ಮಂಗಳೂರು ನಗರದ ಕೊಡಿಯಾಲಬೈಲಿನ ಪಿಜಿಯೊಂದರಲ್ಲಿ ವಾಸವಿದ್ದ ಕೇರಳ ಮೂಲದ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಕೇರಳದ ಕೊಟ್ಟಾಯಂನ ಹನೀಫ್ ಖಾನ್ (24) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿ. ನಗರದ ಖಾಸಗಿ ಕಾಲೇಜಿನಲ್ಲಿ ಶಿಕ್ಷಣ ಪಡೆಯುತ್ತಿದ್ದ ಈತ ಕೊಡಿಯಾಲಬೈಲಿನ ಪಿಜಿ.ದರಲ್ಲಿ ವಾಸವಾಗಿದ್ದ. ಗುರುವಾರ ರಾತ್ರಿ ಊಟ ಮಾಡಲೆಂದು ಇತರ ವಿದ್ಯಾರ್ಥಿಗಳು ಕರೆದಾಗ ಒಳಗಿನಿಂದ ಯಾವುದೇ ಸ್ಪಂದನೆ ಬರದೇ ಇದ್ದ ಹಿನ್ನಲೆ ಪರಿಶೀಲಿಸಿದಾಗ, ಕಿಟಕಿಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡಿರುವ ದೃಶ್ಯ ಕಂಡು ಬಂದಿದೆ. ಕೈಯಲ್ಲಿ ಬೇಡಿನಿಂದ ಗೀರಿಕೊಂಡಿರುವ ಗಾಯಗಳೂ ಇತ್ತು ಎನ್ನಲಾಗಿದೆ.
ಇದನ್ನೂ ಓದಿ: ಮಂಗಳೂರು | ಜು.12ರಂದು ಲೋಕ ಅದಾಲತ್: ನ್ಯಾ. ಬಸವರಾಜ
ಹನೀಫ್ ಪ್ರತಿಭಾನ್ವಿತ ವಿದ್ಯಾರ್ಥಿಯಾಗಿದ್ದು, ಹಲವು ಸಮಯದಿಂದ ಮಾನಸಿಕವಾಗಿ ಒತ್ತಡಕ್ಕೊಳಗಾಗಿ ಈ ಹಿಂದೆಯೂ ಅನೇಕ ಬಾರಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಎಂದು ತಿಳಿದುಬಂದಿದೆ. ಹನೀಫ್ ಅವರ ತಂದೆಗೆ ಒಟ್ಟು ಮೂವರು ಮಕ್ಕಳು. ಅವಳಿ-ಜವಳಿ ಮಕ್ಕಳಲ್ಲಿ ಹನೀಫ್ ಒಬ್ಬನಾಗಿದ್ದು, ಇನ್ನೊಬ್ಬ ಕೊಟ್ಟಾಯಂನಲ್ಲಿ ಉದ್ಯೋಗದಲ್ಲಿದ್ದಾನೆ. ಇವರ ಅಣ್ಣ ಬೆಂಗಳೂರಿನಲ್ಲಿ ಕೆಲಸ ಮಾಡುತ್ತಿದ್ದಾನೆ. ಮರಣೋತ್ತರ ಪರೀಕ್ಷೆ ನಡೆಸಿ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗಿದೆ. ಬಳಿಕ ಆಂಬುಲೆನ್ಸ್‌ನಲ್ಲಿ ಮೃತದೇಹವನ್ನು ಕೊಟ್ಟಾಯಂಗೆ ಕೊಂಡೊಯ್ಯಲಾಗಿದೆ. ಈ ಸಂಬಂಧ ಬರ್ಕೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.