ಬೀದರ್‌ | ಚೆಂಡು ಹೂ ಕೃಷಿ : ಉತ್ತಮ ಆದಾಯದ ನಿರೀಕ್ಷೆಯಲ್ಲಿ ಯುವ ರೈತ

Date:

Advertisements

ಸಾಂಪ್ರದಾಯಿಕ ಬೆಳೆಗಳಿಗೆ ಅಂತ್ಯ ಹಾಡಿ ವಾಣಿಜ್ಯ ಬೆಳೆಯತ್ತ ಮುಖ ಮಾಡಿದ ಯುವ ರೈತ ತಮ್ಮ ಹೊಲದಲ್ಲಿಚೆಂಡು ಹೂ ಬೆಳೆದಿದ್ದು ಲಾಭದ ನಿರೀಕ್ಷೆಯಲ್ಲಿದ್ದಾರೆ.

ಬೀದರ್‌ ಜಿಲ್ಲೆಯ ಭಾಲ್ಕಿ ತಾಲ್ಲೂಕಿನ ಅಹ್ಮದಾಬಾದ್‌ ಗ್ರಾಮದ ಯುವ ರೈತ ಅಮರ್‌ ಶಿಂಧೆ ಓದಿದ್ದು ಪಿಯುಸಿ, ನಂತರ ಓದಿನ ಕಡೆಗೆ ಆಸಕ್ತಿ ತೋರದೆ ತಮ್ಮ ಆರು ಎಕರೆ ಸ್ವಂತ ಜಮೀನಿನಲ್ಲಿ ವಿವಿಧ ವಾಣಿಜ್ಯ ಬೆಳೆಗಳ ಕೃಷಿ ಕೈಗೊಳ್ಳುವ ಮೂಲಕ ಹೆಚ್ಚಿನ ಆದಾಯ ಕಂಡುಕೊಂಡು ಯಶಸ್ವಿಯಾಗಿ ಇತರ ರೈತರಿಗೆ ಮಾದರಿಯಾಗಿದ್ದಾರೆ.

“ಮಹಾರಾಷ್ಟ್ರದ ಔರಾದ ಶಹಜಾನಿಯಿಂದ ಅಷ್ಟಗಂಧ ತಳಿಯ 9 ಸಾವಿರ ಬೀಜ ಖರೀದಿಸಲಾಗಿದೆ. 3-4 ರೂಪಾಯಿಗೆ ಒಂದರಂತೆ ಖರೀದಿಸಲಾಗಿದೆ. ಕಳೆದ ಜುಲೈನಲ್ಲಿ ಒಂದೂವರೆ ಎಕರೆ ಜಮೀನಿನಲ್ಲಿ ನಾಟಿ ಹಚ್ಚಿದ್ದು ಎರಡು ತಿಂಗಳಿಗೆ ಇಳುವರಿ ಬರುತ್ತದೆ. ಚೆಂಡು ಹೂವು ಬೆಳೆಯಲು ಭೂಮಿ ಹದ, ಬಿತ್ತನೆ, ಔಷಧ ಸಿಂಪಡಣೆ ಸೇರಿದಂತೆ ಒಟ್ಟು 1.50 ಲಕ್ಷ ಖರ್ಚಾಗಿದೆ ಎನ್ನುತ್ತಾರೆ” ಯುವ ರೈತ ಅಮರ್‌ ಶಿಂಧೆ.

Advertisements

ನಿರೀಕ್ಷೆಯಂತೆ ಬೆಲೆ ಇಲ್ಲ 

“ಸೆಪ್ಟೆಂಬರ್‌ ತಿಂಗಳಿಂದ ಇಳುವರಿ ಬರಲು ಪ್ರಾರಂಭವಾಗಿತ್ತು, ಗೌರಿ-ಗಣೇಶ ಹಬ್ಬದ ಸಂದರ್ಭದಲ್ಲಿ ಹೈದರಾಬಾದ್‌  ಮಾರುಕಟ್ಟೆಗೆ ಸಾಗಾಟ ಮಾಡಲಾಗಿತ್ತು. ಆದರೆ ಕೆ.ಜಿ.ಚೆಂಡು ಹೂವಿಗೆ 20, 30 ಹಾಗೂ 40 ರೂ.ಗೆ ಮಾರಾಟವಾಗಿದೆ. ಲಕ್ಷಾಂತರ ರೂಪಾಯಿ ವೆಚ್ಚ ಮಾಡಿದರೂ ನಿರೀಕ್ಷೆಯಂತೆ ಬೆಲೆ ಸಿಗದ ಪರಿಣಾಮ ಹೆಚ್ಚಿನ ಆದಾಯ ಸಿಗಲಿಲ್ಲ. ಸದ್ಯ ಹೊಲದಲ್ಲಿ ತುಂಬು ಇಳುವರಿ ಬರುತ್ತಿದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯೇ ಇಲ್ಲ. ಕೆ.ಜಿ. ಚೆಂಡು ಹೂವಿಗೆ ಈಗ ಬರೀ ಇಪ್ಪತ್ತು, ಮೂವತ್ತು ರೂಪಾಯಿ ಅಷ್ಟೇ ಇದೆ. ಇದರಿಂದ ಹೂವು ಕೀಳಲು, ವಾಹನ ಸಾಗಾಟಕ್ಕೆ ಖರ್ಚಾದ ವೆಚ್ಚವೂ ಸರದೂಗಿಸಲು ಆಗುತ್ತಿಲ್ಲ” ಎಂದು ಬೇಸರ ವ್ಯಕ್ತಪಡಿಸುತ್ತಾರೆ.

ತಿಂಗಳಲ್ಲಿ ಎರಡು ಅಥವಾ ಮೂರು ಬಾರಿ ಹೂ ಕಟಾವಿಗೆ ಬರುತ್ತದೆ. ಒಂದು ಸಲ ಹೂ ಕಟಾವು ಮಾಡಿದರೆ 8 ರಿಂದ 10 ಕ್ವಿಂಟಾಲ್‌ ಬರುತ್ತದೆ. ಆದರೆ ಮಾರುಕಟ್ಟೆಯಲ್ಲಿ ಬೆಲೆಯಿಲ್ಲದ ಕಾರಣ ಬೆಳೆ ಕಟಾವು ಮಾಡಲಿಲ್ಲ. ಮುಂಬರುವ ದಸರಾ, ದೀಪಾವಳಿವರೆಗೂ ಇಳುವರಿ ಬರುತ್ತದೆ. ದಸರಾ, ದೀಪಾವಳಿ ಹಬ್ಬದಲ್ಲಿ ಉತ್ತಮ ಬೆಲೆ ದೊರೆತರೆ ಆದಾಯ ಸಿಗಬಹುದು” ಎಂದು ಹೂವು ಬೆಳೆಗಾರ ಅಮರ್‌ ಶಿಂಧೆ ʼಈದಿನ.ಕಾಮ್‌ʼ ಗೆ ತಿಳಿಸಿದ್ದಾರೆ.

ಚಂಡು ಹೂ

ತೋಟಗಾರಿಕೆ ಇಲಾಖೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ

“ನಮ್ಮ ಹೊಲದಲ್ಲಿ ಈ ಹಿಂದೆ ಸೋಯಾಬಿನ್‌, ತೊಗರಿ, ಉದ್ದು ಸೇರಿದಂತೆ ಇತರೆ ಸಾಂಪ್ರದಾಯಿಕ ಬೆಳೆಗಳು ಬೆಳೆಯುತ್ತಿದ್ದರು. ನಾನು ಕೃಷಿಗೆ ತೊಡಗಿಸಿಕೊಂಡ ನಂತರ ಪೂರ್ಣ ವಾಣಿಜ್ಯ ಕೃಷಿ ಮಾಡುತ್ತಿದ್ದೇವೆ. ಒಟ್ಟು ಆರು ಎಕರೆಯಲ್ಲಿ ಹೂವು, ಶುಂಠಿ ಸೇರಿದಂತೆ ತರಕಾರಿ ಬೆಳೆಯುತ್ತೆ. ಕಳೆದ ಐದಾರು ವರ್ಷಗಳಿಂದ ಚಂಡು ಹೂ ಬೆಳೆಯುತ್ತಿದ್ದೇನೆ. ಆದರೆ ತೋಟಗಾರಿಕೆ ಇಲಾಖೆಯಿಂದ ಯಾವುದೇ ಸಹಾಯಧನ ದೊರಕಲಿಲ್ಲ. ಹಲವು ಬಾರಿ ತೋಟಗಾರಿಕೆ ಇಲಾಖೆಯ ತಾಲ್ಲೂಕು ಕಚೇರಿಗೆ ಭೇಟಿ ನೀಡಿ ಮಾಹಿತಿ ನೀಡಿದರೂ ಯಾವುದೇ ಯೋಜನೆಗಳಿಲ್ಲ ಎಂದು ಹೇಳಿದ್ದಾರೆ. ಹೀಗಾಗಿ ಸ್ವಂತ ಖರ್ಚಿನಲ್ಲೇ ಎಲ್ಲಾ ಬೆಳೆ ಬೆಳೆಯುತ್ತೇವೆ. ಇಲಾಖೆಯಿಂದ ಸಲಹೆ ಮಾರ್ಗದರ್ಶನ ನೀಡಿ ಸಹಾಯಧನ ನೀಡಿದರೆ ಇನ್ನಷ್ಟು ಹೆಚ್ಚಿನ ಗಳಿಸಲು ಸಾಧ್ಯ” ಎಂದು ಅಮರ ಒತ್ತಾಯಿಸಿದರು.

ಈ ಬಗ್ಗೆ ಭಾಲ್ಕಿ ತಾಲ್ಲೂಕು ತೋಟಗಾರಿಕೆ ಇಲಾಖೆ ಅಧಿಕಾರಿ ಮಾರುತಿ ಈದಿನ.ಕಾಮ್‌ ದೊಂದಿಗೆ ಮಾತನಾಡಿ, ” ನಾನು ತಿಂಗಳ ಹಿಂದೆ ವರ್ಗಾವಣೆಯಾಗಿ ಬಂದಿರುವೆ, ಈ ಬಗ್ಗೆ ಮಾಹಿತಿ ಪಡೆದು ಖುದ್ದು ಜಮೀನಿಗೆ ಭೇಟಿ ನೀಡುವೆ, ತೋಟಗಾರಿಕೆ ಕೃಷಿಯಲ್ಲಿ ಹೂ ಬೆಳೆಯುವ ರೈತರಿಗಾಗಿ ಇರುವ ಸಹಾಯಧನ ಒದಗಿಸುವೆ” ಎಂದು ತಿಳಿಸಿದರು.

ಈ ಸುದ್ದಿ ಓದಿದ್ದೀರಾ? ಮದ್ಯ ಮಾರಾಟಕ್ಕೆ ಪರವಾನಗಿ | ಜೀವ್ನ ಬರ್ಬಾದ್‌ ಆಗ್ತದೆ ಎನ್ನುತ್ತಿರುವ ಮಹಿಳೆಯರು

ತೋಟಗಾರಿಕೆ ಕೃಷಿ ಮಾಡುವವರಿಗೆ ಇಲಾಖೆಯಿಂದ ಹಲವಾರು ಯೋಜನೆಗಳಿದ್ದರೂ ಪ್ರಗತಿಪರ ಯುವ ರೈತರಿಗೆ ದಕ್ಕದೇ ಇರುವುದು ವಿಪರ್ಯಾಸವೇ ಸರಿ. ಸಂಬಂಧಪಟ್ಟ ಅಧಿಕಾರಿಗಳು ಇಂಥ ಯುವ ರೈತರಿಗೆ ಸೂಕ್ತ ಮಾರ್ಗದರ್ಶನ ಒದಗಿಸಿದರೆ ಕೃಷಿಯಲ್ಲಿ ಹೆಚ್ಚಿನ ಜನರು ತೊಡಗಿಸಿಕೊಳ್ಳಲು ಸಾಧ್ಯ ಎನ್ನುವುದು ರೈತರ ಅಭಿಪ್ರಾಯ.

WhatsApp Image 2025 02 06 at 11.55.32 e1738823214905
ಬಾಲಾಜಿ ಕುಂಬಾರ್
+ posts

ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ್
ಬಾಲಾಜಿ ಕುಂಬಾರ ಅವರು ಔರಾದ್ ತಾಲ್ಲೂಕಿನ ಚಟ್ನಾಳ ಗ್ರಾಮದವರು. ಸಾಹಿತ್ಯ, ಶಿಕ್ಷಣ ಹಾಗೂ ರಾಜಕೀಯ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ್ದಾರೆ. ಸದ್ಯ 'ಈದಿನ.ಕಾಮ್‌' ಮಾಧ್ಯಮ ಸಂಸ್ಥೆಯಲ್ಲಿ ಬೀದರ್ ಜಿಲ್ಲಾ ಹಿರಿಯ ಸಂಯೋಜಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕವಿತೆ, ಲೇಖನ, ದೇಶಿ ನುಡಿ ಬರಹ ಬರೆಯುವುದು ಇವರ ಮುಖ್ಯ ಹವ್ಯಾಸ.

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಧರ್ಮಸ್ಥಳ ಪ್ರಕರಣ | ಯೂಟ್ಯೂಬರ್ ಸಮೀರ್ ಎಂ.ಡಿ.ಗೆ ನಿರೀಕ್ಷಣಾ ಜಾಮೀನು: ಬಂಧನ ಭೀತಿಯಿಂದ ಪಾರು

ಧರ್ಮಸ್ಥಳದಲ್ಲಿ ಅಕ್ರಮವಾಗಿ ಶವಗಳನ್ನು ಹೂಳಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣದಲ್ಲಿ...

ಯಾದಗಿರಿ | ಕಟ್ಟಡ ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ನೀಡುವಂತೆ ಒತ್ತಾಯ

ಕಾರ್ಮಿಕರ ಮಕ್ಕಳಿಗೆ ಸಹಾಯ ಧನ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಸುವಂತೆ ಕಲ್ಯಾಣ...

ರಾಯಚೂರು | ಸಾಗುವಳಿ ರೈತರಿಗೆ ಭೂಮಿಯನ್ನು ಮಂಜೂರು ಮಾಡಬೇಕು : ಮಾರೆಪ್ಪ ಹರವಿ

ಸಾಗುವಳಿ ಮಾಡುತ್ತಿರುವ ರೈತರಿಗೆ ಭೂ ಮಂಜೂರಾತಿ ನೀಡಬೇಕೆಂದು ಭೂಮಿ ಮತ್ತು ವಸತಿ...

ಸರ್ಕಾರಿ ಶಾಲೆಗಳನ್ನು ಮುಚ್ಚಿ, ಜವಾಬ್ದಾರಿಯಿಂದ ನುಣುಚಿಕೊಳ್ಳಲು ಸರ್ಕಾರದಿಂದಲೇ ಷಡ್ಯಂತ್ರ: ಪ್ರೊ. ಮುರಿಗೆಪ್ಪ

"ತನ್ನ ಮೇಲಿನ ಭಾರವನ್ನು ಇಳಿಸಿಕೊಳ್ಳಲು ಸರ್ಕಾರಿ ಶಾಲೆಗಳನ್ನು ಮುಚ್ಚಿ ಖಾಸಗಿ ಶಾಲೆಗಳಿಗೆ...

Download Eedina App Android / iOS

X