ಬೆಳಗಾವಿಯಲ್ಲಿ ನಡೆಯುತ್ತಿರುವ ಅಧಿವೇಶನದಲ್ಲಿ ಕರ್ನಾಟಕ ನ್ಯಾಯವಾದಿಗಳ ಸಂರಕ್ಷಣಾ-2023 ಪ್ರಸ್ತಾವನೆಯನ್ನು ಅನುಮೋದಿಸಬೇಕು. ನ್ಯಾಯವಾದಿಗಳ ಸಂರಕ್ಷಣಾ ಕಾನೂನನ್ನು ಜಾರಿಗೆ ತರಬೇಕು ಎಂದು ಒತ್ತಾಯಿಸಿ ವಕೀಲರ ಸಂಘವು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆಯಲ್ಲಿ ಪ್ರತಿಭಟನೆ ನಡೆಸಿದೆ.
ಪ್ರತಿಭಟನೆಯಲ್ಲಿ ಮಾತನಾಡಿದ ವಕೀಲರ ಸಂಘದ ಕೆ ವೆಂಕಟೇಶ್, “ಗುರುವಾರ ಅಧಿವೇಶನದಲ್ಲಿ ಕರ್ನಾಟಕ ನ್ಯಾಯವಾದಿಗಳ ಸಂರಕ್ಷಣಾ-2023 ಪ್ರಸ್ತಾವನೆಯನ್ನು ಮಾಜಿ ಕಾನೂನು ಸಚಿವ ಸುರೇಶ್ ಕುಮಾರ್, ಶಾಸಕ ಎಎಸ್ ಪೊನ್ನಣ್ಣ, ಶಾಸಕ ಮಹಾಂತೇರ್ಶ ಕೌಜಲಗಿ ಅವರು ಪ್ರಸ್ತಾಪಿಸಿದ್ದಾರೆ. ಅದನ್ನು ಅನುಮೋದಿಸಿ ಜಾರಿಗೆ ತರಬೇಕು” ಎಂದು ಆಗ್ರಹಿಸಿದರು.
ಮತ್ತೊಬ್ಬ ವಕೀಲ ರವಿಕಾಂತ್ ಮಾತನಾಡಿ, “ಈ ಪ್ರಸ್ತಾವನೆಯು ವಿಶೇಷ ಕಾಯ್ದೆಯಾಗಿ ಜಾರಿಯಾಗಬೇಕು. ರೈತಾಪಿ, ಕಾರ್ಮಿಕ ವರ್ಗ ಮತ್ತು ದಮಣಿತರ ಪರ ಹಾಗೂ ಶೋಷಣೆಗೆ ಒಳಗಾದವರ ಪರ ಧ್ವನಿ ಎತ್ತಿದರೆ ನಮಗೆ ಬೆದರಿಕೆ ಬರುವಂತ ಸನ್ನಿವೇಶಗಳು ಹೆಚ್ಚಾಗಿವೆ. ವಕೀಲರ ಮೇಲಿನ ಹಲ್ಲೆಗೆ ಈಗಿರುವ ಆರು ತಿಂಗಳಿಂದ ಮೂರು ವರ್ಷಗಳ ಜೈಲು ಶಿಕ್ಷೆ ಸಾಲದು. ಶಿಕ್ಷೆಯ ಪ್ರಮಾಣವನ್ನು 7 ವರ್ಷಕ್ಕೆ ಹೆಚ್ಚಿಸಬೇಕು. ವಕೀಲರು ಯಾವುದೇ ಭಯವಿಲ್ಲದೆ ಕೆಲಸ ಮಾಡುವಂತಾಗಬೇಕು” ಎಂದು ತಿಳಿಸಿದರು.
ವಕೀಲರ ಹೋರಾಟಕ್ಕೆ ರೈತ ಸಂಘವು ಬೆಂಬಲ ನೀಡಿದೆ. ಪ್ರತಿಭಟನೆಯಲ್ಲಿ ತಾಲೂಕು ವಕೀಲ ಸಂಘದ ಕಾರ್ಯದರ್ಶಿ ಪುಟ್ಟಸ್ವಾಮಿ, ವಕೀಲ ಶಿವಣ್ಣ ಸತ್ಯನಾರಾಯಣ ಸಂಪತ್ ಎಂ ಎನ್ ರಾಜೇಶ್ ಕೆಂಪರಾಜ್ ಮಾದು ಶ್ರೀನಿವಾಸ್ ನಂದೀಶ್ ಕಿರಣ್ ಅನಿಲ್ ಪ್ರಭುಸ್ವಾಮಿ ಹಾಗೂ ಮನು ಶಾನ್ಬೋಗ್ ರೈತ ಸಂಘದ ಮಹದೇವಪ್ಪ ಕುಂದ್ಕೇರೆ ಸಂಪತ್ತು ಹಾಲಹಳ್ಳಿ ಮಲ್ಲೇಶ್ ಇನ್ನಿತರರು ಇದ್ದರು.