ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದೆ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ಒದ್ದಾಡಿರುವ ಘಟನೆ ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಬ್ಯಾಕೊಡು ಪ್ರಾಥಮಿಕ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಗರ್ಭಿಣಿಯೊಬ್ಬರಿಗೆ ಹೆರಿಗೆ ನೋವು ಕಾಣಿಸಿತ್ತು. ಆದರೆ, ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಆ್ಯಂಬುಲೆನ್ಸ್ ವ್ಯವಸ್ಥೆ ಇಲ್ಲದ ಕಾರಣ, ಆಕೆಯ ಕುಟುಂಬಸ್ಥರು ವಾಹನ ವ್ಯವಸ್ಥೆಗಾಗಿ ಪರದಾಡಿದ್ದಾರೆ. ಬಳಿಕ, ಸ್ಥಳೀಯರೊಬ್ಬರ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.
ಬ್ಯಾಕೊಡು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡುವಂತೆ ಸ್ಥಳೀಯರು ಹಲವಾರು ದಿನಗಳಿಂದ ಒತ್ತಾಯಿಸುತ್ತಲೇ ಇದ್ದಾರೆ. ಆದರೆ, ಆರೋಗ್ಯ ಇಲಾಖೆ ಸ್ಪಂದಿಸುತ್ತಿಲ್ಲವೆಂದು ಗ್ರಾಮಸ್ಥರು ಕಿಡಿಕಾರಿದ್ದಾರೆ.
ಬ್ಯಾಕೊಡು ಮತ್ತು ತಮರಿ ಪ್ರಾಥಮಿಕ ಅರೋಗ್ಯ ಕೇಂದ್ರ ನೆಪಮಾತ್ರಕ್ಕೆ ಇದೆ. ಸರಿಯಾದ ಔಷಧಿ ವ್ಯವಸ್ಥೆ ಇಲ್ಲ. ಹೆರಿಗೆಗೆ ಉತ್ತಮ ಸೌಲಭ್ಯಗಳಿಲ್ಲ. ರೋಗಿಗಳನ್ನು ಸಾಗರದ ತಾಲೂಕು ಆಸ್ಪತ್ರೆ ಅಥವಾ ಶಿವಮೊಗ್ಗದ ಆಸ್ಪತ್ರೆ ಕಳಿಸುತ್ತಿದ್ದಾರೆ ಎಂದು ದುರುತ್ತಿದ್ದಾರೆ.
ತಕ್ಷಣ ಈ ಕುರಿತು ಮಾನ್ಯ ಶಾಸಕರು ಇದರ ಬಗ್ಗೆ ಗಮನಹರಿಸಿ ಸೂಕ್ತ ಕ್ರಮ ಜರುಗಿಸಿ ಸಮಸ್ಯೆಗೆ ಪರಿಹಾರ ಒದಗಿಸಬೇಕು ಎಂದು ಪರಮೇಶ್ ಕರೂರ್ ಆಗ್ರಹಿಸಿದ್ದಾರೆ.