ಮೈಸೂರು | ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮ ದಿನಾಚರಣೆ; ಮೀಲಾದ್ ಘೋಷಣಾ ಜಾಥಾ

Date:

Advertisements

ಮೈಸೂರು ನಗರದ ಅಶೋಕ ರಸ್ತೆಯಲ್ಲಿರುವ ಮೀಲಾದ್ ಪಾರ್ಕ್ ವೃತ್ತದಲ್ಲಿ ‘ಸುನ್ನಿ ಯುವಜನ ಸಂಘ‘ದ ವತಿಯಿಂದ ಸೋಮವಾರ ಅಯೋಜಿಸಿದ್ದ ‘ಪ್ರವಾದಿ ಮುಹಮ್ಮದ್ ಪೈಗಂಬರ್‌‘ ಅವರ ಜನ್ಮ ದಿನಾಚರಣೆಯ ಅಂಗವಾಗಿ ಹಜರತ್ ಮೌಲಾನಾ ಮೊಹಮ್ಮದ್ ಉಸ್ಮಾನ್ ಷರೀಫ್ ಸಾಹೇಬ್, ಸರ್ ಖಾಜಿ ನೇತೃತ್ವದಲ್ಲಿ ಜಮಾಅತರ ಸಹಯೋಗದೊಂದಿಗೆ ಮೀಲಾದ ಘೋಷಣಾ ಜಾಥಾ ನಡೆಯಿತು.

ಮಸ್ಜಿದ್ ಅಜಮ್ ಮರ್ಕಾಜ್ ಅಹಲೆ, ಸುನ್ನತ್-ವಲ್ ಜಮಾತ್ ಮಸೀದಿಯಿಂದ ಹೊರಟ ಮೀಲಾದ್ ಮೆರವಣಿಗೆ ಅಶೋಕ ರಸ್ತೆ, ಫೌಂಟೇನ್ ಸರ್ಕಲ್, ಹಜರತ್ ಟಿಪ್ಪು ಸುಲ್ತಾನ್ ಸರ್ಕಲ್ ಮೂಲಕ ಹಾದು ಹೋಗಿ ಮೈಸೂರು ಬೆಂಗಳೂರು ಹೆದ್ದಾರಿಯ ಮಿಲೇನಿಯಂ ಸರ್ಕಲ್ ನಲ್ಲಿ ಸಮಾಪ್ತಿಗೊಂಡಿತು.

ಮಸೀದಿಗಳಲ್ಲಿ‌ ನಡೆದ ಸಭಾ ಕಾರ್ಯಕ್ರಮಗಳಿಗೆ ಪ್ರವಾದಿ ಜೀವನದ ಸಂದೇಶ ನೀಡಲಾಯಿತು. ನಗರದ ಬಂದರ್‌ನಲ್ಲಿ ಹಲವು ಮಕ್ಕಳಿಂದ ಬೃಹತ್ ಮೀಲಾದ್ ರ‍್ಯಾಲಿಯು ಸಾರ್ವಜನಿಕರ ಗಮನ ಸೆಳೆಯಿತು.

Advertisements

ಜಾಥಾದಲ್ಲಿ ದಪ್ಫು ಪ್ರದರ್ಶನ ಸಹಿತ ಇಸ್ಲಾಮಿಕ ಸಾಂಸ್ಕೃತಿಕ ಕಾರ್ಯಕ್ರಮದ ಜೊತೆ ಮಕ್ಕಳಿಗೆ ಸಿಹಿ ತಿಂಡಿ ಹಂಚಿ ಪಾನೀಯ ನೀಡಲಾಯಿತು. ಮೀಲಾದ್ ರ‍್ಯಾಲಿಯಲ್ಲಿ ಮಕ್ಕಳಲ್ಲದೆ, ಹಿರಿಯರೂ ಪಾಲ್ಗೊಂಡು ಮಿಲಾದುನ್ನಬಿಯ ಸಡಗರ, ಸಂಭ್ರಮಕ್ಕೆ ಸಾಕ್ಷಿಯಾದರು.

ಬೆಂಗಳೂರಿನ ಎಸ್.ವೈ.ಎಸ್. ರಾಜ್ಯ ಸಮಿತಿ ಅಧ್ಯಕ್ಷ ಬಷೀರ್ ಸಾದಿ ಸಾಹೇಬ್ ಮಾತನಾಡಿ “ಮುಹಮ್ಮದ್ ಪೈಗಂಬರ್ ಅವರ ಸಿದ್ಧಾಂತ ಕೇವಲ ಆಧ್ಯಾತ್ಮ ಸಿದ್ಧಾಂತವಾಗಿರಲಿಲ್ಲ. ಮಸೀದಿ, ಮದ್ರಸ, ಧಾರ್ಮಿಕ ಆಚಾರ ವಿಚಾರಗಳನ್ನು ಪಸರಿಸುವ ಸಿದ್ಧಾಂತವಾಗಿದ್ದು, ಮಾನವರು ಎದುರಿಸುವ ಎಲ್ಲ ಸಮಸ್ಯೆಗಳಿಗೆ ಸಮರ್ಪಕವಾಗಿ ನೆರವು ನೀಡುವುದು ಅವರ ಸಿದ್ದಾಂತವಾಗಿತ್ತು” ಎಂದು ಹೇಳಿದರು.

ಈ ಸುದ್ದಿ ಓದಿದ್ದೀರಾ? ಮೈಸೂರು | ಮನುವಾದಿಗಳ ವಿಷ ತಲೆಗೇರಿಸಿಕೊಂಡ ಬಿಜೆಪಿಗರು; ಮುಸ್ಲಿಮರ ಕಂಡರೆ ದ್ವೇಷಕಾರುವುದನ್ನು ಬಿಡಿ : ಸಚಿವ ಮಹದೇವಪ್ಪ

ಕಾರ್ಯಕ್ರಮದಲ್ಲಿ ಸುನ್ನಿ ಯುವಜನ ಸಂಘದ ರಾಜ್ಯಾಧ್ಯಕ್ಷ ಬಷೀರ್ ಶಾದಿ, ಮೌಲಾನ ಅಬುಸಲಾಂ ರಜ್ವಿ, ರಾಜ್ಯ ಕಾರ್ಯದರ್ಶಿ ಸಯ್ಯದ್ ಇಲಿಯಾಸ್ ತಂಗಳ್ ಎಮ್ಮೆಮಾಡು, ಕ್ಯಾಬಿನೆಟ್ ಕಾರ್ಯದರ್ಶಿ ಸಯ್ಯದ್ ಹಮೀಮ್ ಶಿಹಾಬ್ ಬಾಳೆಹೊನ್ನೂರು, ರಾಜ್ಯ ಸಮಿತಿ ಸದಸ್ಯ ಸಯ್ಯದ್ ಶಾಫಿ ನಯೀಮಿ ಮಾರನಳ್ಳಿ, ಮೈಸೂರು ವಖ್ಫ್ ಅಧ್ಯಕ್ಷ ಆಜೀಜುಲ್ಲಾ ಅಜ್ಜು, ಮೌಲಾನ
ಉಸ್ಮಾನ್ ಖಾಜಿ ಸೇರಿದಂತೆ ಇನ್ನಿತರರು ಇದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಸಾಕ್ಷಿ ದೂರುದಾರನಿಗೆ ಆಶ್ರಯ: ಮಹೇಶ್ ಶೆಟ್ಟಿ ತಿಮರೋಡಿ ನಿವಾಸದಲ್ಲಿ ಎಸ್‌ಐಟಿ ಶೋಧ

ಸಾಕ್ಷಿ ದೂರುದಾರ ತಾನು ಉಜಿರೆಯಲ್ಲಿರುವ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ...

ಉಡುಪಿ | ಕಾರ್ಕಳದಲ್ಲಿ ವ್ಯಕ್ತಿಯ ಕೊಲೆ, ಪೊಲೀಸರಿಂದ ‌ಪರಿಶೀಲನೆ

ಉಡುಪಿ ಜಿಲ್ಲೆಯ ಕಾರ್ಕಳದ ಕುಂಟಲ್ಪಾಡಿ ಎಂಬಲ್ಲಿ ರಸ್ತೆಯ ಪಕ್ಕದಲ್ಲಿ ಸೋಮವಾರ ತಡರಾತ್ರಿ...

ಶಿವಮೊಗ್ಗ | ಜಿಲ್ಲಾಧಿಕಾರಿಗಳಿಂದ, ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ಜಾಗೃತಿ ಅಭಿಯಾನದ ಪೋಸ್ಟರ್ ಬಿಡುಗಡೆ

ಶಿವಮೊಗ್ಗ ಸೋಲಿಡಾರಿಟಿ ಯೂತ್ ಮೂಮ್ಮೆಂಟ್ ವತಿಯಿಂದ ರಾಜ್ಯಾದ್ಯಂತ ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದ್ದು....

ದ.ಕ. | ಪಟಾಕಿ ಮಾರಾಟಕ್ಕೆ ತಾತ್ಕಾಲಿಕ ಲೈಸೆನ್ಸ್; ಅರ್ಜಿ ಆಹ್ವಾನ

2025ನೇ ಸಾಲಿನಲ್ಲಿ ದೀಪಾವಳಿ ಹಬ್ಬ ಹಾಗೂ ತುಳಸಿ ಪೂಜೆ ಪ್ರಯುಕ್ತ ಮೈದಾನದಲ್ಲಿ...

Download Eedina App Android / iOS

X