ಬಾಗೇಪಲ್ಲಿ | ಸಾವಯವ ಕೃಷಿಯಿಂದ ಬದುಕು ಕಟ್ಟಿಕೊಂಡ ಪ್ರಗತಿಪರ ರೈತ

Date:

Advertisements

ಸಾವಯವ ಕೃಷಿಯೊಂದಿಗೆ ಪಶುಪಾಲನೆ ಅಳವಡಿಸಿಕೊಂಡಿರುವ ಪ್ರಗತಿಪರ ರೈತ ಪಿ ಈಶ್ವರರೆಡ್ಡಿ ಉತ್ತಮ ಬದುಕು ಕಟ್ಟಿಕೊಂಡು ಜಿಲ್ಲೆಗೆ ಮಾದರಿ ರೈತ ಎನಿಸಿಕೊಂಡಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಆಚೇಪಲ್ಲಿ ಗ್ರಾಮದ ಪ್ರಗತಿಪರ ರೈತ ಪಿ.ಈಶ್ವರರೆಡ್ಡಿ ತಮ್ಮ 6 ಎಕರೆ ಜಮೀನಿನಲ್ಲಿ ನವಣೆ, ಸಾಮೆ, ರಾಗಿ, ಭತ್ತ, ಮುಸುಕಿನ ಜೋಳ, ನೆಲಗಡಲೆ, ಬೀಟ್‍ರೂಟ್, ಹೂ ಕೋಸು, ಸೇವಂತಿಗೆ, ಚೆಂಡುಹೂವು ಸೇರಿದಂತೆ ವಿವಿಧ ತರಕಾರಿ ಹಾಗೂ ಹೂಗಳನ್ನು ಬೆಳೆಯುತ್ತಿದ್ದು, ಸಮಗ್ರ ಕೃಷಿಗೆ ಉದಾಹರಣೆಯಾಗಿದ್ದಾರೆ.

ರೈತ ಈಶ್ವರರೆಡ್ಡಿ ತಾವು ಬೆಳೆಯುವ ಎಲ್ಲಾ ಬೆಳೆಗಳಿಗೂ ಸಾವಯವ ಗೊಬ್ಬರ ಬಳಕೆ ಮಾಡುತ್ತಿದ್ದಾರೆ. ರಾಸಾಯನಿಕ ಗೊಬ್ಬರ ಬಳಕೆ ಮಾಡದೆ ವಿವಿಧ ತಳಿಯ ಬೆಳೆಗಳು ಹಾಗೂ ತರಕಾರಿ, ಹಣ್ಣು, ಹೂಗಳನ್ನು ಬೆಳೆಯುವ ಮೂಲಕ ಅಕ್ಕಪಕ್ಕದ ರೈತರಿಗೆ ಮಾದರಿಯಾಗಿದ್ದಾರೆ. ಇವರ ಮಾದರಿ ಕೃಷಿಯನ್ನು ತಿಳಿಯುವ ಸಲುವಾಗಿ ತಾಲೂಕಿನ ಯಲ್ಲಂಪಲ್ಲಿ, ಆಚೇಪಲ್ಲಿ, ಮಿಟ್ಟೇಮರಿ, ಗೂಳೂರು ಗ್ರಾಮಗಳ ಸುತ್ತಮುತ್ತಲಿನ ಗ್ರಾಮಗಳ ರೈತರು ಆಗಮಿಸಿ ಕೃಷಿ ಮಾಹಿತಿ ಪಡೆದು ಅನುಕೂಲ ಪಡೆಯುತ್ತಿದ್ದಾರೆ.

Advertisements

2 ಎಕರೆ ಮುಸುಕಿನ ಜೋಳ, ತಲಾ ಒಂದು ಎಕರೆಯಲ್ಲಿ ಬೀಟ್‌ರೂಟ್, ಹೂಕೋಸು, ನೆಲಗಡಲೆ, ಟೊಮೆಟೊ, ಭತ್ತ, ರಾಗಿ, ಸಾಮೆ, ನವಣೆ, ಸೂರ್ಯಕಾಂತಿ ಸೇರಿದಂತೆ ಇತರೆ ತಳಿಯ ಬೆಳೆಗಳು ಹಾಗೂ ತರಕಾರಿಗಳನ್ನು ಬೆಳೆದಿದ್ದಾರೆ. ಅರ್ಧ ಎಕರೆಯಲ್ಲಿ ಸೇವಂತಿಗೆ ಹಾಗೂ ಚೆಂಡು ಹೂವು ಬೆಳೆದಿದ್ದಾರೆ.

ಕೃಷಿಯೊಂದಿಗೆ ಪಶುಪಾಲನೆ :

ಕೃಷಿಯೊಂದಿಗೆ ಪಶುಪಾಲನೆಯನ್ನು ಅಳವಡಿಸಿಕೊಂಡಿರುವ ಇವರು, ಕುರಿ, ಮೇಕೆ, ಸೀಮೆಹಸು, ನಾಟಿಹಸು ಹಾಗೂ ಹೈಬ್ರಿಡ್ ತಳಿಯ ಮೇಕೆಗಳನ್ನು ಸಾಕಿದ್ದಾರೆ.

ತಮ್ಮ ಜಮೀನಿನಲ್ಲಿ 90 ತೆಂಗಿನ ಮರ, 95 ಹುಣಸೆ ಮರ, 80 ಮಾವಿನ ಮರ, 10 ಹಲಸಿನ ಮರ ಹಾಗೂ 4 ನುಗ್ಗೆ ಗಿಡಗಳನ್ನು ಬೆಳೆಸಿದ್ದಾರೆ. ಇದರೊಂದಿಗೆ ಕೃಷಿ ಶೆಡ್, ಕೃಷಿ ಹೊಂಡ, ಕೊಳವೆಬಾವಿಯನ್ನು ನಿರ್ಮಾಣ ಮಾಡಿದ್ದಾರೆ. ಮಳೆ ನೀರನ್ನು ಸಂಗ್ರಹಿಸುವ ವಿಧಾನಗಳನ್ನು ಅಳವಡಿಸಿಕೊಂಡಿದ್ದಾರೆ. ಹನಿ ಹಾಗೂ ತುಂತುರು ನೀರಾವರಿ ಪದ್ಧತಿಯನ್ನೂ ಅಳವಡಿಸಿಕೊಂಡಿದ್ದಾರೆ.

ಇತರೆ ರಾಜ್ಯಗಳಿಂದ ಕೃಷಿ ಮಾಹಿತಿ :

ಕೃಷಿಯನ್ನೇ ಕಾಯಕವನ್ನಾಗಿ ಮಾಡಿಕೊಂಡಿರುವ ಪಿ ಈಶ್ವರ್‌ ರೆಡ್ಡಿ ಪಕ್ಕದ ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡಿಗೆ ಭೇಟಿ ನೀಡಿ ಅಲ್ಲಿನ ರೈತರಿಂದ ಸಾವಯವ ಕೃಷಿ ವಿಧಾನಗಳ ಕುರಿತು ಮಾಹಿತಿ ಪಡೆಯುತ್ತಾರೆ. ಕೃಷಿ ತ್ಯಾಜ್ಯವನ್ನು ಸಂಗ್ರಹಿಸಿ ಸಾವಯವ ತಿಪ್ಪೆಗುಂಡಿಯನ್ನು ನಿರ್ಮಿಸಿದ್ದಾರೆ. ಇದರ ಗೊಬ್ಬರವನ್ನೇ ಗಿಡಗಳಿಗೆ ಬಳಕೆ ಮಾಡುತ್ತಿದ್ದಾರೆ.

ಬೆಂಗಳೂರು ಕೃಷಿ ವಿವಿಯಿಂದ ಪ್ರಗತಿಪರ ರೈತ ಪ್ರಶಸ್ತಿ :

ಈಶ್ವರ ರೆಡ್ಡಿಯವರ ಸಮಗ್ರ ಕೃಷಿಯನ್ನು ಗುರುತಿಸಿರುವ ಬೆಂಗಳೂರಿನ ಕೃಷಿ ವಿಶ್ವವಿಶ್ವವಿದ್ಯಾಲಯ 2022ರಲ್ಲಿ ನಡೆದ ಕೃಷಿ ಮೇಳದಲ್ಲಿ ‘ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ’ ನೀಡಿ ಗೌರವಿಸಿದೆ. ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ ಸಾಧಕ ರೈತ ಪ್ರಶಸ್ತಿಯೂ ಇವರಿಗೆ ಸಂದಿದೆ.

ರೈತ ಪಿ.ಈಶ್ವರರೆಡ್ಡಿಯವರ ಸಾವಯವ ಕೃಷಿ ವಿಧಾನ ನಿಜಕ್ಕೂ ಶ್ಲಾಘನೀಯ. ಇವರು ಸಮಗ್ರ ಕೃಷಿ ವಿಧಾನ ಇತರೆ ರೈತರಿಗೆ ಮಾದರಿಯಾಗಿದೆ ಎನ್ನುತ್ತಾರೆ ಚೊಕ್ಕಂಪಲ್ಲಿಯ ರೈತ ಕಾಮರೆಡ್ಡಿ.

ವಾರ್ಷಿಕ 10 ಲಕ್ಷ ಆದಾಯ :

ಕೃಷಿಯನ್ನೇ ನಂಬಿದ್ದೇನೆ. ಕೃಷಿ ಕೈ ಬಿಟ್ಟಿಲ್ಲ. ಮಿಶ್ರ ಬೆಳೆಗಳಿಂದ ಉತ್ತಮ ಇಳುವರಿ ಬಂದಿದೆ. ವಾರ್ಷಿಕವಾಗಿ ₹8 ರಿಂದ ₹10 ಲಕ್ಷ ಸಂಪಾದನೆ ಆಗುತ್ತದೆ. ₹4 ಲಕ್ಷ ಖರ್ಚಾಗುತ್ತದೆ ಉಳಿದದ್ದು ಲಾಭ ಎನ್ನುತ್ತಾರೆ ಬಾಗೇಪಲ್ಲಿಯ ಪ್ರಗತಿಪರ ರೈತ ಪಿ.ಈಶ್ವರರೆಡ್ಡಿ.

  • ವರದಿ : ರಾ.ನ.ಗೋಪಾಲ ರೆಡ್ಡಿ, ಪತ್ರಕರ್ತ, ಬಾಗೇಪಲ್ಲಿ.
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಶಿವಮೊಗ್ಗ | SBUDA ದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ : ಸುಂದರೇಶ್

ಶಿವಮೊಗ್ಗ-ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದಿಂದ ಅಪಾರ್ಟ್ಮೆಂಟ್, ನೂತನ ಕಚೇರಿ, ಮಾಲ್ ನಿರ್ಮಾಣಕ್ಕೆ ಹೆಜ್ಜೆ...

ಮಾಲೂರು | ‘ಕೆಲಸ ನೀಡದಿದ್ದರೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ’!

ಮಾಲೂರಿನ ವರ್ಗಾ ಕಂಪನಿ ಮುಚ್ಚುವುದನ್ನು ವಿರೋಧಿಸಿ ಇಂದು ಮಾಲೂರಿನಲ್ಲಿ ಕಾರ್ಮಿಕರು ಬೃಹತ್...

ಗಣೇಶ ಚತುರ್ಥಿಗೆ ಬೆಂಗಳೂರು-ಮಂಗಳೂರು ನಡುವೆ ವಿಶೇಷ ರೈಲು

ಗಣೇಶ ಚತುರ್ಥಿ ಹಬ್ಬದ ಹಿನ್ನೆಲೆ ಪ್ರಯಾಣಿಕರ ಅನುಕೂಲಕ್ಕಾಗಿ ರೈಲ್ವೆ ಇಲಾಖೆಯು ಬೆಂಗಳೂರು-ಮಂಗಳೂರು...

ಬೆಳ್ತಂಗಡಿ | ಸೌಜನ್ಯ ಪ್ರಕರಣ ಮರು ತನಿಖೆಗೆ ವಿವಿಧ ಸಂಘಟನೆಗಳ ಮುಖಂಡರ ಒತ್ತಾಯ

ಬೆಂಗಳೂರಿನಿಂದ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ತ್ರಿಮೂರ್ತಿ ಅವರ ನೇತೃತ್ವದಲ್ಲಿ ವಿವಿಧ ಸಂಘಟನೆಗಳ...

Download Eedina App Android / iOS

X