ರಸ್ತೆ ದಾಟುವಾಗ ಸಿಲಿಂಡರ್ ತುಂಬಿದ ಲಾರಿಯೊಂದು ಮಗುವಿನ ಮೇಲೆ ಹರಿದ ಪರಿಣಾಮ ಎಂಟು ವರ್ಷದ ಮಗು ಸ್ಥಳದಲ್ಲೇ ಸಾವನಪ್ಪಿದ ದಾರಣ ಘಟನೆ ತುರ್ವಿಹಾಳ ಸಮೀಪದ ಕಲಮಂಗಿ ಮತ್ತು ಊಮಲೂಟಿ ಗ್ರಾಮಗಳ ಮಧ್ಯೆ ಮುಖ್ಯರಸ್ತೆಯಲ್ಲಿ ಜರುಗಿದೆ.
ಮೃತ ಮಗು ಬಸವರಾಜ್ ಉರಕಡ್ಲಿ(8) 2ನೇ ತರಗತಿ ಓದುತ್ತಿದ್ದ, ಮೂಲತಃ ದೇವದುರ್ಗ ತಾಲೂಕಿನ ಗಬ್ಬೂರು ಗ್ರಾಮದವರಾಗಿದ್ದು, ಸ್ವಗ್ರಾಮದಿಂದ ಸಿಂಧನೂರು-ಕುಷ್ಟಗಿ ಮಾರ್ಗವಾಗಿ ಕಾರ್ಯಕ್ರಮವೊಂದರ ನಿಮಿತ್ಯ ಹುಬ್ಬಳ್ಳಿಗೆ ಹೋಗುತ್ತಿದ್ದರು. ಮಾರ್ಗ ಮಧ್ಯೆ ಮಧ್ಯಾಹ್ನ ಊಟಕ್ಕಾಗಿ ವಾಹನ ನಿಲ್ಲಿಸಿದಾಗ ಈ ದುರ್ಘಟನೆ ಸಂಭವಿಸಿದೆ.
ಈ ಸಂಬಂಧ ತುರ್ವಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.