ನರಸಾಪುರ ಸೊಸೈಟಿಗೆ ಸಿ.ಬೈರೇಗೌಡರ ಸಹಕಾರ ಭವನವೆಂದು ನಾಮಕರಣ: ಖಾಜಿಕಲ್ಲಹಳ್ಳಿ ಮುನಿರಾಜು

Date:

Advertisements

ಕೋಲಾರ :ಸುಮಾರು ಹತ್ತು ವರ್ಷಗಳ ಕಾಲ ಈ ಭಾಗದ ರೈತರ ಕನಸು ನನಸ್ಸಾಗಿದೆ ಮಾಜಿ ಸಚಿವ ದಿವಂಗತ ಸಿ.ಬೈರೇಗೌಡರ ಹೆಸರಿನಲ್ಲಿ ಸಹಕಾರ ಭವನವೆಂದು ನಾಮಕರಣ ಮಾಡಲಾಗುತ್ತದೆ ಎಂದು ನರಸಾಪುರ ವಿವಿದೋದ್ದೇಶ ಪ್ರಾಥಮಿಕ ಕೃಷಿ ಗ್ರಾಮೀಣ ಸಹಕಾರ ಸಂಘದ ಅಧ್ಯಕ್ಷ ಖಾಜಿಕಲ್ಲಹಳ್ಳಿ ಕೆ.ಎಂ ಮುನಿರಾಜು ತಿಳಿಸಿದರು,

ತಾಲೂಕಿನ ನರಸಾಪುರ ಗ್ರಾಮದ ಸಹಕಾರ ಸಂಘದ ಆವರಣದಲ್ಲಿ ಏರ್ಪಡಿಸಿದ್ದ 2024 – 25 ನೇ ಸಾಲಿನ ಸರ್ವ ಸದಸ್ಯರ ವಾರ್ಷಿಕ ಸಾಮಾನ್ಯ ಸಭೆಯಯನ್ನು ಉದ್ಘಾಟಿಸಿ ಮಾತನಾಡಿದ ಅವರು ರೈತರು ಎಲ್ಲರೂ ಸೇರಿ ನೂತನ ಕಟ್ಟಡವನ್ನು ನಿರ್ಮಾಣ ಮಾಡಬೇಕೆಂದು ಆಸೆ ಇತ್ತು ನಾನು 2016 ರಲ್ಲಿ ಅಧ್ಯಕ್ಷನಾದ ಸಂದರ್ಭದಲ್ಲಿ ಕಟ್ಟಡ ನಿರ್ಮಾಣ ಮಾಡುವ ಸ್ಥಿತಿಯಲ್ಲಿ ಇರಲಿಲ್ಲ, ನಾವು ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಸಾಲ ವಿತರಣೆ ಕಡಿಮೆ ಇತ್ತು, ಸುಮಾರು 25 ಲಕ್ಷ ಮಾತ್ರ ಇತ್ತು, ನಾವು ಅಧಿಕಾರ ಸ್ವೀಕರಿಸಿದ ನಂತರ ನಮ್ಮ ಅವಧಿಯಲ್ಲಿ ಸುಮಾರು 800 ರೈತರಿಗೆ 10 ಕೋಟಿ ಕೆಸಿಸಿ ಸಾಲ ಕೊಡಿಸಲಾಗಿತ್ತು, ಆ ಕೆಸಿಸಿ ಸಾಲದಲ್ಲಿ ಸುಮಾರು 6.50 ಕೋಟಿ ಸಾಲ ಮನ್ನಾ ಮಾಡಲಾಗಿದೆ ಎಂದರು

ಮಹಿಳೆಯರಿಗೆ ಸುಮಾರು 40 ಕೋಟಿ ಬಡ್ಡಿ ರಹಿತ ಸಾಲ ನೀಡಲಾಯಿತು, ಈಗ ಡಿಸಿಸಿ ಬ್ಯಾಂಕ್ ಹಲವಾರು ಕಾರಣಗಳಿಂದ ಸಾಲ ನೀಡುವುದು ನಿಲ್ಲಿಸಲಾಗಿದ್ದು, ನಾವು ಸಹ ಸಾಲ ನೀಡುವುದಕ್ಕೆ ವಿಳಂಬ ಮಾಡುತ್ತಿದ್ದೇವೆ, ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಸಾಲ ನೀಡಲು ಅನುಕೂಲ ಮಾಡುತ್ತದೆ ಎಂಬ ಆಶಾಭಾವನೆ ಇದೆ, ಇನ್ನೆರಡು ತಿಂಗಳಲ್ಲಿ ಈ ಕಟ್ಟಡದ ಕಾಮಗಾರಿಯನ್ನು ಪೂರ್ಣಗೊಳಿಸಿ ನಮ್ಮ ಅವಧಿಯಲ್ಲಿ ಕಟ್ಟಡದ ಉದ್ಘಾಟನೆ ಮಾಡಲಿದ್ದು, ತಿಂಗಳಿಗೆ 1 ಲಕ್ಷ ರೂಗಳನ್ನು ಬಾಡಿಗೆ ಬರುವಂತೆ ಕ್ರಮ ಕೈಗೊಳ್ಳುತ್ತೇವೆ, ಮುಂದಿನ ದಿನಗಳಲ್ಲಿ ಸಿ.ಬೈರೇಗೌಡರ ಸಹಕಾರ ಭವನದ ಉದ್ಘಾಟನೆ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ತೀರ್ಮಾನಿಸಲಾಗಿದೆ ಎಂದರು,

ಆ ಸಂದರ್ಭದಲ್ಲಿ ಸಹಕಾರ ಸಂಘದ ವ್ಯಾಪ್ತಿಗೆ ಸೇರಿದ ಸುಮಾರು 40 ಹಳ್ಳಿಗಳ ರೈತರನ್ನು ಕರೆಸಿ ಸಹಕಾರ ಹಬ್ಬ ಮಾಡಲಾಗುತ್ತದೆ, 5 ವರ್ಷದಿಂದ ಪ್ರತಿ ವರ್ಷದ ಸಾಮಾನ್ಯ ಸಭೆಯಲ್ಲಿ ನೂತನ ಕಟ್ಟಡದಲ್ಲಿ ವಾರ್ಷಿಕ ಸಾಮಾನ್ಯ ಸಭೆ ಮಾಡೋಣ ಎಂಬ ಕನಸ್ಸು ಇತ್ತು, ನಿಮ್ಮೆಲ್ಲರ ಸಹಕಾರದಿಂದ ಈಗ ಅದು ನನಸಾಗಿದೆ, ಈ ಭವನಕ್ಕೆ ದಿವಂಗತ ಸಿ ಬೈರೇಗೌಡರ ಸಹಕಾರ ಭವನ ಎಂದು ಹೆಸರಿಡಲಾಗುತ್ತದೆ ಅದಕ್ಕೆ ನಿಮ್ಮ ಸಹಕಾರ ಮುಖ್ಯ, ಕಟ್ಟಡ ನಿರ್ಮಾಣವಾಗುವಂತಹ ಸಂದರ್ಭದಲ್ಲಿ ಹಲವಾರು ಅಡೆತಡೆಗಳು ಬಂದಿದ್ದವು, ಸಂಘದ ಸದಸ್ಯರ ಸಹಕಾರದಿಂದ ಅಡೆತಡೆಗಳನ್ನು ಬಗೆಹರಿಸಿಕೊಳ್ಳಲಾಯಿತು, ಸಂಘದ ಕಟ್ಟಡದ ವಿಸ್ತೀರ್ಣವನ್ನು ಹೆಚ್ಚಳ ಮಾಡುವ ಉದ್ದೇಶದಿಂದ ಹಲವು ಸಚಿವರುಗಳ, ನರಸಾಪುರ ಗ್ರಾಮ ಸದಸ್ಯರ ಮತ್ತು ಅಧಿಕಾರಿಗಳ ಸಹಕಾರದಿಂದ ಕಟ್ಟಡದ ನಿರ್ಮಾಣದ ವಿಸ್ತೀರ್ಣದ ಜಾಗವನ್ನು ಹೆಚ್ಚಳ ಮಾಡಿಕೊಳ್ಳಲು ಸಹಕಾರ ನೀಡಿದ್ದಾರೆ ಎಂದರು.

ಇದನ್ನು ಓದಿದ್ದೀರಾ..? ಶ್ರೀನಿವಾಸಸಾಗರದಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಶುಭ ಕೋರಿದ ಶ್ರೀಮಂಗಳನಾಥಸ್ವಾಮೀಜಿ

ಈ ಸಂದರ್ಭದಲ್ಲಿ ಉಪಾಧ್ಯಕ್ಷ ಕುರ್ಕಿ ಆರ್. ಶ್ರೀಧರ್, ನಿರ್ದೇಶಕರುಗಳಾದ ಪೆಮ್ಮಶೆಟ್ಟಹಳ್ಳಿ ಎಸ್ ಸುರೇಶ್, ಕೆಂದಟ್ಟಿ ರತ್ನಮ್ಮ ರಮೇಶ್, ಕಲ್ವ ಬಿ. ರಾಜಣ್ಣ, ವಿಶ್ವನಾಥಪುರ ಮುನಿಯಪ್ಪ, ಬೆಳ್ಳೂರು ವೆಂಕಟೇಶಪ್ಪ, ನರಸಾಪುರ ಬಿ ಜಮುನಾ, ನರಸಾಪುರ ಟಿ.ನಾಗರಾಜ್, ಚಲ್ಲಹಳ್ಳಿ ಅಶೋಕ್, ಸಂಘದ ಪ್ರಭಾರ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಎಂ ಮಂಜುನಾಥ್ ಹಾಗೂ ಷೇರುದಾರ ರೈತರು ಪಾಲ್ಗೊಂಡಿದ್ದರು.

WhatsApp Image 2025 06 24 at 16.24.21 6207fd1d
+ posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | ಅಂಬೇಡ್ಕರ್ ಓದು ; ಭಾರತವನ್ನು ಅರಿಯುವ ದಾರಿ : ಕೋಟಿಗಾನಹಳ್ಳಿ ರಾಮಯ್ಯ ಅಭಿಪ್ರಾಯ

ಶಿವಮೊಗ್ಗ ಮಾನವತಾವಾದಿ ಅಂಬೇಡ್ಕರ್ ಅವರನ್ನು ಓದುವುದು ಎಂದರೆ ಭಾರತವನ್ನು ನೈಜವಾಗಿ ಅರಿಯುವುದು,...

ಬಿಜೆಪಿಯ ಆತ್ಮವಂಚನೆ ಪ್ರತಿಭಟನೆಗಳು ಕಲಬುರಗಿಗೆ ಅಗತ್ಯವಿಲ್ಲ: ಸಚಿವ ಪ್ರಿಯಾಂಕ್ ಖರ್ಗೆ

ಅಧಿಕಾರದಲ್ಲಿದ್ದಾಗ ಕಲಬುರಗಿ ಜಿಲ್ಲೆಯ ರೈತರಿಗೆ ದ್ರೋಹವೆಸಗಿದ್ದ ಬಿಜೆಪಿ ಈಗ ಪ್ರತಿಭಟನೆಯ ನಾಟಕ...

ಧಾರವಾಡ | ಹಿಂದುಳಿದ ವರ್ಗಗಳ ಸಮೀಕ್ಷೆ; ಸಬ್‌ಜೈಲ್ ಸುತ್ತ ಪ್ರದೇಶಗಳಲ್ಲಿ ನೆಟವರ್ಕ್ ಸಮಸ್ಯೆ

ಧಾರವಾಡ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಪ್ರಗತಿಯಲ್ಲಿದ್ದು,...

ವಿಜಯಪುರ | ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಕರ್ತವ್ಯ: ಶಂಕರಗೌಡ ಸೋಮನಾಳ

ಪರಿಸರಕ್ಕೆ ಹಾನಿ ಮಾಡದಂತಹ ತಂತ್ರಜ್ಞಾನಗಳನ್ನು ನಾವು ಪ್ರೋತ್ಸಾಹಿಸಬೇಕು. ಪರಿಸರ ಸಂರಕ್ಷಣೆಯಲ್ಲಿ ವಿದ್ಯಾರ್ಥಿಗಳ...

Download Eedina App Android / iOS

X