ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಹಗರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ತಂಡ ತನಿಖೆಯನ್ನು ಚುರುಕುಗೊಳಿಸಿದೆ. ಆರೋಪಿ ಸತ್ಯನಾರಾಯಣ ವರ್ಮಾ ಎಂಬವರ ಮನೆಯಲ್ಲಿ 10 ಕೆ.ಜಿ ಚಿನ್ನ ಮತ್ತು 8 ಕೋಟಿ ರೂ. ಹಣವನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಹೈದರಾಬಾದ್‌ನಲ್ಲಿರುವ ಸತ್ಯನಾರಾಯಣ ವರ್ಮಾ ಅವರ ಮನೆಯಲ್ಲಿ ಶೋಧ ನಡೆಸಿರುವ ಎಸ್‌ಐಟಿ ತಂಡ 10 ಕೆ.ಜಿ ಚಿನ್ನದ ಚಿಸ್ಕೆಟ್‌ಗಳನ್ನು ವಶಕ್ಕೆ ಪಡೆದುಕೊಂಡಿದೆ. ವಾಲ್ಮೀಕಿ ನಿಗಮದ ಹಣದಿಂದಲೇ ಸತ್ಯನಾರಾಯಣ್ ವರ್ಮಾ ಚಿನ್ನದ ಬಿಸ್ಕೆಟ್‌ಗಳನ್ನು ಖರೀದಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಚಿನ್ನ ಮಾತ್ರವಲ್ಲದೆ, ಹೈದರಾಬಾದ್‌ನ ಸೀಮಾಪೇಟೆ ಮತ್ತು ಮೀಯಾಪುರದಲ್ಲಿ ತಲಾ ಎರಡು ನಿವೇಶನಗಳು ಸೇರಿದಂತೆ 11 ನಿವೇಶನಗಳನ್ನು ವರ್ಮಾ ಖರೀದಿದ್ದಾರೆ ಎಂಬುದು ತನಿಖೆ ವೇಳೆ ತಿಳದುಬಂದಿದೆ ಎಂದು ವರದಿಯಾಗಿದೆ.