ಯುಗಾದಿ ಮತ್ತು ರಂಜಾನ್ ಹಬ್ಬದ ಸಂದರ್ಭದಲ್ಲಿ ಪ್ರಯಾಣಿಕರ ದಟ್ಟಣೆ ಅಧಿಕವಾಗುವ ಸಾಧ್ಯತೆಯಿದೆ. ದಟ್ಟಣೆ ನಿರ್ವಹಿಸುವ ನಿಟ್ಟಿನಲ್ಲಿ ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ರೈಲ್ವೆ ನಿಲ್ದಾಣ ಮತ್ತು ಚೆನ್ನೈನ ಪುರಚ್ಚಿ ತಲೈವರ್ ಡಾ.ಎಂಜಿ ರಾಮಚಂದ್ರನ್ ಸೆಂಟ್ರಲ್ ರೈಲ್ವೆ ನಿಲ್ದಾಣ ನಡುವೆ ವಿಶೇಷ ಎಕ್ಸ್‌ಪ್ರೆಸ್ ರೈಲಿಗೆ ರೈಲ್ವೆ ಮಂಡಳಿ ಅನುಮೋದನೆ ನೀಡಿದೆ.
ಹಾಗೆಯೇ ಹಬ್ಬದ ಸಂದರ್ಭದಲ್ಲಿ ಬೆಂಗಳೂರು ಮತ್ತು ಬೆಳಗಾವಿ ನಡುವೆ ನಾಲ್ಕು ವಿಶೇಷ ರೈಲು ಸಂಚರಿಸಲಿವೆ. ಮೈಸೂರು- ಕಾರವಾರ, ಬೆಂಗಳೂರು- ಕಲಬುರಗಿ ನಡುವೆಯೂ ವಿಶೇಷ ರೈಲು ಸಂಚರಿಸಲಿವೆ. ಈಗಾಗಲೇ ರೈಲಿನ ವೇಳಾಪಟ್ಟಿ ಬಿಡುಗಡೆಯಾಗಿದೆ. ಬುಕ್ಕಿಂಗ್ ಕೂಡಾ ಶುರುವಾಗಿದೆ.
ಇದನ್ನು ಓದಿದ್ದೀರಾ? ಮೈಸೂರು-ಮನಮದುರೈ ನಡುವೆ ವಿಶೇಷ ರೈಲು ಸಂಚಾರ
ಕೆಎಸ್‌ಆರ್ ಬೆಂಗಳೂರು- ಡಾ. ಎಂಜಿ ರಾಮಚಂದ್ರನ್ ಆರ್ ಚೆನ್ನೈ ಸೆಂಟ್ರಲ್ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07319) ಕೆಎಸ್ ಆರ್ ಬೆಂಗಳೂರಿನಿಂದ ಮಾ. 28ರಂದು ಬೆಳಗ್ಗೆ 8.05ಕ್ಕೆ ಹೊರಡಲಿದ್ದು, ಮಧ್ಯಾಹ್ನ 2.40ಕ್ಕೆ ಡಾ. ಎಂಜಿಆರ್ ಸೆಂಟ್ರಲ್ ನಿಲ್ದಾಣಕ್ಕೆ ತಲುಪಲಿದೆ.
ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಿಲ್ದಾಣದಿಂದ ಮಾ.28ರಂದು ಮಧ್ಯಾಹ್ನ 3.40ಕ್ಕೆ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್- ಕೆಎಸ್‌ಆರ್ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 07320) ಹೊರಟು ಅದೇ ದಿನ ರಾತ್ರಿ 10.50ಕ್ಕೆ ಕೆಎಸ್‌ಆರ್ ಬೆಂಗಳೂರು ನಿಲ್ದಾಣಕ್ಕೆ ತಲುಪಲಿದೆ.
ಮಾ.28ರಂದು ರಾತ್ರಿ 9.35ಕ್ಕೆ ಮೈಸೂರು-ಕಾರವಾರ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06203) ಮೈಸೂರಿನಿಂದ ಹೊರಡಲಿದ್ದು ಮರುದಿನ ಸಂಜೆ 4.15ಕ್ಕೆ ಕಾರವಾರ ತಲುಪಲಿದೆ. ಅದೇ ರೈಲು (ರೈಲು ಸಂಖ್ಯೆ 06204) ಮಾ.29ರಂದು ರಾತ್ರಿ 11.30ಕ್ಕೆ ಕಾರವಾರದಿಂದ ಹೊರಡಲಿದೆ. ಮರುದಿನ ಸಂಜೆ 4.40ಕ್ಕೆ ಮೈಸೂರು ತಲುಪಲಿದೆ.
ಇದನ್ನು ಓದಿದ್ದೀರಾ? ಯಶವಂತಪುರ – ಮುರುಡೇಶ್ವರ ಸಾಪ್ತಾಹಿಕ ವಿಶೇಷ ರೈಲು ಸೇವೆಯ ಅವಧಿ ವಿಸ್ತರಣೆ
ಮಾ.28 ರಂದು ರಾತ್ರಿ 9:15ಕ್ಕೆ ಬೆಂಗಳೂರಿನಿಂದ ಎಸ್‌ಎಂವಿಟಿ ಬೆಂಗಳೂರು- ಕಲಬುರಗಿ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06519) ಹೊರಡಲಿದ್ದು, ಮರುದಿನ ಬೆಳಿಗ್ಗೆ 7:40ಕ್ಕೆ ಕಲಬುರಗಿ ತಲುಪಲಿದೆ.
ಕಲಬುರಗಿ ಎಸ್‌ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06520) ಮಾ.29ರಂದು ಬೆಳಗ್ಗೆ 9:35ಕ್ಕೆ ಕಲಬುರಗಿಯಿಂದ ಹೊರಡಲಿದೆ. ಅದೇ ದಿನ ರಾತ್ರಿ 8 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಬೆಳಗಾವಿಗೆ ನಾಲ್ಕು ವಿಶೇಷ ರೈಲು
ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06511) ಮಾರ್ಚ್ 28ರಂದು ಸಂಜೆ 7:00 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದ್ದು, ಮರುದಿನ ಬೆಳಿಗ್ಗೆ 07:30ಕ್ಕೆ ಬೆಳಗಾವಿ ತಲುಪಲಿದೆ.
ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06512) ಮಾರ್ಚ್ 29ರಂದು ಸಂಜೆ 5 ಗಂಟೆಗೆ ಬೆಳಗಾವಿಯಿಂದ ಹೊರಡಲಿದೆ. ಮರುದಿನ ಮುಂಜಾನೆ 4:30 ಗಂಟೆಗೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
ಇದನ್ನು ಓದಿದ್ದೀರಾ? ಬೆಂಗಳೂರು – ಹೊಸ ಭುವನೇಶ್ವರ ನಡುವೆ ಒಂದು ಟ್ರಿಪ್ ವಿಶೇಷ ರೈಲು ಓಡಿಸಲು ನೈರುತ್ಯ ರೈಲ್ವೆ ನಿರ್ಧಾರ
ಎಸ್ಎಂವಿಟಿ ಬೆಂಗಳೂರು-ಬೆಳಗಾವಿ ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06513) ಮಾರ್ಚ್ 30ರಂದು ಸಂಜೆ 7 ಗಂಟೆಗೆ ಎಸ್ಎಂವಿಟಿ ಬೆಂಗಳೂರಿನಿಂದ ಹೊರಡಲಿದೆ. ಮರುದಿನ ಬೆಳಿಗ್ಗೆ 7:30 ಗಂಟೆಗೆ ಬೆಳಗಾವಿಯನ್ನು ತಲುಪಲಿದೆ.
ಬೆಳಗಾವಿ-ಎಸ್ಎಂವಿಟಿ ಬೆಂಗಳೂರು ವಿಶೇಷ ಎಕ್ಸ್‌ಪ್ರೆಸ್ ರೈಲು (ರೈಲು ಸಂಖ್ಯೆ 06514) ಮಾರ್ಚ್ 31ರಂದು ಸಂಜೆ 5:30ಕ್ಕೆ ಬೆಳಗಾವಿಯಿಂದ ಹೊರಡಲಿದೆ. ಮರುದಿನ ಮುಂಜಾನೆ 4:30ಕ್ಕೆ ಎಸ್ಎಂವಿಟಿ ಬೆಂಗಳೂರು ತಲುಪಲಿದೆ.
