ಉಡುಪಿ | ಸುಳ್ಳು ಹೇಳಿಕೆ ನೀಡಿ ಜನರನ್ನು ದಾರಿ ತಪ್ಪಿಸುವುದು ಬಿಜೆಪಿಯ ರಾಜ ಧರ್ಮ – ಅಶೋಕ್ ಕೊಡವೂರ್

Date:

Advertisements

ಸುಳ್ಳು ಹೇಳಿಕೆಗಳ ಮೂಲಕ ಜನರ ದಿಕ್ಕು ತಪ್ಪಿಸಿ ತಮ್ಮ ಸ್ವಾರ್ಥ ಸಾಧಿಸುವುದು ಬಿಜೆಪಿಯ ರಾಜ ಧರ್ಮ. ಇಂತಹ ಸುಳ್ಳಿನ ವಿರುದ್ಧ ಹೋರಾಡಿ ಜನರಿಗೆ ನ್ಯಾಯ ಒದಗಿಸುವುದು ಕಾಂಗ್ರೆಸ್ ರಾಜಕೀಯದ ಸತ್ಯ ಧರ್ಮ. ಆ ನೆಲೆಯಲ್ಲಿ ಕಾಂಗ್ರೆಸ್ ಪಕ್ಷ ಜಿಲ್ಲೆಯಾದ್ಯಂತ ತನ್ನ ಎಲ್ಲ ಬ್ಲಾಕ್ ಹಾಗೂ ಗ್ರಾಮ ವ್ಯಾಪ್ತಿಯಲ್ಲಿ ಸತ್ಯದರ್ಶನ ಕಾರ್ಯಕ್ರಮವನ್ನು ಆಯೋಜಿಸಿ ತನ್ನ ಪಕ್ಷದ ಸಾಧನೆ ಮತ್ತು ಬಿಜೆಪಿಯ ಸುಳ್ಳಿನ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ತನ್ನ ಅಸ್ತಿರ ಆಡಳಿತದ ಅವಧಿಯಲ್ಲಿ ತನ್ನನ್ನು ರಕ್ಷಿಸಿಕೊಳ್ಳುವ ಭರದಲ್ಲಿ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಲಾಗದೆ ರಾಜ್ಯದ ಅಭಿವೃದ್ಧಿಗೆ ಕೊಕ್ಕೆ ಹಾಕಿದವರು ಯಾರು ಎನ್ನುವುದು ಈ ನಾಡಿನ ಜನರಿಗೆ ತಿಳಿದಿದೆ. ಕೇಂದ್ರದಲ್ಲಿ ತನ್ನದೇ ಸರಕಾರವಿದ್ದ ಹೊರತಾಗಿಯೂ ರಾಜ್ಯ ವಿದ್ಯುತ್ ನಿಗಮಕ್ಕೆ ಕಲ್ಲಿದ್ದಲು ಸರಬರಾಜು ಮಾಡಲಾಗದೆ ನಷ್ಟ ಸರಿತೂಗಿಸಲು ವಿಧ್ಯುತ್ ಬಿಲ್ಲ್ ಏರಿಸಿದ್ದು, 9/11 ಏಕವಿನ್ಯಾಸ ನಕ್ಷೆ ಗಿದ್ದ ಗ್ರಾಮ ಪಂಚಾಯತ್ ಅಧಿಕಾರ ಕಿತ್ತುಕೊಂಡು ನಗರ ಪ್ರಾಧಿಕಾರಕ್ಕೆ ಹಸ್ತಾಂತರಿಸಿದ್ದು, 94ಸಿ/ಸಿಸಿ, ಅಕ್ರಮ ಸಕ್ರಮ ಮರು ವಿಮರ್ಶೆಗೆ ಆದೇಶ, ವಿಧವಾ ವೇತನ, ವೃದ್ಧಾಪ್ಯ ವೇತನವೇ ಮೊದಲಾದ ಜನಪರ ಯೋಜನೆಗಳ ದುರುಪಯೋಗದ ಹೆಸರಲ್ಲು ಪರಿಶೀಲನೆಗೆ ಹಾಕಿ ತಡೆ ಹಿಡಿದದ್ದು ಇವೆಲ್ಲ ಇದೇ ಬಿಜೆಪಿಯವರ ಈ ಹಿಂದಿನ ಸರಕಾರೀ ಆದೇಶದ ಜನವಿರೋಧಿ ಪ್ರಕ್ರಿಯೆಗಳು. ಹಿಂದಿನ ಸರಕಾರದ ಈ ಉದ್ಧೇಶಿತ ತಪ್ಪುಗಳನ್ನು ಕಾನೂನಾತ್ಮಕವಾಗಿ ಸರಿಪಡಿಸುವ ನಿಟ್ಟಿನಲ್ಲಿ ವಿಳಂಬ ಸಹಜ. ಇದನ್ನು ಆಳುವ ಸರಕಾರದ ವೈಪಲ್ಯವೆಂದು ಪರಿಗಣಿಸಲಾಗದು ಎಂದು ಅವರು ಹೇಳಿದ್ದಾರೆ.

ಅದರೆ ಆರ್ಥಿಕತೆಯ ಅರ್ಥ ಅರಿಯದ ಬಿಜೆಪಿ ನಾಯಕರು ತಮ್ಮ ಶಾಸಕತ್ವದ ವೈಫಲ್ಯಗಳನ್ನು ಮರೆಮಾಚಲು ಪಂಚ ಗ್ಯಾರಂಟಿ ಯೋಜನೆಯಿಂದ ರಾಜ್ಯದ ಬೊಕ್ಕಸ ಬರಿದಾಗಿದ್ದು ಅಭಿವೃದ್ದಿ ಕೆಲಸಗಳ ಅನುಧಾನಕ್ಕೆ ಹಣವಿಲ್ಲ ಎಂದು ಅಪಪ್ರಚಾರ ಮಾಡುತ್ತಿರುವುದು ವಿಷಾದನೀಯ. “ಕುಣಿಯಲು ಗೊತ್ತಿಲ್ಲದವ ಅಂಗಳ ಸರಿಯಿಲ್ಲ ವೆಂದ” ಎಂಬ ಗಾದೆ ಮಾತಿನಂತೆ ಸದಾ ರಾಜ್ಯ ಸರಕಾರದ ವಿರುದ್ಧ ಸಂಘರ್ಷದ ಹಾದಿ ಹಿಡಿದಿರುವ ಇಲ್ಲಿನ ಶಾಸಕರಿಗೆ ಸರಕಾರದಿಂದ ಅನುದಾನ ಗಿಟ್ಟಿಸಿಕೊಂಡು ಜನಪರ ಕೆಲಸದ ಕಾರ್ಯಸಾಧನೆಯ ಶಕ್ತಿ ಇಲ್ಲ. ಆ ನೆಲೆಯಲ್ಲಿ ಸರಕಾರದ ಮೇಲೆ ವ್ಯರ್ಥಾರೋಪಮಾಡಿ ಕಾಲಕಳೆಯುತ್ತಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

Advertisements
eedina
ಈ ದಿನ ಡೆಸ್ಕ್‌
Website |  + posts

ಈ ಮಾಧ್ಯಮ ನಿಮ್ಮದು. ನಿಮ್ಮ ಬೆಂಬಲವೇ ನಮ್ಮ ಬಲ. ವಂತಿಗೆ ನೀಡುವುದರ ಮೂಲಕ ಕೈಜೋಡಿಸಿ, ಸತ್ಯ ನ್ಯಾಯ ಪ್ರೀತಿಯ ಮೌಲ್ಯಗಳನ್ನು ಹಂಚಲು ಜೊತೆಯಾಗಿ. ಸಹಾಯ ಅಥವಾ ಬೆಂಬಲ ನೀಡಲು ದಯವಿಟ್ಟು +91 9035362958 ಅನ್ನು ಸಂಪರ್ಕಿಸಿ.

ಪೋಸ್ಟ್ ಹಂಚಿಕೊಳ್ಳಿ:

LEAVE A REPLY

Please enter your comment!
Please enter your name here

ಪೋಸ್ಟ್ ಹಂಚಿಕೊಳ್ಳಿ:

ಈ ಹೊತ್ತಿನ ಪ್ರಮುಖ ಸುದ್ದಿ

ವಿಡಿಯೋ

ಇದೇ ರೀತಿಯ ಇನ್ನಷ್ಟು ಲೇಖನಗಳು
Related

ಯಾದಗಿರಿ | ಅತಿವೃಷ್ಟಿಯಿಂದ ಬೆಳೆ ಹಾನಿ: ರೈತರಿಗೆ ಪರಿಹಾರ ನೀಡುವಂತೆ ಆಗ್ರಹ

ಯಾದಗಿರಿ ಜಿಲ್ಲೆಯಲ್ಲಿ ಅತಿವೃಷ್ಟಿಯಿಂದ ಬೆಳೆ ಹಾನಿದ ರೈತರಿಗೆ ಸಮೀಕ್ಷೆ ನಡೆಸಿ ಶೀಘ್ರದಲ್ಲಿ...

ಗುಬ್ಬಿ | ಜನಪದ ಸಾಹಿತ್ಯ ಎಂದೆಂದಿಗೂ ಜೀವಂತ : ಡಾ.ಮೂರ್ತಿ ತಿಮ್ಮನಹಳ್ಳಿ

ಕನ್ನಡ ಸಾಹಿತ್ಯ ಲೋಕದಲ್ಲಿ ಹಲವು ಪ್ರಕಾರಗಳ ಪೈಕಿ ಜನಪದ ಸಾಹಿತ್ಯ...

ಉಡುಪಿ | ಮಹೇಶ್‌ ಶೆಟ್ಟಿ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್‌ ಅಧೀಕ್ಷರಕ ಕಾರಿಗೆ ಡಿಕ್ಕಿ !

ಬೆಳ್ತಂಗಡಿಯ ಸೌಜನ್ಯ ಪರ ಹೋರಾಟಗಾರ ಮಹೇಶ್‌ ಶೆಟ್ಟಿ ತಿಮರೋಡಿಯವರನ್ನು ಬ್ರಹ್ಮಾವರ ಪೊಲೀಸ್...

ಚಿಕ್ಕಮಗಳೂರು l ಸಮಾಜದಲ್ಲಿ ಜಾತಿ,ಧರ್ಮಗಳ ಕಂದಕದ ಗೋಡೆಗಳನ್ನು ತೊಡೆದು ಹಾಕುವುದೇ ನಿಜವಾದ ಸಾಹಿತ್ಯ; ಸಾಹಿತಿ ಮನಸುಳಿ ಮೋಹನ್‌

ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ತಾಲ್ಲೂಕು ಸಮಿತಿ...

Download Eedina App Android / iOS

X