ಬೀದರ್ ವಿಶ್ವವಿದ್ಯಾಲಯದ ಸಿಂಡಿಕೇಟ್‌ಗೆ ಆರು ಸದಸ್ಯರನ್ನು ರಾಜ್ಯ ಸರ್ಕಾರ ನೇಮಿಸಿದೆ.
ಬೀದರ್ ನಗರದ ಶಿವನಾಥ ಮಾಧವರಾವ್ ಪಾಟೀಲ್ (ಸಾಮಾನ್ಯ), ಬೀದರ್ ತಾಲ್ಲೂಕಿನ ಮಲ್ಕಾಪುರ ಗ್ರಾಮದ ಸಚಿನ್ ಶಿವರಾಜ (ಸಾಮಾನ್ಯ) ಬೀದರ್ ನಗರದ ವಿಠ್ಠಲದಾಸ ದೇವಿದಾಸ ಪ್ಯಾಗೆ (ಪರಿಶಿಷ್ಟ ಜಾತಿ) , ಬಸವಕಲ್ಯಾಣ ನಗರದ ಅರ್ಜುನ್ ಮರೆಪ್ಪ ಕನಕ (ಹಿಂದುಳಿದ ವರ್ಗ), ಬೀದರ್ ನಗರದ ಅಬ್ದುಲ್ ಚಾಂದ್ ಸಾಬ್ ಸತ್ತಾರ್ (ಅಲ್ಪಸಂಖ್ಯಾತ) ಹಾಗೂ ಚಿಟಗುಪ್ಪ ತಾಲ್ಲೂಕಿನ ಮುಸ್ತರಿ ಗ್ರಾಮದ ವೈಷ್ಣವಿ ಆರ್.ಪಾಟೀಲ್ (ಮಹಿಳಾ) ಅವರನ್ನು ನೇಮಿಸಲಾಗಿದೆ.
ಮುಂದಿನ ಮೂರು ವರ್ಷ ಅಥವಾ ಮುಂದಿನ ಆದೇಶದ ವರೆಗೆ ಇವುಗಳಲ್ಲಿ ಯಾವುದು ಮೊದಲೋ ಅಲ್ಲಿಯವರೆಗೆ ಇವರನ್ನು ನಾಮನಿರ್ದೇಶನ ಮಾಡಲಾಗಿದೆ ಎಂದು ಫೆ.27 ರಂದು ಶಿಕ್ಷಣ ಇಲಾಖೆ ಹೊರಡಿಸಿರುವ ಆದೇಶದಲ್ಲಿ ತಿಳಿಸಲಾಗಿದೆ