ಹವಾಮಾನದಲ್ಲಿ ಆಗುತ್ತಿರುವ ಬದಲಾವಣೆಯಿಂದ ನಾವು ಅಳವಡಿಸಿಕೊಳ್ಳುವ ಕೃಷಿ ಪದ್ಧತಿ ಹೇಗಿರಬೇಕು ಎನ್ನುವುದರ ಕುರಿತು ʼಬೆಳಕಿನ ಬೇಸಾಯʼ ಕ್ರಮದ ಸಂವಾದ ಕಾರ್ಯಕ್ರಮ ನಾಳೆ ಸಂಜೆ ಕಲಬುರಗಿಯಲ್ಲಿ ಆಯೋಜಿಸಲಾಗಿದೆ.
ಮೈಸೂರು ಭಾಗದ ನೈಸರ್ಗಿಕ ಕೃಷಿ ತಜ್ಙ, ಲೇಖಕ ಅವಿನಾಶ್ ಟಿ.ಜಿ.ಎಸ್ ಅವರೊಂದಿಗೆ ಮುಕ್ತ ಕೃಷಿ ಪದ್ಧತಿಯ ಬಗ್ಗೆ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುವ ಕಾರ್ಯಕ್ರಮವು ಜೂ.15 ರಂದು, ಸಂಜೆ 4 ರಿಂದ 7ರವರೆಗೆ ಕಲಬುರಗಿ ನಗರದ ಕೆಕೆಸಿಸಿ ಚೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ನಡೆಯಲಿದೆ.
“ಕಲಬುರಗಿಯ ಬಾಬಾ ಫೌಂಡೇಷನ್, ಕೆ.ಕೆ.ಸಿ.ಸಿ. ಹಾಗೂ ಉಳುಮೆ ಪ್ರತಿಷ್ಠಾನ ಮೈಸೂರು ಅವರ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಲಿದ್ದು, ವೈಜ್ಞಾನಿಕ ಕೃಷಿ ಪದ್ಧತಿಯಲ್ಲಿ ಹೆಚ್ಚಿನ ಆದಾಯ ಪಡೆಯುವ ಮಾದರಿಗಳ ಬಗ್ಗೆ ಚರ್ಚಿಸಲಾಗುವುದು ಹಾಗೂ ರಾಸಾಯನಿಕ ಮುಕ್ತ ಕೃಷಿ ಪದ್ಧತಿಯ ಕುರಿತು ಸಂವಾದ ನಡೆಯಲಿದೆ” ಎಂದು ತಿಳಿಸಿದ್ದಾರೆ.
ಸಂವಾದ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಗತಿಪರ ರೈತರು, ಕೂಲಿ ಕಾರ್ಮಿಕರು, ಪರಿಸರ ಪ್ರೇಮಿಗಳು ಹಾಗೂ ವಿವಿಧ ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿ ಸದುಪಯೋಗಪಡೆದುಕೊಳ್ಳುವಂತೆ ಕೋರಿದ್ದಾರೆ. ಸಂವಾದದಲ್ಲಿ ಭಾಗವಹಿಸಲು ಕೃಷಿ ವಿಶ್ವವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ಡಾ.ರಾಜಶೇಖರ್ ಬಸನಾಯಕ್ (9711330755) ಅವರನ್ನು ಸಂಪರ್ಕಿಸಲು ತಿಳಿಸಿದ್ದಾರೆ.