ಕೋಲಾರ | ಪತ್ರಕರ್ತರ ಕ್ಷೇಮಾಭಿವೃದ್ಧಿ ನಿಧಿಗೆ ತಲಾ 10 ಲಕ್ಷ ನೀಡಲು ಚಿಂತನೆ : ಕೆ.ವಿ.ಪ್ರಭಾಕರ್

Date:

Advertisements

ರಾಜ್ಯ ಸರ್ಕಾರದ ಮುಂದಿನ ಬಜೆಟ್‌ನಲ್ಲಿ ಎಲ್ಲಾ ಜಿಲ್ಲೆಗಳ ಕಾರ್ಯನಿರತ ಪತ್ರಕರ್ತರ ಸಂಘಗಳ ಕ್ಷೇಮಾಭಿವೃದ್ದಿ ನಿಧಿಗೆ ತಲಾ 10 ಲಕ್ಷ ರೂ. ನೀಡಲು ಕ್ರಮವಹಿಸುವುದಾಗಿ ಮುಖ್ಯಮಂತ್ರಿಗಳ ಮಾಧ್ಯಮ ಕಾರ್ಯದರ್ಶಿ ಕೆ.ವಿ.ಪ್ರಭಾಕರ್ ಭರವಸೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ತುಮಕೂರಿನಲ್ಲಿ ನಡೆದ ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟದಲ್ಲಿ ಗೆಲುವು ಸಾಧಿಸಿ ಜಿಲ್ಲೆಯ ಘನತೆ ಹೆಚ್ಚಿಸಿದ ಪತ್ರಕರ್ತರನ್ನು ಅಭಿನಂದಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಕಬ್ಬಡ್ಡಿಯಲ್ಲಿ ಚಾಂಫಿಯನ್ ಆಗಿ ಹೊರಹೊಮ್ಮಿದ ಜಿಲ್ಲಾ ತಂಡಕ್ಕೆ ವೈಯಕ್ತಿಕವಾಗಿ ಇಪ್ಪತ್ತೈದು ಸಾವಿರ ರೂ. ಬಹುಮಾನ ಘೋಷಿಸಿ ಅವರು ಮಾತನಾಡಿದರು.

kabaddi sports

ರಾಜ್ಯದಲ್ಲೇ ಕೋಲಾರ ಜಿಲ್ಲಾ ಸಂಘವು ಮಾದರಿಯಾಗಿದೆ. ಪ್ರತಿಯೊಂದು ಚಟುವಟಿಕೆಗಳನ್ನು ಸಂಘವು ಯಶಸ್ವಿಯಾಗಿ ಮಾಡಿಕೊಂಡು ಬಂದಿದೆ. ಯಾವುದೇ ಕ್ರೀಡಾಕೂಟದಲ್ಲಿ ಭಾಗವಹಿಸಿದಾಗ ಇಡೀ ಜಿಲ್ಲೆಯ ಪತ್ರಕರ್ತರ ತಂಡವೇ ಭಾಗವಹಿಸಿದೆ ಎನ್ನುವ ದೃಢ ವಿಶ್ವಾಸದೊಂದಿಗೆ ಗೆಲುವು ಸಾಧಿಸಿಕೊಂಡು ಬಂದಿದ್ದೀರಿ ಎಂದು ಅಭಿನಂದಿಸಿದರು.

Advertisements

ರಾಜ್ಯಮಟ್ಟದ ಪತ್ರಕರ್ತರ ಕ್ರೀಡಾಕೂಟ ಎಲ್ಲೇ ನಡೆಯಲಿ ಕಪ್ ಮಾತ್ರ ಕೋಲಾರದ ಪತ್ರಕರ್ತರ ಸಂಘಕ್ಕೆ ಬರಬೇಕು ಎಂಬ ಬ್ರ‍್ಯಾಂಡ್ ಹೆಚ್ಚಬೇಕು. ಕೋಲಾರದವರು ಭಾಗವಹಿಸಿದ್ದಾರೆ ಎಂದರೆ ಅಲ್ಲಿ ಗೆಲುವು ನಮ್ಮದಾಗಿರಬೇಕು ಎಂಬ ಸ್ಪೂರ್ತಿ ಎಲ್ಲರಿಗೂ ಮಾದರಿ ಎಂದು ತಿಳಿಸಿದರು.

ಇದನ್ನೂ ಓದಿ : ಚಿಕ್ಕಬಳ್ಳಾಪುರ | ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪುನರ್ವಸತಿ ಕಾರ್ಯಕರ್ತರ ಪ್ರತಿಭಟನೆ

ಇಂದಿನ ಕಾಲಘಟ್ಟದಲ್ಲಿ ವರದಿಗಾರಿಕೆ ವಿಧಾನ ಬದಲಾಗಿದೆ. ತಾಂತ್ರಿಕತೆ, ನೈಪುಣ್ಯತೆ ಇಂದಿನ ಅಗತ್ಯವಾಗಿದೆ. ನೀವು ಸಾಧನೆ ಮಾಡಿದಾಗ ತಾನಾಗಿಯೇ ಗೌರವ, ಅವಕಾಶಗಳು ಹುಡುಕಿಕೊಂಡು ಬರುತ್ತವೆ. ರಾಜ್ಯಮಟ್ಟದ ಪತ್ರಿಕಾರಂಗದಲ್ಲಿ ಸದಾ ಕೋಲಾರದ ಧ್ವನಿ ಹೆಚ್ಚಿನದಾಗಿ ಕೇಳಿ ಬರುತ್ತಲೇ ಇದೆ. ಇದು ಕ್ರೀಡಾಕೂಟಗಳಲ್ಲೂ ಆಗಿದೆ. ಈ ಬೆಳೆವಣಿಗೆ ಆಶಾದಾಯಕವಾಗಿದ್ದು, ನಿಮ್ಮ ಸಾಧನೆ ಮುಂದುವರೆಸಿ ಎಂದು ಶುಭ ಹಾರೈಸಿದರು.

ಪತ್ರಕರ್ತರ ಕ್ರೀಡಾಕೂಟ

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಿ.ವಿ.ಗೋಪಿನಾಥ್ ಮಾತನಾಡಿ, ಕೋಲಾರ ಪತ್ರಕರ್ತರ ಸಂಘಕ್ಕೆ ತನ್ನದೇ ಆದ ಬ್ರ‍್ಯಾಂಡ್ ಇದೆ. ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ಇರುತ್ತದೆ. ಸೋತಾಗಲೂ ಬೆನ್ನು ತಟ್ಟುವ ಮೂಲಕ ಸಂಘವು ಹುರಿದುಂಬಿಸುತ್ತದೆ ಎಂದು ಹೇಳಿದರು.

ಕೋಲಾರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘವು ಆರ್ಥಿಕವಾಗಿ ತನ್ನ ಕಾಲ ಮೇಲೆ ನಿಂತಿದೆ. ಇದು ಸಂಘದ ಒಗ್ಗಟ್ಟಿನಿಂದ ಸಾಧ್ಯವಾಗಿದೆ. ಅತ್ಯಂತ ಯಶಸ್ವಿ ಮತ್ತು ಕ್ರೀಯಾಶೀಲ ಚಟುವಟಿಕೆಗಳ ಮೂಲಕ ಸಂಘವನ್ನು ಕಟ್ಟಿ ಇದನ್ನು ಸಾಬೀತು ಮಾಡಿದ್ದೇವೆ ಎಂದು ತಿಳಿಸಿದರು.

ಕೆ.ವಿ.ಪ್ರಭಾಕರ್ ಅವರಿಗೆ ಪತ್ರಕರ್ತರ ಬಗ್ಗೆ ಕಾಳಜಿ ಇದೆ. ಯಾವುದೇ ಅಪವಾದ ಇಲ್ಲದೇ ನಡೆದುಕೊಂಡು ಬಂದಿದ್ದಾರೆ. ಈಗಾಗಲೇ 25 ಲಕ್ಷ ರೂ ಕೋಲಾರ ಪತ್ರಕರ್ತರ ಸಂಘಕ್ಕೆ ಕಲ್ಯಾಣ ನಿಧಿಗೆ ಕೊಡಿಸಿದ್ದಾರೆ. ಕೋಲಾರ ಬಗ್ಗೆ ಕಾಳಜಿ ಇಟ್ಟುಕೊಂಡು ಕೆಲಸ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಕೋಲಾರದ ಪತ್ರಕರ್ತರ ಬರಹ ಮತ್ತು ಕ್ರೀತಯಾಶೀಲತೆಯಲ್ಲಿ ಗುಣಮಟ್ಟ ಅಗತ್ಯವಿದೆ. ಯಾವುದೇ ಉತ್ತಮ ಅವಕಾಶ ಬಂದರೆ ಬಳಸಿಕೊಳ್ಳಿ. ಸದಸ್ಯರು ಸಂಘದ ಘನತೆ ಹೆಚ್ಚಿಸಿ ಎಂದು ಆಶಿಸಿದರು.

ಸಂಘದ ರಾಜ್ಯ ಕಾರ್ಯಕಾರಿಣಿ ಸದಸ್ಯ ಕೆ.ಎಸ್.ಗಣೇಶ್ ಮಾತನಾಡಿ, ಕೋಲಾರಕ್ಕೆ ಕ್ರೀಡೆಗಳಲ್ಲಿ ಗೆಲುವು ಕಟ್ಟಿಟ್ಟ ಬುತ್ತಿ. ಅದು ಹಿಂದಿನಿಂದಲೂ ಬಂದಿದೆ. ಉತ್ತಮ ಕ್ರೀಡಾಪಟುಗಳು ನಮ್ಮಲ್ಲಿದ್ದಾರೆ. ಆತ್ಮಸ್ಥೈರ್ಯದಿಂದ ಗೆದ್ದು ಬರಬೇಕು ಎಂದರು.

ನಮ್ಮ ಜಿಲ್ಲೆಯಲ್ಲಿನ ಕ್ರೀಡಾಕೂಟಗಳೇ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಗೆಲ್ಲಲು ಸಾಧ್ಯ. ಮುಂದೆ ಪ್ರತಿ ವರ್ಷ ಕ್ರೀಡಾಕೂಟ ಮಾಡೋಣ ಎಂದು ತಿಳಿಸಿ, ಸಾಧನೆ ಮಾಡಿದ ಪತ್ರಕರ್ತ ಕ್ರೀಡಾಪಟುಗಳನ್ನು ಅಭಿನಂದಿಸಿದರು.

ಪ್ರಧಾನ ಕಾರ್ಯದರ್ಶಿ ಎಸ್.ಕೆ.ಚಂದ್ರಶೇಖರ್ ಮಾತನಾಡಿ, ಕೋಲಾರದವರು ಕ್ರೀಡಾಕೂಟದ ಹೆಸರಲ್ಲಿ ಮೈದಾನಕ್ಕೆ ಇಳಿದರೆ ಬರಿಗೈಯಲ್ಲಿ ಬರಲ್ಲ ಎಂಬುದು ಉದಾಹರಣೆ ಸಹಿತ ನಮ್ಮ ಕಣ್ಣ ಮುಂದಿದೆ. ಸತತವಾಗಿ ಒಗ್ಗಟ್ಟಿನಿಂದ ಆತ್ಮಸೈರ್ಯದಿಂದ ಅಲ್ಲಿಗೆ ಹೋಗಿ ಗೆದ್ದುಕೊಂಡ ಬಂದಿದ್ದೇವೆ. ಪ್ರತಿಭೆಗೆ ಕೊರತೆಯಿಲ್ಲ, ಪ್ರತಿ ಕ್ರೀಡಾಕೂಟದಲ್ಲಿ ಭಾಗವಹಿಸೋಣ ಸೋಲು ಗೆಲುವು ಸಹಜ ಎಂದರು.

ಪತ್ರಕರ್ತರ ಸಂಘದ ಜಿಲ್ಲಾ ಖಜಾಂಚಿ ಎ.ಜಿ.ಸುರೇಶ್‌ಕುಮಾರ್ ಮಾತನಾಡಿ, ಜಿಲ್ಲಾ ಕಾರ್ಯಾನಿರತ ಪತ್ರಕರ್ತ ಸಂಘದಿಂದ ಭಾಗವಹಿಸಿದ ರಾಜ್ಯದ ಯಾವುದೇ ಕ್ರೀಡಾಕೂಟದಲ್ಲಿ ನಾವು ಬರಿಗೈನಲ್ಲಿ ಬಂದ ಉದಾಹರಣೆ ಇಲ್ಲ. ರಾಜ್ಯ ಮಟ್ಟದ ಕ್ರೀಡಾಕೂಟದಲ್ಲೂ ಗೆದ್ದಿದ್ದೇವೆ. ಎಲ್ಲೇ ಹೋದರೂ ಗುರುತು ನಮ್ಮದಿದೆ ಎಂದರು.

ಇದನ್ನೂ ಓದಿ : ಈ ದಿನ ಸಂಪಾದಕೀಯ | ಉಪಸಮರದ ಗೆಲುವು– ಈಗಲಾದರೂ ಎಚ್ಚೆತ್ತುಕೊಳ್ಳುತ್ತಾ ಕಾಂಗ್ರೆಸ್‌ ಸರ್ಕಾರ?

ಹಿರಿಯ ಪತ್ರಕರ್ತರಾದ ರಾಜೇಂದ್ರ ಸಿಂಹ, ಮಾಮಿ ಪ್ರಕಾಶ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಎಸ್.ರವಿಕುಮಾರ್, ಮದನ್ ಕುಮಾರ್, ಕಿರಣ್ ಕುಮಾರ್, ನಾಗರಾಜ್ , ಮಂಜುನಾಥ್, ಸಿ.ಅಮರೇಶ್, ಗಂಗರಾಜು, ಗಂಗಾಧರ್, ಪುರುಷೋತ್ತಮ, ಶ್ರೀಕಾಂತ್, ವಿನೋದ್, ಸತೀಶ್, ವಿಜಯಕುಮಾರ್, ಸಮೀರ್, ಮಾಮಿ ಪ್ರಕಾಶ್, ಗೋಪಿ, ಶ್ರೀನಿವಾಸ್ ಮತ್ತಿತರರಿದ್ದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

ಬೀದರ್‌ | ಬೆಳೆ ಹಾನಿ : ಹೆಕ್ಟೇರ್‌ಗೆ ₹50 ಸಾವಿರ ಪರಿಹಾರಕ್ಕೆ ಶಾಸಕ ಶೈಲೇಂದ್ರ ಬೆಲ್ದಾಳೆ ಒತ್ತಾಯ

ಬೀದರ್ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ವ್ಯಾಪಕ ಬೆಳೆ ಹಾನಿ, ಸಾರ್ವಜನಿಕ ಆಸ್ತಿಪಾಸ್ತಿ ನಷ್ಟವಾಗಿದೆ....

Download Eedina App Android / iOS

X