ಬೀದರ ತಾಲ್ಲೂಕಿನ ಜನವಾಡ ಹೋಬಳಿ ಕೇಂದ್ರದ ನಾಡ ಕಚೇರಿ ಉಪ ತಹಶೀಲ್ದಾರ್ ಅಶೋಕ ರಾಜಗೀರ ಅವರು ಸಾರ್ವಜನಿಕರ ಕೆಲಸಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ. ಕೂಡಲೇ ಅವರನ್ನು ಅನ್ಯ ಜಿಲ್ಲೆಗೆ ವರ್ಗಾಯಿಸುವಂತೆ ಒತ್ತಾಯಿಸಿ ಬೀದರ್ ನಲ್ಲಿ ಅರಬೆತ್ತಲೆ ಪ್ರತಿಭಟನೆ ನಡೆಯಿತು.
ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಹಾಗೂ ಕರ್ನಾಟಕ ಮಾನವ ಹಕ್ಕುಗಳು ಮತ್ತು ಭ್ರಷ್ಟಾಚಾರ ನಿಗ್ರಹ ಸಮಿತಿ ಪದಾಧಿಕಾರಿಗಳು ಜಂಟಿಯಾಗಿ ಅರಬೆತ್ತಲೆ ಪ್ರತಿಭಟನಾ ಮೆರವಣಿಗೆ ನಡೆಸಿ ಮುಖ್ಯಮಂತ್ರಿಗಳಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರಿಗೆ ಸಲ್ಲಿಸಿದರು.
“ಜನವಾಡ ಹೋಬಳಿ ವ್ಯಾಪ್ತಿಯಲ್ಲಿ ಬರುವ ಗ್ರಾಮಸ್ಥರು ಆದಾಯ ಪ್ರಮಾಣ ಪತ್ರ, ವೃದ್ಧಾಪ್ಯ ವೇತನ, ಸೇರಿದಂತೆ ಸರ್ಕಾರದ ವಿವಿಧ ಯೋಜನೆಗಳ ಅರ್ಜಿ ಸಲ್ಲಿಸಿದರೆ ಏನಾದರೂ ಒಂದು ಕಾರಣ ಹೇಳಿ ಅರ್ಜಿಗಳು ತಿರಸ್ಕರಿಸುತ್ತಿದ್ದಾರೆ. ಬಿಪಿಎಲ್ ಪಡಿತರ ಚೀಟಿ ಇದ್ದವರಿಗೆ ನಿಮ್ಮ ಹತ್ತಿರ ಎಪಿಎಲ್ ಪಡಿತರ ಚೀಟಿಯಿದೆ, ನಿಮ್ಮ ಆದಾಯ ಹೆಚ್ಚು ಇರುತ್ತದೆ ಎಂದು ಅರ್ಜಿ ತಿರಸ್ಕರಿಸಿ ಹಿಂಬರಹ ನೀಡುತ್ತಿದ್ದಾರೆ. ಆದರೆ ಮಧ್ಯವರ್ತಿಗಳ ಮೂಲಕ ಹಣ ಪಡೆದು ತಮಗೆ ಬೇಕಾದವರ ಅರ್ಜಿ ವಿಲೇವಾರಿ ಮಾಡಿಕೊಡುತ್ತಿದ್ದಾರೆ” ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಈ ಬಗ್ಗೆ ಸಂಬಂಧಪಟ್ಟ ಮೇಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿ ಗಮನಕ್ಕೆ ತರಲಾಗಿದೆ, ಆದರೆ ನಾಡ ತಹಶೀಲ್ದಾರ್ ಅವರ ಮೇಲೆ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ. ಸರ್ಕಾರದ ಹಲವು ಯೋಜನೆಗಳ ಪ್ರಮಾಣ ಪತ್ರ ಮತ್ತು ಇನ್ನಿತರ ದಾಖಲೆಗಳನ್ನು ಸೂಕ್ತ ಸರಿಯಾದ ಸಮಯಕ್ಕೆ ತಲುಪಿಸದೇ ಸಾರ್ವಜನಿಕರಿಗೆ ತೊಂದರೆ ನೀಡುತ್ತಿರುವ ಜನವಾಡ ನಾಡ ಕಚೇರಿ ಉಪ ತಹಸೀಲ್ದಾರ್ ಅವರನ್ನು ಕೂಡಲೇ ಬೀದರ ಜಿಲ್ಲೆಯಿಂದ ಬೇರೆ ಜಿಲ್ಲೆಗೆ ವರ್ಗಾಯಿಸಿ ಸರ್ವಾಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಸಮತಿಯ ಮುಖಂಡರು ಆಗ್ರಹಿಸಿದರು.
ಈ ಸುದ್ದಿ ಓದಿದ್ದೀರಾ? ಯತ್ನಾಳ್ ಹೇಳಿದ್ದೆಲ್ಲವೂ ಸತ್ಯ, ಹಾಗಾಗಿ ಕ್ರಮ ಕೈಗೊಳ್ಳಲು ಬಿಜೆಪಿ ಹೆದರುತ್ತಿದೆ: ಸಚಿವ ಎಂ ಬಿ ಪಾಟೀಲ್
ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ಶಕ್ತಿ ಸಮಿತಿ ಜಿಲ್ಲಾಧ್ಯಕ್ಷ ಸಾಯಿ ಶಿಂಧೆ, ಉಪಾಧ್ಯಕ್ಷ ಮಹೇಂದ್ರಕುಮಾರ ಹೊಸಮನಿ, ಸಂಗಮೇಶ ಭಾವಿದೊಡ್ಡಿ, ವಿನೋದಕುಮಾರ ಶಿಂಧೆ, ಸೂರ್ಯಕಾಂತ ಸಾಧುರೆ, ವಿಜಯಕುಮಾರ ಜಡಗೆ, ಅನೀಲಕುಮಾರ ಮಡೆ, ಬೀರಗೊಂಡ ಘೋಡಂಪಳ್ಳೆ, ಕೈಲಾಸ ವಿಳಾಸಪೂರ, ಧನರಾಜ ಮೇತ್ರೆ, ಗುರು ನೇಮತಾಬಾದ, ವೆಂಕಟ ವಡ್ಡಿಯರ, ಅನೀಲಕುಮಾರ ಮಡೆ, ವಿಶಾಲ ದೊಡ್ಡಿ, ಜೇಮ್ಸ್ ಮಮದಾಪೂರೆ, ಸಂದೀಪ ಕಾಂಟೆ, ರಾಜಕುಮಾರ ಗುಮ್ಮೆ, ವಿಜಯಕುಮಾರ ಜಡಗೆ, ಸೂರ್ಯಕಾಂತ ಸಾಧುರೆ, ಸೇರ ಅಲಿ,ವಿಜಯಕುಮಾರ ಜಡಗೆ ಸೇರಿದಂತೆ ಇತರರಿದ್ದರು.