ಹಳ್ಳ ದಾಟಲು ಹೋದ ಬ್ಯಾಂಕ್ ಉದ್ಯೋಗಿಯೊಬ್ಬರು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋದ ಘಟನೆ ರಾಯಚೂರು ತಾಲ್ಲುಕಿನ ಫತ್ತೇಪುರ ಗ್ರಾಮದಲ್ಲಿ ನಡೆದಿದೆ.
ಜಾಗೀರ ವೆಂಕಟಾಪುರು ಗ್ರಾಮದ ನಿವಾಸಿ ಬಸವರಾಜ ಎಂಬುವರು ಕೊಚ್ಚಿಕೊಂಡು ಹೋದ ಯುವಕ ಎಂದು ತಿಳಿದು ಬಂದಿದೆ.
ಕಳೆದ ನಾಲ್ಕು ದಿನಗಳಿಂದ ನಿರಂತರವಾಗಿ ಸುರಿದ ಮಳೆಯಿಂದಾಗಿ ಗೋಕುಲ್ ಸಾಬ್ ಹಳ್ಬ ಮೈದುಂಬಿ ಹರಿಯುತ್ತಿದ್ದು , ಈ ವೇಳೆ ಸಂಜೆ 6 ಗಂಟೆಗೆ ಸುಮಾರಿಗೆ ಹಳ್ಳ ದಾಟುವ ವೇಳೆ ಕಾಲು ಜಾರಿ ಬಿದ್ದು ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದಾನೆ ಎನ್ನಲಾಗಿದೆ.
ರಾಯಚೂರು ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
