ಕನ್ನಡ ಚಲನಚಿತ್ರ ನಟ, ಸಾಮಾಜಿಕ ಹೋರಾಟಗಾರ ಚೇತನ್ ಅಹಿಂಸಾ ಅವರು ನಾಳೆ (ಜ.19) ಔರಾದ ಪಟ್ಟಣಕ್ಕೆ ಆಗಮಿಸಲಿದ್ದಾರೆ.
ಪಟ್ಟಣದ ಬಸ್ ನಿಲ್ದಾಣದ ಸಮೀಪ ಇರುವ ಕನ್ನಡ ಭವನದಲ್ಲಿ ಭಾನುವಾರ ಬೆಳಿಗ್ಗೆ 10 ಗಂಟೆಗೆ ಸಮಾನ ಮನಸ್ಕರ ಸಂಘಟನೆಗಳ ಪ್ರಮುಖರೊಂದಿಗೆ ವಿಶೇಷ ಸಭೆ ನಡೆಸಲಿದ್ದಾರೆ ಎಂದು ಆಯೋಜಕರಾದ ಸುಭಾಷ ಲಾಧಾ, ಗಣಪತಿ ವಾಸುದೇವ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಬೀದರ್ | ಪಶು ಮೇಳ: ಬೆರಗುಗೊಳಿಸಿದ 90 ಕೆಜಿ ತೂಕದ ಮೇಕೆ, ₹9 ಲಕ್ಷದ ಗಿರ್ ತಳಿ ಎತ್ತು
ಸಭೆಯಲ್ಲಿ ಪ್ರಸ್ತುತ ಸಮಾಜದ ಬೆಳವಣಿಗೆ ಹಾಗೂ ಪರ್ಯಾಯ ರಾಜಕಾರಣದ ವಿಷಯದ ಕುರಿತು ಚರ್ಚಿಸಲಿದ್ದು, ಸಾಮಾಜಿಕ ಚಿಂತಕರು, ಪ್ರಗತಿಪರ ಹೋರಾಟಗಾರರು, ವಿದ್ಯಾರ್ಥಿಗಳು, ರೈತ, ಕಾರ್ಮಿಕರ ಸಂಘಟನೆಗಳ ಪ್ರಮುಖರು ಭಾಗವಹಿಸಬೇಕು ಎಂದು ಆಯೋಜಕರು ಪ್ರಕಟಣೆಯಲ್ಲಿ ಮನವಿ ಮಾಡಿದ್ದಾರೆ.