10 ಎಕರೆ ಪ್ರದೇಶದಲ್ಲಿ ನಿರ್ಗತಿಕರಿಗೆ ಆಶ್ರಯ ಕೊಠಡಿಗಳ ನಿರ್ಮಾಣಕ್ಕೆ ಗುದ್ದಲಿ ಪೂಜೆ

Date:

ಕೆಜಿಎಫ್: ನಿರ್ಗತಿಕ,ಅನಾಥರಿಗೆ, ಸೂಕ್ತ ಮೂಲಭೂತ ಸೌಕರ್ಯ ಹಾಗೂ ಮಧ್ಯ ವ್ಯಸನಿಗಳಿಗೆ ಕೌನ್ಸೆಲಿಂಗ್ ಮೂಲಕ ಪರಿಹಾರ ನೀಡುವ ಮೂಲಕ ಅವರ ಜೀವನ ಮಟ್ಟದ ಸುಧಾರಿಸಲು ಆಶ್ರಯ ಕಲ್ಪಿಸಲು ಕೆಬಿಸಿ ಟ್ರಸ್ಟ್ ಸ್ಥಾಪಕ ಜಾವೀದ್ ಮುಂದಾಗಿರುವುದು ಶ್ಲಾಘನೀಯ ಎಂದು ಇಸ್ಲಾಮಿಕ್ ಚಿಂತಕ ಉಮರ್ ಷರೀಫ್ ಹೇಳಿದರು.

- Advertisement -

ಪಟ್ಟಣದ ಹೊರವಲಯದ ಕೃಷ್ಣಾವರಂ ಟೋಲ್ ಪ್ಲಾಜಾ ಬಳಿ ಸುಮಾರು 10 ಎಕರೆ ಪ್ರದೇಶದಲ್ಲಿ ಹಿರಿಯ ನಿರ್ಗತಿಕ ಮತ್ತು ಅನಾಥರಿಗೆ ಆರಂಭಗೊಂಡ ನೂತನ ಕೊಠಡಿ ಕಾಮಗಾರಿಗೆ ಗುದ್ದಲಿ ಪೂಜೆ ಸಲ್ಲಿಸಿ ಅವರು ಮಾತನಾಡಿದರು.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಶಿವಮೊಗ್ಗ | ಅಸುರಕ್ಷತೆಯ ತಾಣವಾದ ರೈಲ್ವೆ ನಿಲ್ದಾಣ: ಪ್ರಯಾಣಿಕರ...

ಕುಡಿಯುವ ನೀರಿಲ್ಲದಿರುವುದು, ಹಾಳಾದ ಶೌಚಾಲಯಗಳು, ರಾತ್ರಿ ವೇಳೆ ಬೀದಿದೀಪ ಹಾಗೂ ಕಾವಲುಗಾರರ ಕೊರತೆಯಿಂದಾಗಿ ಈ ನಿಲ್ದಾಣವು ನಿರ್ಜನ ಪ್ರದೇಶದಂತೆ ಭಾಸವಾಗುತ್ತಿದೆ. ಇದರೊಂದಿಗೆ ಕಳ್ಳತನ, ಅನೈತಿಕ ಚಟುವಟಿಕೆಗಳು ಹೆಚ್ಚಾಗಿರುವುದು ಜೊತೆಗೆ ಸಿಸಿಟಿವಿ ಕ್ಯಾಮೆರಾಗಳೂ ಇಲ್ಲದಿರುವುದು...

ಮೋದಿ ಆಡಳಿತದಲ್ಲಿ ಮಾಹಿತಿ ಹಕ್ಕು ಕಾಯ್ದೆಯ ‘ಸ್ಥಿತಿ’ ಹೇಗಿದೆ?...

ಯಾವುದೇ ಸರ್ಕಾರ ಆಡಳಿತದಲ್ಲಿರಲಿ ಪ್ರಜಾಸತ್ತಾತ್ಮಕ ವ್ಯವಸ್ಥೆಯನ್ನು ಕಾಪಾಡಬೇಕಾದ ಸಂಸ್ಥೆಗಳ ಸ್ವಾಯತ್ತತೆ ಉಳಿಯಬೇಕು. ಅವು ಪಾರದರ್ಶಕವಾಗಿರಬೇಕು. ಪ್ರಜಾಸತ್ತೆಯ ಕಾರ್ಯವೈಖರಿಯನ್ನು ಕುರಿತಂತೆ ಮುಕ್ತ ಚರ್ಚೆ ನಡೆಯುತ್ತಿರಬೇಕು. ಇದು ಸಕ್ರಿಯ, ಅರ್ಥಪೂರ್ಣ ಪ್ರಜಾಸತ್ತೆಯ ಕನಿಷ್ಠ ಅವಶ್ಯಕತೆ. ಹಾಗಾಗಿ...

ಬಂಗಾಳ ವಿಭಜನೆ | ವಿಭಜನೆಯ ವಿಷಬೀಜದಿಂದ ಒಗ್ಗಟ್ಟಿನ ಜ್ಯೋತಿ...

ಬ್ರಿಟಿಷರ 'ಒಡೆದು ಆಳುವ ನೀತಿ'ಯ ಭಾಗವಾಗಿ 1905ರ ಅಕ್ಟೋಬರ್‌ನಲ್ಲಿ ಜಾರಿಗೆ ಬಂದ ಬಂಗಾಳ ವಿಭಜನೆಯು ಭಾರತೀಯರ ರಾಷ್ಟ್ರೀಯತೆಯನ್ನು ಒಡೆಯುವ ಕುತಂತ್ರವಾಗಿತ್ತು. ಇದಕ್ಕೆ ಪ್ರತಿಯಾಗಿ ಭಾರತೀಯರು 'ರಾಷ್ಟ್ರೀಯ ಶೋಕ ದಿನ' ಆಚರಿಸಿ, ಪರಸ್ಪರ ರಾಖಿ...

ಅನೇಕ ಶ್ರೀಮಂತರ ಬಳಿ ಸಾವಿರಾರು ಕೋಟಿ ಹಣ ಇರುತ್ತದೆ ಆದರೆ ಯಾರಿಗೂ ಬಡವರ ಸೇವೆ ಮಾಡಬೇಕೆಂದು ಮುಂದೆ ಬರುವುದಿಲ್ಲ ಆದರೆ ಇಸ್ರೋ ಜಾವಿದ್ ಮುಂದಾಗಿರುವುದು ಪ್ರಶಂಸನೀಯ ಎಂದು ಅಭಿನಂದಿಸಿದರು.

ಇತ್ತೀಚಿನ ದಿನಗಳಲ್ಲಿ ಒಡ ಹುಟ್ಟಿದ ಮಕ್ಕಳೇ ತಂದೆ ತಾಯಿ ಅವರನ್ನು ಸಾಕಲು ಮೀನಾ ಮೇಷ ಎನಿಸುತ್ತಿದ್ದಾರೆ.

ಆದರೆ ಇಂತಹ ಬಡ ಮತ್ತು ನಿರ್ಗತಿಕರಿಗಾಗಿ ಕೋಟ್ಯಾಂತರ ಜಮೀನನ್ನು ಖರೀದಿಸಿ ಸುಸಜ್ಜಿತ ಕೊಠಡಿಗಳನ್ನು ನಿರ್ಮಿಸಿ ನುರಿತ ರಿಂದ ಅವರಿಗೆ ಕೌನ್ಸಿಲಿಂಗ್ ಹಾಗೂ ಶಿಕ್ಷಣವನ್ನು ಸಹ ಒದಗಿಸಿ ಆಶ್ರಯ ನೀಡಲು ಮುಂದಾಗಿರುವುದು ಶ್ಲಾಘನೀಯ ಎಂದರು.

ಕೆಲವರು ಪೋಷಕರನ್ನು ಪೋಷಣೆ ಮಾಡಲು ಅನೇಕ ರೀತಿಯಲ್ಲಿ ತೊಂದರೆಗಳನ್ನು ಅನುಭವಿಸುತ್ತಿರುತ್ತಾರೆ ಹಾಗೂ ಇತ್ತೀಚಿಗೆ ಯುವ ಸಮುದಾಯ ಮಧ್ಯ ಹಾಗೂ ತಂಬಾಕು ಸೇವನೆಯ ದುಶ್ಚಟಗಳಿಗೆ ಬಲಿಯಾಗಿ ತಮ್ಮ ಜೀವನವನ್ನೇ ಕಳೆದುಕೊಂಡಿರುತ್ತಾರೆ.

ಇಂತಹ ವ್ಯಕ್ತಿಗಳಿಗೆ ಕೆಬಿಸಿ ಟ್ರಸ್ಟ್ ಮೊದಲ ಬಾರಿಗೆ ಕೌನ್ಸಿಲಿಂಗ್ ಮೂಲಕ ತಮ್ಮ ಜೀವನವನ್ನು ರೂಪಿಸಿಕೊಳ್ಳಲು ಸಹಕಾರಿಯಾಗುತ್ತದೆ ನಂತರ ಅವರ ಜೀವನ ಸುಧಾರಿಸದೆ ಇದ್ದಲ್ಲಿ ಇದಕ್ಕಾಗಿ ಮೀಸಲಿಟ್ಟಿರುವ ಹತ್ತು ಎಕರೆ ಪ್ರದೇಶದಲ್ಲಿ ಸುಸಜ್ಜಿತ ಕೊಠಡಿ ಗಳನ್ನು ನಿರ್ಮಿಸಿ ಅವರ ಆರೋಗ್ಯ ಊಟ ವಸತಿ ಹಾಗೂ ಮೂಲಭೂತ ಸೌಕರ್ಯಗಳನ್ನು ಒದಗಿಸಿ ಉತ್ತಮ ಜೀವನವನ್ನು ಕಲ್ಪಿಸಿಕೊಡಲು ಕೆಬಿಸಿ ಟ್ರಸ್ಟ್ ಮುಂದಾಗಿದೆ ಎಂದು ಅವರ ಸೇವಾ ಕಾರ್ಯವನ್ನು ಸಲ್ಲಿಸಿದರು.

ಕೆಬಿಸಿ ಟ್ರಸ್ಟ್ ಸ್ಥಾಪಕ ಜಾವಿದ್ ಮಾತನಾಡಿ, ತಾವು ಇಸ್ರೋ ಕಂಪನಿಯಲ್ಲಿ ಕೆಲಸ ಮಾಡಿ ಇದೀಗ ನಿವೃತ್ತರಾಗಿ ಏಳು ವರ್ಷಗಳಾಗಿದ್ದು ತಮ್ಮ ಬಾಲ್ಯದಿಂದ ಸಂಪಾದನೆ ಮಾಡಿದ ಹಣದಲ್ಲಿ ನಿರ್ಗತಿಕ ಬಡವ ಅನಾಥರಿಗೆ ಸೇವೆ ಮಾಡಬೇಕು ಎಂಬ ದೃಷ್ಟಿಯಿಂದ ತಮ್ಮ ಸ್ವಂತ ಹಣ ಹಾಗೂ ದಾನಿಗಳ ಸಹಕಾರದಿಂದ ಕೆಬಿಸಿ ಟ್ರಸ್ಟ್ ಆರಂಭಿಸಿದ್ದು ಸುಮಾರು 3 ಕೋಟಿ ಹಣದಲ್ಲಿ ಜಮೀನನ್ನು ಕರೆಗ್ಸಿದ್ದು ಕಾಂಪೌಂಡ್ ನಿರ್ಮಿಸಲಾಗಿದೆ ಈ ಜಮೀನಿನಲ್ಲಿ ತೆಂಗಿನ ಗಿಡ, ಮಾವಿನ ಗಿಡ ಇತರೆ ಬೆಳೆಗಳನ್ನು ಬೆಳೆಯುತ್ತಿದ್ದು, ಇದೆ ಪ್ರದೇಶದಲ್ಲಿ ಸುಸಜ್ಜಿತ ಕೊಠಡಿಗಳು, ಶಾಲಾ ಕೊಠಡಿಗಳನ್ನು ಸಹ ನಿರ್ಮಿಸಿ ಅನಾಥ ಮಕ್ಕಳಿಗೆ ಶಿಕ್ಷಣವನ್ನು ಸಹ ಕಲ್ಪಿಸಿ ಅವರ ಸ್ವಂತ ಕಾಲಿನ ಮೇಲೆ ನಿಲ್ಲಲು ಪ್ರೇರೇಪಿಸುತ್ತೇನೆ ಎಂದರು.

ಇದನ್ನು ಓದಿದ್ದೀರಾ..? ರಸ್ತೆಯಲ್ಲಿ ನಡೆಯುತ್ತಿರುವ ಅವರೆಕಾಯಿ ವ್ಯಾಪಾರದಿಂದ ಸಾರ್ವಜನಿಕರಿಗೆ ಹಾಗೂ ಟ್ರಾಫಿಕ್‌ಗೆ ತೀವ್ರ ತೊಂದರೆಯಾಗುತ್ತಿದೆ

ಈ ಸಂದರ್ಭದಲ್ಲಿ ಇಸ್ಲಾಮಿಕ್ ಚಿಂತಕ ಉಮರ್ ಷರೀಫ್, ಮುಸ್ಲೀಂ ಕಮಿಟಿ ಕೋಲಾರ ಜಿಲ್ಲಾ ಅಧ್ಯಕ್ಷ ಜಮಾಲ್, , ಮೊಹ್ಮದ್ ಉಮ್ರಿ, ಮಾದಿಗ ದಂಡೋರ ರಾಜ್ಯಾಧ್ಯಕ್ಷ ವೇಣು, ವೆಂಕಟೇಶ್, ಶಿವ ಕುಮಾರ್, ಬಾಬು, ಅಮೀರ್ ಜಾನ್, ರೆಹಮಾನ್ ಖಾನ್ ಉಮ್ರಿ, ಅಬ್ದುಲ್ ಕದೀರ್, ಮಥೀನ್, ಮುಜಾಹಿದೀನ್, ಹಾಗೂ ಅನೇಕ ಮುಖಂಡರು ಗಣ್ಯರು ಉಪಸ್ಥಿತರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಕತಾರ್‌ನಲ್ಲಿ ಉಡುಪಿಯ ಸಮಾಜ ಸೇವಕ ಎಂ. ಇಕ್ಬಾಲ್ ಮನ್ನಾ ಅವರಿಗೆ ಗೌರವ ಸನ್ಮಾನ

ಉಡುಪಿ ಜಿಲ್ಲೆಯ ಪ್ರಮುಖ ಸಮಾಜ ಸೇವಕರು ಹಾಗೂ ಸಾಮಾಜಿಕ ಕಾರ್ಯಕರ್ತರಾದ ಎಂ....

ಗದಗ | ಕನಿಷ್ಠ ವೇತನಕ್ಕೆ ಆಗ್ರಹಿಸಿ ಪ್ರತಿಭಟನೆ

ಪರಿಷ್ಕರಣೆ ಮಾಡಿರುವ ಕನಿಷ್ಟ ವೇತನ ಜಾರಿಗಾಗಿ ಹಾಗೂ ಖಾಯಂಗಾಗಿ ಮತ್ತು ಕೆಲಸದ...

ಗದಗ | ಕೇಂದ್ರ ಸಚಿವ ಪ್ರಲ್ಹಾದ ಜೋಶಿಗೆ ಮನವಿ ಸಲ್ಲಿಸುವ ಮುನ್ನವೇ ಕಬ್ಬು ಬೆಳೆಗಾರರು ಪೋಲಿಸರ ವಶ

ಕಬ್ಬು ಬೆಳೆಗಾರರ ವಿವಿಧ ಬೇಡಿಕೆಗಳ ಈಡೇರಿಕೆ ಕುರಿತಂತೆ ಕೇಂದ್ರ ಸಚಿವ ಪ್ರಹ್ಲಾದ...

ಉಡುಪಿ | ಹಿರಿಯ ಸಾಹಿತಿ ಎ.ಎಸ್.ಎನ್. ಹೆಬ್ಬಾರ್ ಅವರಿಗೆ ಸೂಕ್ತ ರಕ್ಷಣೆ ನೀಡಲು ಜಿಲ್ಲಾಧಿಕಾರಿಗೆ ಮನವಿ

ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪಕ ಅಧ್ಯಕ್ಷರು, ಹಿರಿಯ ವಕೀಲರು...