- ಹೊಲದಲ್ಲಿ ಎಡೆ ಹೊಡೆಯುವ ವೇಳೆ ಹಾವು ಕಡಿದು ರೈತ ಸಾವು
- ಹುಲಸೂರ ತಾಲೂಕಿನ ಬಸವನವಾಡಿ ಗ್ರಾಮದಲ್ಲಿ ಘಟನೆ
ಸೋಯಾಬೀನ್ ಬೆಳೆಯಲ್ಲಿ ಎಡೆ ಹೊಡೆಯಲು ಹೊಲಕ್ಕೆ ತೆರಳಿದ್ದ ವೇಳೆ ಹಾವು ಕಡಿದು ರೈತನೊಬ್ಬ ಸಾವನಪ್ಪಿದ ಘಟನೆ ಹುಲಸೂರ ತಾಲೂಕಿನಲ್ಲಿ ನಡೆದಿದೆ.
ತಾಲ್ಲೂಕಿನ ಸಾಯಗಾಂವ ಗ್ರಾಮ ಪಂಚಾಯತ್ ವ್ಯಾಪ್ತಿಯ ಬಸವನವಾಡಿ ಗ್ರಾಮದ ದತ್ತಾ ಪವಾರ (35 ) ಮೃತಪಟ್ಟ ರೈತ ಎಂದು ತಿಳಿದು ಬಂದಿದೆ.
ಮುಂಜಾನೆ ಹೊಲಕ್ಕೆ ತೆರಳಿ ಎಡೆ ಹೊಡೆಯುವಾಗ ಹಾವು ಕಡಿದು ನಿತ್ರಾಣಗೊಂಡಿದ್ದರು. ವಿಷಯ ತಿಳಿದ ಕುಟುಂಬಸ್ಥರು ಹೊಲಕ್ಕೆ ತೆರಳಿ ಚಿಕಿತ್ಸೆಗಾಗಿ ಹುಲಸೂರ ಸರ್ಕಾರಿ ಆಸ್ಪತ್ರೆಗೆ ಕೊಂಡೊಯ್ಯುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಈ ಸಂಬಂಧ ಭಾಲ್ಕಿ ತಾಲೂಕಿನ ಮೇಹಕರ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.