ಅನ್ನ ಭಾಗ್ಯ | ರಾಜ್ಯದ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯ ಖರೀದಿಸಿ ಹಂಚಿ: ರೈತ ಸಂಘಗಳ ಮನವಿ

Date:

Advertisements
  • ಅನ್ನಭಾಗ್ಯ ಯೋಜನೆಯಲ್ಲಿ ರೈತರಿಂದ ಧಾನ್ಯಗಳ ಖರೀದಿಗೆ ಆಗ್ರಹ
  • ‘ರಾಜ್ಯ ಸರ್ಕಾರವು ಕೇಂದ್ರದೊಂದಿಗೆ ಸಂಘರ್ಷಕ್ಕಿಳಿಯುವುದು ಬೇಡ’

ಅನ್ನಭಾಗ್ಯ ಯೋಜನೆಯೆಂದರೆ ಕೇವಲ ಅಕ್ಕಿ ವಿತರಣೆ ಅಷ್ಟೇ ಅಲ್ಲ, ಅಕ್ಕಿಯಿಂದ ಪೌಷ್ಟಿಕತೆ ನಿವಾರಣೆಯಾಗದು. ಅದಕ್ಕಾಗಿ ಅಕ್ಕಿ ಜೊತೆಗೆ ಜೋಳ, ರಾಗಿ, ಮತ್ತು ಸಿರಿಧಾನ್ಯಗಳನ್ನು ನಮ್ಮ ರೈತರಿಂದಲೇ ಖರೀದಿಸಿ ಹಂಚಿ. ಇದರಿಂದ ಅಪೌಷ್ಟಿಕತೆಯ ಸಮಸ್ಯೆಯನ್ನೂ ನಿವಾರಿಸಬಹುದು ಎಂದು ಭಾರತೀಯ ಕೃಷಿಕ ಸಮಾಜ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಮನವಿ ಮಾಡಿಕೊಂಡಿವೆ.

ಸೋಮವಾರ ಭಾರತೀಯ ಕೃಷಿಕ ಸಮಾಜ ಸಂಘಟನೆ ರಾಜ್ಯಾಧ್ಯಕ್ಷ ಸಿದಗೌಡ ಮೋದಗಿ ನೇತೃತ್ವದಲ್ಲಿ ಬೆಳಗಾವಿ ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಆಹಾರ ನಾಗರಿಕ ಸರಬರಾಜು ಇಲಾಖೆ ಸಚಿವ ಕೆ ಎಚ್‌ ಮುನಿಯಪ್ಪ ಅವರಿಗೆ ಮನವಿ ಸಲ್ಲಿಸಿದರು.

“ಕರ್ನಾಟಕ ಸರ್ಕಾರದ 5 ಗ್ಯಾರಂಟಿಗಳಲ್ಲಿ `ಅನ್ನಭಾಗ್ಯ’ ಯೋಜನೆ ಹಸಿದವರ ಹೊಟ್ಟೆ ತುಂಬಿಸುವ ಅತ್ಯಂತ ಮಹತ್ವಾಕಾಂಕ್ಷೆ ಯೋಜನೆಯಾಗಿದೆ. ಈ ಯೋಜನೆ ಅನುಷ್ಠಾನಕ್ಕಾಗಿ ಹೊರ ರಾಜ್ಯಗಳಿಂದ ಖರೀದಿ ಮಾಡುವ ಗುಣಮಟ್ಟವಲ್ಲದ, ಸಾಧಾರಣ ಅಕ್ಕಿಯನ್ನು ಹೆಚ್ಚಿನ ಧಾರಣೆ ಕೊಡುವದರಿಂದ ರಾಜ್ಯ ಸರ್ಕಾರಕ್ಕೂ ಆರ್ಥಿಕ ಹೊರೆಯಾಗುತ್ತದೆ. ಜೊತೆಗೆ ರಾಜ್ಯ ರೈತರ ಹಿತವನ್ನು ಕಡೆಗಣಿಸಿದಂತಾಗುತ್ತದೆ” ಎಂದು ಮನವಿಯಲ್ಲಿ ಹೇಳಿದ್ದಾರೆ.

Advertisements

“ಕರ್ನಾಟಕದಲ್ಲಿ ಪ್ರಾಂತವಾರು, ವಲಯವಾರು ಆಹಾರ ಪದ್ಧತಿ ಬೇರೆ ಬೇರೆ ಇದೆ. ಕರ್ನಾಟಕ ಸರ್ಕಾರವು ಕೇಂದ್ರ ಸರ್ಕಾರದೊಂದಿಗೆ ಸಂಘರ್ಷಕ್ಕಿಳಿಯದೆ ಕರ್ನಾಟಕದಲ್ಲಿ ಬೆಳೆಯುವ ಜೋಳ, ರಾಗಿ, ಕುಚಲಕ್ಕಿ ಹಾಗೂ ಸಿರಿಧಾನ್ಯಗಳನ್ನು ಪಡಿತರಕ್ಕೆ ಬೇಕಾಗುವಷ್ಟು ಆಹಾರ ಧಾನ್ಯವನ್ನು ಕೃಷಿ ಇಲಾಖೆಯ ಅಥವಾ ರಾಜ್ಯ ಆಹಾರ ನಿಗಮ ಮುಖಾಂತರ ಖರೀದಿಸಬಹುದು” ಎಂದು ಸಲಹೆ ನೀಡಲಾಗಿದೆ.

ಈ ಸುದ್ದಿ ಓದಿದ್ದೀರಾ? ಅನ್ನಭಾಗ್ಯ: ರಾಜ್ಯದಲ್ಲೇ ಬೇಡಿಕೆ ಪೂರೈಕೆಯಷ್ಟು ಅಕ್ಕಿ ಇದ್ದರೆ ಇಲ್ಲೇ ಖರೀದಿ: ಸಿಎಂ ಸಿದ್ದರಾಮಯ್ಯ

“ಕೃಷಿ ಸಂಪರ್ಕ ಕೇಂದ್ರಗಳು ಕೇವಲ ಬೀಜ, ಕೃಷಿ ಸಲಕರಣೆ ಪೂರೈಸುವ ಕೇಂದ್ರಗಳಾಗಿವೆ. ಉಳಿದ ಸಮಯದಲ್ಲಿ ಕೃಷಿ ಸಂಪರ್ಕ ಕೇಂದ್ರಗಳನ್ನೇ ರೈತರ ಉತ್ಪನ್ನ ಖರೀದಿ ಕೇಂದ್ರಗಳಾಗಿ ಪರಿವರ್ತನೆ ಮಾಡಿದರೆ, ಇದರಿಂದ ಸರ್ಕಾರಕ್ಕೆ ಮತ್ತು ರೈತರಿಗೆ ನೆರವಾದಂತಾಗುತ್ತದೆ. ಮತ್ತು ಸಂಪರ್ಕಗಳಿರುವದರಿಂದ ಸಾಗಾಣಿಕೆ ವೆಚ್ಚ ತಗ್ಗಲಿದೆ. ಹೋಬಳಿಗೊಂದು ಕೃಷಿ ಕರ್ನಾಟಕ ಸರ್ಕಾರ ನೇರವಾಗಿ ರೈತರಿಂದ ಖರೀದಿಸುವದರಿಂದ ಹಲವಾರು ಪ್ರಯೋಜನ ಪಡೆಯಬಹುದಾಗಿದೆ” ಎಂದು ಮನವಿಯಲ್ಲಿ ಕೋರಲಾಗಿದೆ.

“ಇದರಿಂದ ರೈತರಿಗೆ ಪಾರದರ್ಶಕ ವ್ಯವಹಾರ, ಗುಣಮಟ್ಟ ಆಹಾರಧಾನ್ಯ, ಉತ್ತಮಧಾರಣೆ, ಸಕಾಲಕ್ಕೆ ಹಣ ಪಾವತಿ, ಸಾಗಾಣಿಕೆ ವೆಚ್ಚ ಉಳಿತಾಯ, ಏಜಂಟರ ಹಾವಳಿ ನಿಯಂತ್ರಣ ಮತ್ತು ಮುಖ್ಯವಾಗಿ ಸರ್ಕಾರದ ಹಣ ಹಣ ನೇರವಾಗಿ ರೈತರಿಗೆ ತಲುಪುತ್ತದೆ. ಪ್ರಾಂತವಾರು, ವಲಯವಾರು ಉಪಯೋಗಿಸುವ ಧಾನ್ಯಗಳಿಗೆ ಪ್ರಾಧಾನ್ಯತೆ ನೀಡಿದಂತಾಗುತ್ತದೆ” ಎಂದು ತಿಳಿಸಲಾಗಿದೆ.

eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

ಉಡುಪಿ | ಅಡಿಷನಲ್ ಎಸ್‌ಪಿ ಕಾರಿಗೆ ಡಿಕ್ಕಿ ಹೊಡೆದು ಕರ್ತವ್ಯಕ್ಕೆ ಅಡ್ಡಿ ಆರೋಪ; ಮೂವರ ಬಂಧನ

ಮಹೇಶ್ ಶೆಟ್ಟಿ ತಿಮರೋಡಿ ಅವರನ್ನು ಬಂಧಿಸಿ ಕರೆದೊಯ್ಯುವಾಗ ಪೊಲೀಸರ ಕರ್ತವ್ಯಕ್ಕೆ ಅಡ್ಡಿಪಡಿಸಿದ...

ಚಿಕ್ಕಮಗಳೂರು l ಕಾಫಿ ನಾಡಿನಲ್ಲಿ ಕಾಡಾನೆ ಹಾವಳಿ; ರೈತರ ಬೆಳೆ ಹಾನಿ

ಕಾಫಿ ನಾಡಿನಲ್ಲಿ ಕಾಡಾನೆ ಎಲ್ಲೆಡೆ ಓಡಾಡುತ್ತಿರುವ ದೃಶ್ಯ ಸಾರ್ವಜನಿಕರಿಗೆ ಹಾಗೂ ಸ್ಥಳೀಯ...

Download Eedina App Android / iOS

X