ಕೆರೆಯಲ್ಲಿ ಮೀನು ಹಿಡಿಯಲು ಹೋಗಿ, ನೀರಿನಲ್ಲಿ ಮುಳುಗಿ ಮೃತಪಟ್ಟ ವ್ಯಕ್ತಿಯ ಶವ ನಾಲ್ಕು ದಿನಗಳ ನಂತರ ಪತ್ತೆಯಾದ ಘಟನೆ ಬಸವಕಲ್ಯಾಣ ತಾಲೂಕಿನ ಹತ್ಯಾಳ ಗ್ರಾಮದಲ್ಲಿ ಜರುಗಿದೆ.
ಬಸವಕಲ್ಯಾಣ ತಾಲೂಕಿನ ಹಾಮುನಗರ ತಾಂಡಾ ನಿವಾಸಿ ಪಾಂಡುರಂಗ ರಾಠೋಡ (40) ಮೃತಪಟ್ಟವರು.
ಫೆ.25 ರಂದು ಭಾನುವಾರ ಸ್ನೇಹಿತರೊಂದಿಗೆ ಹತ್ಯಾಳ ಗ್ರಾಮದ ವ್ಯಾಪ್ತಿಯಲ್ಲಿ ಬರುವ ಕೆರೆಯಲ್ಲಿ ಮೀನು ಹಿಡಿಯಲು ಹೋಗಿದ್ದ. ನೀರಿಗೆ ಇಳಿದು ಮೀನು ಹಿಡಿಯುವ ವೇಳೆ ಮರಳಿ ದಡ ಸೇರಲಾಗದೆ ನೀರಿನಲ್ಲೇ ಮುಳುಗಿ ಮೃತಪಟ್ಟಿದ್ದ.
ಸುದ್ದಿ ತಿಳಿದು ಸ್ಥಳಕ್ಕೆ ಧಾವಿಸಿದ ಮುಡಬಿ ಠಾಣೆಯ ಪೊಲೀಸರು ಅಗ್ನಿಶಾಮಕ ದಳದ ಸಿಬ್ಬಂದಿಯ ಸಹಕಾರದೊಂದಿಗೆ ಶವ ಹೊರ ತೆಗೆಯಲು ಮೂರು ದಿನಗಳ ಕಾಲ ಸತತವಾಗಿ ಪ್ರಯತ್ನಿಸಿದರೂ ಶವ ಪತ್ತೆಯಾಗಲಿಲ್ಲ. ಎನ್‌ಡಿಆರ್‌ಎಫ್ ತಂಡದ ಸಹಕಾರದಿಂದ ಬುಧವಾರ ಬೆಳಗ್ಗೆ ವ್ಯಕ್ತಿಯ ಶವ ಪತ್ತೆ ಹಚ್ಚಿ ಹೊರ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ.
ಈ ಸುದ್ದಿ ಓದಿದ್ದೀರಾ? ಈ ದಿನ ಸಂಪಾದಕೀಯ | ಬಿಜೆಪಿಗೆ ʼವಿವಾದದ ಸರಕುʼ ಪೂರೈಕೆಯ ಗುತ್ತಿಗೆ ಪಡೆದಿವೆಯೇ ಕನ್ನಡದ ಮಾಧ್ಯಮಗಳು?
ಈ ಕುರಿತು ಮುಡಬಿ ಪೊಲೀಸ್ ಠಾಣೆ ಪಿಎಸ್ಐ ರೇಣುಕಾ ಉಡಗಿ ಸೇರಿದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.