ಕೊಡಗು ಜಿಲ್ಲೆ ವಿರಾಜಪೇಟೆ ಡಿವೈಎಸ್ಪಿ ಮಹೇಶ್ ಕುಮಾರ್ ನೇತೃತ್ವದಲ್ಲಿ, ವೃತ್ತ ನಿರೀಕ್ಷಕ ಅನೂಪ್ ಮಾದಪ್ಪ, ಪಿಎಸ್ಐ ಪ್ರಮೋದ್, ಅಪರಾಧ ಪತ್ತೆ ದಳ ಸಿಬ್ಬಂದಿ ಹಾಗೂ ಪೊಲೀಸ್ ಸಿಬ್ಬಂದಿಗಳ ನೆರವಿನೊಂದಿಗೆ ಬೆಟೋಳಿ ಗ್ರಾಮದ ಬಳಿಯ ಹೆಗ್ಗಳ ಜಂಕ್ಷನ್ ಬಳಿ ದಾಳಿ ನಡೆಸಿ ಅಕ್ರಮವಾಗಿ ಅಂಬರ್ ಗ್ರೀಸ್ ಮಾರಾಟಕ್ಕೆ ಯತ್ನಿಸಿದ ಕೇರಳ ಮೂಲದ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.
ಕೇರಳದಿಂದ ಅಕ್ರಮವಾಗಿ 10 ಕೆಜಿ 390 ಗ್ರಾಂ ತೂಕದ ಅಂದಾಜು ₹10 ಕೋಟಿ ಮೌಲ್ಯದ ಅಂಬರ್ ಗ್ರೀಸ್ ( ತಿಮಿಂಗಲ ವಾಂತಿ ) ಅಕ್ರಮವಾಗಿ ರಾಜ್ಯದಲ್ಲಿ ಮಾರಾಟ ಮಾಡಲು ಸಾಗಿಸುವ ವೇಳೆ ಪೊಲೀಸರು ಸೊತ್ತು ಸಮೇತ ವಶಕ್ಕೆ ಪಡೆದಿದ್ದಾರೆ.
ವಿರಾಜಪೇಟೆ ಠಾಣಾ ಪೊಲೀಸರಿಗೆ ದೊರೆತ ಖಚಿತ ಮಾಹಿತಿ ಆಧರಿಸಿ ಕೇರಳ ರಾಜ್ಯದ ತಿರುವನಂತಪುರಂನ ಎಸ್. ಸಂಶುದ್ದೀನ್ (45), ಎಂ. ನವಾಜ್ (54), ಕಣ್ಣೂರು ಜಿಲ್ಲೆಯ ವಿ. ಕೆ. ಲತೀಶ್ (53), ವಿ. ರಿಜೇಶ್ (40), ಟಿ. ಪ್ರಶಾಂತ್ (52), ಶಿವಮೊಗ್ಗ ಜಿಲ್ಲೆ, ಭದ್ರಾವತಿಯ ಎ. ವಿ. ರಾಘವೇಂದ್ರ (48), ಕಾಸರಗೂಡಿನ ಬಾಲಚಂದ್ರ ನಾಯಕ್ (55), ಕ್ಯಾಲಿಕೇಟ್ ನ ಸಾಜು ಥಾಮಸ್ (58), ಕಣ್ಣೂರಿನ ಕೆ. ಕೆ. ಜೋಬಿಸ್ (33), ಜಿಜೇಶ್ (40) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಎರಡು ನೋಟು ಎಣಿಸುವ ಯಂತ್ರ,ಎರೆಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.
ಈ ಸುದ್ದಿ ಓದಿದ್ದೀರಾ? ಮೈಸೂರು | ವನ್ಯಜೀವಿ ಬೇಟೆ; ಮಾಂಸ ಮಾರಾಟ, ಮಾವುತರ ವಿರುದ್ಧ ಕ್ರಮ
ಪೋಲೀಸರ ಕಾರ್ಯಚರಣೆಗೆ ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ಕೆ. ರಾಮರಾಜನ್ ಶ್ಲಾಘಿಸಿದ್ದಾರೆ.