ಒಂದೇ ಕುಟುಂಬದ ನಾಲ್ವರನ್ನು ಜೀವಂತವಾಗಿ ಸುಟ್ಟು, ಹತ್ಯೆಗೈದಿದ್ದ ಅಪರಾಧಿಗೆ ಕಲಬುರಗಿ 1ನೇ ಅಪಾರ ಮತ್ತು ಜಿಲ್ಲಾ ಸತ್ರ ನ್ಯಾಯಲಯ ಜೀವಾವಧಿ ಶಿಕ್ಷೆ ಮತ್ತು 4 ಲಕ್ಷ ದಂಡ ವಿಧಿಸಿ ಆದೇಶ ಹೊರಡಿಸಿದೆ.
ಕಲಬುರಗಿಯ ಇಕ್ಬಾಲ್ ಕಾಲೋನಿ ನಿವಾಸಿ, ಅಪರಾಧಿ ಮುಸ್ತಫಾ ಸುಲ್ತಾನ್ ಮಿರ್ಜಾ ಸಲೀಂ (25) ಎಂಬಾತನಿಗೆ ಶಿಕ್ಷೆ ವಿಧಿಸಲಾಗಿದೆ.
2018 ರ ಜುಲೈ 4 ರಂದು ಕಲಬುರಗಿಯ ಎಮಎಸ್‌ಕೆ ಮಿಲ್ ಪ್ರದೇಶದ ಎಕ್ಬಾಲ್ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ದ ಸೈಯದ್ ಅಕ್ಬರ್, ಶಹನಾಜ್ ಬೇಗಂ ಮತ್ತು ಇಬ್ಬರು ಮಕ್ಕಳಾದ ಸೈಯದ್ ಯಾಸೀನ್ ಹಾಗೂ ಸೈಯದಾ ಸಾನಿಯಾ ಬೇಗಂ ಅವರನ್ನು ಜೀವಂತವಾಗಿ ಸುಟ್ಟು ಹಾಕಲಾಗಿತ್ತು.
ಮಧ್ಯರಾತ್ರಿ ನಾಲ್ವರು ಮನೆಯಲ್ಲಿ ಮಲಗಿರುವ ವೇಳೆ ಪೆಟ್ರೋಲ್ ಹಾಕಿ ಹೊರಗಿನಿಂದ ಬಾಗಿಲು ಮುಚ್ಚಿ ಬೆಂಕಿ ಹಚ್ಚಲಾಗಿತ್ತು. ಘಟನೆಯಲ್ಲಿ ತೀವ್ರವಾಗಿ ಗಾಯಗೊಂಡಿದ್ದು ನಾಲ್ವರು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದರು. ಈ ಕುರಿತು ರಾಘವೇಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಬೀದರ್ | ಭೀಕರ ರಸ್ತೆ ಅಪಘಾತ; ಸ್ಥಳದಲ್ಲೇ ನಾಲ್ವರು ಸಾವು
ಪ್ರಕರಣದ ವಿಚಾರಣೆ ನಡೆಸಿದ 1ನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮೋಹನ್ ಬಾಡಗಂಡಿ ಅವರು ಅಪರಾಧಿ ಮುಸ್ತಫಾಗೆ ಜೀವಾವಧಿ ಶಿಕ್ಷೆ ಹಾಗೂ 4 ಲಕ್ಷ ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ. ದಂಡ ಪಾವತಿಸಲು ವಿಫಲವಾಗಿದಲ್ಲಿ 2 ವರ್ಷ ಹೆಚ್ಚುವರಿ ಕಠಿಣ ಶಿಕ್ಷೆ ವಿಧಿಸಬೇಕೆಂದು ಆದೇಶಿಸಿದ್ದಾರೆ.