ಮಾನವ ಹಕ್ಕುಗಳ ಹೋರಾಟಗಾರ ಜಿ. ಅನಂತ್ ಪದ್ಮನಾಭನ್‌ ಇನ್ನಿಲ್ಲ: ಸಾವನ್ನೂ ದಿಟ್ಟತನದಿಂದ ಎದುರಿಸಿದ್ದ ಚೇತನ

Date:

ತೀವ್ರ ಕಾಯಿಲೆ ಬಾಧಿಸುತ್ತಿದ್ದರೂ ಅನಂತ್ ಪದ್ಮನಾಭನ್‌ ಅವರು 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಭಿಯಾನಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲೂ ಸಂವಿಧಾನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪತ್ನಿ ಕವಿತಾ ಕುರುಗಂಟಿ ಅವರೊಂದಿಗೆ ದೇಶಾದ್ಯಂತ ಪ್ರವಾಸ ಕೈಗೊಂಡು, ಸಾಮಾಜಿಕ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು

- Advertisement -

ಅಂತಾರಾಷ್ಟ್ರೀಯ ಮಟ್ಟದಲ್ಲಿ ಪರಿಸರ ಮತ್ತು ಮಾನವ ಹಕ್ಕುಗಳ ರಕ್ಷಣೆಗಾಗಿ ಮುಂಚೂಣಿಯಲ್ಲಿ ನಿಂತು ಹೋರಾಡಿದ ಹಿರಿಯ ಚಿಂತಕ, ‘ಆಮ್ನೆಸ್ಟಿ ಇಂಟರ್‌ನ್ಯಾಷನಲ್’ ಹಾಗೂ ‘ಗ್ರೀನ್‌ಪೀಸ್’ ಸಂಸ್ಥೆಗಳ ಮಾಜಿ ಮುಖ್ಯಸ್ಥ ಜಿ. ಅನಂತ್ ಪದ್ಮನಾಭನ್‌ (65) ಅವರು ಶನಿವಾರ (ಏಪ್ರಿಲ್ 18) ಮುಂಜಾನೆ 3 ಗಂಟೆಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಕ್ಯಾನ್ಸರ್ ಮಹಾಮಾರಿಯನ್ನು ನೈಸರ್ಗಿಕ ಚಿಕಿತ್ಸೆ ಹಾಗೂ ದೃಢ ಇಚ್ಛಾಶಕ್ತಿಯಿಂದ ಎದುರಿಸಿದ ಅವರು, ತಮ್ಮ ಹೋರಾಟದ ಬದುಕನ್ನು ಪ್ರಕೃತಿಯ ಮಡಿಲಿಗೆ ಅರ್ಪಿಸಿದ್ದಾರೆ. ದೆಹಲಿ ರೈತ ಹೋರಾಟದ ‘ಸಂಯುಕ್ತ ಕಿಸಾನ್ ಮೋರ್ಚಾ’ದ ಪ್ರಮುಖ ನಾಯಕಿ ಕವಿತಾ ಕುರುಗಂಟಿ ಅವರ ಬಾಳಸಂಗಾತಿಯಾಗಿದ್ದ ಅನಂತ್, ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ನಟ ಇಮ್ರಾನ್ ಖಾನ್ ಪ್ರತಿಭಟಿಸಿದರೆ ಗಡಿಪಾರು; ಟ್ರಂಪ್ ಪರ...

ಕಾನೂನು ಮತ್ತು ರಾಜತಾಂತ್ರಿಕ ನಿಯಮಗಳು ಎಲ್ಲರಿಗೂ ಒಂದೇ ಆಗಿರಬೇಕು ಹೊರತು ಪ್ರಧಾನಿ ಮೋದಿಯವರ ರಾಜಕೀಯ ಅನುಕೂಲಕ್ಕೆ ತಕ್ಕಂತೆ ಬದಲಾಗಬಾರದು. ವಿದೇಶಿ ಪ್ರಜೆಯೊಬ್ಬ ಭಾರತದ ನೆಲದಲ್ಲಿ ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವುದು ತಪ್ಪು ಎನ್ನುವುದಾದರೆ, ಭಾರತದ ಪ್ರಧಾನಿಯೊಬ್ಬರು...

ಸುದೀರ್ಘ ಹೋರಾಟದ ಬದುಕು, ಬಹುಮುಖಿ ಸಾಧನೆ

ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದ ಅನಂತ್, ಅತ್ಯಂತ ಪ್ರತಿಭಾವಂತ ಹಾಗೂ ವಿಶಿಷ್ಟವಾಗಿ ಆಲೋಚಿಸುವ ವ್ಯಕ್ತಿತ್ವ ಹೊಂದಿದ್ದರು. ಶಿಕ್ಷಣ ಕ್ಷೇತ್ರದತ್ತ ಅಪಾರ ಒಲವು ಹೊಂದಿದ್ದ ಅವರು ‘ದ ಸ್ಕೂಲ್ – ಕೃಷ್ಣಮೂರ್ತಿ ಫೌಂಡೇಶನ್ ಇಂಡಿಯಾ’ದಲ್ಲಿ ಶಿಕ್ಷಕರಾಗಿ ವೃತ್ತಿ ಬದುಕು ಆರಂಭಿಸಿದರು. ಆನಂತರ ‘ಸಾಕ್ರಟೀಸ್’ (Socrates) ಎಂಬ ಸಂಸ್ಥೆಯನ್ನು ಹುಟ್ಟುಹಾಕಿದರು. ಗ್ರೀನ್‌ಪೀಸ್ ಇಂಡಿಯಾದ ಸಿಇಒ ಹಾಗೂ ಗ್ರೀನ್‌ಪೀಸ್ ಇಂಟರ್‌ನ್ಯಾಷನಲ್‌ನ ಕಾರ್ಯಕ್ರಮ ನಿರ್ದೇಶಕರಾಗಿ ಪರಿಸರ ಸಂರಕ್ಷಣೆಗೆ ಅವರು ಜಾಗತಿಕ ಮಟ್ಟದಲ್ಲಿ ಶ್ರಮಿಸಿದ್ದರು. ಭಾರತದಲ್ಲಿ ಗ್ರೀನ್‌ಪೀಸ್ ಸಂಸ್ಥೆಯನ್ನು ಮರುಸ್ಥಾಪಿಸುವಲ್ಲಿ ಅವರ ಪಾತ್ರ ನಿರ್ಣಾಯಕವಾಗಿತ್ತು.

ಆಮ್ನೆಸ್ಟಿ ಇಂಟರ್‌ನ್ಯಾಷನಲ್ ಇಂಡಿಯಾದ ಮುಖ್ಯಸ್ಥರಾಗಿದ್ದಾಗ, ವಿದೇಶಿ ಅನುದಾನದ ಮೇಲಿನ ಅವಲಂಬನೆಯನ್ನು ತಪ್ಪಿಸಲು ‘ಭಾರತೀಯರಿಗಾಗಿ ಭಾರತೀಯರಿಂದಲೇ ನಿಧಿ’ (Funding by Indians for Indians) ಎಂಬ ನವೀನ ಹಾಗೂ ಸುಸ್ಥಿರ ಸದಸ್ಯತ್ವ ಆಧಾರಿತ ಮಾದರಿಯನ್ನು ಯಶಸ್ವಿಯಾಗಿ ಜಾರಿಗೆ ತಂದರು. ಅಜೀಂ ಪ್ರೇಮ್‌ಜಿ ಫಿಲಾಂತ್ರಪಿಕ್ ಇನಿಶಿಯೇಟಿವ್ಸ್ (APPI) ಸಿಇಒ ಆಗಿ, ಸುಸ್ಥಿರ ಹಾಗೂ ನೈಸರ್ಗಿಕ ಕೃಷಿ ಯೋಜನೆಗಳ ಹಿಂದೆ ಎಲೆಮರೆಕಾಯಿಯಂತೆ ಮೆದುಳಾಗಿ ಕೆಲಸ ಮಾಡಿದರು. ಎಂತಹ ಸವಾಲಿನ ಪರಿಸ್ಥಿತಿಯಲ್ಲೂ ಅತ್ಯಂತ ಪಾರದರ್ಶಕವಾಗಿ ಸಂಸ್ಥೆಯನ್ನು ಮುನ್ನಡೆಸುವ ಕೌಶಲ ಅವರಲ್ಲಿತ್ತು.

ಕ್ಯಾನ್ಸರ್ ವಿರುದ್ಧದ ಸಮರ, ರಾಜಕೀಯ ಜಾಗೃತಿ

ಸುಮಾರು ಎರಡೂವರೆ ವರ್ಷಗಳ ಹಿಂದೆ ಕ್ಯಾನ್ಸರ್ ಪತ್ತೆಯಾದಾಗ, ಅವರು ಸಾವಿಗೆ ಅಂಜಲಿಲ್ಲ. ಅಲೋಪತಿ ಚಿಕಿತ್ಸೆಗಳನ್ನು ಬದಿಗಿಟ್ಟು ಉಪವಾಸ, ಯೋಗ ಹಾಗೂ ಪ್ರತಿನಿತ್ಯ ಸೈಕಲ್ ಸವಾರಿ ಮಾಡುವ ಮೂಲಕ ಸಂಪೂರ್ಣ ನೈಸರ್ಗಿಕ ಜೀವನಶೈಲಿಯ ಮೊರೆಹೋದರು. ದೇಶದಲ್ಲಿ ಕೋಮುವಾದ, ಅಲ್ಪಸಂಖ್ಯಾತರ ಮೇಲಿನ ಹಲ್ಲೆಗಳು ಸೇರಿದಂತೆ ಅನ್ಯಾಯದ ವಿರುದ್ಧ ನಿರ್ಭೀತವಾಗಿ ಹೋರಾಡಿದರು. ಮಾನವ ಹಕ್ಕುಗಳ ಉಲ್ಲಂಘನೆ ವಿರುದ್ಧ ದನಿ ಎತ್ತಿದ ಪರಿಣಾಮ, ಕೇಂದ್ರ ಸರ್ಕಾರವು ಆಮ್ನೆಸ್ಟಿ ಸಂಸ್ಥೆ ಹಾಗೂ ಅವರ ಮೇಲೆ ಇಡಿ (ED) ಹಾಗೂ ಪಿಎಂಎಲ್ಎ (PMLA) ಅಡಿಯಲ್ಲಿ ಗಂಭೀರ ಪ್ರಕರಣಗಳನ್ನು ದಾಖಲಿಸಿತ್ತು. ಎಷ್ಟೇ ಸವಾಲುಗಳು ಎದುರಾದರೂ ಅವರು ತಮ್ಮ ಆದರ್ಶಗಳಿಂದ ಹಾಗೂ ಪಾರದರ್ಶಕತೆಯಿಂದ ಹಿಂದೆ ಸರಿಯಲಿಲ್ಲ. ತೀವ್ರ ಕಾಯಿಲೆ ಬಾಧಿಸುತ್ತಿದ್ದರೂ 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ವಿರೋಧಿ ಅಭಿಯಾನಕ್ಕೆ ವಿವಿಧ ರೀತಿಯಲ್ಲಿ ಕೊಡುಗೆ ನೀಡಿದ್ದರು. 2024ರ ಲೋಕಸಭಾ ಚುನಾವಣೆಯಲ್ಲೂ ಸಂವಿಧಾನ ವಿರೋಧಿ ಶಕ್ತಿಗಳನ್ನು ಹಿಮ್ಮೆಟ್ಟಿಸುವ ನಿಟ್ಟಿನಲ್ಲಿ ಪತ್ನಿ ಕವಿತಾ ಅವರೊಂದಿಗೆ ದೇಶಾದ್ಯಂತ ಪ್ರವಾಸ ಕೈಗೊಂಡು, ಸಾಮಾಜಿಕ ಕಾರ್ಯಕರ್ತರನ್ನು ಹುರಿದುಂಬಿಸಿದ್ದರು.

ಒಡನಾಡಿಗಳ ಭಾವುಕ ನುಡಿ ನಮನ

ಯೋಗೇಂದ್ರ ಯಾದವ್ (ಹಿರಿಯ ಚಿಂತಕ ಹಾಗೂ ಸ್ವರಾಜ್ ಇಂಡಿಯಾ ನಾಯಕ)

“ಅನಂತ್ ಅವರು ಇಂದು ಮುಂಜಾನೆ 3 ಗಂಟೆ ಸುಮಾರಿಗೆ ಅತ್ಯಂತ ಶಾಂತವಾಗಿ ಇಹಲೋಕ ತ್ಯಜಿಸಿದ್ದಾರೆ. ಸಾವಿಗೆ ಅವರು ತಮ್ಮನ್ನು ತಾವು ಸಿದ್ಧಪಡಿಸಿಕೊಂಡಿದ್ದರಲ್ಲದೆ, ನಮ್ಮೆಲ್ಲರನ್ನೂ ಅದಕ್ಕಾಗಿ ಸಿದ್ಧಪಡಿಸಿದ್ದರು. ಅವರು ಬದುಕಿದ ರೀತಿ ಮತ್ತು ಸಾವನ್ನು ಎದುರಿಸಿದ ಬಗೆ ನಮ್ಮೆಲ್ಲರಿಗೂ ಜೀವನದ ಬಹುದೊಡ್ಡ ಆಶಯ ಹಾಗೂ ಸ್ಫೂರ್ತಿಯಾಗಬೇಕು. ಯಾವುದೇ ಕ್ಷೇತ್ರದಲ್ಲಾದರೂ ವಿಭಿನ್ನವಾಗಿ ಆಲೋಚಿಸಿ ಅದ್ಭುತ ಪರಿಹಾರಗಳನ್ನು ಕಂಡುಕೊಳ್ಳಬಲ್ಲ ಅತ್ಯುತ್ತಮ ಮಿದುಳು ಅವರದ್ದಾಗಿತ್ತು. ‘ಭಾರತ್ ಜೋಡೋ ಅಭಿಯಾನ’ದಲ್ಲಿ ನಮ್ಮ ಜೊತೆ ಕೆಲಸ ಮಾಡುತ್ತಿದ್ದ ಪ್ರತಿಯೊಬ್ಬರಿಗೂ ಅವರು ಹೊಸ ಹೊಸ ಐಡಿಯಾಗಳನ್ನು ಹೇಳುತ್ತಾ, ಸದಾ ಉತ್ಸಾಹ ತುಂಬುತ್ತಿದ್ದರು. ಅವರ ಸಂಗಾತಿ ಕವಿತಾ ಕುರುಗಂಟಿ ಅವರ ಮೂಲಕ ಪರಿಚಯವಾದ ಅನಂತ್ ಅವರನ್ನು, ಕಳೆದ ಐದು ವರ್ಷಗಳಿಂದ ನನ್ನ ಸ್ನೇಹಿತ, ಮಾರ್ಗದರ್ಶಕ ಮತ್ತು ಲೈಫ್ ಕೋಚ್ ಎಂದು ಕರೆಯುವ ಭಾಗ್ಯ ನನ್ನದಾಗಿತ್ತು. ಅವರು ಕ್ಯಾನ್ಸರ್ ಅನ್ನು ಅಪ್ಪಿಕೊಂಡ ಮತ್ತು ಸಾವಿಗೆ ಸಿದ್ಧರಾದ ಸುಂದರವಾದ ರೀತಿ ನನಗೆ ಜೀವನದ ಬಹುದೊಡ್ಡ ಪಾಠವಾಗಿದೆ. ನಿಮ್ಮ ಅನಂತ ಪ್ರಯಾಣಕ್ಕೆ ಅಲ್ವಿದಾ ಅನಂತ್… ಮುಂದೊಂದು ದಿನ ನಾವೂ ಬಂದು ನಿಮ್ಮನ್ನು ಸೇರುತ್ತೇವೆ”

Yogendra Yadav 1

ತಾರಾ ರಾವ್ (ಮಾನವ ಹಕ್ಕುಗಳ ಹೋರಾಟಗಾರ್ತಿ ಹಾಗೂ ದೀರ್ಘಕಾಲದ ಸಹೋದ್ಯೋಗಿ)

“ನಾನು ಅವರೊಂದಿಗೆ 2000ನೇ ಇಸವಿಯ ಆರಂಭದಲ್ಲಿ ಗ್ರೀನ್‌ಪೀಸ್‌ನಲ್ಲಿ ಕೆಲಸ ಮಾಡಿದ್ದೆ ಮತ್ತು ಆನಂತರ ಆಮ್ನೆಸ್ಟಿಯಲ್ಲಿ ಜೊತೆಯಾಗಿ ಕಾರ್ಯನಿರ್ವಹಿಸಿದೆವು. ಭಾರತದಲ್ಲಿ ಗ್ರೀನ್‌ಪೀಸ್ ಸಂಸ್ಥೆಯನ್ನು ಮರುಸ್ಥಾಪಿಸುವ ಜವಾಬ್ದಾರಿಯನ್ನು ಅವರು ಯಶಸ್ವಿಯಾಗಿ ನಿಭಾಯಿಸಿದ್ದರು. ಆಮ್ನೆಸ್ಟಿಯಲ್ಲಿದ್ದಾಗ, ಮಾನವ ಹಕ್ಕುಗಳ ಹೋರಾಟವನ್ನು ಬೆಂಬಲಿಸಲು ‘ಭಾರತೀಯರಿಗಾಗಿ ಭಾರತೀಯರಿಂದಲೇ ನಿಧಿ’ ಎಂಬ ಹೊಸ ಮಾದರಿಯನ್ನು ಅವರು ರೂಪಿಸಿದ್ದರು. 2014ರಲ್ಲಿ ಹೊಸ ಆಡಳಿತ ಬಂದಾಗ ನಮಗೆ ಸಾಕಷ್ಟು ಸವಾಲುಗಳು ಎದುರಾದವು ಹಾಗೂ ನಮ್ಮ ಮೇಲೆ ನಿರಂತರ ನಿಗಾ ಇಡಲಾಗಿತ್ತು. ಆದರೆ, ಅನಂತ್ ಅವರು ನಮ್ಮ ಎಲ್ಲಾ ಕೆಲಸಗಳನ್ನು ಅತ್ಯಂತ ಪಾರದರ್ಶಕವಾಗಿಡುವ ಮೂಲಕ ನಮ್ಮ ವಿರುದ್ಧ ಯಾರೂ ಕ್ರಮ ಕೈಗೊಳ್ಳಲಾಗದಂತೆ ಮಾಡಿದ್ದರು. ನಾವು ಅತ್ಯುತ್ತಮ ಸ್ನೇಹಿತರಾಗಿದ್ದೆವು, ಆಗಾಗ ಕಾಫಿಗೆ ಭೇಟಿಯಾಗುತ್ತಿದ್ದೆವು ಹಾಗೂ ಸಂಗೀತದ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದೆವು. ನನಗಿಂತ ಕಿರಿಯರಾಗಿದ್ದ ಅವರ ಅಗಲಿಕೆ ಅತೀವ ನೋವು ತಂದಿದೆ.”

Tara rao

ಚುಕ್ಕಿ ನಂಜುಂಡಸ್ವಾಮಿ (ರೈತನಾಯಕಿ ಹಾಗೂ ಹೋರಾಟಗಾರ್ತಿ)

“ಅನಂತ್ ಅವರು ಆಮ್ನೆಸ್ಟಿ ಇಂಟರ್‌ನ್ಯಾಷನಲ್, ಗ್ರೀನ್‌ಪೀಸ್ ಹಾಗೂ ಅಜೀಂ ಪ್ರೇಮ್‌ಜಿ ಫಿಲಾಂತ್ರಪಿಯಂತಹ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಕೆಲಸ ಮಾಡಿದರೂ, ಯಾವತ್ತೂ ಮುನ್ನೆಲೆಗೆ ಬಾರದೆ ಎಲೆಮರೆ ಕಾಯಿಯಂತೆ ಕೆಲಸ ಮಾಡಿದರು. ಸುಸ್ಥಿರ ಕೃಷಿ ಹಾಗೂ ನೈಸರ್ಗಿಕ ಕೃಷಿಯ ಹಿಂದೆ ಅವರು ಮೆದುಳಾಗಿ ಕೆಲಸ ಮಾಡಿದ್ದರು ಎಂಬುದು ಅನೇಕರಿಗೆ ತಿಳಿದಿಲ್ಲ. ನಾನು ಅವರನ್ನು ಒಮ್ಮೆ ಮಾತ್ರ ಭೇಟಿಯಾಗಿದ್ದೆ, ಆದರೆ ಅವರ ಸಂಗಾತಿ ಕವಿತಾ ಕುರುಗಂಟಿ ಅವರ ಜೊತೆ ನನಗೆ ಹೆಚ್ಚು ಒಡನಾಟ ಇತ್ತು. ಅವರು ತೆರೆಯ ಹಿಂದೆ ನಿಂತು ಕೆಲಸ ಮಾಡಿದ್ದರಿಂದ ಬಹಳ ಜನಕ್ಕೆ ಅವರು ಗೊತ್ತಿಲ್ಲದಿರಬಹುದು. ಆದರೆ ಅಷ್ಟೇ ಗಾಂಭೀರ್ಯ, ಘನತೆ ಮತ್ತು ಬದ್ಧತೆಯಿಂದ ಕೆಲಸ ಮಾಡಿದ ಅಪರೂಪದ ವ್ಯಕ್ತಿ ಅವರು.”

Chukki nanjundaswamy

ಅಂತಿಮ ದರ್ಶನ

ಮೈಸೂರಿನ ಯಾದವಗಿರಿಯಲ್ಲಿರುವ ಸಂಕಲ್ಪ್ ಸೆಂಟ್ರಲ್ ಪಾರ್ಕ್‌ನ ಪೆಟೂನಿಯಾ ಬ್ಲಾಕ್ (ಮನೆ ಸಂಖ್ಯೆ 606) ಬಳಿ ಶನಿವಾರ ಮಧ್ಯಾಹ್ನ 3 ಗಂಟೆಯವರೆಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ತದನಂತರ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬ ಮೂಲಗಳು ತಿಳಿಸಿವೆ.

WhatsApp Image 2025 11 17 at 3.21.17 PM
ಈ ದಿನ ಡೆಸ್ಕ್
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಬೀದರ್‌ | ಮರಣಾನಂತರ ದೇಹದಾನಕ್ಕೆ ಮುಂದಾದ ಮೂವರು ಶಿಕ್ಷಕರು, ಸಾಹಿತಿ

ವೈದ್ಯಕೀಯ ವಿದ್ಯಾರ್ಥಿಗಳ ಅಧ್ಯಯನ ಮತ್ತು ಸಂಶೋಧನೆಗೆ ನೆರವಾಗುವ ಉದ್ದೇಶದಿಂದ ಮರಣಾನಂತರ ತಮ್ಮ...

‘ಮಹಿಳೆಯರನ್ನು ಗೌರವಿಸುವ ಯುವಜನತೆಯ ಮುಂದೆ ಬಿಜೆಪಿಯ ನಿಜಬಣ್ಣ ಬಯಲಾಗಿದೆ’: ಪ್ರಕಾಶ್ ರಾಜ್

ದೇಶದ ವಿವಿಧ ಭಾಗಗಳಲ್ಲಿ ಶಾಂತಿಯುತ ಪ್ರತಿಭಟನೆ ನಡೆಸುತ್ತಿರುವ ಯುವಜನತೆಯನ್ನು ಶ್ಲಾಘಿಸಿರುವ ನಟ...

ಇಂಡಿ |‌ ಜೋಡೆತ್ತು ಕೃಷಿಕರ ಪ್ರತಿಭಟನೆ; ಅಹವಾಲು ಆಲಿಸಿದ ಶಾಸಕ ಯಶವಂತರಾಯಗೌಡ ಪಾಟೀಲ

ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಥರ್ಗಾ ಗ್ರಾಮದಲ್ಲಿ ಜೋಡೆತ್ತಿನ ಕೃಷಿಕರ ಬೇಡಿಕೆಗಳನ್ನು...

SIR | ಯುವಜನರ ಮೇಲಿನ ದಮನಕಾರಿ ಕ್ರಮಗಳ ಕುರಿತು ಅಮೆರಿಕದ 6 ಡೆಮಾಕ್ರಟಿಕ್ ಸಂಸದರ ಕಳವಳ; ವಿದೇಶಾಂಗ ಕಾರ್ಯದರ್ಶಿಗೆ ಪತ್ರ

ದೆಹಲಿ ಸೇರಿದಂತೆ ಭಾರತದ ವಿವಿಧ ಭಾಗಗಳಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆಗಳ ವೇಳೆ ಅತಿಯಾದ...