ಶ್ರೀನಿವಾಸಸಾಗರದಲ್ಲಿ ದೋಣಿ ವಿಹಾರಕ್ಕೆ ಚಾಲನೆ ನೀಡಿ ಶುಭ ಕೋರಿದ ಶ್ರೀಮಂಗಳನಾಥಸ್ವಾಮೀಜಿ

Date:

ಚಿಕ್ಕಬಳ್ಳಾಪುರ: ಪುರಾಣ ಪ್ರಸಿದ್ಧ ಪ್ರವಾಸಿ ತಾಣವಾದ ಲಕ್ಷ್ಮೀವೆಂಕಟೇಶ್ವರ ಸ್ವಾಮಿ ನೆಲೆಸಿರುವ ಶ್ರೀನಿವಾಸ ಸಾಗರದಲ್ಲಿ ಗುರುವಾರ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥೆ ನೂತನವಾಗಿ ಪ್ರಾರಂಭಿಸಿರುವ ದೋಣಿವಿಹಾರಕ್ಕೆ ಚಾಲನೆ ನೀಡಿದ ಆದಿಚುಂಚನಗಿರಿ ಶಾಖಾಮಠದ ಮಂಗಳನಾಥಸ್ವಾಮೀಜಿ ದೋಣಿಯಲ್ಲಿ ಕುಳಿತು ವಿಹಾರ ಮಾಡುವ ಮೂಲಕ ಉದ್ಘಾಟಿಸಿದರು.

- Advertisement -

ತಾಲೂಕಿನ ಪೋಶೆಟ್ಟಿಹಳ್ಳಿ ಪಂಚಾಯಿತಿ ವ್ಯಾಪ್ತಿಯ ಶ್ರೀನಿವಾಸ ಸಾಗರದ ಯಾತ್ರಿನಿವಾಸದ ಬಳಿ ತ್ರಿಪುರಿ ವಾಟರ್ ಸ್ಪೋರ್ಟ್ಸ್ ಅಂಡ್ ಅಡ್ವೆಂರ‍್ಸ್ ಸಂಸ್ಥೆಯಿoದ ಗುರುವಾರ ಆಯೋಜಿಸಿದ್ದ ದೋಣಿವಿಹಾರ ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಹೊಸ ಓದು | ಬಿ. ಚಂದ್ರೇಗೌಡರ ‘ಕಾಳ ಮಾವನ...

ಬಿ. ಚಂದ್ರೇಗೌಡರ 'ಬಯಲು ಸೀಮೆಯ ಕಟ್ಟೆಪುರಾಣ' ಅಂಕಣ ಬರಹದಿಂದ ಎದ್ದುಬಂದ ಕಾಳಮಾವ ಈಗ ತನ್ನ ಕಡೇ ದಿನಗಳಲ್ಲಿದ್ದಾರೆ. ಅವರು ಕಣ್ಣುಮುಚ್ಚುವ, ಕಾಲುಮಡಚುವ ದೃಶ್ಯಗಳು ಭಾರತದ ಆತ್ಮಸಾಕ್ಷಿಯ ಅಂತ್ಯಸಂಸ್ಕಾರವನ್ನು ಸಂಕೇತಿಸುವಂತಿವೆ. ನಮ್ಮ ನೆಲದ ನಾಲಿಗೆನಿಷ್ಠೆ...

ಬ್ರಿಟಿಷ್ ಕಾಲದ ʼಗುಲಾಮಗಿರಿʼ ಕಾನೂನುಗಳೇ ಇಂದಿನ ಪೊಲೀಸ್‌ ವ್ಯವಸ್ಥೆಯ...

ಸ್ವಾತಂತ್ರ್ಯ ಬಂದು ದಶಕಗಳೇ ಕಳೆದಿದ್ದರೂ, ನಾವಿನ್ನೂ ಬ್ರಿಟಿಷರು ಭಾರತೀಯರನ್ನು ದಮನ ಮಾಡಲು ರೂಪಿಸಿದ 1861ರ ಪೊಲೀಸ್ ಕಾಯಿದೆಯ ನೆರಳಿನಲ್ಲೇ ಬದುಕುತ್ತಿದ್ದೇವೆಯೇ? ಖಾಕಿ ಪಡೆಯನ್ನು 'ಪ್ರಜೆಗಳ ರಕ್ಷಕ'ನಾಗಿಸಬೇಕಿದ್ದ ವ್ಯವಸ್ಥೆ, ಇಂದಿಗೂ ರಾಜಕಾರಣಿಗಳ ಕೈಗೊಂಬೆಯಾಗಿ ಉಳಿದುಕೊಳ್ಳಲು...

ಯಾರು ಹಿತವರು ಈ ಇಬ್ಬರೊಳಗೆ? ನೇಹಾ ಬೋರಾ ಅಭಿಜಿತ್...

“ಹೋಲಿಕೆ ಬೇಡ, ಒಗ್ಗಟ್ಟು ಬೇಕು. ನಾವೆಲ್ಲರೂ ಒಟ್ಟಾಗಿ ಚುನಾವಣಾ ಆಯೋಗದ ಅಕ್ರಮಗಳ ವಿರುದ್ಧ ಹೋರಾಡಬೇಕು” ಎಂದು ನೇಹಾ ಬರೆದರೆ, ಅದಕ್ಕೆ ಅಭಿಜೀತ್ ಉತ್ತರ- “ಇಂಕ್ವಿಲಾಬ್ ಜಿಂದಾಬಾದ್” ನೇಹಾ ಬೋರಾ ಮತ್ತು ಅಭಿಜಿತ್ ದೀಪ್ಕೆ ನಡುವೆ...

ತಾಲೂಕಿನಲ್ಲಿ ಜಲಕ್ರೀಡೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥೆಯ ಸಂಸ್ಥಾಪಕ ಭೂಷಣ್ ಎಂಬ ಯುವಕ ದೋಣಿವಿಹಾರ ಎಂಬ ಸಾಹಸಕ್ಕೆ ಕೈಹಾಕಿದ್ದಾರೆ.ಈ ಕ್ಷೇತ್ರದಲ್ಲಿ ಸರಿಯಾದ ರೀತಿಯಲ್ಲಿ ಬೆಳವಣಿಗೆ ಕಾಣುವ ಮೂಲಕ ಜನಪ್ರೀತಿಗೆ ಪಾತ್ರವಾಗಲಿ.ಅವರ ಸಂಕಲ್ಪ ಕೈಗೂಡಲಿ ಎಂದು ಭೈರವೇಶ್ವರನ ಆಶೀರ್ವಾದ ಈ ಸಂಸ್ಥೆಯ ಮೇಲಿರಲಿ ಎಂದು ಶುಭಕೋರಿದರು.
ಈ ಬಗ್ಗೆ ಮಾತನಾಡಿರುವ ತ್ರಿಪುರಿ ಸಾಲ್ವೆಂಟ್ಸ್ ಸಂಸ್ಥಾಪಕ ಭೂಷಣ್ ಮಾತನಾಡಿ ಶ್ರೀನಿವಾಸ ಸಾಗರದಲ್ಲಿ ಸಾರ್ವಜನಿಕರಿಗಾಗಿ ಬೋಟಿಂಗ್ ಸೌಲಭ್ಯ ಆರಂಭಿಸಲು ಸಹಾಯ ಮಾಡಿರುವ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಂ.ಸಿ.ಸುಧಾಕರ್, ಸಂಸದ ಡಾ.ಕೆ.ಸುಧಾಕರ್, ಶಾಸಕ ಪ್ರದೀಪ್ ಈಶ್ವರ್,ಭರಣಿ ವೆಂಕಟೇಶ್ ಅವರನ್ನು ಕೃತಜ್ಞತೆಯಿಂದ ಸ್ಮರಿಸುತ್ತೇನೆ ಎಂದ ಅವರು ಗುಣಮಟ್ಟದ ಸೇವೆ ಒದಗಿಸುವ ನಿಟ್ಟಿನಲ್ಲಿ ದೋಣಿವಿಹಾರ ಮಾಡಲು ಬರುವವರಿಗಾಗಿ ಲೈಫ್‌ಜಾಕೆಟ್‌ಗಳನ್ನು ಒದಗಿಸುವ ಜೊತೆಗೆ ದೋಣಿವಿಹಾರದ ಪ್ರಯಾಣಿಕರಿಗೆ ಜೀವವಿಮೆಯನ್ನು ಕೂಡ ಒದಗಿಸಲಾಗಿದೆ.ಪ್ರಯಾಣಿಕರು ಸಂಚರಿಸುವ ಮಾರ್ಗಗಳಲ್ಲೆಲ್ಲಾ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ.ಮದ್ಯಪಾನ ಮಾಡಿ ಬರುವವರಿಗೆ ಬೋಟಿಂಗ್ ಪ್ರವೇಶ ಇರುವುದಿಲ್ಲ.ಒಟ್ಟಾರೆ ದೋಣಿವಿಹಾರ ಮಾಡುವವರ ರಕ್ಷನೆಯ ದೃಷ್ಟಿಯಿಂದ ಸರಕಾರದ ನಿಯಮಾನುಸಾರ ಬೇಕಾದ ಕ್ರಮಗಳನ್ನು ನಮ್ಮ ಸಂಸ್ಥೆ ತೆಗೆದುಕೊಂಡಿ ಎಂದರು.

ಶ್ರೀನಿವಾಸಸಾಗರದಲ್ಲಿ ಸದ್ಯ ಸಾರ್ವಜನಿಕರ ಬಳಕೆಗೆ ಎರಡು ದೋಣಿಗಳ ಸೇವೆಯನ್ನು ಒದಗಿಸಲಾಗಿದೆ.ಬೇಡಿಕೆ ಮತ್ತು ಜನರ ಆಸಕ್ತಿ ನೋಡಿಕೊಂಡು ಮುಂದಿನ ದಿನಗಳಲ್ಲಿ ಪೆಡಲ್ ಹಾಗೂ ಮ್ಯಾನ್ಯುಯೆಲ್ ಬೋಟ್ಗಳನ್ನು ಹಾಕಲು ತೀರ್ಮಾನಿಸಲಾಗುವುದು.ದೋಣಿ ನಡೆಸುವ ಸಿಬ್ಬಂದಿಯು ನ್ಯಾಷನಲ್ ಇನ್ಸ್ಟಿಟ್ಯೂಟ್ ಆಫ್ ವಾಟರ್ ಸ್ಪೋರ್ಟ್ಸ್ ಅಡ್ವೆಂರ‍್ಸ್ ಸಂಸ್ಥೆಯಿoದ ತರಬೇತಿ ಪಡೆದವರಾಗಿದ್ದಾರೆ.ಮಂಗಳೂರು ಉಡುಪಿ ಗೋವಾ ಮತ್ತಿತರ ಸಮುದ್ರ ತೀರಗಳಿಗೆ ಹೋಗಿ ದೋಣಿ ಪ್ರಯಾಣದ ಅನುಭವ ಪಡೆಯುವ ಕನಸು ಕಾಣುತ್ತಿರುವ ಗ್ರಾಮೀಣ ಪ್ರದೇಶದ ಮಂದಿ ಇಲ್ಲಿಗೆ ಬಂದು ಕಡಿಮೆ ದರದಲ್ಲಿ ಬೆಟ್ಟಗುಡ್ಡಗಳ ಪರಿಸರದ ನಡುವೆ ಅನುಭವ ಪಡೆಯುವಂತೆ ಅವಕಾಶ ಕಲ್ಪಿಸಲಾಗಿದೆ ಎಂದರು.

ಇದನ್ನು ಓದಿದ್ದೀರಾ..?ರೈತರು ದೇಶದ ಬೆನ್ನೆಲುಬಾದರೆ ಸಹಕಾರ ಸಂಘಗಳು ರೈತರ ಬೆನ್ನೆಲುಬು: ಸಚಿವ ಮುನಿಯಪ್ಪ

ದೋಣಿ ವಿಹಾರಕ್ಕೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ವಿಶ್ವೇಶ್ವರಯ್ಯ ಅವರ ಮೊಮ್ಮಗ ಸತೀಶ್ ಮೋಕ್ಷಗುಂಡಮ್, ಕೆ.ವಿ.ನವೀನ್‌ಕಿರಣ್, ಕೆ.ಎಂ.ಮುನೇಗೌಡ,ಉದ್ಯಮಿ ಮಹೇಶ್,ಯುವ ಮುಖಂಡ ಅಲ್ಲು ಅನಿಲ್, ಬಾಲಕುಂಟಹಳ್ಳಿ ಗಂಗಾಧರ್, ಪಿಳ್ಳಾಂಜಿನಪ್ಪ, ಚೀಗಟೇನಹಳ್ಳಿ ಮಂಜುನಾಥ್, ಬಿ.ವಿ.ಆನಂದ್,ಪೋಶೆಟ್ಟಹಳ್ಳಿ ಪಂಚಾಯಿತಿ ಅಧ್ಯಕ್ಷ ಶ್ರೀನಿವಾಸ್, ಕಾಮಗಾನಹಳ್ಳಿ ಸುದರ್ಶನ್ ರೆಡ್ಡಿ ಮತ್ತಿತರರು ಇದ್ದರು.

WhatsApp Image 2025 06 24 at 16.24.21 6207fd1d
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ರಾಯಚೂರು | ದೇವಸ್ಥಾನ ಕಟ್ಟೆ ಮೇಲೆ ಕುಳಿತಿದ್ದಕ್ಕೆ ಹಲ್ಲೆ ಅರೋಪ: ಐವರ ವಿರುದ್ಧ ಪ್ರಕರಣ ದಾಖಲು

ಲಿಂಗಸುಗೂರು ತಾಲೂಕಿನ ಈಚನಾಳ ಗ್ರಾಮದಲ್ಲಿ ಗದ್ದೆಮ್ಮ ದೇವಸ್ಥಾನದ ಕಟ್ಟೆ ಮೇಲೆ ಕುಳಿತಿದ್ದ...

ಸಕಲೇಶಪುರ | 25 ವರ್ಷ ನೆನಗುದಿಗೆ ಬಿದ್ದಿದ್ದ ಆಟೋ ನಿಲ್ದಾಣ ನಿರ್ಮಾಣ 

ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದ ಹಳೆ ಬಸ್ ನಿಲ್ದಾಣದ ಸಮೀಪ ಸ್ಥಳೀಯ...

ಕಾರವಾರ | ಗ್ರಾಮ ಆಡಳಿತ ಅಧಿಕಾರಿ ಪರೀಕ್ಷೆ ಸುಸೂತ್ರ: ಒಟ್ಟು 11,671 ಅಭ್ಯರ್ಥಿಗಳು ಹಾಜರು

ಕಾರವಾರ: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ವತಿಯಿಂದ ಕಂದಾಯ ಇಲಾಖೆಯ ಗ್ರಾಮ...

ಹಾಸನ | ₹426 ಕೋಟಿ; ಹಾಸನ-ಬೇಲೂರು ಚತುಷ್ಪಥ ರಸ್ತೆ ಅಭಿವೃದ್ಧಿ ಯೋಜನೆ; ಸಂಸದ ಶ್ರೇಯಸ್ ಪಟೇಲ್ 

ಹಾಸನ ನಗರದಲ್ಲಿ ಸುದ್ದಿಗಾರರೊಂದಿಗೆ ಸಂಸದ ಶ್ರೇಯಸ್ ಪಟೇಲ್ ಮಾತನಾಡಿ, ಹಾಸನ -...