ಹೊಸಪೇಟೆ ನಗರದ ಅನಂತಶಯನಗುಡಿಯಲ್ಲಿ ಎರಡು ದಿನದ ಹಿಂದೆ ಖಾಸಗಿ ನಿವೇಶನದ ನೀರಿನ ಹೊಂಡಕ್ಕೆ ಬಿದ್ದು ಬಾಲಕ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರಸಭೆ ಪೌರಾಯುಕ್ತ ಚಂದ್ರಪ್ಪ ಅವರನ್ನು ಅಮಾನತುಗೊಳಿಸಬೇಕೆಂದು ಆಗ್ರಹಿಸಿ ಬಾಲಕನ ಕುಟುಂಬಸ್ಥರು, ನಗರಸಭೆ ಸದಸ್ಯರು, ವಿವಿಧ ಸಂಘಟನೆಗಳು ಧರಣಿ ನಡೆಸಿದರು.
ನಗರಸಭೆ ಕಚೇರಿ ಮುಂಭಾಗ ಪ್ರತಿಭಟಿಸಿ ಬಾಲಕನ ಸಾವಿಗೆ ನಗರಸಭೆ ಪೌರಾಯುಕ್ತರ ನಿರ್ಲಕ್ಷ್ಯದಿಂದ ಬಾಲಕ ಜೀವ ಹೋಗಿದೆ. ನೀರಿನ ಹೊಂಡ ಇರುವ ಬಗ್ಗೆ 15 ದಿನಗಳ ಮುಂಚೆಯೇ ಪೌರಾಯುಕ್ತರ ಗಮನಕ್ಕೆ ತರಲಾಗಿತ್ತು. ಗುಂಡಿ ಮುಚ್ಚಲು ತಿಳಿಸಿದರೂ ಕ್ಯಾರೇ ಎನ್ನಲಿಲ್ಲʼ ಎಂದು ಕಿಡಿಕಾರಿದರು.
ಕಳೆದ ಶುಕ್ರವಾರ ಮಧ್ಯಾಹ್ನ ಬಾಲಕ ವಿರಾಟ್ ಆಟವಾಡಲು ಮನೆಯಿಂದ ಹೊರ ಹೋದ ಬಳಿಕ ಮನೆಗೆ ವಾಪಸ್ ಬರಲಿಲ್ಲ. ಗಾಬರಿಗೊಂಡ ಪೋಷಕರು ಎಲ್ಲ ಕಡೆ ಹುಡುಕಾಡಿದರು ಸುಳಿವು ಸಿಗಲಿಲ್ಲ. ಬಳಿಕ ಬಾಲಕ ನೀರಿನ ಗುಂಡಿಯಲ್ಲಿ ಬಿದ್ದು ಮೃತಪಟ್ಟಿರುವುದು ದೃಢವಾಗಿತ್ತು.
