ಬೀದರ್‌ | ಶಿಕ್ಷಣ, ಆರೋಗ್ಯ ಮಾರಾಟವಾದ ದೇಶ ಅವನತಿ ಹಾದಿ ಹಿಡಿಯುತ್ತದೆ : ಸಿದ್ದಪ್ಪ ಮೂಲಗೆ

Date:

Advertisements

ವ್ಯವಸ್ಥೆಯ ಕುರಿತು ವೈಚಾರಿಕವಾದ ವಿಮರ್ಶೆಯ ಜೊತೆಗೆ ಸಾಂಸ್ಕೃತಿಕ ಮತ್ತು ವೈಜ್ಞಾನಿಕ ಅನ್ವೇಷಣೆಗಳು ಉನ್ನತ ಶಿಕ್ಷಣದ ಪ್ರಧಾನ ಧೋರಣೆಯಾಗಿದೆ. ಒಂದು ಸಮಾಜವನ್ನು, ದೇಶವನ್ನು ಕ್ರಿಯಾಶೀಲವಾಗಿಡುವ ಕೆಲಸ ಶಿಕ್ಷಣದಿಂದ ಮಾತ್ರ ನಡೆಯುತ್ತದೆ ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯ ಸಿದ್ದಪ್ಪ ಮೂಲಗೆ ಹೇಳಿದರು.

ಬಸವಕಲ್ಯಾಣ ನಗರದ ಶ್ರೀ ಬಸವೇಶ್ವರ ದೇವಸ್ಥಾನ ಶಿಕ್ಷಣ ಸಂಸ್ಥೆಯ ಶ್ರೀ ಬಸವೇಶ್ವರ ಪದವಿ ಕಾಲೇಜಿನಲ್ಲಿ ಆಂತರಿಕ ಗುಣಮಟ್ಟದ ಭರವಸೆ ಕೋಶದ ವತಿಯಿಂದ ಶನಿವಾರ ಹಮ್ಮಿಕೊಂಡಿದ್ದ ‘ಉನ್ನತ ಶಿಕ್ಷಣ ಹಾಗೂ ಯುವ ಜನತೆ ‘ ಕುರಿತ ಉಪನ್ಯಾಸ ಸಮಾರಂಭ ಉದ್ಘಾಟಿಸಿ ಮಾತನಾಡಿ, ʼಜ್ಞಾನ ಉತ್ಪಾದಿಸುವ, ಸಾಮಾಜಿಕ ಸಮಾನತೆ ತರಬಲ್ಲ, ಮನುಷ್ಯಪರವಾಗಿ ಆಲೋಚಿಸುವ ವಿಚಾರಗಳು ಉನ್ನತ ಶಿಕ್ಷಣದಲ್ಲಿದ್ದರೆ ದೇಶ ಪ್ರಗತಿ ಸಾಧ್ಯʼ ಎಂದರು.

ʼಲೋಕವನ್ನು ಅರಿಯಲು, ಗ್ರಹಿಸಲು ದಾರಿಯಾಗಬೇಕಾದ ಶಿಕ್ಷಣ ವ್ಯವಸ್ಥೆಯಲ್ಲಿ ಹಲವು ನಿರ್ಬಂಧಗಳಿವೆ. ನಿಸರ್ಗ, ಸಮಾಜ, ಲೋಕವನ್ನು ಅರಿಯಲು ಸರಿಯಾದ ಶಿಕ್ಷಣದ ಅಗತ್ಯವಿದೆ. ಉನ್ನತ ಶಿಕ್ಷಣದಲ್ಲಿ ಹೆಚ್ಚು ಅಧ್ಯಯನ ಮಾಡುವ ಮೂಲಕ ಹೊಸದನ್ನು ಕಂಡುಕೊಳ್ಳಲು ಸಾಧ್ಯವಿದೆ. ಓದಿನಲ್ಲಿ ತನ್ಮಯತೆ ಅಗತ್ಯʼ ಎಂದರು.

Advertisements

ʼಎಲ್ಲಾ ಕಾಲದಲ್ಲೂ ಜ್ಞಾನಕ್ಕೆ ಮಹತ್ವವಿದೆ. ಕನ್ನಡ ಮಾಧ್ಯಮದಲ್ಲಿ ಓದಿದ ಮಕ್ಕಳು ಲೋಕಾನುಭವ ಸಹಜವಾಗಿ ಪಡೆಯುತ್ತವೆ. ಇಂಗ್ಲಿಷ್ ಮಾಧ್ಯಮ ಶಿಕ್ಷಣದ ಟ್ರೆಂಡಾಗಿದೆ. ವ್ಯಾಪಾರೀಕರಣವಾದ ಇಂದಿನ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ. ಶಿಕ್ಷಣ ಮತ್ತು ಆರೋಗ್ಯ ಯಾವ ದೇಶದಲ್ಲಿ ಮಾರಾಟವಾಗುತ್ತದೆಯೋ ಆ ದೇಶ ಅವನತಿಯ ಹಾದಿ ಹಿಡಿಯುತ್ತದೆ. ಶಿಕ್ಷಣ ಮಾರಾಟದ ವಸ್ತುವಾಗುವುದು ಎಂದರೆ ಆ ದೇಶದ ದುರಂತʼ ಎಂದರು.

ʼಶಿಕ್ಷಣ ವ್ಯವಸ್ಥೆಯಲ್ಲಿ ಯಂತ್ರಗಳನ್ನಾಗಿ ಮಾಡಲಾಗುತ್ತದೆ. ಅತ್ಯಂತ ಬೌದ್ಧಿಕತೆಯನ್ನು ಹೊಂದಿದ ಬಿ.ಎ, ಬಿ.ಕಾಂ ಮತ್ತು ಬಿಎಸ್ಸಿ ಪದವಿಗಳ ಬಗ್ಗೆ ತಾತ್ಸಾರ , ಉದಾಸೀನತೆ ಬೇಡ. ಗಂಭೀರವಾಗಿ ಅವುಗಳನ್ನು ಓದಿದರೆ ಎಲ್ಲಕ್ಕಿಂತ ಭಿನ್ನವಾದ, ಸೃಜನಶೀಲ ಬದುಕು ಕಟ್ಟಿಕೊಳ್ಳಬಹುದು. ಸಮಾನತೆಯ ಬಗ್ಗೆ ಮೊದಲು ಮಾತನಾಡಿದ್ದು ಬಸವಕಲ್ಯಾಣ. ಮೊದಲು ಪ್ರಜಾಪ್ರಭುತ್ವವನ್ನು ಪ್ರತಿಪಾದಿಸಿದ್ದು ಅನುಭವ ಮಂಟಪ. ಬಸವಣ್ಣನವರ ಹೆಸರಿನ ಈ ಕಾಲೇಜಿನಲ್ಲಿ, ವಿದ್ಯಾರ್ಥಿನಿಯರ ಸಂಖ್ಯೆ ಹೆಚ್ಚಾಗಿರುವುದು ಶರಣು ಸಂಸ್ಕೃತಿಯ ಪ್ರತೀಕ ಮತ್ತು ಪ್ರಭಾವಗಳಾಗಿವೆʼ ಎಂದರು.

ಸಂಸ್ಥೆಯ ಆಡಳಿತಾಧಿಕಾರಿ ಡಾ ಮಲ್ಲಿಕಾರ್ಜುನ ಲಕಶಟ್ಟಿ ಮಾತನಾಡಿ, ʼವಿಶ್ವವಿದ್ಯಾಲಯದ ಆಡಳಿತಾತ್ಮಕ ಸುಧಾರಣೆಗಾಗಿ, ವಿದ್ಯಾರ್ಥಿಗಳ ಸಮಸ್ಯೆಗಳಿಗೆ ಪರಿಹಾರ ನೀಡಿ ಉನ್ನತ ಶಿಕ್ಷಣದ ಗುಣಮಟ್ಟ ಸುಧಾರಣೆಗೆ ಸಿಂಡಿಕೇಟ್ ಸದಸ್ಯರನ್ನು ಸರ್ಕಾರ ಆಯ್ಕೆ ಮಾಡುತ್ತದೆ. ಉನ್ನತ ಶಿಕ್ಷಣದಲ್ಲಿ ಉತ್ತಮ ಭವಿಷ್ಯವಿದೆʼ ಎಂದರು.

ಪ್ರಾಚಾರ್ಯ ಡಾ.ಭೀಮಾಶಂಕರ ಬಿರಾದಾರ ಮಾತನಾಡಿ, ʼಸಂಶೋಧನಾತ್ಮಕ ಅಧ್ಯಯನ, ಸೈದ್ಧಾಂತಿಕ ಹಾಗೂ ತಾತ್ವಿಕ ನೆಲೆಯ ಅನುಸಂಧಾನ ಉನ್ನತ ಶಿಕ್ಷಣದ ಗುಣವಾಗಿದೆ. ಅದು ಸಾಮಾಜಿಕ, ಆರ್ಥಿಕ ಹಾಗೂ ಸಾಂಸ್ಕೃತಿಕ ಬೆಳವಣಿಗೆಗೆ ದಾರಿಯಾಗಿದೆ. ಕಾಲೇಜು ಹಾಗೂ ವಿಶ್ವವಿದ್ಯಾಲಯಗಳು ವೈಚಾರಿಕ ಹಾಗೂ ವೈಜ್ಞಾನಿಕ ಪರಂಪರೆಯನ್ನು ಗಟ್ಟಿಗೊಳಿಸುವ ಮತ್ತು ಕಟ್ಟಿ ಬೆಳೆಸುವ ಅರಿವಿನ ಜಾಗಗಳಾಗಿವೆʼ ಎಂದರು.

ʼಉನ್ನತ ಶಿಕ್ಷಣದಲ್ಲಿ ನಡೆಯುವ ಸಂಶೋಧನೆಗಳು, ಆವಿಷ್ಕಾರಗಳು, ಚರ್ಚೆ, ವೈಚಾರಿಕ ಚಿಂತನೆ, ಸಂಕಥನಗಳು ಹೊಸ ತಾತ್ವಿಕತೆಯೊಂದನ್ನು ಕಟ್ಟಿಕೊಡುತ್ತವೆ. ಸಾಮಾಜಿಕ ಮತ್ತು ಚಾರಿತ್ರಿಕ ವಾಸ್ತವಗಳಿಗೆ ಪ್ರತಿಸ್ಪಂದಿಸುವ ಸೂಕ್ಷ್ಮತೆ ಶಿಕ್ಷಣ ಬೆಳೆಸುತ್ತದೆ. ಹೊಸ ಹೊಸ ಸೃಜನಶೀಲತೆ ಹಾಗೂ ಸಂಶೋಧನೆಗೆ ಉನ್ನತ ಶಿಕ್ಷಣದಲ್ಲಿ ತಲಸ್ಪರ್ಶಿ ಅಧ್ಯಯನ ಅಗತ್ಯʼ ಎಂದರು.

ಈ ಸುದ್ದಿ ಓದಿದ್ದೀರಾ? ಬೀದರ್‌ | ʼವಚನ ದರ್ಶನʼ ಕೃತಿಯಿಂದ ವಚನ ಸಾಹಿತ್ಯ ನಿರ್ನಾಮಕ್ಕೆ ಯತ್ನ : ಆರ್.ಕೆ.ಹುಡಗಿ

ಸಂಸ್ಥೆಯ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ ಅಧ್ಯಕ್ಷತೆ ವಹಿಸಿದ್ದರು. ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಐಕ್ಯೂಎಸಿ ಸಂಯೋಜಕ ಪವನ ಪಾಟೀಲ, ಅಶೋಕ ರೆಡ್ಡಿ ಗದಲೇಗಾಂವ, ವಿವೇಕಾನಂದ ಶಿಂಧೆ, ರೋಶನ್ ಬೀ, ಗುರುದೇವಿ ಕಿಚಡೆ, ನೀಲಮ್ಮ ಮೇತ್ರೆ, ಡಾ‌. ಬಸವರಾಜ ಖಂಡಾಳೆ, ಪ್ರವೀಣ ಬಿರಾದಾರ, ಶ್ರೀನಿವಾಸ ಉಮಾಪುರೆ, ಪ್ರಶಾಂತ ಬುಡಗೆ, ಬಸವರಾಜ ಗುಂಗೆ ಮೊದಲಾದವರಿದ್ದರು. ಡಾ. ಶಾಂತಲಾ ಪಾಟೀಲ ಸ್ವಾಗತಿಸಿದರು. ಜಗದೇವಿ ಜವಳಿಗೆ ನಿರೂಪಿಸಿದರು. ಗಂಗಾಧರ ಸಾಲಿಮಠ ವಂದಿಸಿದರು.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಕಡಿಮೆ ದರದಲ್ಲಿ ಊಟ ಉಪಾಹಾರ ಒದಗಿಸುವ ಅಕ್ಕ ಕೆಫೆ ಪ್ರಾರಂಭ

ಉಡುಪಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಉಡುಪಿ ವತಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ...

ಸಕಲೇಶಪುರ | ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧ್ಯ: ಅವಿನಾಶ್‌ ಕಾಕಡೆ

ಸಮಾಜ ವ್ಯಸನಮುಕ್ತವಾದಾಗ ಮಾತ್ರ ನೆಮ್ಮದಿಯ ಬದುಕು ಸಾಧಿಸಲು ಸಾಧ್ಯ. ಹಾಗಾಗಿ ಮನೆಯಿಂದಲೇ...

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

Download Eedina App Android / iOS

X