ಬೆಂಗಳೂರು ಗ್ರಾಮಾಂತರದ ಹುಸ್ಕೂರು ಮದ್ದೂರಮ್ಮ ಜಾತ್ರೆಯಲ್ಲಿ ತೇರು ಧರೆಗುರುಳಿದ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಯುವತಿ ಇಂದು ಸಾವನ್ನಪ್ಪಿದ್ದಾರೆ.
ತೇರಿನ ಕೆಳಗೆ ಸಿಲುಕಿ ನಿನ್ನೆ 28ರ ಯುವಕ ಲೋಹಿತ್ ಸಾವನ್ನಪ್ಪಿದ್ದರು. ಇಂದು ಜ್ಯೋತಿ ಸಾವನ್ನಪ್ಪಿದ್ದಾರೆ. ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಮತ್ತೊಬ್ಬ ಯುವಕ ರಾಕೇಶ್ ಸದ್ಯ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ ಎಂದು ತಿಳಿದುಬಂದಿದೆ.
ಜಾತ್ರೆಗೆ ವಿವಿಧ ಗ್ರಾಮಗಳಿಂದ 150ಕ್ಕೂ ಹೆಚ್ಚು ಅಡಿ ಎತ್ತರದ ತೇರುಗಳು ಆಗಮಿಸಿದ್ದವು. ತೇರು ಎಳೆದು ತರುವ ಸಂದರ್ಭದಲ್ಲಿ ಅವಘಡ ಸಂಭವಿಸಿತ್ತು.
ಇದನ್ನೂ ಓದಿ: ಆನೇಕಲ್ | ಕ್ರಿಕೆಟ್ ಬೆಟ್ಟಿಂಗ್; ಟೆಕ್ಕಿ ಬಂಧನ
ತೇರಿನಲ್ಲಿದ್ದ ಹಲವರಿಗೆ ಗಾಯಗಳಾಗಿವೆ. ಕಳೆದ ವರ್ಷ ಹೀಲಲಿಗೆ ತೇರು ಬಿದ್ದಿತ್ತು. ಇಂದು ಗಾಳಿ ಮಳೆ ಹೆಚ್ಚಾದ ಹಿನ್ನೆಲೆ ಅವಘಡ ಸಂಭವಿಸಿದೆ. ಜಾತ್ರೆ ಸಂಭ್ರಮದ ದಿನ ಸೂತಕದ ಛಾಯೆ ಆವರಿಸಿದೆ.