ಸರ್ಕಾರದ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಡಿಜಿಟಲ್ ಖಾತೆಗಳನ್ನು ವಿತರಿಸಿದ ಆರೋಪದ ಮೇರೆಗೆ ಬೀದರ್ ತಾಲೂಕಿನ ಜನವಾಡ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಸವಿತಾ ಹಿರೇಮಠ ಅವರನ್ನು ಅಮಾನತುಗೊಳಿಸಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಗಿರೀಶ್ ಬದೋಲೆ ಆದೇಶ ಹೊರಡಿಸಿದ್ದಾರೆ.
ಪಿಡಿಒ ಸವಿತಾ ಹಿರೇಮಠ ಅವರು ಭಾಗ್ಯವಂತಿ ಲೇಔಟ್‌ನ ನಮೂನೆ -9 ಹಾಗೂ ನಮೂನೆ-11(ಎ) ಡಿಜಿಟಲ್ ಖಾತೆಗಳನ್ನು ವಿತರಿಸಲು ಗ್ರಾಮ ಪಂಚಾಯತಿ ಬ್ಯಾಂಕ್ ಖಾತೆಗೆ 2.11 ಲಕ್ಷ ಹಣ ಪಾವತಿ ಮಾಡಿರುವುದು ಪಿಡಿಒ ಅವರು ಸಲ್ಲಿಸಿರುವ ದಾಖಲೆಗಳಿಂದ ಕಂಡು ಬಂದಿದೆ.
ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಎಚ್ಚರಿಸಿದೆ ಅನುಮೋದನೆ ಪಡೆಯದೆ ಜನವಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಬರುವ ಭಾಗ್ಯವಂತಿ ಹೈಟೆಕ್ ಲೇಔಟ್‌ನಲ್ಲಿ ಸುಮಾರು 200 ಡಿಜಿಟಲ್ ಖಾತೆಗಳನ್ನು ವಿತರಿಸಿದ್ದಾರೆ. ಇದು ಸರ್ಕಾರದ ಮಾರ್ಗಸೂಚಿಗೆ ವಿರುದ್ಧವಾದದ್ದು ಎಂದು ಆದೇಶದಲ್ಲಿ ತಿಳಿಸಿದ್ದಾರೆ.