ಇತ್ತೀಚೆಗೆ ನಡೆದ ಮಹಾ ಕುಂಭಮೇಳಕ್ಕೆ ಪ್ರವಾಸ ಕರೆದುಕೊಂಡು ಹೋಗುವ ಪ್ಯಾಕೇಜ್ ಹೆಸರಿನಲ್ಲಿ ಸಾರ್ವಜನಿಕರಿಗೆ ಬರೋಬ್ಬರಿ ₹70 ವಂಚಿಸಿದ್ದ ಆರೋಪಿಯನ್ನು ಕಡೆಗೂ ಬೆಂಗಳೂರಿನ ಗೋವಿಂದರಾಜ ನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಾಘವೇಂದ್ರ ರಾವ್ ಬಂಧಿತ ಆರೋಪಿ.
ಟೂರ್ಸ್ ಅಂಡ್ ಟ್ರಾವೆಲ್ಸ್ ಒಂದರ ಪ್ರತಿನಿಧಿಯ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ, ವಾಟ್ಸಾಪ್ ಗ್ರೂಪ್‌ಗಳಲ್ಲಿ ನಕಲಿ ಜಾಹಿರಾತು ನೀಡಿ ಜನರನ್ನು ಮರಳು ಮಾಡುತ್ತಿದ್ದ ರಾಘವೇಂದ್ರನಿಂದ ನೂರಾರು ಜನ ಅಮಾಯಕರು ಲಕ್ಷಾಂತರ ಹಣ ಕಳೆದುಕೊಂಡಿದ್ದಾರೆ.
ಕುಂಭಮೇಳದ 7 ದಿನಗಳ ಪ್ರವಾಸಕ್ಕೆಂದು ಒಬ್ಬೊಬ್ಬರಿಂದ ₹49 ಸಾವಿರ ಸಂಗ್ರಹಿಸುತ್ತಿದ್ದ. ಇದೇ ರೀತಿ ನೂರಕ್ಕೂ ಹೆಚ್ಚು ಜನರಿಂದ ಹಣ ವಸೂಲಿ ಮಾಡುತ್ತಿದ್ದ ಆರೋಪಿಯು ಕೆಲವರಿಗೆ ಟಿಕೆಟ್ ಬುಕ್ ಮಾಡಿ ನಂತರ ರದ್ದು ಮಾಡುತ್ತಿದ್ದ. ಇನ್ನೂ ಕೆಲವರಿಗೆ ಪ್ರಯಾಗ್‌ರಾಜ್‌ಗೆ ತೆರಳಿದ ಬಳಿಕ ವಾಪಸ್ ಟಿಕೆಟ್ ಬುಕ್ ಮಾಡದೇ ಫೋನ್ ಆಫ್ ಮಾಡಿಕೊಳ್ಳುತ್ತಿದ್ದ. ಈ ರೀತಿ ವಂಚನೆಗೊಳಗಾದ 20 ಮಂದಿ ಆತನ ವಿರುದ್ಧ ದೂರು ನೀಡಿದ್ದು, ₹70 ಲಕ್ಷ ಕಳೆದುಕೊಂಡಿರುವುದಾಗಿ ಹೇಳಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಕುಂಭಮೇಳದ ವೇಳೆ ನೀರಿನ ಗುಣಮಟ್ಟ ಸ್ನಾನಕ್ಕೆ ಯೋಗ್ಯವಾಗಿತ್ತು: ಮಾಲಿನ್ಯ ನಿಯಂತ್ರಣ ಮಂಡಳಿ ವರದಿ
ಇನ್ನು ಸಾರ್ವಜನಿಕರಿಗೆ ವಂಚಿಸಿ ಸಂಗ್ರಹಿಸಿದ್ದ ಹಣವನ್ನು ಬೆಟ್ಟಿಂಗ್‌ನಲ್ಲಿ ತೊಡಗಿಸಿಕೊಂಡಿದ್ದ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ತಿಳಿಸಿದ್ದು, ತನಿಖೆ ಮುಂದುವರೆದಿದೆ ಎಂದು ಹೇಳಿದ್ದಾರೆ.
