ಸಮಾಜದಲ್ಲಿ ಸಮಾನತೆಗಾಗಿ ಜನಜಾಗೃತಿ ಮೂಡಿಸುವ ಉದ್ದೇಶದಿಂದ ಬಸವ ಜಯಂತಿ ಅಂಗವಾಗಿ ಏಪ್ರಿಲ್ 19ರಂದು ಬೆಳಗಾವಿ ನಗರದಲ್ಲಿ ಬೃಹತ್ ಬೈಕ್ ರ್ಯಾಲಿ ಆಯೋಜಿಸಲಾಗಿದೆ ಎಂದು ಬಸವ ಜಯಂತಿ ಉತ್ಸವ ಸಮಿತಿ ಸಂಚಾಲಕ ಬಸವರಾಜ ರೊಟ್ಟಿ ತಿಳಿಸಿದ್ದಾರೆ.
ನಗರದ ಪ್ರವಾಸಿಮಂದಿರದಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಗ್ಗೆ 8 ಗಂಟೆಗೆ ಬಸವೇಶ್ವರ ವೃತ್ತದಲ್ಲಿ ರ್ಯಾಲಿಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.
ರ್ಯಾಲಿಯು ತಿಳಕವಾಡಿ, ಅನಗೋಳ, ವಡಗಾವಿ, ಖಾಸಬಾಗ್, ಶಹಾಪುರ, ಕಪಿಲೇಶ್ವರ ರಸ್ತೆ, ಕರ್ನಾಟಕ ಚೌಕ, ರವಿವಾರ ಪೇಟೆ, ಖಡೇಬಜಾರ್, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಕಾಲೇಜು ರಸ್ತೆ, ಚನ್ನಮ್ಮ ವೃತ್ತ, ಲಿಂಗಾಯತ ಭವನ, ಕೆಎಂಎಫ್ ಡೇರಿ ಮಾರ್ಗವಾಗಿ ಮಹಾಂತೇಶ ನಗರದ ಹಳಕಟ್ಟಿ ಭವನದಲ್ಲಿ ಸಮಾಪ್ತಿಯಾಗಲಿದೆ.




