ಆರ್ ಅಶೋಕ್ ಕಾರಿನಲ್ಲಿ ತಲವಾರು, ಬಾಂಬ್ ಇತ್ತು; ಪೊಲೀಸರು ತನಿಖೆ ನಡೆಸಲಿ: ಬಿ ಕೆ ಹರಿಪ್ರಸಾದ್ ಆಗ್ರಹ

Date:

“ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಅವರ ಕಾರಲ್ಲಿ ತಲವಾರು, ನಾಡಬಾಂಬ್ ಎಲ್ಲವೂ ಇತ್ತು. ಅವರು ನೀರಿನ ಬಾಟಲ್ ಎಸೆದರು ಅದರಲ್ಲಿ ಪೆಟ್ರೋಲ್ ಇತ್ತು. ಇದರ ಬಗ್ಗೆ ಪೊಲೀಸರು ತನಿಖೆ ನಡೆಸಬೇಕು” ಎಂದು ಕೆಪಿಸಿಸಿ ಅಧ್ಯಕ್ಷ ಬಿ ಕೆ ಹರಿಪ್ರಸಾದ್ ಆಗ್ರಹಿಸಿದ್ದಾರೆ.

- Advertisement -

ಆಡಳಿತಾರೂಢ ಕಾಂಗ್ರೆಸ್ ಪಕ್ಷವನ್ನು “ಕೊತ್ವಾಲ್ ಗ್ಯಾಂಗ್‌ನ ಗೂಂಡಾ ಸರ್ಕಾರ” ಮತ್ತು “ಲಾಂಗು, ಮಚ್ಚು ಸಂಸ್ಕೃತಿಯ ಪಕ್ಷ” ಎಂದು ಆರ್ ಅಶೋಕ್ ಟೀಕಿಸಿದ್ದರು. ಕಾಂಗ್ರೆಸ್ ಕಚೇರಿಯಲ್ಲಿ ಲಾಂಗು, ಮಚ್ಚು ಮತ್ತು ಮೊಟ್ಟೆಗಳೇ ಇರುತ್ತವೆ ಎಂದು ಆರೋಪಿಸಿದ್ದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ಇದನ್ನೂ ಓದಿ: ಆರ್‌ಎಸ್‌ಎಸ್‌ ದೇಶಕ್ಕೆ ಮಾತ್ರವಲ್ಲ, ಬಿಜೆಪಿಗರಿಗೂ ಮಾರಕ: ಬಿ.ಕೆ ಹರಿಪ್ರಸಾದ್

ಇದಕ್ಕೆ ತಿರುಗೇಟು ನೀಡಿ ಪತ್ರಿಕಾಗೋಷ್ಠಿ ನಡೆಸಿರುವ ಬಿ ಕೆ ಹರಿಪ್ರಸಾದ್ ಅವರು, “ವಿಪಕ್ಷ ನಾಯಕ ಆರ್ ಅಶೋಕ್ ಅವರಿಗೆ ಕೊತ್ವಾಲ್ ರಾಮಚಂದ್ರ ಅವರ ಶಿಷ್ಯ (ಮುನಿರತ್ನ) ಏಡ್ಸ್ ಇಂಜೆಕ್ಷನ್ ತಗುಲಿಸಿದ ಮೇಲೆ ಸ್ವಲ್ಪ ಬುದ್ದಿ ಭ್ರಮಣೆ ಆದಂತೆ ಕಾಣುತ್ತಿದೆ. ಅವರ ಭಾಷೆಯ ಪ್ರಯೋಗ ಹಳಿ ತಪ್ಪಿದೆ. ರಾಹುಲ್ ಗಾಂಧಿ ಅವರ ಬಗ್ಗೆ ಅಜ್ಜಿ, ಅಮ್ಮ ಎಂದು ಏಕವಚನದಲ್ಲಿ ಮಾತನಾಡಿದ್ದಾರೆ” ಎಂದು ಹೇಳಿದ್ದಾರೆ.

“ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮನಮೋಹನ್ ಸಿಂಗ್, ಇಂದಿರಾ ಗಾಂಧಿ ಅವರ ಬಗ್ಗೆ ಬಿಜೆಪಿ ನಾಯಕರು ಮಾತನಾಡಿರುವ ಅಣಿಮುತ್ತು ನೋಡಿದಾಗ ಇವರಿಗೆ ಬುದ್ಧಿಭ್ರಮಣೆಯಾಗಿರುವುದರಲ್ಲಿ ಯಾವುದೇ ಸಂದೇಹವಿಲ್ಲ. ಜಾಲಹಳ್ಳಿಯ ಹೆಚ್ಎಂಟಿ ಕಾರ್ಖಾನೆ ಬಳಿಯ ಚಿತ್ರ ಮಂದಿರ ಬಳಿ ಬಿಜೆಪಿ ಹಾಗೂ ಆರ್‌ಎಸ್ಎಸ್ ನಾಯಕರು ಅಲ್ಲಿ ಬ್ಲಾಕ್ ಟಿಕೆಟ್ ಮಾರುತ್ತಿದ್ದರು. ಈಗ ಅಂತಹವರೆಲ್ಲಾ ಬಿಜೆಪಿ ನಾಯಕರಾಗಿದ್ದಾರೆ. ಅವರ ಭಾಷೆಯನ್ನೇ ಇವರೂ ಮಾತನಾಡುತ್ತಿದ್ದಾರೆ” ಎಂದಿದ್ದಾರೆ.

“ವಿರೋಧ ಪಕ್ಷದ ನಾಯಕರು ನಮ್ಮನ್ನು ತುಕ್ಡೆ ತುಕ್ಡೆ ಗ್ಯಾಂಗಿನವರು ಎಂದು ಹೇಳುತ್ತಾರೆ. ಗಡಿಪಾರು ಅಮಿತ್ ಶಾ ಅವರು ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದೇಕೆ? ನಡ್ಡಾ ಅವರು ಈ ಗ್ಯಾಂಗಿನವರನ್ನು ಕರೆಸಿ ಮಾತನಾಡಿದ್ದು ಯಾಕೆ” ಎಂದು ಪ್ರಶ್ನಿಸಿದರು.

“ಸಂಜೆ ಮೇಲೆ ಸಿಸಿಟಿವಿ ಬಂದ್ ಮಾಡಿ ಆ ಮನೆಗೆ ಯಾರು ಹೋಗುತ್ತಾರೆ, ಯಾರು ಬರುತ್ತಾರೆ ಎಂದು ನಾನು ಹೇಳಲು ಹೋಗುವುದಿಲ್ಲ. ಅಷ್ಟೊಂದು ಸೂಕ್ಷ್ಮ ಪ್ರದೇಶವಾಗಿದ್ದರೆ 1975ರಲ್ಲಿ ಬಿಜೆಪಿ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾ ಗಾಂಧಿ ಅವರ ಮನೆ ಘೇರಾವ್ ಮಾಡಬೇಕು ಎಂದಾಗ ಇಂದಿರಾ ಗಾಂಧಿ ಅವರು ಏನೂ ಮಾತನಾಡಿರಲಿಲ್ಲ” ಎಂದರು.

“ಮಾನ್ಯ ವಿರೋಧ ಪಕ್ಷದ ನಾಯಕರಾದ ಅಶೋಕ್ ಅವರು ಮಾತನಾಡುವಾಗ ಕಾಂಗ್ರೆಸ್ ಪಕ್ಷದ ವಿರುದ್ದ ತಲವಾರ್, ಕತ್ತಿ, ಬಾಂಬು ಎಂದು ಏನೇನೋ ಹೇಳಿದ್ದಾರೆ. ಆರ್‌ಎಸ್ಎಸ್ ಹಾಗೂ ಬಿಜೆಪಿಯವರ ಕಚೇರಿಯಲ್ಲಿ ಏನೇನಿದ್ದವು ಎಂಬುದರ ಬಗ್ಗೆ ಪಟ್ಟಿ ನೀಡುತ್ತೇನೆ. ಕಣ್ಣೂರಿನ ಬಿಜೆಪಿ ಕಚೇರಿಯಲ್ಲಿ ಬಾಂಬು, ನೂರಾರು ಮಾರಕಾಸ್ತ್ರಗಳು ಸಿಕ್ಕಿದ್ದವು” ಎಂದು ತಿರುಗೇಟು ನೀಡಿದ್ದಾರೆ.

“2016ನೇ ಇಸವಿಯಲ್ಲಿ ಚಕ್ರಕಲ್, ಕಣ್ಣೂರಿನಲ್ಲಿ ಬಿಜೆಪಿಯವರಿಂದ ನಾಡಬಾಂಬು, ಕತ್ತಿ ಹೀಗೆ ಹಲವಾರು ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ನೆಡುಂಗಾಡಿನ ಆರ್ ಎಸ್ ಎಸ್ ಕಚೇರಿಯಲ್ಲಿ ಬಾಂಬ್ ಕಚ್ಚಾ ವಸ್ತುಗಳು ಸಿಕ್ಕಿದ್ದವು. ಹೀಗೆ ನೂರಾರು ಪ್ರಕರಣಗಳನ್ನು ನೋಡಬಹುದು” ಎಂದು ವಿವರ ನೀಡಿದ್ದಾರೆ.

ಇನ್ನು, :ಕಾಂಗ್ರೆಸ್ ಪಕ್ಷದ ಕಚೇರಿಗೆ ಬಂದರೆ ನಿಮಗೆ ಸಿಗುವುದು ತ್ರಿವರ್ಣ ಧ್ವಜ ಹಾಗೂ ಗಾಂಧಿ ಟೋಪಿ ಮಾತ್ರ. ಲಾಠಿ, ತಲವಾರು, ಚಾಕುಗಳು ನಮ್ಮ ಕಚೇರಿಯಲ್ಲಿ ಸಿಗುವುದಿಲ್ಲ. ಜನರಿಗೆ ಭಯ ಬೀಳಿಸಲು ದೇಶದಲಲಿ ಲಾಠಿ ತಿರುಗಿಸುವವರು ಯಾರು ಎಂದು ನಾನು ಈಗಾಗಲೇ ಹೇಳಿದ್ದೇನೆ. ಬಿಜೆಪಿಯವರು ತಮ್ಮ ಕಚೇರಿಯಂತೆ ಕಾಂಗ್ರೆಸ್ ಕಚೇರಿಯೂ ಇರುತ್ತದೆ ಎಂಬ ಭ್ರಮೆಯಲ್ಲಿದ್ದಾರೆ” ಎಂದು ಕುಟುಕಿದ್ದಾರೆ.

“ಆರ್‌ಎಸ್ಎಸ್ ಪದಾಧಿಕಾರಿ ಯಶ್ವಂತ್ ಶಿಂಧೆ ಎಂಬಾತ ನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅಫಿಡವಿಟ್‌ನಲ್ಲಿ ನಾವು ಬಿಜೆಪಿ ಗೆಲ್ಲಿಸಲು ಬಾಂಬ್ ಸ್ಫೋಟ ಮಾಡಿದ್ದೆವು ಎಂದು ಹೇಳಿದ್ದಾನೆ. ದೇಶ ವಿರೋಧಿ ಚಟುವಟಿಕೆ ನಡೆಸಿ ಚುನಾವಣೆ ಗೆಲ್ಲಲು ಹೋಗಿದ್ದೆವು ಎಂದಿದ್ದಾನೆ. ಇವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಮಾತನಾಡಲು ನೈತಿಕತೆ ಇದೆಯೇ? ಶಾಸಕರ ಮೇಲೆ ಮೊಟ್ಟೆ, ಚಪ್ಪಲಿ, ಕಲ್ಲು ಎಸೆಯುವ ಸಂಸ್ಕೃತಿ ಆರಂಭಿಸಿದ್ದೇ ಬಿಜೆಪಿಯವರು. ಸಿದ್ದರಾಮಯ್ಯನವರು ಮಡಿಕೇರಿಯಲ್ಲಿ ಪ್ರವಾಸ ಮಾಡುವಾಗ ಯಾರು ಮೊಟ್ಟೆ ಎಸೆದಿದ್ದು? ದಾವಣಗೆರೆಯಲ್ಲಿ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆದಿದ್ದು ಯಾರು” ಎಂದು ಪ್ರಶ್ನಿಸಿದ್ದಾರೆ.

“ಕಾಂಗ್ರೆಸ್ ಪಕ್ಷ ಏನಾದರೂ ಕೋಳಿ ಫಾರಂ ಆಗಿದೆಯೇ ಎಂದು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕರು ಪ್ರಶ್ನೆ ಮಾಡಿದ್ದಾರೆ. ವಿದ್ಯಾಸಂಸ್ಥೆ ನಡೆಸುತ್ತೇವೆ ಎಂದು ನಾವು ಧಮ್ ಬಿರಿಯಾನಿ ಅಂಗಡಿ ನಡೆಸುತ್ತಿಲ್ಲ. ಧಮ್ ಬಿರಿಯಾನಿ ನಡೆಸುವವರಿಗೆ ಮೊಟ್ಟೆಯೇ ನೆನಪಾಗುವುದು. ರಾಹುಲ್ ಗಾಂಧಿ ಅವರು ವಿದೇಶಕ್ಕೆ ಹೋದರೆ ಪ್ರತಿಷ್ಟಿತ ವಿಶ್ವಿದ್ಯಾಲಯದಲ್ಲಿ ಭಾಷಣ ಮಾಡಿ ಬರುತ್ತಾರೆ. ಮೋದಿಯವರು ಎಲ್ಲಿ ಹೋಗಿದ್ದಾರೆ. ಎಫ್‌ಸ್ಟೀನ್ ಫೈಲ್ಸ್ ಅಲ್ಲಿ ಯಾರ ಹೆಸರಿದೆ. ಎಷ್ಟು ಚಪಲ ಇರಬೇಕು ಆ ಮನುಷ್ಯನಿಗೆ. ಅಮೆರಿಕ ಅಧ್ಯಕ್ಷ ಹೇಳುತ್ತಾನೆ ನರೇಂದ್ರ ಮೋದಿಯವರನ್ನು ಡ್ಯಾನ್ಸ್ ಮಾಡಿಸುತ್ತೇವೆ ಎಂದಿದ್ದಾರೆ. ಭಾರತಕ್ಕೆ ಅಪಮಾನ ಮಾಡಿದವರು ನಮ್ಮನ್ನು ತುಕ್ಡೆ ಗ್ಯಾಂಗ್ ಎನ್ನುತ್ತಾರೆ. ರಾಜ್ಯದ ಗಡಿ ಹಾಳು ಮಾಡಿದ ಲೂಟಿಕೋರರನ್ನು ಪಕ್ಷದಲ್ಲಿಟ್ಟುಕೊಂಡಿದ್ದಾರೆ” ಎಂದು ದೂರಿದರು.

ಇದನ್ನೂ ಓದಿ: “ರಾಷ್ಟ್ರಗೀತೆಗೆ ಅವಮಾನ ಮಾಡಿದ್ದು ನೀವು”: ಬಿಜೆಪಿಯ ಬಣ್ಣ ಬಯಲು ಮಾಡಿದ ಹರಿಪ್ರಸಾದ್

“ಬಿಜೆಪಿಯರನ್ನು ಮೂರು ಬಸ್‌ಗಳಲ್ಲಿ ದಸ್ತಗಿರಿ ಮಾಡಿಕೊಂಡು ಹೋಗಲಾಗುತ್ತಿತ್ತು. ಕಾಂಗ್ರೆಸ್ ಕಚೇರಿ ಮುಂದೆ ಒಂದೇ ಬಸ್ ಬಂದಿದ್ದು ಮಿಕ್ಕ ಎರಡು ಬಸ್ ಎಲ್ಲಿಗೆ ಹೋಯಿತು? ಆ ಬಸ್‌ಗಳು ಪಾಕಿಸ್ಥಾನಕ್ಕೆ ಹೋಗಿದ್ದವೇ? ಕೆಎಸ್‌ಆಆರ್‌ಟಿಸಿ ಡೈವರ್‌ಗೆ ಧಮ್ಕಿ ಹಾಕಿ ಇಲ್ಲಿಗೆ ಬಂದಿದ್ದಾರೆ” ಎಂದು ಆರೋಪಿಸಿದ್ದಾರೆ.

“ರಾಹುಲ್ ಗಾಂಧಿ ಅವರು ಪ್ರಧಾನಿ ಅವರ ನಿವಾಸದ ಎದುರು ಪ್ರತಿಭಟನೆ ಮಾಡಲು ಕಾರಣ ದೆಹಲಿಯಲ್ಲಿ ವಿದ್ಯಾರ್ಥಿಗಳಿಗೆ ರಕ್ತ ಬರುವಂತೆ ಹೊಡೆದಿದ್ದಾರೆ. ಹೆಣ್ಣು ಮಕ್ಕಳ ಮೇಲೆ ಕೈ ಮಾಡಿದ್ದಾರೆ. ಇದಕ್ಕೆ ನಾಲಾಯಕ್ ನರೇಂದ್ರ ಮೋದಿ ಅವರು ಕಾರಣ ರಾಹುಲ್ ಗಾಂಧಿ ಅವರಲ್ಲ. ನಾವು ಸಹ ಭಾಷಾ ಪ್ರಯೋಗ ಮಾಡುತ್ತೇವೆ ಎಂಬುದನ್ನು ಅಶೋಕ್, ವಿಜಯೇಂದ್ರ, ನಾರಾಯಸ್ವಾಮಿ ಅರ್ಥ ಮಾಡಿಕೊಳ್ಳಬೇಕು” ಎಂದು ತಿಳಿಸಿದ್ದಾರೆ.

“ನಾಲಾಯಕ್ ಸರ್ಕಾರ ಇರೋದಕ್ಕೆ 152 ಸಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು. ದೇಶದ ವ್ಯವಸ್ಥೆ ಹಾಳು ಮಾಡಿರುವ ನಾಲಾಯಕ್‌ಗಳು ಇವರು. ಇವರು ವಿಷಯಾಂತರ ಮಾಡಲು ಹೀಗೆ ಮಾತನಾಡುತ್ತಿದ್ದಾರೆ” ಎಂದು ದೂರಿದ್ದಾರೆ.

“ನಮ್ಮ ಕಾಂಗ್ರೆಸ್ ಪಕ್ಷದ ಮೇಲೆ ದಾಳಿ ಮಾಡಲು ನಾವು ಬಿಡುತ್ತೇವೆಯೇ? ನಾವು ಬ್ರಿಟಿಷರ ವಿರುದ್ದ ಹೋರಾಟ ಮಾಡಿದವರು. ಅವರ ಬೂಟ್ ನೆಕ್ಕಿದವರು ಅವರು. ಕಾಂಗ್ರೆಸ್ ಕಚೇರಿ ಮೇಲೆ ದಾಳಿ ಮಾಡಲು ಮುಂದಾದರೆ ನಾವು ಕಾನೂನಿನ ಅಡಿ ಕ್ರಮ ತೆಗೆದುಕೊಳ್ಳುತ್ತೇವೆ” ಎಂದು ಎಚ್ಚರಿಕೆ ನೀಡಿದ್ದಾರೆ.

“ಇದುವರೆಗೂ ಒಮ್ಮೆಯೂ ಪ್ರಶ್ನೆ ಪತ್ರಿಕೆ ಸೋರಿಕೆ ಬಗ್ಗೆ ಬಿಜೆಪಿಯವರು ಮಾತನಾಡುತ್ತಿಲ್ಲ. ನಾವಿದ್ದಾಗ ಇದುವರೆಗೂ ಸಿಇಟಿ ಪ್ರಶ್ನೆ ಪತ್ರಿಕೆ ಒಮ್ಮೆಯೂ ಸೋರಿಕೆಯಾಗಿರಲಿಲ್ಲ. ಬಡವರಿಗೆ ಅನುಕೂಲ ಆಗಲಿ ಎಂದು ವೀರಪ್ಪ ಮೋಯ್ಲಿ ಅವರು ಸಿಇಟಿ ತಂದರು. ಇಡೀ ದೇಶದ ಶಿಕ್ಷಣ ವ್ಯವಸ್ಥೆ ಹಾಳು ಮಾಡಲು ನೀಟ್ ವ್ಯವಸ್ಥೆ ಜಾರಿಗೆ ತಂದಿದ್ದು ಬಿಜೆಪಿ” ಎಂದು ದೂರಿದ್ದಾರೆ.

“ಬಾಬ್ರಿ ಮಸೀದಿ ಬಿದ್ಧಾಗ ಅಲ್ಲಿಂದ ಒಂದು ಇಟ್ಟಿಗೆ ತಂದಿದ್ದಾರೆ. ಅದೇ ಅವರ ದೊಡ್ಡ ಸಾಧನೆ. ಅಂತಹವರ ಬಳಿ ಏನು ಮಾತನಾಡುವುದು” ಎಂದು ಟೀಕಿಸಿದ್ದಾರೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಐಫೋನ್‌ ಹ್ಯಾಕ್‌ನಿಂದ ಟ್ರಂಪ್ ಅಳಿಯನ ಬರೋಬ್ಬರಿ 31,500 ಕೋಟಿ ರೂ.ಗಳ ಬೃಹತ್ ಹಗರಣ ಬಯಲು!

ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಅಳಿಯ ಜೇರೆಡ್ ಕುಶ್ನರ್...

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು...

ರಾವಲ್ಪಿಂಡಿಯಲ್ಲಿ ದಾಖಲೆಗಳ ಸುರಿಮಳೆ: ಇಂಗ್ಲೆಂಡ್ ವಿರುದ್ಧ ಶ್ರೀಲಂಕಾಗೆ ಐತಿಹಾಸಿಕ ಜಯ

ಪಾಕಿಸ್ತಾನದ ರಾವಲ್ಪಿಂಡಿ ಕ್ರೀಡಾಂಗಣದಲ್ಲಿ 2026ರ ಅಕ್ಟೋಬರ್ 22ರಂದು ನಡೆದ ಏಕದಿನ ತ್ರಿಕೋನ...

ಮೋದಿ-ಅದಾನಿ ಸಾಕ್ಷ್ಯಚಿತ್ರ ಹಂಚಿಕೆ; 24 ಎಕ್ಸ್ ಖಾತೆದಾರರಿಗೆ ಮುಂಬೈ ಪೊಲೀಸರ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಮತ್ತು ಉದ್ಯಮಿ ಗೌತಮ್ ಅದಾನಿ ಅವರನ್ನು ಕುರಿತ...