advertisements

ಅಬಕಾರಿ ಇಲಾಖೆಯು 2024-2025ರ ಆರ್ಥಿಕ ವರ್ಷದಲ್ಲಿ ಏಪ್ರಿಲ್‌ನಿಂದ ಡಿಸೆಂಬರ್ ಅವಧಿಯಲ್ಲಿ ತನ್ನ ಅಂದಾಜು ಆದಾಯದ ಶೇಕಡ 69.13ರಷ್ಟು ಆದಾಯವನ್ನು ಸಂಗ್ರಹಿಸಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಶೇಕಡ 73.78ರಷ್ಟು ಆದಾಯ ಸಂಗ್ರಹವಾಗಿತ್ತು.

ಇಲಾಖೆಯು ಈ ವರ್ಷ 38,525 ಕೋಟಿ ರೂಪಾಯಿ ಸಂಗ್ರಹಿಸುವ ಗುರಿಯನ್ನು ಹೊಂದಿದೆ. ಕಳೆದ ವರ್ಷ ಇಲಾಖೆಯು 34,628.98 ಕೋಟಿ ರೂ.ಗಳನ್ನು ಸಂಗ್ರಹಿಸಿದೆ. ಇದರಿಂದಾಗಿ ಅಂದಾಜು ಆದಾಯವು 128.98 ಕೋಟಿ ರೂ. ಆಗಿದೆ.

ಇದನ್ನು ಓದಿದ್ದೀರಾ? ದಕ್ಷಿಣ ಕನ್ನಡ | ಹೊಸವರ್ಷದ ಸಂಭ್ರಮ-2025; ಮದ್ಯ, ಬಿಯರ್ ಮಾರಾಟದಲ್ಲಿ ಅನಿರೀಕ್ಷಿತ ಕುಸಿತ

2024ರಲ್ಲಿ ಏಪ್ರಿಲ್ ಮತ್ತು ಡಿಸೆಂಬರ್ ನಡುವೆ 3.51 ಕೋಟಿ ಕಾರ್ಟನ್ ಬಾಕ್ಸ್ ಬಿಯರ್ ಮತ್ತು 5.28 ಕೋಟಿ ಕಾರ್ಟನ್ ಬಾಕ್ಸ್ ಐಎಂಎಲ್ ಕರ್ನಾಟಕದಲ್ಲಿ ಮಾರಾಟವಾಗಿದೆ. ಇದರಿಂದ ಅಬಕಾರಿ ಇಲಾಖೆಗೆ 26,633 ಕೋಟಿ ರೂಪಾಯಿ ಆದಾಯ ಲಭಿಸಿದೆ. ಅಂದರೆ ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಅಬಕಾರಿ ಇಲಾಖೆಯು ತನ್ನ ಆದಾಯವನ್ನು ಶೇಕಡ 4.63ರಷ್ಟು (1177.54 ಕೋಟಿ ರೂ.) ಹೆಚ್ಚಿಸಿಕೊಂಡಿದೆ.

ನಾಲ್ಕು ದಿನಗಳಲ್ಲಿ ಭಾರೀ ಮದ್ಯ ಮಾರಾಟ

ಕೇವಲ ನಾಲ್ಕು ದಿನಗಳಲ್ಲಿ 716.58 ಕೋಟಿ ರೂಪಾಯಿ ಮೌಲ್ಯದ ಮದ್ಯ ಮಾರಾಟವಾಗಿದೆ ಎಂದು ಫೆಡರೇಶನ್ ಆಫ್ ವೈನ್ ಮರ್ಚೆಂಟ್ಸ್ ಅಸೋಸಿಯೇಷನ್ ಮಾಹಿತಿ ನೀಡಿದೆ. 28ರಿಂದ ಡಿಸೆಂಬರ್ 31ರ ಮಧ್ಯಾಹ್ನದ ನಡುವೆ ಇಷ್ಟೊಂದು ಪ್ರಮಾಣದ ಮದ್ಯ ಮಾರಾಟವಾಗಿದೆ.

ಇದಲ್ಲದೆ, ಒಟ್ಟು 6.97 ಲಕ್ಷ ಕಾರ್ಟನ್ ಬಾಕ್ಸ್ ಬಿಯರ್ ಮತ್ತು 11.05 ಲಕ್ಷ ಕಾರ್ಟನ್ ಬಾಕ್ಸ್ ಐಎಂಎಲ್, ಒಟ್ಟು 18.03 ಲಕ್ಷ ಬಾಕ್ಸ್ ಮದ್ಯ ಮಾರಾಟವಾಗಿದೆ. ಐಎಂಎಲ್ ಮಾರಾಟವು ಒಟ್ಟು 577.75 ಕೋಟಿ ರೂ.ಗಳಾಗಿದ್ದರೆ ಬಿಯರ್ ಮಾರಾಟವು 138.33 ಕೋಟಿ ರೂ. ಆಗಿದೆ.

ಈದಿನ 1
ಈ ದಿನ ಡೆಸ್ಕ್
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬ್ರಹ್ಮಾವರ | ಮಹೇಶ್ ಶೆಟ್ಟಿ ತಿಮರೋಡಿಗೆ 14 ದಿನಗಳ ಕಾಲ ನ್ಯಾಯಾಂಗ ಬಂಧನ

ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿಎಲ್ ಸಂತೋಷ್ ವಿರುದ್ಧ ಅವಹೇಳನಾಕಾರಿ ಹೇಳಿಕೆ...

ಚಿಕ್ಕಮಗಳೂರು l ಸಭಾಧ್ಯಕ್ಷರೇ ಮಲೆನಾಡಿನ ಸಮಸ್ಯೆ ಬಗ್ಗೆ ಚರ್ಚಿಸಲು ಅವಕಾಶ ಕಲ್ಪಿಸಿ; ಹೆಚ್.ಡಿ ತಮ್ಮಯ್ಯ

ಮಲೆನಾಡಿನಲ್ಲಿ ಕಾಡುತ್ತಿರುವ ಕಾಡು-ಪ್ರಾಣಿ-ಮಾನವ ಸಂಘರ್ಷದಿಂದ ಜನಜೀವನ ಅಸ್ತವ್ಯಸ್ಥವಾಗಿದೆ. ಇಂತಹ ಗಂಭೀರ ಸಮಸ್ಯೆಗಳ...

ಒಳಮೀಸಲಾತಿ | ಅಲೆಮಾರಿ ಸಮುದಾಯಗಳಿಗೆ ಸರ್ಕಾರದಿಂದ ನ್ಯಾಯ ಸಿಗಲಿ: ಬರಗೂರು ರಾಮಚಂದ್ರಪ್ಪ

ರಾಜ್ಯ ಸರ್ಕಾರವು ಜಾರಿಗೊಳಿಸಿರುವ ಒಳಮೀಸಲಾತಿಯಲ್ಲಿ ಅಲೆಮಾರಿ ಸಮುದಾಯಗಳಿಗೆ ನ್ಯಾಯ ಸಿಗಬೇಕು ಎಂದು...

ದಾವಣಗೆರೆ | ಪರಿಶಿಷ್ಟ ಜಾತಿ ಒಳಮೀಸಲಾತಿ; ಅಲೆಮಾರಿಗಳಿಗೆ ಅನ್ಯಾಯ ವಿರೋಧಿಸಿ ಪ್ರತಿಭಟನೆ

""ಒಳ ಮೀಸಲಾತಿ ಹಂಚಿಕೊಳ್ಳುವಾಗ ನಿರ್ಗತಿಕ ಅಲೆಮಾರಿ ಜಾತಿಗಳನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಅಲೆಮಾರಿ...

Download Eedina App Android / iOS

X