ಬಿಡದಿ ʼಸ್ಮಾರ್ಟ್‌ಸಿಟಿʼ ಯೋಜನೆ, ಭೂಸ್ವಾಧೀನ ಅಧಿಸೂಚನೆ ಸುಪ್ರೀಂ ಕೋರ್ಟ್‌ನ ತೀರ್ಪುಗಳ ಉಲ್ಲಂಘನೆ- ನ್ಯಾ. ವಿ ಗೋಪಾಲಗೌಡ

Date:

ಬಿಡದಿ ‘ಸ್ಮಾರ್ಟ್ ಸಿಟಿ’ ಯೋಜನೆ ಮತ್ತು ಭೂಸ್ವಾಧೀನದ ಆರಂಭಿಕ ಅಧಿಸೂಚನೆ ಅಸಿಂಧು, ಕಾನೂನುಬಾಹಿರ, ಸಂವಿಧಾನಬಾಹಿರ ಹಾಗೂ ಸುಪ್ರೀಮ್ ಕೋರ್ಟಿನ ಅನೇಕ ತೀರ್ಪುಗಳ ಉಲ್ಲಂಘನೆ ಎಂದು ಸರ್ವೋಚ್ಚ ನ್ಯಾಯಾಲಯದ ನಿವೃತ್ತ ನ್ಯಾಯಮೂರ್ತಿ ವಿ.ಗೋಪಾಲಗೌಡ ಹೇಳಿದ್ದಾರೆ.

- Advertisement -

ಪಶ್ಚಿಮ ಬಂಗಾಳದ ಎಡರಂಗ ಸರ್ಕಾರ 2006ರಲ್ಲಿ ಟಾಟಾ ನ್ಯಾನೋ ಕಾರು ತಯಾರು ಯೋಜನೆಗೆಂದು ನಂದಿಗ್ರಾಮದಲ್ಲಿ ಮಾಡಿಕೊಂಡಿದ್ದ ಸಾವಿರ ಎಕರೆ ಭೂಸ್ವಾಧೀನವನ್ನು ರದ್ದು ಮಾಡಿದ್ದು ಇದೇ ನ್ಯಾಯಮೂರ್ತಿ ಗೋಪಾಲಗೌಡರ ನ್ಯಾಯಪೀಠ ಎಂಬುದನ್ನು ಇಲ್ಲಿ ಸ್ಮರಿಸಬಹುದು. ಈ ಭೂಸ್ವಾಧೀನ ಕ್ರಮವು ಅಕ್ರಮ ಮತ್ತು ಕಾನೂನಿನ ಉಲ್ಲಂಘನೆ ಎಂದು ತೀರ್ಪು ನೀಡಲಾಗಿತ್ತು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಪ್ರಚಾರ, ರಾಹುಲ್ ವ್ಯಕ್ತಿತ್ವ ಮತ್ತು ರೆಜಿಮ್ ಚೇಂಜ್

ಮೋದಿ ಅನುಭವಿ ನಟನಂತೆ, ಪ್ರದರ್ಶಕನಂತೆ ಕಾಣುತ್ತಾರೆ. ರಾಹುಲ್ ಗಾಂಧಿ ಪಾತ್ರದ ಒಳಹೊಕ್ಕು ನಟಿಸುವ ಕಲಾವಿದನಂತೆ ಕಾಣುತ್ತಾರೆ. ಈ ನಿಟ್ಟಿನಲ್ಲಿ ರಾಹುಲ್ ರಾಜಕೀಯ ನಡೆಗಳು ಮೋದಿಯವರ ರಾಜಕೀಯ ನಡೆಗಳೊಂದಿಗೆ ವಿಶ್ಲೇಷಣೆಗೊಳಗಾಗುತ್ತಿವೆ. ಕಳೆದ 12 ವರ್ಷಗಳ...

137 ಜೀವ ರಕ್ಷಕ ಕ್ಯಾನ್ಸರ್ ಔಷಧಗಳ ದರ ಶೇ.70ರಷ್ಟು...

ಕ್ಯಾನ್ಸರ್ ಚಿಕಿತ್ಸೆಯ ದುಬಾರಿ ವೆಚ್ಚದಿಂದ ಕಂಗೆಟ್ಟಿರುವ ರೋಗಿಗಳಿಗೆ ಕೇಂದ್ರ ಸರ್ಕಾರದಿಂದ ಕೊಂಚ ನಿರಾಳತೆಯ ಸುದ್ದಿಯೊಂದಿದೆ! 137 ಜೀವರಕ್ಷಕ ಕ್ಯಾನ್ಸರ್ ಔಷಧಗಳ ಬೆಲೆ ಇಳಿಕೆಯಾಗುವ ಸಾಧ್ಯತೆಯಿದ್ದು, ಕೆಲವು ಔಷಧಗಳ ಗರಿಷ್ಠ ಚಿಲ್ಲರೆ ಬೆಲೆ ಶೇ.70ರವರೆಗೆ...

‘ದೇಶ್ ಕೋ ಬಿಕನೇ ನಹೀ ದೂಂಗಾ’ ಎಂದು ನವಮಂಗಳೂರು...

​ರೈಲ್ವೆ, ವಿಮಾನ ನಿಲ್ದಾಣ, ಟೆಲಿಕಾಂ ಸೇರಿದಂತೆ ದೇಶದ ಪ್ರಮುಖ ಜಯಶೀಲ ಸಾರ್ವಜನಿಕ ವಲಯಗಳನ್ನು ಈಗಾಗಲೇ ಆಯ್ದ ಕಾರ್ಪೊರೇಟ್ ಕುಳಗಳಿಗೆ ಒಪ್ಪಿಸಿರುವ ಮೋದಿ ಸರ್ಕಾರ, ಈಗ ತನ್ನ ದೃಷ್ಟಿಯನ್ನು ಕಡಲತೀರಗಳತ್ತ ಹರಿಸಿದೆ. ದೇಶದ ಆಮದು-ರಫ್ತು...

ರಾಜ್ಯ ಸರ್ಕಾರ ಈ ಯೋಜನೆಯಿಂದ ಗೌರವಯುತವಾಗಿ ಹಿಂದೆ ಸರಿಯುವಂತೆ ತಾವು ಎಚ್ಚರಿಕೆ ನೀಡುತ್ತಿರುವುದಾಗಿ ಅವರು ಸಾರಿದ್ದಾರೆ. ದುರ್ಬಲರು ಶೋಷಿತರು ವಂಚಿತರ ಪರವೆಂದೇ ಹೆಸರಾಗಿರುವ ನ್ಯಾಯಮೂರ್ತಿಯವರು ಬಿಡದಿಯ 26 ಗ್ರಾಮಗಳ ರೈತರಿಗೆ ಕಾನೂನಿನ ಅಭಯ ನೀಡಿದರು.

Advertisements

ಗುರುವಾರ ಬಿಡದಿ ಹೋಬಳಿಯ ಬೈರಮಂಗಲ ವೃತ್ತದಲ್ಲಿ ನಡೆದ ‘ಪಬ್ಲಿಕ್ ಹಿಯರಿಂಗ್’ನಲ್ಲಿ (ಜನತಾ ನ್ಯಾಯಪೀಠದಿಂದ ವಿಚಾರಣೆ) ಹತ್ತಾರು ರೈತರ ಅಹವಾಲುಗಳನ್ನು ಆಲಿಸಿದ ನಂತರ ಅವರು ಈ ಪ್ರತಿಕ್ರಿಯೆ ನೀಡಿದರು. ಅಹವಾಲುಗಳ ಪ್ರಕಾರ ಶೇ.70ರಿಂದ 80ರಷ್ಟು ರೈತರು ತಮ್ಮ ಜಮೀನುಗಳನ್ನು ಭೂಸ್ವಾಧೀನಕ್ಕೆ ಒಪ್ಪಿಸಲು ಸಿದ್ಧರಿರಲಿಲ್ಲ. ತಮ್ಮ ಕುಟುಂಬಗಳನ್ನು ಪೋಷಿಸುವ ಏಕೈಕ ಆಸರೆಯಾದ ಈ ಜಮೀನುಗಳನ್ನು ತಮಗೆ ಉಳಿಸಿಕೊಡಬೇಕೆಂದು ರೈತರು- ರೈತಮಹಿಳೆಯರು- ಗುತ್ತಿಗೆ ಕೃಷಿಯಲ್ಲಿ ತೊಡಗಿರುವವರು ತೀರ್ಪುಗಾರರ ಸಮಿತಿಯ ಮುಂದೆ ಅಲವತ್ತುಕೊಂಡರು. ಬಹುತೇಕರು ಭಾವುಕರಾದರು. ಸಭೆಯೆಲ್ಲ ಕಿವಿಯಾಗಿ ಕೊರಳಾಗಿ ಏಕವ್ಯಕ್ತಿಯಂತೆ ಮೈವೆತ್ತಿತ್ತು. ನ್ಯಾಯಮೂರ್ತಿ ಗೋಪಾಲಗೌಡರ ಮಾತುಗಳನ್ನು ಮೈಯೆಲ್ಲ ಕಣ್ಣಾಗಿ ಕಿವಿಯಾಗಿ ತದೇಕಚಿತ್ತದಿಂದ ಆಲಿಸಿತು. ಆನಂದೋದ್ಗಾರ ಮಾಡಿತು.

ಬೈರಮಂಗಲ, ಕಂಚುಗಾರನ ಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಹಿತ ರಕ್ಷಣಾ ಸಂಘ ಮತ್ತು ಸಂಯುಕ್ತ ಹೋರಾಟ ಸಮಿತಿ, ಕರ್ನಾಟಕ ‘ಪಬ್ಲಿಕ್ ಹಿಯರಿಂಗ್’ ಅನ್ನು ಏರ್ಪಡಿಸಿತ್ತು.

ನ್ಯಾಯಮೂರ್ತಿ ಗೋಪಾಲಗೌಡರ ಅಧ್ಯಕ್ಷತೆಯಲ್ಲಿ ನಡೆದ ಈ ‘ಪಬ್ಲಿಕ್ ಹಿಯರಿಂಗ್’ ನಲ್ಲಿ ಕೃಷಿ ತಜ್ಞ ಡಾ.ಪ್ರಕಾಶ್ ಕಮ್ಮರಡಿ, ಖ್ಯಾತ ಮಾನವಶಾಸ್ತ್ರಜ್ಞೆ ಡಾ ಎ.ಆರ್. ವಾಸವಿ ಹಾಗೂ ಪತ್ರಕರ್ತ ಡಿ ಉಮಾಪತಿ ಇತರೆ ತೀರ್ಪುಗಾರರಾಗಿ ಭಾಗವಹಿಸಿದ್ದರು.

‘ಜನತಾ ನ್ಯಾಯಪೀಠ’ವು ಸೋಮವಾರದ ಹೊತ್ತಿಗೆ ತನ್ನ ವಿವರವಾದ ತೀರ್ಪನ್ನು ನೀಡುವುದಾಗಿ ನ್ಯಾಯಮೂರ್ತಿ ಇದೇ ಸಂದರ್ಭದಲ್ಲಿ ಪ್ರಕಟಿಸಿದರು.

ಪಬ್ಲಿಕ್ ಹಿಯರಿಂಗ್ ಗೆ ಹಾಜರಾಗಿದ್ದ ಸುಮಾರು ಒಂದು ಸಾವಿರದಷ್ಟು ರೈತರಲ್ಲಿ ಶೇ.75ರಷ್ಟು ಮಹಿಳೆಯರೇ ಭಾಗವಹಿಸಿದ್ದು ವಿಶೇಷವೆನಿಸಿತ್ತು. ವೇದಿಕೆಯಲ್ಲಿ ನಿರ್ಮಿಸಿದ್ದ ‘ಕಟಕಟೆ’ ಏರಿ ಸಾಕ್ಷ್ಯ ನುಡಿದ ರೈತರ ಪೈಕಿಯೂ ಮಹಿಳೆಯರ ಪ್ರಾತಿನಿಧ್ಯ ಗಣನೀಯವಾಗಿತ್ತು.

ಭೂಸ್ವಾಧೀನವನ್ನು ವಿರೋಧಿಸುವುದಾದರೆ ಎದ್ದು ನಿಲ್ಲುವ ಮೂಲಕ ಪ್ರಕಟಿಸಿ ಎಂಬ ನ್ಯಾಯಮೂರ್ತಿ ಗೋಪಾಲಗೌಡರ ಸೂಚನೆಗೆ ಇಡೀ ಸಭೆ ಎದ್ದು ಕೈಗಳನ್ನು ಮೇಲೆತ್ತಿ ಎದ್ದು ನಿಂತಿತು. ಭೂಸ್ವಾಧೀನ ವಿರೋಧದ ಘೋಷಣೆಗಳನ್ನೂ ಕೂಗಿತು. ಭೂಸ್ವಾಧೀನವನ್ನು ಸಮರ್ಥಿಸುವವರು ಯಾರಾದರೂ ಇದ್ದರೆ ಎದ್ದು ಬಂದು ಕಟಕಟೆಯಲ್ಲಿ ನಿಂತು ‘ಸಾಕ್ಷ್ಯ’ ಹೇಳಬಹುದು ಎಂಬುದಾಗಿ ‘ತೀರ್ಪುಗಾರ’ರಲ್ಲಿ ಒಬ್ಬರಾದ ಡಾ.ಪ್ರಕಾಶ್ ಕಮ್ಮರಡಿ ಅವರು ಮತ್ತೆ ಮತ್ತೆ ನೀಡಿದ ಆಹ್ವಾನಕ್ಕೆ ಸಭೆಯಿಂದ ಯಾವ ಪ್ರತಿಕ್ರಿಯೆಯೂ ಬರಲಿಲ್ಲ. ಭೂಸ್ವಾಧೀನವನ್ನು ಸಮರ್ಥಿಸುವವರು ಯಾರಾದರೂ ಇದ್ದರೆ ಈ ನಂತರವೂ ಪತ್ರದಲ್ಲಿ ಕಳಿಸಬಹುದು ಎಂದು ನ್ಯಾಯಮೂರ್ತಿ ಗೋಪಾಲಗೌಡ ನಿರ್ದೇಶಿಸಿದರು.

ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿನ ಹತ್ತಾರು ಕಾಯ್ದೆ ಕಾನೂನು ದೋಷಗಳನ್ನು ಒಂದೂವರೆ ತಾಸುಗಳ ಕಾಲ ಎಳೆ ಎಳೆಯಾಗಿ ಬಿಚ್ಚಿಟ್ಟ ನ್ಯಾಯಮೂರ್ತಿಯವರು, ಕರ್ನಾಟಕ ರಾಜ್ಯ ಸರ್ಕಾರಕ್ಕೆ ಈ ಕುರಿತು ಕಾನೂನು ಸಲಹೆ ನೀಡುವವರು ಯಾರೂ ಇರಲಿಲ್ಲವೇ ಎಂದು ಪ್ರಶ್ನಿಸಿದರು.

ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯ ಭೂಸ್ವಾಧೀನಕ್ಕಾಗಿ ಸರ್ಕಾರ ಹೊರಡಿಸಿರುವ ಆರಂಭಿಕ ಅಧಿಸೂಚನೆಯನ್ನು ಅರಬ್ಬೀ ಸಮುದ್ರಕ್ಕೆ ಎಸೆಯಬೇಕು, ಅದಕ್ಕೆ ಬೆಂಕಿ ಹಚ್ಚಬೇಕು ಅಷ್ಟೇ.ರೈತರಿಗೆ ಮಖ್ಮಲ್ ಟೋಪಿ ಹಾಕಲು ಹೋಗ್ತಿದ್ದೀರಾ, ಅದೇ ಟೋಪಿಯನ್ನು ನಾವು ನಿಮಗೆ ಹಾಕ್ತೀವಿ, ರೈತರನ್ನು ಬೆದರಿಸ್ತಿದ್ದೀರಾ ಎಂದು ಗುರುವಾರ ನ್ಯಾಯಮೂರ್ತಿ ಗುಡುಗಿದರು.

2013ರ ಭೂಸ್ವಾಧೀನ ಕಾಯಿದೆ ತುರ್ತುಸ್ಥಿತಿಗಳಿದ್ದಲ್ಲಿ ಮಾತ್ರವೇ ಸಾಮಾಜಿಕ ಸಾಧಕ ಬಾಧಕಗಳ ಅಧ್ಯಯನವನ್ನು ಬದಿಗಿರಿಸಬಹುದು ಎಂದು ಎಂ.ಕರುಣಾನಿಧಿ ವರ್ಸಸ್ ಸ್ಟೇಟ್ ಆಫ್ ತಮಿಳುನಾಡು ಕೇಸಿನಲ್ಲಿ ನೀಡಿರುವ ತೀರ್ಪನ್ನು ನ್ಯಾಯಮೂರ್ತಿ ಉಲ್ಲೇಖಿಸಿದರು. ಬಿಡದಿ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ಯಾವ ತುರ್ತುಸ್ಥಿತಿ ಇತ್ತೆಂದು ಸಾಮಾಜಿಕ ಸಾಧಕ ಬಾಧಕಗಳ ಅಧ್ಯಯನವನ್ನು ಬದಿಗೊತ್ತಲಾಗಿದೆ ಎಂದು ಪ್ರಶ್ನಿಸಿದರು.

ಬಿಡದಿ ಭೂಸ್ವಾಧೀನವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿಯ ಕೇಸನ್ನು ವಜಾ ಮಾಡಿರುವ ರಾಜ್ಯ ಹೈಕೋರ್ಟಿನ ತೀರ್ಪನ್ನು ಖಾರವಾಗಿ ಪ್ರಶ್ನಿಸಿದರು. ಅರ್ಜಿದಾರನು ರಿಯಲ್ ಎಸ್ಟೇಟ್ ಹಿತಾಸಕ್ತ ಎಂದರು. ಯಾವನೋ ಅರ್ಜಿ ಹಾಕಿ ವಜಾ ಮಾಡಿಸಿಕೊಂಡಾಕ್ಷಣ ನಿಮ್ಮ ಹಕ್ಕುಗಳು ಕಳೆದು ಹೋಗುವುದಿಲ್ಲವೆಂದು ರೈತರಿಗೆ ಅಭಯ ನೀಡಿದರು.

ಬಿಡದಿ ಟೌನ್ ಶಿಪ್ ಭೂಸ್ವಾಧೀನ ಪ್ರಕ್ರಿಯೆಯು 2013ರ ಭೂಸ್ವಾಧೀನ ಪುನರ್ವಸತಿ ಹಾಗೂ ಪುನರ್ವಸತಿ ಕಾಯ್ದೆಯ ಮೂಲಭೂತ ತತ್ವಗಳ ಉಲ್ಲಂಘನೆ. ಫಲವತ್ತಾದ ಈ ನೀರಾವರಿ ತೋಟಗಾರಿಕೆ ಕೃಷಿ ಪ್ರದೇಶವನ್ನು ಹಸಿರು ವಲಯವೆಂದು ಮರುಘೋಷಣೆ ಮಾಡಿ ಉಳಿಸಿಕೊಳ್ಳಬೇಕು. 2013ರ ಭೂಸ್ವಾಧೀನ ಕಾಯ್ದೆಯ ಪ್ರಕಾರ ಭೂಸ್ವಾಧೀನಕ್ಕೆ ಶೇ.70-80ರಷ್ಟು ರೈತರ ಒಪ್ಪಿಗೆ ಬೇಕೇ ಬೇಕು. ಆದರೆ ಶೇ.80ಕ್ಕಿಂತ ಹೆಚ್ಚಿನ ರೈತರು ಭೂಮಿ ಬಿಟ್ಟುಕೊಡಲು ಸಿದ್ಧರಾಗಿದ್ದಾರೆಂದು ರಾಜ್ಯ ಸರ್ಕಾರ ಅಪಪ್ರಚಾರ ಮಾಡುತ್ತಿದೆ. ರೈತ ಹೋರಾಟವನ್ನು ರಾಜಕೀಯ ಪಕ್ಷದ ಪ್ರಚೋದನೆಯಿಂದ ನಡೆಯುತ್ತಿರುವ ಹೋರಾಟವೆಂದು ಅವಮಾನಿಸಲಾಗುತ್ತಿದೆ. ಮೂರೂ ಪಕ್ಷಗಳ ಆಳ್ವಿಕೆಯಲ್ಲೂ ಈ ಯೋಜನೆ ಮುಂದುವರೆಯುತ್ತಿದೆ. ಮೂರೂ ಸಂದರ್ಭಗಳಲ್ಲಿ ರೈತರು ಇದನ್ನು ವಿರೋಧಿಸಿದ್ದೇವೆ. ಸರ್ಕಾರಗಳ ಬಲವಂತದ ಭೂಸ್ವಾಧೀನದ ವಿರುದ್ಧ ನಡೆಯುತ್ತಿರುವ ರೈತ ಹೋರಾಟವಾಗಿದೆ. ಇಷ್ಟು ವರ್ಷಗಳಿಂದ ಹೋರಾಟ ನಡೆಸಿದ್ದರೂ, ರಾಜ್ಯ ಸರ್ಕಾರ ರೈತರನ್ನು ಕರೆದು ಮುಖತಃ ಅಹವಾಲು ಆಲಿಸುವ ಪ್ರಯತ್ನವನ್ನೇ ಮಾಡಿಲ್ಲ. ಇದು ಜನತಂತ್ರ ವಿರೋಧಿ ನಡೆ. ನಮ್ಮ ಪ್ರತಿಪಾದನೆಗಳು ಮತ್ತು ಆರೋಪಗಳು ನ್ಯಾಯಸಮ್ಮತವೇ ಎಂಬುದನ್ನು ಮುಕ್ತವಾಗಿ ಪರಿಶೀಲಿಸಿ ತೀರ್ಪು ನೀಡಬೇಕೆಂದು ಜನತಾ ನ್ಯಾಯ ಪೀಠ ವನ್ನು ಕೋರುತ್ತೇವೆಂದು ಬೈರಮಂಗಲ ಕಂಚುಗಾರನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಭೂ ಹಿತ ರಕ್ಷಣಾ ಸಂಘ ಮತ್ತು ಸಂಯುಕ್ತ ಹೋರಾಟ ಕರ್ನಾಟಕವು ತೀರ್ಪುಗಾರರ ಸಮಿತಿಗೆ ಅಹವಾಲು ಸಲ್ಲಿಸಿತು.

ತಾವು ಕೃಷಿ ಮಾಡಿಕೊಂಡು ಬಂದಿರುವ ಜಮೀನುಗಳೇ ತಮ್ಮ ಜೀವನಾಧಾರ ಆಗಿದ್ದು, ಯಾವುದೇ ಕಾರಣಕ್ಕೆ ಸರ್ಕಾರಕ್ಕೆ ಒಪ್ಪಿಸಲು ಸಿದ್ಧರಿಲ್ಲವೆಂದು ಆರಂಭದಲ್ಲಿ ಅಹವಾಲು ಹೇಳಿಕೊಂಡ ರೈತರು ಸ್ಪಷ್ಟಪಡಿಸಿದರು. ಹಾಲು, ಹಣ್ಣು ತರಕಾರಿ, ಬೇಬಿಕಾರ್ನ್, ಮುಸುಕಿನ ಜೋಳ, ರೇಷ್ಮೆ, ಮಾವು, ತೆಂಗು, ಅಡಿಕೆ ಬೆಳೆದು ಸ್ವಾವಲಂಬನೆಯ ಬದುಕನ್ನು ನಡೆಸುತ್ತಿದ್ದೇವೆ. ಈ ಆದಾಯದಲ್ಲೇ ಮಕ್ಕಳನ್ನು ಎಂಜಿನಿಯರಿಂಗ್ ಮತ್ತು ಮೆಡಿಕಲ್ ಗೆ ಓದಿಸಿದ್ದೇವೆ. ಸರ್ಕಾರಿ ಉಚಿತ ಸೀಟು ಸಿಕ್ಕರೂ ಬಿ.ಎಸ್ಸಿ. ಅಗ್ರಿಕಲ್ಚರ್ ಓದಲು ಹಚ್ಚಿರುವ ಪ್ರಸಂಗಗಳೂ ಉಂಟು. ಇವೇ ನೆಲಗಳಲ್ಲಿ ನಮ್ಮ ಬದುಕು ಬೆಸೆದಿದೆ. ನಮ್ಮ ಹಿರಿಯರ ಸಮಾಧಿಗಳಿವೆ. ಇವುಗಳನ್ನು ಸರ್ಕಾರಕ್ಕೆ ಒಪ್ಪಿಸಿ ಪರಿಹಾರ ಪಡೆದ ಹಣದಿಂದ ಬಾಳುವೆ ನಡೆಸುವುದು ಅಸಾಧ್ಯ ಎಂದು ರೈತರು ನಿವೇದಿಸಿಕೊಂಡರು. ಉದ್ದೇಶಿತ ಬಿಡದಿ ಸ್ಮಾರ್ಟ್ ಸಿಟಿ ಯೋಜನೆಗೆ ಕೆ.ಆರ್.ಎಸ್.ನಿಂದ ಮೂರು ಟಿಎಂಸಿ ನೀರು ಬಿಡುಗಡೆ ಮಾಡುವ ಉದ್ದೇಶವಿದೆ. ಹೀಗೆ ಮಾಡಿದರೆ ಮಂಡ್ಯ ಜಿಲ್ಲೆಯ ನೀರಾವರಿಗೆ ಏಟು ಬೀಳಲಿದೆ ಎಂಬ ದನಿಯೂ ಕೇಳಿ ಬಂತು.

ರೈತ ಹೋರಾಟದ ಮುಂಚೂಣಿಯಲ್ಲಿರುವ ಬಡಗಲಪುರ ನಾಗೇಂದ್ರ, ಭೂಮಿ ಹೋರಾಟದಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತಿರುವ ʼಕರ್ನಾಟಕ ಜನಶಕ್ತಿʼ ಸಂಘಟನೆಯ ನೂರ್‌ ಶ್ರೀಧರ್‌, ರೈತಸಂಘದ ಟಿ.ಯಶವಂತ್, ಮುಂತಾದವರು ಸಭೆಯನ್ನು ನಡೆಸಿದರು. ಹಿರಿಯ ಚಿಂತಕ ಗುರುಪ್ರಸಾದ್ ಕೆರಗೋಡು, ಹಿರಿಯ ಪತ್ರಕರ್ತರಾದ ಇಂದೂಧರ ಹೊನ್ನಾಪುರ ಅವರೂ ಸಭೆಯಲ್ಲಿ ಭಾಗವಹಿಸಿದ್ದರು.  

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೆಂಗಳೂರು | SIR ವಿರುದ್ಧ ಮೊಳಗಿದ ಘೋಷ; ಪ್ರಜಾತಂತ್ರದ ಉಳಿವಿಗಾಗಿ ‘ಜನತಾ ಮೆರವಣಿಗೆ’

ದೇಶದ ಮತದಾರರ ಮೇಲೆ ಗ್ಯಾನೇಶ್ ಕುಮಾರ್ (ಚುನಾವಣಾ ಆಯೋಗ) ಹೇರಿರುವ ಎಸ್‌ಐಆರ್...

ಗಾಯದ ಗುರುತುಗಳಿಲ್ಲವೆಂದು ಪೋಕ್ಸೋ ಸಂತ್ರಸ್ತೆಗೆ ಪರಿಹಾರ ನಿರಾಕರಿಸುವಂತಿಲ್ಲ: ಅಲಹಾಬಾದ್‌ ಹೈಕೋರ್ಟ್

ಲೈಂಗಿಕ ದೌರ್ಜನ್ಯ ಪ್ರಕರಣದ ವೈದ್ಯಕೀಯ ವರದಿಯಲ್ಲಿ ದೈಹಿಕ ಗಾಯಗಳ ಗುರುತುಗಳು ದಾಖಲಾಗಿಲ್ಲ...

ಶಿವಮೊಗ್ಗ | ಹಲ್ಲೆಗೊಳಗಾಗಿ ರೈಲ್ವೆ ಹಳಿ ಮೇಲೆ ಬಿದ್ದಿದ್ದ ಯುವಕ ಚಿಕಿತ್ಸೆ ಫಲಿಸದೆ ಸಾವು

ಶಿವಮೊಗ್ಗ ರೈಲ್ವೆ ಹಳಿ ಬಳಿ ಗಂಭೀರ ಗಾಯಗಳೊಂದಿಗೆ ಪತ್ತೆಯಾಗಿದ್ದ 26 ವರ್ಷದ...