ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡುವುದರ ಜತೆಗೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀಟರ್‌ವರೆಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ತೀರ್ಪಿನ ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು ಎಂದು ಎಐಸಿಸಿ ವೀಕ್ಷಕರು ಹಾಗೂ ಕೆಪಿಸಿಸಿ ಕೋ ಆರ್ಡಿನೇಟರ್ ಸದುಗೌಡ ಪಾಟೀಲ ಅಭಿಪ್ರಾಯ ವ್ಯಕ್ತಪಡಿಸಿದರು.
“ಬಜೆಟ್ ಎಂಬುದು ಕೇವಲ ಹಾಳೆಗಳ ಮೇಲಿನ ಕೂಡಿ ಕಳೆಯುವ ಅಂಕಿ ಸಂಖ್ಯೆಗಳ ಲೆಕ್ಕವಲ್ಲ, ನಿರ್ಜೀವ ಆಟವಲ್ಲ ರಾಜ್ಯದ ಏಳು ಕೋಟಿ ಕನ್ನಡಿಗರ ಭವಿಷ್ಯ ರೂಪಿಸುವ ಕೈಪಿಡಿ ಎಂಬುದು ನಮ್ಮ ನಂಬಿಕೆ. ಬಜೆಟ್ ಮೂಲಕ ನಾಡಿನ ಪ್ರತಿಯೊಬ್ಬ ಪ್ರಜೆಯನ್ನು ಸರ್ಕಾರದ ಯಾವುದಾದರೊಂದು ಯೋಜನೆಯ ಫಲಾನುಭವಿಯನ್ನಾಗಿಸುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಲಾಗಿದೆ” ಎಂದರು.
“ಸರ್ವತೋಮುಖ ಅಭಿವೃದ್ಧಿಗಾಗಿ, ಬುದ್ದ, ಬಸವ, ಅಂಬೇಡ್ಕರ್ ಅವರ ತತ್ವಸಿದ್ದಾಂತದ ಆದರ್ಶಗಳೊಂದಿಗೆ, ಮಹಾತ್ಮ ಗಾಂಧಿಜೀಯವರು ಕಂಡಂತಹ ಕನಸನ್ನು ಈಡೇರಿಸುವ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರ ಮಾಡಿದೆ. ಕೊಟ್ಟ ಮಾತಿನಂತೆ ಬಾಗಲಕೋಟೆ ಜಿಲ್ಲೆಗೆ ವೈದ್ಯಕೀಯ ಮಹಾವಿದ್ಯಾಲಯ ಸ್ಥಾಪನೆಗೆ ಅನುಮೋದನೆ ನೀಡುವುದರ ಜತೆಗೆ ಕೃಷ್ಣ ಮೇಲ್ದಂಡೆ ಯೋಜನೆ ಹಂತ-3ರ ವ್ಯಾಪ್ತಿಯ ಆಲಮಟ್ಟಿ ಅಣೆಕಟ್ಟಿನ ಗೇಟನ್ನು 524.256 ಮೀಟರ್‌ವರೆಗೆ ಎತ್ತರಿಸುವುದರಿಂದ ಮುಳುಗಡೆಯಾಗುವ ಜಮೀನುಗಳನ್ನು ಒಪ್ಪಂದ ತೀರ್ಪಿನ ಮುಖಾಂತರ ಒಂದೇ ಹಂತದಲ್ಲಿ ಭೂಸ್ವಾಧೀನಪಡಿಸಿಕೊಂಡು ರೈತರಿಗೆ ಪರಿಹಾರ ವಿತರಣೆಗೆ ಕ್ರಮವಹಿಸಲಾಗುವುದು” ಎಂದು ತಿಳಿಸಿದರು.
“2.01 ಲಕ್ಷ ಎಕರೆ ನೀರಾವರಿ ಸಾಮರ್ಥ್ಯ ಕಲ್ಪಿಸುವ ಬಾಕಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಕ್ರಮ ವಹಿಸಲಾಗುವುದೆಂದು ಬಹುದಿನಗಳ ಬೆಡಿಕೆ ಮುಳಗಡೆ ಸಂತ್ರಸ್ತರ ಬಾಳಲ್ಲಿ ಬೆಳಕಾದ ಬಜೆಟ್ ಇದಾಗಿದೆ. ಯಾರೊ “ಹಲಾಲ್ ಕಟ್ ಬಜೆಟ್” ಅಂತಾ ಕರ್ನಾಟಕದ ಜನತೆಯನ್ನು ಮರಳು ಮಾಡಲು ಹೊರಟರೆ ಕೇಳುವ ಜನ ಇಲ್ಲಿ ಯಾರೂ ಇಲ್ಲ” ಎಂದರು.
“ಬಿಜೆಪಿಗರೇ ಕೆಂದ್ರದಲ್ಲಿ ಅಧಿಕಾರ ನಿಮ್ಮದಿದ್ದರೂ ಕೂಡಾ ʼಬೀಫ್ ಎಕ್ಸ್‌ಪೋರ್ಟ್ʼ ಮಾಡುತ್ತಿರುವುದರ ಪಟ್ಟಿಯಲ್ಲಿ ಪ್ರಪಂಚದಲ್ಲಿ 2ನೇ ಸ್ಥಾನದಲ್ಲಿ ಭಾರತವನ್ನು ತಂದಿಟ್ಟಿದ್ದೀರಿ. ಆದರೆ ನೆಪಕ್ಕೆ ಮಾತ್ರ ʼಗೋ ರಕ್ಷಣೆʼಯ ಮುಖವಾಡ, ಬಿಜೆಪಿಗರೇ ನಿಮಗೆ ಭಾರತಿಯರ ಮೆಲೆ ಕಿಂಚಿತ್ತಾದರೂ ನಿಜವಾದ ಅಭಿಮಾನವಿದ್ದರೆ ತಾಲಿಬಾನಿ ಸರ್ಕಾರಕ್ಕೆ ನಮ್ಮ ಭಾರತಿಯರ 200 ಕೋಟಿ ತೆರಿಗೆಯನ್ನು ಕೊಟ್ಟ ಮೋದಿ ಸರ್ಕಾರವನ್ನು ತಾವು ʼʻತಾಲಿಬಾನಿ ಸರ್ಕಾರʼ ಎನ್ನುವ ಧೈರ್ಯವಿದೆಯಾ ಎಂದುಬು ಕರ್ನಾಟಕ ಬಿಜೆಪಿಗರಿಗೆ ನನ್ನ ನೇರ ಪ್ರಶ್ನೆ?” ಎಂದು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
“ಕರ್ನಾಟಕದ ಜನತೆ ತಮಗೆ 16 ಬಜೆಟ್ ಮಂಡನೆ ಮಾಡಲು ಅಧಿಕಾರ ಕೊಟ್ಟಿದ್ದಾರೆ. ನಿಮಗೆ ಜನರು ತಿರ್ಪು ಕೊಟ್ಟಿದ್ದಾರೆಯೇ? ವಾಮ ಮಾರ್ಗದಿಂದ ಬಂದಿರುವ ನಿಮಗೆ ಜನತೀರ್ಮಾನವಿಲ್ಲದೆ ಅರೆಜ್ಞಾನ ಸರ್ಕಾರ ಆಡಳಿತ ಮಾಡಿದ್ದೀರಿ. ಪರಿಜ್ಞಾನವಿಲ್ಲದ ನೀವು ಕಾಂಗ್ರೆಸ್ ಸರ್ಕಾರದ ಮೇಲೆ ಯಾಕೆ ಈ ಅಪಪ್ರಚಾರ ಮಾಡುತ್ತೀರಿ. ನಿಮ್ಮ ಡೋಂಗಿ ಹಿಂದುತ್ವದ ಕೆಂದ್ರದ ಬಿಜಪಿಯು ಜನರಿಗೆ ಬೆಲೆ ಏರಿಕೆಯ ಬರೆ ಎಳೆಯುತ್ತಿದೆ. ಗ್ಯಾಸ್ ಬೆಲೆ ₹1100ಕ್ಕೆ ಏರಿಕೆ, ಪೆಟ್ರೋಲ್ ಬೆಲೆ ₹110ಕ್ಕೆ ಏರಿಕೆ, ಎಲ್ಲ ಅಗತ್ಯ ವಸ್ತುಗಳ ಬೆಲೆ ಏರಿಕೆ, ಎಲ್ಲ ವಿಮಾನ ನಿಲ್ದಾಣ ಮಾರಾಟ, ಎಲ್ಲ ಬ್ಯಾಂಕ್ ಮಾರಾಟ, ಎಲ್ಲವೂ ಖಾಸಗೀಕರಣದ ಲೂಟಿ ಮಾಡುತ್ತಿದ್ದು, ಮೇಲ್ನೋಟಕ್ಕೆ ಹಿಂದುತ್ವದ ಬಣ್ಣ ಬಳಿಯುತ್ತಿದ್ದೀರಾ. ಇದೆಲ್ಲ ಡೋಂಗಿ ಹಿಂದುತ್ವ ನಿಜವಾದ ಹಿಂದೂಗಳಿಗೆ ಮಾಡುವ ಅನ್ಯಾಯವಾಗಿದೆ” ಎಂದರು.
“ನಮ್ಮ ಕರ್ನಾಟಕದ ಹಮ್ಮೆಯ ಬಜೆಟ್ ಗಾತ್ರ ₹49,549 ಲಕ್ಷ ಕೋಟಿಯಲ್ಲಿ ಎಲ್ಲ ಇಲಾಖೆಗೆ ಅನುದಾನ ಜಾಸ್ತಿ ಮಾಡುವುದರ ಜತೆಗೆ ಜನಸಂಖ್ಯಾ ಅಣುಗುಣವಾಗಿ ಅಲ್ಪಸಂಖಾತರ ಇಲಾಖೆಗೊ ₹4,700 ಕೊಟಿ ಕೊಟ್ಟಿದೆ. ಇದರಲ್ಲಿ ತಪ್ಪೇನು? ಕೇವಲ ಅಲ್ಪಸಂಖ್ಯಾತರೆಂದರೆ ಮುಸ್ಲಿಂ ಸಮುದಾಯಕಷ್ಟೆಯಲ್ಲ ಅಲ್ಪಸಖ್ಯಾತರೆಂದರೆ ಜತೆಗೆ ಬೌದ್ದರು, ಜೈನರು, ಕ್ರಿಶ್ಚಿಯನ್, ಸಿಖ್ಖರು, ಪಾರ್ಸಿಗಳನ್ನೊಳಗೊಂಡ ಇಲಾಖೆಗೆ ನೀಡಲು ಹೆಚ್ಚಾಗಿ ಶೈಕ್ಷಣಿಕ ರಂಗಕ್ಕೆ ಒತ್ತುನೀಡಲು ನೀಡಿರುವ ಅನುದಾನವಾಗಿದೆ. ಭಾರತೀಯರು ನಾವು ಸಮಾನತೆಯಲ್ಲಿ ನಂಬಿಕೆ ಇಟ್ಟುಕೊಂಡವರು” ಎಂದು ಹೇಳಿದರು.
“ಬಿಜೆಪಿ ಸಬ್ಕಾ ಸಾಥ್ ಸಬ್ಕಾ ವಿಕಾಸ್ ಎಂದು ಹೇಳುವ ಮೂಲಕ ಸಬ್ಕಾ ಸತ್ಯಾನಾಸ ಮಾಡುವುದರ ಜತೆಗೆ ಅನ್ಯಾಯ ಮಾಡುತ್ತಿದೆ. ಹಲಾಲ್ ಬಜೆಟ್, ಪಾಕಿಸ್ತಾನ ಬಜೆಟ್ ಎಂದು ಹೇಳುವ ಮೂಲಕ ಬಿಜೆಪಿ ಜಾತ್ಯತೀತ ವಿರೋಧಿಯೆಂದು ತೋರಿಸಿದೆ. ಬಹುತ್ವತೆಗೆ ಧಕ್ಕೆ ತರುತ್ತಿದೆ. ಸಾಂವಿಧಾನಿಕ ವಿರುದ್ಧವಾದ ಹೆಳಿಕೆ ನೀಡುತ್ತಿದೆ. ನೀವೇನೇ ಹೆಳಿದರೂ ಈ ಬಜೆಟ್ ದೂರದೃಷ್ಟಿ ಇರುವ ಹಾಗೂ ಸಮಾನತೆಯನ್ನು ಸಾರುವ ಬಜೆಟ್ ಆಗಿದೆ” ಎಂದು ಹೇಳಿದರು.
“ಈ ವರ್ಷದ ಆಯವ್ಯಯ ಆರು ಅಭಿವೃದ್ಧಿಯ ಆಯಾಮಗಳನ್ನು ಗುರುತಿಸಿ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗುತ್ತಿದ್ದು, ಗ್ಯಾರಂಟಿ ಯೋಜನೆಗಳ ಜತೆಗೆ ಇತರ ಜನಪರ ಕಾರ್ಯಕ್ರಮಗಳಿಗೂ ನಮ್ಮ ಸರ್ಕಾರ ಒತ್ತು ನೀಡಿದೆ. ದುರ್ಬಲ ವರ್ಗದವರಿಗೆ ನೀಡುತ್ತಿರುವ ಸವಲತ್ತುಗಳನ್ನು ಇನ್ನಷ್ಟು ಬಲಪಡಿಸುವ ಗುರಿ ಹೊಂದಿದೆ. ಸಮಾಜದ ಎಲ್ಲ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು, ಮಹಿಳೆಯರು, ರೈತರು, ಶ್ರಮಿಕರು ವರ್ತಕರು ಉದ್ಯಮಿಗಳು ಕಾರ್ಮಿಕರು ಸೇರಿದಂತೆ ವಿವಿಧ ವರ್ಗಗಳ ಅಭ್ಯುದಯಕ್ಕೆ ನಮ್ಮ ಸರ್ಕಾರ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡಿದೆ” ಎಂದು ಹೇಳಿದರು.
“ಎಲ್ಲ ಜನರ ಅಭ್ಯುದಯಕ್ಕೆ ನೀಡಿರುವ ಬಜೆಟ್ ಜರಿಯುವ ಮೂಲಕ ಬಿಜೆಪಿಯವರು ಜನರ ದಾರಿ ತಪ್ಪಿಸಲು ಪ್ರಯತ್ನಪಟ್ಟರೆ ಜನ ನಂಬುವುದಿಲ್ಲ. ಯಾಕಂದ್ರೆ ನಿಮ್ಮ ಬಿಜೆಪಿಯವರು ಪ್ರತಿಯೊಬ್ಬರ ಖಾತೆಗೆ ₹15 ಲಕ್ಷ, ವರ್ಷಕ್ಕೆ 2 ಕೊಟಿ ಉದ್ಯೊಗ ಕೊಡುತ್ತೀವೆಂದು ಹೇಳಿದ್ದರು. ಯುದ್ದದಲ್ಲಿ ಮಡಿದ ಒಬ್ಬ ಯೊಧನ ತಲೆಗೆ ಹತ್ತು ತಲೆ ತರುತ್ತೀವೆಂದು ಹೇಳಿದ ನಿಮ್ಮೆಲ್ಲ ಬೊಗಳೆದಾಸಯ್ಯನ ಮಾತುಗಳನ್ನು ಜನ ಮರೆತಿಲ್ಲ” ಎಂದು ಬಿಜೆಪಿಗರ ಕಾಲೆಳೆದರು.
“ನಮ್ಮ ಸಿದ್ದರಾಮಯ್ಯ ಸರ್ಕಾರ ರಾಜ್ಯದ ಪ್ರತಿಯೊಂದು ಕ್ಷೇತ್ರಕ್ಕೂ ವರ್ಷಕ್ಕೆ ಗ್ಯಾರಂಟಿ ಅನುದಾನದ ಮೂಲಕ ಜನರಿಗೆ ನೇರವಾಗಿ ₹233 ಕೊಟಿ ಕೊಡುತ್ತಿದ್ದೇವೆ. ಇದು ಅಭಿವೃದ್ಧಿ ಅಲ್ಲವೇ?, ಮಾರುಕಟ್ಟೆಯಲ್ಲಿ ಕೊಂಡುಕೊಳ್ಳಲು ಜನರ ಕೈಲಿ ಹಣವಿದ್ದರೆ ಚಲಾವಣೆಯಾಗುತಿದ್ದರೆ ಆರ್ಥಿಕತೆಯ ಸುದಾರಣೆಯಾಗುವುದಿಲ್ಲವೇ? ನಮ್ಮದು ಕೇವಲ ಗ್ಯಾರಂಟಿ ಯೋಜನೆಗಳ ಸರ್ಕಾರವಲ್ಲ. ಜನಜೀವನದ ಬಜೆಟ್. ನಮ್ಮ ಅತ್ಯುತ್ಸಾಹಿ ಬಜೆಟ್ ವಿಶ್ಲೇಷಕರ ಬೆಜೆಪಿಗರಿಗೆ ನೆರವಾಗಿ ಸವಾಲು ಹಾಕುತ್ತೇನೆ” ಎಂದರು.
“ಕರ್ನಾಟಕದ ಸಾಲದ ಲೆಕ್ಕ ಬಿಂಬಿಸಿ ಜನರ ದಿಕ್ಕು ತಪ್ಪಿಸುವ ಕಿಡಿಗೇಡಿ ಬಿಜೆಪಿಗರು ನಮ್ಮ ತೆರಿಗೆಪಾಲು-ಜಿಎಸ್‌ಟಿ ಬಾಕಿ- ಸಮನಾದ ಅನುದಾನವನ್ನು ಮೋದಿಯಿಂದ ತರಿಸಿಕೊಟ್ಟು ಮಾತನಾಡಲಿ, ಹಾಗೆ ನಿಮ್ಮ ಕೇಂದ್ರ ಸರ್ಕಾರದ ಸಾಲದ ಲೆಕ್ಕವನ್ನೂ ಮರೆಯದೆ ಕೊಟ್ಟುಬಿಡಿ. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದಾಗ(2014-15) ದೇಶದ ಒಟ್ಟು ಸಾಲ 53 ಲಕ್ಷ ಕೋಟಿ ಇತ್ತು. 2025-26ರ ಬಜೆಟ್ ಪ್ರಕಾರ ದೇಶದ ಒಟ್ಟು ಸಾಲ ₹196.78 ಲಕ್ಷ ಕೋಟಿಗೆ ದಾಟಿದೆ. ಜತೆಗೆ ಈ ವರ್ಷದ ಸಾಲ: ₹15.04 ಲಕ್ಷ ಕೋಟಿ ಇದೆ. ಪ್ರಸ್ತುತ ಕೇಂದ್ರ ಬಜೆಟ್ ಗಾತ್ರ ₹50.65 ಲಕ್ಷ ಕೋಟಿ ಎಂದಾದರೆ
ತಲೆಗೆಷ್ಟು ಸಾಲವೆಂದು ನೀವೇ ಲೆಕ್ಕ ಹಾಕಿಕೊಳ್ಳಿ. ತದನಂತರ ಕಾಂಗ್ರೆಸ್ ಬಗ್ಗೆ ಮಾತನಾಡಿ. ಇರಲಾರದವನು ಇರುವೆ ಬಿಟ್ಟುಕೊಂಡನಂತೆ ಎನ್ನುವಂತಾಯಿತು ನಿಮ್ಮ ಬಿಜೆಪಿ ಸ್ಥಿತಿ” ಎಂದರು.
“ಇಡೀ ದೇಶಕ್ಕೆ ಜನಪರ ಬಜೆಟ್ ಹೇಗಿರಬೇಕೆಂದು ಪರಿಚಯಿಸಿದ, ಜನಕಲ್ಯಾಣ ಯೋಜನೆಗಳ ಯಶಸ್ವಿ ಜಾರಿಯ ಮೂಲಕ ದೇಶಕ್ಕೇ ಮಾದರಿಯಾಗಿರುವ ಕನ್ನಡಿಗರ ಹೆಮ್ಮೆಯ ಬಜೆಟ್ ರಾಜ್ಯದ ಪ್ರತಿ ಪ್ರಜೆಯ ಕನಸನ್ನು ಸಾಕಾರಗೊಳಿಸುವ, ನಾಳೆಗಳ ಬಗ್ಗೆ ಭರವಸೆ ಮೂಡಿಸುವ, ನುಡಿದಂತೆ ನಡೆಯುವ ನಮ್ಮ ವಾಗ್ದಾನವು, ಸದಾ ಸಾಮಾಜಿಕ ನ್ಯಾಯಕ್ಕಾಗಿ, ಬಡವರು, ಶೋಷಿತರು, ರೈತರು, ಶ್ರಮಿಕರ ಕಲ್ಯಾಣಕ್ಕಾಗಿ ದುಡಿಯುವ, ಕನ್ನಡ ಭಾಷೆಯ, ಕನ್ನಡ ನಾಡಿನ ಅಭ್ಯುದಯಕ್ಕಾಗಿ ಮಿಡಿಯುವ ಮುಖ್ಯಮಂತ್ರಿಗಳಿಂದ ಮತ್ತೊಂದು ಚರಿತ್ರಾರ್ಹ ಬಜೆಟ್ ಇದಾಗಿದೆಯೆಂದು ಇಡೀ ಕರ್ನಾಟದ ಜನತೆ ಒಪ್ಪಿಕೊಂಡಿದ್ದಾರೆ” ಎಂದು ಹೇಳಿದರು.
“ಸದಾ ಜನರ ಅಭಿವೃದ್ಧಿಯ ನಾಡಿನ ಶ್ರೇಯೋಭಿವೃದ್ದಿಯ ಮನಸ್ಸುಗಳಿಗೆ ನೆಚ್ಚಿನ ಬಜೆಟ್ ಇದಾಗಿರುವಾಗ
ಕೋಮು ತುಂಬಿದ ಮನಸ್ಥಿತಿಳಿಗೆ ಇದು ಮಾರಕಾವಾಗಿರಬಹುದು” ಎಂದರು.