ಟ್ರಾನ್ಸ್‌ಫಾರ್ಮಾರ್ ರಿಪೇರಿ ಮಾಡುವ ವೇಳೆ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡು ಧಗ ಧಗನೆ ಹೊತ್ತಿ ಉರಿದ ಘಟನೆ ಬೀದರ್ ನಗರದ ಜ್ಯೋತಿ ಕಾಲೋನಿಯಲ್ಲಿರುವ ಜೆಸ್ಕಾಂ ಕಚೇರಿ ಆವರಣದಲ್ಲಿ ನಡೆದಿದೆ.
ಭಾರಿ ಅಗ್ನಿ ದುರಂತದಿಂದ ಸುಮಾರು 50ಕ್ಕೂ ಹೆಚ್ಚು ಟ್ರಾನ್ಸ್‌ಫಾರ್ಮಾರ್‌ಗಳು, ಡಿಸೇಲ್, ವಿದ್ಯುತ್ ತಂತಿ ಸೇರಿದಂತೆ ಕಚೇರಿಯ ಹಳೆಯ ಜೀಪೊಂದು ಬೆಂಕಿಗೆ ಆಹುತಿಯಾಗಿದೆ.
ಅಪಾರ ಪ್ರಮಾಣದ ಬೆಂಕಿ, ಹೊಗೆ ಕಾಣಿಸಿಕೊಳ್ಳುತ್ತಿದ್ದಂತೆ ಟಿಸಿ ದುರಸ್ತಿ ಮಾಡುತ್ತಿದ್ದ ಆರು ಜನ ಸಿಬ್ಬಂದಿ ದುರಸ್ತಿ ಕೇಂದ್ರದಿಂದ ಹೊರಗಡೆ ಓಡಿ ಬಂದು ಅಪಾಯದಿಂದ ಪಾರಾಗಿದ್ದಾರೆ.
ವಿಷಯ ತಿಳಿದು ಅಗ್ನಿಶಾಮಕ ದಳ, ವಾಯುಸೇನೆಯ ಮೂರು ಅಗ್ನಿನಂದಕ ವಾಹನಗಳು ಸ್ಥಳಕ್ಕೆ ಆಗಮಿಸಿ ಬೆಂಕಿಯನ್ನು ನಂದಿಸಿದರು. ಶಾರ್ಟ್ ಸರ್ಕ್ಯೂಟ್‌ದಿಂದ ಈ ದುರಂತ ನಡೆದಿರಬಹುದು ಎನ್ನಲಾಗುತ್ತಿದೆ. ಇನ್ನಷ್ಟೇ ನಿಖರ ಮಾಹಿತಿ ಗೊತ್ತಾಗಬೇಕಿದೆ.
ನ್ಯೂಟೌನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅವಘಡ ಘಟನೆ ಜರುಗಿದೆ.