ಕೇಸರಿ ಧ್ವಜವನ್ನು ಒಳಉಡುಪಿನಲ್ಲಿ ಇಟ್ಟುಕೊಂಡು ಅಪಮಾನಿಸಿದ್ದಾನೆಂಬ ಆರೋಪದ ಮೇಲೆ ಮುಸ್ಲಿಂ ಯುವಕನನ್ನು ಬೆತ್ತಲೆಗೊಳಿಸಿ ಹಿಂದುತ್ವ ಕೋಮುವಾದಿ ಕಾರ್ಯಕರ್ತರು ಹಲ್ಲೆಗೈದಿರುವ ಘಟನೆ ತೆಲಂಗಾಣದ ಮೊರಗಿ ಗ್ರಾಮದಲ್ಲಿ ನಡೆದಿದೆ.
ತೆಲಂಗಾಣದ ಸಂಗಾರೆಡ್ಡಿ ಜಿಲ್ಲೆ ಮೋರಗಿ ಗ್ರಾಮದ ಅಬ್ಬಾಸ್ ಅಲಿ ಮೊಹಮ್ಮದ್ ರಸೂಲ್ ಎಂಬ ಯುವಕನ ಮೇಲೆ ಹಲ್ಲೆ ನಡೆಸಲಾಗಿದೆ. ಆತನನ್ನು ವಿವಸ್ತ್ರಗೊಳಿಸಿ ʼಜೈ ಶ್ರೀರಾಮ್ʼ ಎಂದು ಘೋಷಣೆ ಕೂಗುತ್ತ ಹಿಂದುತ್ವವಾಗಿಗಳು ಥಳಿಸಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಹಲ್ಲೆಗೊಳಗಾಲ ಯುವಕ ರಸೂಲ್ ಮತ್ತೆ ಹಲ್ಲೆಗೈದ ನಾಲ್ವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಮೋರಗಿ ಗ್ರಾಮವು ಬೀದರ್ ಜಿಲ್ಲೆಯ ಗಡಿ ಭಾಗದಲ್ಲಿದ್ದು, ಘಟನೆಯು ಬೀದರ್ ಜಿಲ್ಲೆಯಲ್ಲಿ ನಡೆದಿದೆ ಎಂದು ಕೆಲವು ವಿಡಿಯೋವನ್ನು ಹಂಚಿಕೊಂಡಿದ್ದಾರೆ.
ಘಟನೆ ಬಗ್ಗೆ ಈದಿನ.ಕಾಮ್ ಜೊತೆ ಮಾತನಾಡಿದ ಜನವಾಡ ಠಾಣೆಯ ಪೊಲೀಸ್ ಇನ್‌ಸ್ಪೆಕ್ಟರ್ ಹುಲೆಪ್ಪಾ ಗೌಡಗೊಂಡಾ, “ಇದು ಬೀದರ್ ಜಿಲ್ಲೆಯ ಘಟನೆಯಲ್ಲ. ಪಕ್ಕದ ತೆಲಂಗಾಣದ ನಾಗಲಗಿದ್ದ ಠಾಣೆ ವ್ಯಾಪ್ತಿಯಲ್ಲಿ ನಡೆದಿರುವ ಘಟನೆ” ಎಂದು ಮಾಹಿತಿ ನೀಡಿದ್ದಾರೆ.