2024ನೇ ವರ್ಷಕ್ಕೆ ರಾಜ್ಯ ಸರ್ಕಾರವು 25 ಸಾರ್ವಜನಿಕ ರಜಾದಿನಗಳ ಪಟ್ಟಿಯನ್ನು ಘೋಷಿಸಿದೆ. ಜೊತೆಗೆ ಮೂರು ಹೆಚ್ಚುವರಿ ರಜೆಗಳನ್ನೂ ನೀಡಿದೆ. ಗಮನಾರ್ಹವಾಗಿ, ಸರ್ಕಾರ ಘೋಷಿಸಿರುವ ರಜೆಗಳಲ್ಲಿ ಒಂಬತ್ತು ರಜಾದಿನಗಳು ಸೋಮವಾರ ಅಥವಾ ಶುಕ್ರವಾರದಂದು ಬರುತ್ತವೆ. ಹೀಗಾಗಿ, ಆ 2024ರಲ್ಲಿ ಒಂಬತ್ತು ಧೀರ್ಘ ವಾರಾಂತ್ಯಗಳಿದ್ದು, ಹಲವಾರು ಉದ್ಯೋಗಿಗಳಿಗೆ ರಜೆಯ ಮೋಜು ಹೆಚ್ಚಲಿದೆ.
ಮುಂದಿನ ವರ್ಷದಲ್ಲಿ ಜನವರಿ 15ರಂದು ಸಂಕ್ರಾಂತಿ, ಸೆಪ್ಟೆಂಬರ್ 16ರಂದು ಈದ್ ಮಿಲಾದ್, ನವೆಂಬರ್ 18ರಂದು ಕನಕ ಜಯಂತಿಯಂದು ರಜಾ ದಿನಗಳಾಗಿವೆ. ಈ ಮೂರೂ ದಿನಗಳ ಸೋಮವಾರವೇ ಬರಲಿವೆ.
ಇನ್ನು ಜನವರಿ 26ರಂದು ಗಣರಾಜ್ಯೋತ್ಸವ, ಮಾರ್ಚ್ 8 ರಂದು ಮಹಾ ಶಿವರಾತ್ರಿ, ಮಾರ್ಚ್ 29 ರಂದು ಗುಡ್ ಪ್ರೈಡೆ, ಮೇ 10 ರಂದು ಅಕ್ಷಯ ತೃತೀಯ, ಅಕ್ಟೋಬರ್ 11ರಂದು ಆಯುಧ ಪೂಜೆ ಮತ್ತು ನವೆಂಬರ್ 1 ರಂದು ಕನ್ನಡ ರಾಜ್ಯೋತ್ಸವ ದಿನಗಳು ಶುಕ್ರವಾರ ಆಗಿರಲಿವೆ.
ಆದರೆ, ಏಪ್ರಿಲ್ 21 ರಂದು ಮಹಾವೀರ್ ಜಯಂತಿ ಮತ್ತು ಅಕ್ಟೋಬರ್ 12 ರಂದು ವಿಜಯದಶಮಿ ಎರಡನೇ ಶನಿವಾರದಂದು ಬರುತ್ತವೆ. ಏಪ್ರಿಲ್ 14ರಂದು ಅಂಬೇಡ್ಕರ್ ಜಯಂತಿ ಭಾನುವಾರ ಇರಲಿದೆ. ಹೀಗಾಗಿ, ಬ್ಯಾಂಕ್‌ನಂತಹ ಉದ್ಯೋಗಿಗಳಿಗೆ ಮೂರು ಹಾಗೂ ಹಲವರಿಗೆ ಒಂದು ರಜೆ ತಪ್ಪಿಸಿಕೊಳ್ಳಲಿದೆ.