ಇರಾನ್: ಇತಿಹಾಸದ ಚಕ್ರದಲ್ಲಿ ಮತ್ತೆ ಮರಳಲಿದೆಯೇ ‘ಪಹಲವಿ’ ಯುಗ

Date:

ಇರಾನ್‌ನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಆ ಬದಲಾವಣೆಯು ಸ್ವದೇಶಿ ನೆಲದ ನಾಯಕತ್ವದಿಂದ ಬರಬೇಕೇ ಹೊರತು, ವಿದೇಶಿ ನೆಲದಲ್ಲಿ ಕುಳಿತು ಯೋಜನೆ ರೂಪಿಸುವವರಿಂದಲ್ಲ ಎಂಬುದು ಇರಾನ್‌ನ ಒಂದು ವರ್ಗದ ವಾದ. ರೆಝಾ ಪಹಲವಿ ಅವರು ತಮ್ಮನ್ನು ಪ್ರಜಾಪ್ರಭುತ್ವದ ಹರಿಕಾರ ಎಂದುಕೊಂಡರೂ, ಅವರ ಕೌಟುಂಬಿಕ ಇತಿಹಾಸ ಮತ್ತು ಪ್ರಸ್ತುತ ಅವರ ಹಿಂದಿರುವ ವಿದೇಶಿ ಲಾಬಿಗಳು ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲವು

- Advertisement -

ಇತಿಹಾಸ ಪುನರಾವರ್ತನೆಯಾಗುವುದಿಲ್ಲ, ಆದರೆ ಅದು ಪ್ರಾಸಬದ್ಧವಾಗಿರುತ್ತದೆ ಎಂಬ ಮಾತಿದೆ. ಕಳೆದ ಕೆಲವು ವರ್ಷಗಳಲ್ಲಿ ದಕ್ಷಿಣ ಏಷ್ಯಾದಲ್ಲಿ ನಡೆದ ರಾಜಕೀಯ ಪಲ್ಲಟಗಳನ್ನು ಗಮನಿಸಿದರೆ ಈ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಶ್ರೀಲಂಕಾದಲ್ಲಿ ರಾಜಪಕ್ಸೆ ಕುಟುಂಬದ ವಿರುದ್ಧದ ಜನದಂಗೆ, ಬಾಂಗ್ಲಾದೇಶದಲ್ಲಿ ಶೇಕ್‌ ಹಸೀನಾ ವಿರುದ್ಧದ ವಿದ್ಯಾರ್ಥಿ ಕ್ರಾಂತಿ ಮತ್ತು ನೇಪಾಳದಲ್ಲಿನ ರಾಜಕೀಯ ಅಸ್ಥಿರತೆಗಳು ಹಳೆಯದನ್ನು ಕೆಡವಿ ಹೊಸದನ್ನು ಕಟ್ಟುವ ಭರವಸೆ ಮೂಡಿಸಿದ್ದವು. ಆದರೆ, ಗದ್ದುಗೆಯ ಮುಕುಟಗಳು ಪ್ರತ್ಯಕ್ಷವಾಗುತ್ತಿರುವುದು ಅಥವಾ ಬಂಡಾಯದ ಹಾದಿ ಮತ್ತೆ ಅರಾಜಕತೆಗೆ ತಿರುಗುತ್ತಿರುವುದು ಇತಿಹಾಸದ ವ್ಯಂಗ್ಯವೇ ಸರಿ.

ಇನ್ನಷ್ಟು ವಿಶೇಷ ಲೇಖನಗಳಿಗಾಗಿ, ಇಲ್ಲಿ ಕ್ಲಿಕ್ ಮಾಡಿ →

ಈ ದಿನ ಕವಿತೆ | ನನ್ನವ್ವನ ನೋಟ್ ಪುಸ್ತಕ...

ವಾರಕ್ಕೊಂದು ಅನುವಾದಿತ ಕವಿತೆ ಮಾಲಿಕೆಯಲ್ಲಿ ಈ ಬಾರಿ ಗುಜರಾತಿನ ಕವಿ, ಕಲಾವಿದರಾದ ಜಯಂತ್ ಪರ್ಮಾರ್ ಅವರ ಒಂದು ಉರ್ದು ಕವನದ ಇಂಗ್ಲಿಷ್ ಅನುವಾದವನ್ನು ಕನ್ನಡಕ್ಕೆ ತಂದಿದ್ದಾರೆ ಹಿರಿಯ ಅನುವಾದಕಿ ಸಿ ಎಚ್‌ ಭಾಗ್ಯ ಬೇವಿನ...

ಕಬ್ಬಿಗೆ ರೂ.5,500 ಬೆಂಬಲ ಬೆಲೆ ಆಗ್ರಹ: ಬಿರುಬಿಸಿಲಿಗೆ ಜಗ್ಗದೇ...

ಸೆಪ್ಟೆಂಬರ್ 29 ರಂದು ಹುಬ್ಬಳ್ಳಿಯಲ್ಲಿ ಲಕ್ಷಾಂತರ ರೈತರು ಪ್ರತಿಭಟನೆ ನಡೆಸಿದ್ದರು. ನಂತರ ಬಿಜೆಪಿ ಪಕ್ಷದ ಶಾಸಕರು ಮನವೊಲಿಸಿ ದೆಹಲಿಯಲ್ಲಿ ಸಭೆ ಮಾಡುವುದಾಗಿ ತಿಳಿಸಿದ್ದರು. ಆದರೆ ದೆಹಲಿಯಲ್ಲಿ ರೈತ ಮುಖಂಡರು ಮತ್ತು ಕೇಂದ್ರ ಸಚಿವರ...

ʼಜೆನ್‌ ಝಿʼ ಎಂಬ ಸಮತಾ ನಿಲುವು

ಸುಪ್ರಿಂಕೋರ್ಟಿನ ಮುಖ್ಯಸ್ಥರು ಇದೀಗ ಮತ್ತೊಂದು ಹೇಳಿಕೆಯ ಮೂಲಕ ಜಗತ್ತಿನಾದ್ಯಂತ ಸುದ್ದಿಯಲ್ಲಿದ್ದಾರೆ. ವಿದ್ಯಾರ್ಥಿ ಯುವಜನರ ಕುರಿತು ‘ಸೊಳ್ಳೆಗಳನ್ನು ಹೊಡೆಯಲು ಸುತ್ತಿಗೆಗಳು ಬೇಕಿಲ್ಲ’ ಎಂಬ ಹೇಳಿಕೆಯನ್ನು ನೀಡಿದ್ದಾರೆ. ಪ್ರಜಾಪ್ರಭುತ್ವ ದೇಶದ ಕಾನೂನು ಕಾಯುವ ಅತ್ಯುನ್ನತ ಹೊಣೆ...

ಈಗ ಜಗತ್ತಿನ ಕಣ್ಣು ಮಧ್ಯಪ್ರಾಚ್ಯದ ಪ್ರಬಲ ರಾಷ್ಟ್ರ ಇರಾನ್ ಮೇಲಿದೆ. 1979ರ ಇಸ್ಲಾಮಿಕ್ ಕ್ರಾಂತಿಯ ಮೂಲಕ ಷಾ ಆಳ್ವಿಕೆಯನ್ನು ಕೊನೆಗಾಣಿಸಿ ಧಾರ್ಮಿಕ ನಾಯಕತ್ವದ ಅಡಿಯಲ್ಲಿ ಗಟ್ಟಿಯಾಗಿ ನೆಲೆಯೂರಿದ್ದ ಇರಾನ್‌, ಇಂದು ಆಂತರಿಕ ಅಶಾಂತಿ ಮತ್ತು ಬಾಹ್ಯ ಒತ್ತಡಗಳೆರಡರ ನಡುವೆ ಸಿಲುಕಿದೆ. ಈ ಬಿಕ್ಕಟ್ಟಿನ ಸಮಯದಲ್ಲಿ ಮುನ್ನಲೆಗೆ ಬರುತ್ತಿರುವ ಹೆಸರು ರೆಝಾ ಪಹಲವಿ.

ಯಾರಿವರು ರೆಝಾ ಪಹಲವಿ?

ರೆಝಾ ಪಹಲವಿ ಅವರು ಇರಾನ್‌ನ ಕೊನೆಯ ದೊರೆ (ಷಾ) ಮೊಹಮ್ಮದ್ ರೆಝಾ ಪಹಲವಿ ಅವರ ಹಿರಿಯ ಪುತ್ರ. 1979ರಲ್ಲಿ ಇರಾನ್‌ನಲ್ಲಿ ಆಯತೊಲ್ಲಾ ಖಮೇನಿ ನೃತೃತ್ವದಲ್ಲಿ ಇಸ್ಲಾಮಿಕ್‌ ಕ್ರಾಂತಿ ನಡೆದಾಗ, ಪಹಲವಿ, ಕಳೆದ ನಾಲ್ಕು ದಖಸಗಳಿಂದ ಅಮೆರಿಕದಲ್ಲಿ ವಾಸವಾಗಿದ್ದಾರೆ. ಇವರು ತಮ್ಮನ್ನು ತಾವೇ ಇರಾನ್‌ನ ಪರೋಕ್ಷ ಉತ್ತರಾಧಿಕಾರಿ ಎಂದು ಬಿಂಬಿಸಿಕೊಳ್ಳುತ್ತಾರೆ. ಪ್ರಸ್ತುತ ಇರಾನ್‌ನಲ್ಲಿ ಹಿಜಾಬ್ ವಿರೋಧಿ ಹೋರಾಟಗಳು, ಆರ್ಥಿಕ ಕುಸಿತ ಮತ್ತು ನಾಗರಿಕ ಸ್ವಾತಂತ್ರ್ಯದ ಮೇಲಿನ ನಿರ್ಬಂಧಗಳಿಂದಾಗಿ ಜನಸಾಮಾನ್ಯರಲ್ಲಿ ಆಕ್ರೋಶ ಮಡುಗಟ್ಟಿದೆ. ಈ ಆಕ್ರೋಶವನ್ನೇ ಬಂಡವಾಳವಾಗಿಸಿಕೊಂಡು, ಪ್ರಸ್ತುತ ಇಸ್ಲಾಮಿಕ್ ಗಣರಾಜ್ಯವನ್ನು ಉರುಳಿಸಿ ಮತ್ತೆ ಜಾತ್ಯತೀತ ಮತ್ತು ಪ್ರಜಾಪ್ರಭುತ್ವವಾದಿ ಇರಾನ್ ಅನ್ನು ಕಟ್ಟುವ ಕರೆಯನ್ನು ರೆಝಾ ನೀಡುತ್ತಿದ್ದಾರೆ.

Iran pehalavi 2

ವಾಪಸಾತಿಗೆ ಏಕೆ ಕಾತರಿಸುತ್ತಿದ್ದಾರೆ?

ರೆಝಾ ಪಹಲವಿ ಅವರ ಇರಾನ್ ವಾಪಸಾತಿಯ ಕನಸಿನ ಹಿಂದೆ ಹಲವು ಕಾರಣಗಳಿವೆ. ಮೊದಲನೆಯದಾಗಿ ರಾಜಕೀಯ ಶೂನ್ಯತೆ; ಇರಾನ್‌ನ ಯುವಪೀಳಿಗೆಗೆ ಪ್ರಸ್ತುತ ಧಾರ್ಮಿಕ ಮುಖಂಡರ ಆಳ್ವಿಕೆಯ ಬಗ್ಗೆ ತೀವ್ರ ಅಸಮಾಧಾನವಿದೆ. ಈ ಅಸಮಾಧಾನವನ್ನು ತುಂಬಲು ಸಮರ್ಥ ವಿರೋಧ ಪಕ್ಷದ ನಾಯಕರಿಲ್ಲ. ಈ ಶೂನ್ಯವನ್ನು ತುಂಬಲು ಪಹಲವಿ ಬಯಸುತ್ತಿದ್ದಾರೆ. ಎರಡನೆಯದಾಗಿ ಪಶ್ಚಿಮದ ಬೆಂಬಲ; ಅಮೆರಿಕ ಮತ್ತು ಯೂರೋಪಿಯನ್‌ ರಾಷ್ಟ್ರಗಳಿಗೆ ಇರಾನ್‌ನ ಹಾಲಿ ಸರ್ಕಾರವು ಒಂದು ದೊಡ್ಡ ತಲೆ ನೋವಾಗಿದೆ. ಹೀಗಾಗಿ, ಆಡಳಿತ ಬದಲಾವಣೆಯಾದರೆ ತಮಗೆ ಅನುಕೂಲವಾಗುವ ವ್ಯಕ್ತಿಯನ್ನು ಕೂರಿಸಲು ಅವರು ಕಾಯುತ್ತಿದ್ದಾರೆ. ಈ ಲೆಕ್ಕಾಚಾರದಲ್ಲಿ ಪಹಲವಿ ಪ್ರಮುಖ ದಾಳವಾಗಿದ್ದಾರೆ.

ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಟ್ರಂಪ್ ವಿರುದ್ಧ ಇನ್ನಾದರೂ ಎದೆ ಸೆಟೆಸುವರೇ ಮೋದಿ?

ಯೂರೋಪಿಯನ್ ‘ಕೈಗೊಂಬೆ ಸರ್ಕಾರ’ದ ಆತಂಕವೇಕೆ?

ಇಲ್ಲಿಯೇ ಇತಿಹಾಸದ ಅತಿ ದೊಡ್ಡ ವ್ಯಂಗ್ಯ ಅಡಗಿರುವುದು. 1979ರಲ್ಲಿ ಇರಾನ್‌ ಜನರು ಷಾ ಮೊಹಮ್ಮದ್ ರೆಝಾ ಪಹಲವಿ ಅವರನ್ನು ಪದಚ್ಯುತಗೊಳಿಸಲು ಪ್ರಮುಖ ಕಾರಣವೇ ಅವರು ‘ಅಮೆರಿಕ ಮತ್ತು ಬ್ರಿಟನ್‌ನ ಕೈಗೊಂಬೆ’ಯಂತೆ ವರ್ತಿಸುತ್ತಿದ್ದರು ಎಂಬುದು. ಇರಾನ್‌ನ ತೈಲ ಸಂಪತ್ತನ್ನು ಪಾಶ್ಚಿಮಾತ್ಯರಿಗೆ ಧಾರೆ ಎರೆದರು ಮತ್ತು ದೇಶದ ಸಂಸ್ಕೃತಿಯನ್ನು ಕಡೆಗಣಿಸಿದರು ಎಂಬ ಸಿಟ್ಟು ಅಂದು ಕ್ರಾಂತಿಗೆ ಕಿಚ್ಚು ಹಚ್ಚಿತ್ತು. ಇದೀಗ 45 ವರ್ಷಗಳ ನಂತರ, ಅದೇ ಪಾಶ್ಚಿಮಾತ್ಯ ಶಕ್ತಿಗಳ ಬೆಂಬಲದೊಂದಿಗೆ, ಅದೇ ಪಹಲವಿ ಕುಟುಂಬದ ಕುಡಿ ಮತ್ತೆ ಇರಾನ್‌ನ ಚುಕ್ಕಾಣಿ ಹಿಡಿಯಲು ಮುಂದಾಗುತ್ತಿರುವುದು ಚಕ್ರವು ಸಂಪೂರ್ಣವಾಗಿ ಹಿಂದಕ್ಕೆ ತಿರುಗಿದಂತಿದೆ. ಒಂದು ವೇಳೆ ರೆಝಾ ಪಹಲವಿ ಇರಾನ್‌ಗೆ ಮರಳಿ ಅಧಿಕಾರ ಹಿಡಿದರೆ, ಅದು ಸ್ವತಂತ್ರ ಸರ್ಕಾರದ ಬದಲಿಗೆ, ಪಶ್ಚಿಮದ ಹಿತಾಸಕ್ತಿಗಳನ್ನು ಕಾಪಾಡುವ ಮತ್ತೊಂದು ‘ಕೈಗೊಂಬೆ ಸರ್ಕಾರ’ವಾಗುವ ಸಾಧ್ಯತೆಯೇ ಹೆಚ್ಚು.

Iran protest 1

ಬಾಂಗ್ಲಾದೇಶದಲ್ಲಿ ಹಸೀನಾ ಅವರನ್ನು ಓಡಿಸಿದ ನಂತರ ಅಲ್ಲಿ ನಿರ್ಮಾಣವಾಗಿರುವ ಅಸ್ಥಿರತೆ ಮತ್ತು ವಿದೇಶಿ ಶಕ್ತಿಗಳ ಹಸ್ತಕ್ಷೇಪದ ಆರೋಪಗಳು ಇರಾನ್‌ ವಿಷಯದಲ್ಲೂ ಎಚ್ಚರಿಕೆಯ ಗಂಟೆಯಾಗಿವೆ. ಒಂದು ದಬ್ಬಾಳಿಕೆಯನ್ನು  ಕಿತ್ತೊಗೆಯಲು ಹೋಗಿ, ವಿದೇಶಿ ನಿಯಂತ್ರಿತ ಮತ್ತೊಂದು ದಬ್ಬಾಳಿಕೆಯನ್ನು ತಂದುಕೊಳ್ಳುವ ಅಪಾಯದ ಅಂಚಿನಲ್ಲಿ ಇರಾನ್‌ ನಿಂತಿದೆಯೇ ಎಂಬ ಪ್ರಶ್ನೆ ಎದ್ದಿದೆ.

ಮುಂದೇನು?

ಇರಾನ್‌ನ ಜನತೆ ಬದಲಾವಣೆ ಬಯಸುತ್ತಿದ್ದಾರೆ ಎಂಬುದು ಸತ್ಯ. ಆದರೆ ಆ ಬದಲಾವಣೆಯು ಸ್ವದೇಶಿ ನೆಲದ ನಾಯಕತ್ವದಿಂದ ಬರಬೇಕೇ ಹೊರತು, ವಿದೇಶಿ ನೆಲದಲ್ಲಿ ಕುಳಿತು ಯೋಜನೆ ರೂಪಿಸುವವರಿಂದಲ್ಲ ಎಂಬುದು ಇರಾನ್‌ನ ಒಂದು ವರ್ಗದ ವಾದ. ರೆಝಾ ಪಹಲವಿ ಅವರು ತಮ್ಮನ್ನು ಪ್ರಜಾಪ್ರಭುತ್ವದ ಹರಿಕಾರ ಎಂದುಕೊಂಡರೂ, ಅವರ ಕೌಟುಂಬಿಕ ಇತಿಹಾಸ ಮತ್ತು ಪ್ರಸ್ತುತ ಅವರ ಹಿಂದಿರುವ ವಿದೇಶಿ ಲಾಬಿಗಳು ಇರಾನ್‌ನ ಸಾರ್ವಭೌಮತ್ವಕ್ಕೆ ಧಕ್ಕೆ ತರಬಲ್ಲವು. ದಕ್ಷಿಣ ಏಷ್ಯಾದ ನೆರೆಹೊರೆಯ ದೇಶಗಳಲ್ಲಿ ಕಂಡಂತೆ, ‘ಬಂಡಾಯ’ ಸುಲಭ, ಆದರೆ ನಂತರದ ದೇಶ ನಿರ್ಮಾಣ ಕಷ್ಟ. ಇರಾನ್‌ ಜನರು ಈ ಐತಿಹಾಸಿಕ ಅಡ್ಡಗೋಡೆಯ ಮೇಲೆ ನಿಂತು, ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳುತ್ತಾರೆಯೇ ಅಥವಾ ಇತಿಹಾಸದ ಹಳೆಯ ಪುಟವನ್ನೇ ಮತ್ತೆ ತೆರೆಯುತ್ತಾರೆಯೇ ಕಾದು ನೋಡಬೇಕಿದೆ.

blank profile picture 973460 640
+ posts

ಪೋಸ್ಟ್ ಹಂಚಿಕೊಳ್ಳಿ:

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ನುಡಿ ನಮನ | ಚೆರುವಯಲ್ ರಾಮನ್ – ಭತ್ತದ ದೇಸೀ ತಳಿಗಳನ್ನು ಉಳಿಸಲು ಬದುಕನ್ನೇ ಮುಡಿಪಿಟ್ಟ ‘ಬೀಜಗಳ ಕಾವಲುಗಾರ’!

ಕೃಷಿ ಎಂದರೆ ಕೇವಲ ಬೆಳೆ ಬೆಳೆಯುವುದಲ್ಲ; ಬಿತ್ತನೆಗೆ ಸೂಕ್ತವಾದ ಬೀಜಗಳನ್ನು ಆಯ್ಕೆ...

ಬರಗಾಲದ ದಸರಾದಲ್ಲಿ ಕಂಬಳದ ಹಠ: ಜನಾಭಿಪ್ರಾಯಕ್ಕೆ ಬೆಲೆಯಿಲ್ಲವೇ?

ನೀರಿನ ಅಭಾವ, ಪರಿಸರ ನಾಶ, ಸಾರ್ವಜನಿಕ ಹಣದ ವೆಚ್ಚದ ನಡುವೆ ಸರ್ಕಾರದ...

ಸಂವಿಧಾನವೆಂಬ ನಮ್ಮೆಲ್ಲರ ಆಸ್ತಿಗಾಗಿ ಸತ್ಯಾಗ್ರಹ

ಇವತ್ತು ಬೀದಿಗೆ ಇಳಿದಿರೋ ಜನ ಸಾಮಾನ್ಯರಲ್ಲ. ಬದುಕಿನ ಹಕ್ಕನ್ನು ಈ ದೇಶದ...

ಸಿಲಿಕಾನ್ ಸಿಟಿಗಳಲ್ಲಿ ಹಸಿದ ಹಲವು ಬದುಕುಗಳ ಕಥೆ–ವ್ಯಥೆ

ಸಮಾಜದ ಕಟ್ಟಕಡೆಯ ವ್ಯಕ್ತಿಯ ನೋವು ನಮ್ಮನ್ನು ತಟ್ಟದಿದ್ದರೆ, ನಮ್ಮ ಪ್ರಗತಿಯ ಬಗ್ಗೆ...