ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಸಮೀಪದ ಗೀಳಾಲಗುಂಡಿಯಲ್ಲಿರುವ ಕೆರೆಗೆ ಬಟ್ಟೆ ತೊಳೆಯಲೆಂದು ಹೋಗಿದ್ದ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮಹಿಳೆಯೋರ್ವರು ಮೃತಪಟ್ಟ ಘಟನೆ ನಡೆದಿದೆ.
ಕೋಣೆಹೊಸೂರಿನ ನಿವಾಸಿಯಾದ ಗಾಯಿತ್ರಮ್ಮ ಪಾಂಡುರಂಗಪ್ಪ ( 55) ಇವರು ತಮ್ಮ ಊರಿನಲ್ಲಿ ಯಾವುದೇ ಕೆರೆ ಇರದ ಕಾರಣ ಯಾವಾಗಲೂ ಗೀಳಾಲಗುಂಡಿಯ ಅಮ್ಮನ ಕೆರೆಗೆ ಬಟ್ಟೆ ತೊಳೆಯಲು ಹೋಗುತ್ತಿದ್ದರು. ಹೀಗಾಗಿ, ಬಟ್ಟೆ ತೊಳೆಯಲು ಗಾಯತ್ರಿ ಅವರು ಅಮ್ಮನ ಕೆರೆಗೆ ಹೋಗಿದ್ದಾಗ ಆಕಸ್ಮಿಕವಾಗಿ ಕಾಲು ಜಾರಿ ಬಿದ್ದು ಮೃತಪಟ್ಟಿರುವುದಾಗಿ ತಿಳಿದುಬಂದಿದೆ.
ಸಂಜೆಯಾದರೂ ಗಾಯಿತ್ರಮ್ಮ ಮನೆಗೆ ಹಿಂದಿರುಗದ ಕಾರಣ ಅವರ ಮಕ್ಕಳಾದ ಲೋಹಿತ್ ಹಾಗೂ ಗಣೇಶ ಕೆರೆ ಬಳಿ ಹುಡುಕುತ್ತಾ ಹೋದಾಗ ತಾಯಿ ಚಪ್ಪಲಿ ಹಾಗೂ ಮನೆಯ ಬಟ್ಟೆಗಳು ಕೆರೆಯ ದಡದಲ್ಲಿ ಕಂಡುಬಂದಿದೆ. ಅನುಮಾನಗೊಂಡು ತಕ್ಷಣ ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಕರೆಸಿ ಕೆರೆಯಲ್ಲಿ ಹುಡುಕಾಡಿದಾಗ ಗಾಯತ್ರಿ ಅವರ ಮೃತದೇಹ ಪತ್ತೆಯಾಗಿದೆ.
ಇದನ್ನು ಓದಿದ್ದೀರಾ? ಉಡುಪಿ | ಯತ್ನಾಳ್‌ರಿಗೆ ಹಿಂದೂ -ಮುಸ್ಲಿಂ ಬಿಟ್ಟು ಬೇರೇನೂ ಗೊತ್ತಿಲ್ಲ : ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್
ಘಟನೆಗೆ ಸಂಬಂಧಿಸಿ ಆನಂದಪುರ ಪೊಲೀಸ್ ಠಾಣೆಯಲ್ಲಿ ಆಕಸ್ಮಿಕ ಸಾವು ಪ್ರಕರಣ ದಾಖಲಾಗಿದೆ.
ವರದಿ: ಅಮಿತ್ ಆರ್, ಆನಂದಪುರ
